Home
ಟೆಕ್ ನೌಕರಿ

ಇನ್ಮುಂದೆ ನೀವು ಯಾವುದೇ ಪಾಸ್‌ವರ್ಡ್‌ ಮರೆತರೂ ಮತ್ತೆ ಸಿಗುತ್ತದೆ!..ಏಕೆ ಗೊತ್ತಾ?

ನೀವು ಗೂಗಲ್ ಕ್ರೋಮ್ ಬ್ರೌಸರ್ ಬಳಸುತ್ತಿದ್ದರೆ, ಹೊಸ ವರ್ಷನ್ ಬಂದಿರುವ ವಿಷಯವನ್ನು ನೋಟಿಫಿಕೇಷನ್ ಮೂಲಕ ತಿಳಿಯಬಹುದು. ಒಂದು ವೇಳೆ ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಕ್ರೋಮ್ ಇನ್ನು ಅಪ್‌ಡೇಟ್ ಆಗದಿದ್ದರೆ, ನೀವೇ ಬ್ರೌಸರ್ ಓಪನ್ ಮಾಡಿ ಕ್ರೋಮ್ ಅನ್ನು ಅಪ್‌ಡೇಟ್ ಮಾಡಿಕೊಳ್ಳಬಹುದು. ಇದರಿಂದ ನಿಮಗೆ ಕ್ರೋಮ್‌ ಹೆಚ್ಚಿನ ಸೇವೆಯನ್ನು ಒದಗಿಸಲಿದೆ.

ಯಾವಾಗಲೂ ಅಂತರ್ಜಾಲ ಜಾಲತಾಣಗಳಲ್ಲಿ ವಿಹಾರ ಮಾಡಲು ಇಚ್ಛಿಸುವವರ ಹಲವರ ನೆಚ್ಚಿನ ಬ್ರೌಸರ್ ಆಗಿರುವ ಕ್ರೋಮ್ ಈಗ ಹೊಸ ಸೌಲಭ್ಯಗಳೊಂದಿಗೆ ಹೊಸ ರೂಪದಲ್ಲಿ ಬಂದಿದೆ. ಇದಕ್ಕೆ 'ಗೂಗಲ್ ಕ್ರೋಮ್ 69' ಎಂದು ಹೆಸರಿಸಲಾಗಿದ್ದು, ಸ್ಮಾರ್ಟ್‌ಪೋನ್ ಸಾಧನಗಳಲ್ಲಿಯೂ ಸಹ ಹೆಚ್ಚು ಸ್ಥಳ ಬೇಡುವುದಿಲ್ಲದ ಈ ಕ್ರೋಮ್ ಬ್ರೌಸರ್ ಅನ್ನು ಬಳಸುವುದು ಕೂಡ ಸುಲಭ.

ಇನ್ಮುಂದೆ ನೀವು ಯಾವುದೇ ಪಾಸ್‌ವರ್ಡ್‌ ಮರೆತರೂ ಮತ್ತೆ ಸಿಗುತ್ತದೆ!..ಏಕೆ ಗೊತ್ತಾ?

ಕ್ರೋಮ್ ತೆರೆದು, 'ಮೋರ್' ಮೇಲೆ ಕ್ಲಿಕ್ ಮಾಡಿ. ಅಲ್ಲಿ 'ಅಪ್‌ ಡೇಟ್ ಗೂಗಲ್ ಕ್ರೋಮ್' ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿದರೆ ಸಾಕು ನಿಮ್ಮ ಕ್ರೋಮ್ ಅಪ್‌ಡೇಟ್ ಆಗಲಿದೆ. ಹಾಗಾದರೆ, ಗೂಗಲ್ ಕ್ರೋಮ್ ಅನ್ನು ಅಪ್‌ಡೇಟ್ ಮಾಡಿದರೆ ಸಿಗುವ 'ಗೂಗಲ್ ಕ್ರೋಮ್ 69'ರ ಪ್ರಯೋಜನಗಳು ಮತ್ತು ಹೊಸ ವಿನ್ಯಾಸದ ಬದಲಾವಣೆಗಳು ಯಾವುವು ಎಂದು ಮುಂದೆ ತಿಳಿಯಿರಿ.

ಪಾಸ್‌ವರ್ಡ್‌ ಮರೆತರೂ ಸಿಗುತ್ತದೆ!

ಪಾಸ್‌ವರ್ಡ್‌ ಮರೆತರೂ ಸಿಗುತ್ತದೆ!

ನೀವು ಹಲವು ವೆಬ್‌ಸೈಟ್‌ಗಳಿಗೆ ಭೇಟಿ ನೀಡುತ್ತೇವೆ. ಕೆಲವು ಸೈಟ್‌ಗಳ ಲಾಗಿನ್ ವಿವರಗಳನ್ನು ಬ್ರೌಸರ್‌ನಲ್ಲಿ ಸೇವ್ ಮಾಡುತ್ತಿರುತ್ತೇವೆ. ಅಂತಹ ವಿವಿಧ ತಾಣಗಳ ಪಾಸ್‌ವರ್ಡ್‌ಗಳನ್ನು ಇನ್ಮುಂದೆ ಕ್ರೋಮ್‌ನಲ್ಲಿ ನಿರ್ವಹಿಸುವುದು ಸುಲಭ .ಹಿಂದೆ ಯಾವುದೋ ವೆಬ್‌ಸೈಟ್‌ನಲ್ಲಿ ಲಾಗಿನ್ ಆಗಲು ಬಳಸಿರಿವ ಪಾಸ್‌ವರ್ಡ್ ಕೂಡ ನೋಡಬಹುದು. ಹಾಗಾದರೆ ನೋಡುವುದು ಹೇಗೆ?

ಪಾಸ್‌ವರ್ಡ್ ಹೀಗೆ ನೋಡಿ!

ಪಾಸ್‌ವರ್ಡ್ ಹೀಗೆ ನೋಡಿ!

ಕ್ರೋಮ್ ಅಡ್ರಸ್‌ಬಾರ್ ಪಕ್ಕದಲ್ಲಿರುವ ಪ್ರೊಫೈಲ್ ಪಿಕ್ ಮೇಲೆ ಕ್ಲಿಕ್ಕಿಸಿದರೆ, ಪಾಸ್‌ವರ್ಡ್ ವಿಭಾಗ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಸೇವ್ ಮಾಡಿದ ಪಾಸ್‌ವರ್ಡ್ ವಿವರಗಳನ್ನು ಸುಲಭವಾಗಿ ಪಡೆಯಬಹುದು. ಹಿಂದೆ ಯಾವುದೋ ವೆಬ್‌ಸೈಟ್‌ನಲ್ಲಿ ಲಾಗಿನ್ ಆಗಲು ಬಳಸಿರಿವ ಪಾಸ್‌ವರ್ಡ್ ಕೂಡ ನೋಡಬಹುದು. ಆದರೆ ಅದಕ್ಕೆ ಜಿ-ಮೇಲ್‌ ಖಾತೆ ಜೋಡಣೆಯಾಗಿರಬೇಕು.

ಪಾಸ್‌ವರ್ಡ್‌ ಮ್ಯಾನೇಜರ್

ಪಾಸ್‌ವರ್ಡ್‌ ಮ್ಯಾನೇಜರ್

ಈಗ ನೀವು ಬಳಸುತ್ತಿರುವ ಜಿ-ಮೇಲ್ ಅಕೌಂಟ್‌ನಲ್ಲಿ ಪಾಸ್‌ವರ್ಡ್‌ಗಳನ್ನು ಸುರಕ್ಷಿತವಾಗಿ ಬಚ್ಚಿಟ್ಟುಕೊಂಡು ಬೇಕೆನಿಸಿದಾಗ ಬಳಸಿಕೊಳ್ಳಬಹುದಾಗಿದೆ. ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳ ಪಿನ್‌ಗಳನ್ನೂ ಜಿ-ಮೇಲ್ ಖಾತೆಗೆ ಜೋಡಿಸಬಹುದು. ಪಾಸ್‌ವರ್ಡ್ ಮ್ಯಾನೇಜರ್ ಸಹಾಯದಿಂದ ಆಗಾಗ್ಗೆ ಹೊಸ ಪಾಸ್‌ವರ್ಡ್‌ಗಳನ್ನು ಜನರೇಟ್ ಕೂಡ ಮಾಡಿಕೊಳ್ಳಬಹುದು.

ಖಾಸಗಿತನಕ್ಕೆ ರಕ್ಷೆ

ಖಾಸಗಿತನಕ್ಕೆ ರಕ್ಷೆ

‘ಗೂಗಲ್ ಕ್ರೋಮ್ 69'ರಲ್ಲಿ ಅಂತರ್ಜಾಲವನ್ನು ಸುರಕ್ಷಿತವಾಗಿ ಬಳಕೆ ಮಾಡಲು ‘ಪ್ರೈವಸಿ ಚೆಕ್ ಅಪ್' ಆಯ್ಕೆ ನೀಡಲಾಗಿದೆ. ಇದರಿಂದ ನೀವು ವೆಬ್, ಆಪ್ಸ್, ಲೋಕೆಷನ್ ಹೀಗೆ ಎಲ್ಲವನ್ನೂ ರಿವ್ಯೂ ಮಾಡಿ ನೋಡಬಹುದು. ಖಾಸಗೀತನಕ್ಕೆ ಧಕ್ಕೆ ತರುವಂತಹ ತಂತ್ರಾಂಶಗಳು ಏನಾದರೂ ಇದ್ದರೆ ಕೂಡಲೇ ಅವನ್ನು ಡಿಲೀಟ್ ಮಾಡಬಹುದು. ಇದು ಇತ್ತೀಚಿನ ಆಯ್ಕೆಯಾಗಿದೆ.

ನಿಮ್ಮನ್ನು ನೀವೇ ರಿವ್ಯೂ ಮಾಡಿ

ನಿಮ್ಮನ್ನು ನೀವೇ ರಿವ್ಯೂ ಮಾಡಿ

‘ಗೂಗಲ್ ಕ್ರೋಮ್ 69'ಗೆ ನಿವು ಅಪ್‌ಡೇಟ್ ಆದ ನಂತರ, ಮೋರ್ ತೆರೆದು ನನೀವು ಲೋಕೆಷನ್ ಹಿಸ್ಟರಿಗೆ ಹೋದರೆ, ಅಲ್ಲಿ ನೀವು ಎಲ್ಲಿ, ಹೇಗೆ, ಯಾವ ಸ್ಥಳಗಳಲ್ಲಿ ಸುತ್ತಾಡಿದ್ದೀರಿ ಎಂಬುದನ್ನು ರಿವ್ಯೂ ಮಾಡಿ, ಅಗತ್ಯವಿಲ್ಲದನ್ನು ಅಳಿಸಬಹುದು. ಅದೇ ರೀತಿ ಯೂಟ್ಯೂಬ್, ಫೇಸ್‌ಬುಕ್‌ಗೆ ಸಂಬಂಧಿಸಿದ ವಿವರಗಳನ್ನೂ ಎಕ್ಸ್‌ಪ್ಲೋರ್ ಮಾಡಿ ನೋಡಬಹುದಾಗಿದೆ.

ಪಾವತಿಗೂ ನೆರವಾಗುತ್ತಿದೆ

ಪಾವತಿಗೂ ನೆರವಾಗುತ್ತಿದೆ

ಪ್ರತಿ ಬಾರಿ ಕ್ರೆಡಿಟ್, ಡೆಬಿಟ್ ಕಾರ್ಡ್‌ಗೆ ಸಂಬಂಧಿಸಿದ ವಿವರಗಳನ್ನು ಎಂಟರ್ ಮಾಡಿ ಆನ್‌ಲೈನ್ ಪಾವತಿ ಮಾಡುವ ಬದಲು ಜಿ-ಮೇಲ್ ಅಕೌಂಟ್‌ನಲ್ಲಿ ಕಾರ್ಡ್ ವಿವರಗಳನ್ನು ಸೇವ್ ಮಾಡಿ ಇಟ್ಟುಕೊಳ್ಳಬಹುದು. ಇದಕ್ಕಾಗಿ ಪ್ರೊಫೈಲ್ ಪಿಕ್ ಮೇಲೆ ಕ್ಲಿಕ್ಕಿಸಿ ಪೇಮೆಂಟ್ ಮೆಥಡ್ಸ್ ಆಯ್ಕೆ ಮಾಡಿಕೊಂಡು, ಆ್ಯಡ್ ಆಪ್ಷನ್ ಮೇಲೆ ಕ್ಲಿಕ್ಕಿಸಿದರೆ, ಕ್ರೆಡಿಟ್, ಡೆಬಿಟ್ ಕಾರ್ಡ್‌ಗಳ ವಿವರಗಳನ್ನು ಅಡಗಿಸಿ ಇಡಬಹುದು.

Best Mobiles in India

English summary
Chrome 69, which marks the browser's 10-year anniversary, is a huge ... While Chrome 69 offers a significant visual change, Google updates. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+