ವಾಟ್ಸಾಪ್‌ನಲ್ಲಿನ ಈ ಉಪಯುಕ್ತ ಫೀಚರ್ಸ್ ಅನ್ನು ಬಳಸುವುದು ಹೇಗೆ ಗೊತ್ತಾ?
ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ತನ್ನ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದರಲ್ಲಿ ಗೌಪ್ಯತೆಗೆ ಸಂಬಂಧಿಸಿದ ಫೀಚರ್ಸ್‌ಗಳಲ್ಲಿ ವಾಟ್ಸಾಪ್ ಎಲ್ಲರಿಗಿಂತ ಮುಂಚೂಣಿಯಲ್ಲಿದೆ. ಇವುಗಳಲ್ಲಿ ಪ್ರಮುಖವಾಗಿ ಅನಗತ್ಯ ಸಂಖ್ಯೆಗಳನ್ನು ಬ್ಲಾಕ್ ಮಾಡುವ ಆಯ್ಕೆಯು ಕೂಡ ಒಂದಾಗಿದೆ.
ಹೌದು, ವಾಟ್ಸಾಪ್‌ನಲ್ಲಿ ನೀವು ಅನಗತ್ಯ ಕರೆಗಳನ್ನು ಅಥವಾ ಅಪರಿಚಿತ ಸಂಖ್ಯೆಗಳನ್ನು ಬ್ಲಾಕ್ ಮಾಡುವುದಕ್ಕೆ ಅವಕಾಶವಿದೆ. ಇದರಿಂದ ಅನಗತ್ಯ ಮೆಸೇಜ್‌ಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದಾಗಿದೆ. ಅಲ್ಲದೆ ಸ್ಪ್ಯಾಮ್ ಅಥವಾ ಕಿರುಕುಳ ಸಂದೇಶಗಳಿಂದ ಮುಕ್ತಿ ಪಡೆಯಬಹುದಾಗಿದೆ. ಹಾಗಾದ್ರೆ ವಾಟ್ಸಾಪ್‌ನಲ್ಲಿ ಅನಗತ್ಯ ಸಂಖ್ಯೆಗಳಿಂದ ಬರುವ ಕರೆ ಹಾಗೂ ಸಂದೇಶಗಳನ್ನು ಬ್ಲಾಕ್ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌ನಲ್ಲಿ ಅನಗತ್ಯ ಎನಿಸುವ ನಂಬರ್‌ಗಳನ್ನು ಬ್ಲಾಕ್ ಮಾಡುವುದು ಹೇಗೆ?
* ಮೊದಲಿಗೆ ವಾಟ್ಸಾಪ್ ತೆರೆಯಿರಿ.
* ಇದೀಗ ನಿಮಗೆ ಅನಗತ್ಯ ಎನಿಸುವ ಸಂಖ್ಯೆಯ ಚಾಟ್ ತೆರೆಯಿರಿ
* ಇದರಲ್ಲಿ ಚಾಟ್‌ನ ಮೇಲಿನ ಬಲ ಮೂಲೆಯಲ್ಲಿರುವ ಮೂರು ಡಾಟ್‌ಗಳನ್ನು ಟ್ಯಾಪ್ ಮಾಡಿ
* ಈಗ ಇನ್ನಷ್ಟು ಟ್ಯಾಪ್ ಮಾಡಿ ಮತ್ತು ಬ್ಲಾಕ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿರಿ.
* ಇದನ್ನು ಖಚಿತಪಡಿಸಲು ಮತ್ತೊಮ್ಮೆ ಬ್ಯಾನ್ ಆಯ್ಕೆಯನ್ನು ಟ್ಯಾಪ್ ಮಾಡಿ.
ನೀವು ಇನ್ನೊಂದು ವಿಧಾನವನ್ನು ಬಳಸಿಕೊಂಡು ಕೂಡ ವಾಟ್ಸಾಪ್ ನಂಬರ್ ಬ್ಲಾಕ್ ಮಾಡಬಹುದು
* ಮೊದಲಿಗೆ ವಾಟ್ಸಾಪ್ ತೆರೆಯಿರಿ
* ನಂತರ ಸೆಟ್ಟಿಂಗ್ಸ್ > ಪ್ರೈವೆಸಿ> ಬ್ಲಾಕ್ ಕಂಟ್ಯಾಕ್ಟ್‌ಗಳಿಗೆ ಹೋಗಿ
* ಇದರಲ್ಲಿ ಆಡ್ ಟ್ಯಾಪ್ ಮಾಡಿ
* ಇದೀಗ ನಿಮಗೆ ಅನಗತ್ಯ ಎನಿಸುವ ಸಂಖ್ಯೆಯನ್ನು ಹುಡುಕಿ ಮತ್ತು ಅದನ್ನು ಆಯ್ಕೆ ಮಾಡಲು ಟ್ಯಾಪ್ ಮಾಡಿ
* ನಂತರ ಖಚಿತಪಡಿಸಲು ಬ್ಲಾಕ್ ಅನ್ನು ಟ್ಯಾಪ್ ಮಾಡಿ
ಈ ಮೂಲಕ ನೀವು ವಾಟ್ಸಾಪ್‌ನಲ್ಲಿ ಅನಗತ್ಯ ಸಂಖ್ಯೆಗಳನ್ನು ಬ್ಲಾಕ್ ಮಾಡಬಹುದಾಗಿದೆ.

ಇದಲ್ಲದೆ, ವಾಟ್ಸಾಪ್ ಇತ್ತೀಚಿಗೆ ತನ್ನ ಬಳಕೆದಾರರಿಗೆ ಅಪರಿಚಿತ ಸಂಖ್ಯೆಗಳಿಂದ ಕರೆಗಳನ್ನು ಸೈಲೆಂಟ್ ಮಾಡುವುದಕ್ಕೆ ಕೂಡ ಅವಕಾಶ ನೀಡಿದೆ. ಇದರಿಂದ ನಿಮಗೆ ಯಾವುದೇ ಅಪರಿಚಿತ ವಾಟ್ಸಾಪ್ ಕರೆ ಬಂದರೂ ಕೂಡ ಅದು ಸೈಲೆನ್ಸ್ ಆಗಿರಲಿದೆ. ಸೈಲೆನ್ಸ್ ಅನೌನ್ ಕಾಲ್ ಫೀಚರ್ಸ್ ಬಳಕೆದಾರರಿಗೆ ವರ್ಧಿತ ಗೌಪ್ಯತೆ ಮತ್ತು ಕರೆ ನಿರ್ವಹಣೆಯನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಇದು ಸ್ಪ್ಯಾಮ್, ಹಗರಣಗಳು ಮತ್ತು ಪರಿಚಯವಿಲ್ಲದ ಸಂಖ್ಯೆಗಳಿಂದ ಕರೆಗಳ ವಿರುದ್ಧ ಪರಿಣಾಮಕಾರಿ ರಕ್ಷಣೆಯಾಗಿ ಕಾರ್ಯನಿರ್ವಹಿಸುತ್ತದೆ.
ಇನ್ನು ಇದೇ ಸಮಯದಲ್ಲಿ ವಾಟ್ಸಾಪ್ ಭಾರತದಲ್ಲಿ ತನ್ನ ಸೆಪ್ಟೆಂಬರ್ ತಿಂಗಳ ಮಾಸಿಕ ವರದಿಯನ್ನು ಬಿಡುಗಡೆ ಮಾಡಿದೆ. ಇನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಒಟ್ಟು 71.1 ಲಕ್ಷ ಖಾತೆಗಳನ್ನು ಬ್ಯಾನ್ ಮಾಡಿರುವುದಾಗಿ ಹೇಳಿದೆ. ಭಾರತದ ಐಟಿ ನಿಯಮಗಳ ಅನ್ವಯ ಈ ಕ್ರಮ ಕೈಗೊಂಡಿರುವುದಾಗಿ ವಾಟ್ಸಾಪ್ ಹೇಳಿಕೊಂಡಿದೆ. ಇದು ಸೆಪ್ಟೆಂಬರ್ 1-30 ರ ನಡುವಿನ ವರದಿ ಎಂದು ವಾಟ್ಸಾಪ್ ಹೇಳಿಕೊಂಡಿದೆ. ಇದರಲ್ಲಿ 25.7 ಲಕ್ಷ ಖಾತೆಗಳನ್ನು ಬಳಕೆದಾರರಿಂದ ಯಾವುದೇ ರಿಪೋರ್ಟ್ ಸ್ವೀಕರಿಸದೆ ಪೂರ್ವಭಾವಿಯಾಗಿ ಬ್ಯಾನ್ ಮಾಡಿರುವುದಾಗಿ ಹೇಳಿದೆ. ಇದು ವಾಟ್ಸಾಪ್ ತನ್ನ ಬಳಕೆದಾರರ ಸುರಕ್ಷತೆಯ ದೃಷ್ಟಿಯಿಂದ ತೆಗೆದುಕೊಂಡ ನಿರ್ಧಾರವಾಗಿದೆ.

ಈ ಕ್ರಮವು ಸೆಪ್ಟೆಂಬರ್ 1-30 ರ ನಡುವೆ ತೆಗೆದುಕೊಂಡ ನಿರ್ಧಾರವಾಗಿದೆ. ಇನ್ನು ಈ ಅವಧಿಯಲ್ಲಿ ವಾಟ್ಸಾಪ್ ಪ್ಲಾಟ್‌ಫಾರ್ಮ್ ದೂರುಗಳ ಮೇಲ್ಮನವಿ ಸಮಿತಿಯಿಂದ ಆರು ಆದೇಶಗಳನ್ನು ಸ್ವೀಕರಿಸಿದೆ. ಅಲ್ಲದೆ ಈ ಎಲ್ಲಾ ಆರು ಆದೇಶಗಳನ್ನು ಅನುಸರಿಸಲಾಗಿದೆ. ಅಂದರೆ ಸೆಪ್ಟೆಂಬರ್‌ನಲ್ಲಿ ಖಾತೆ ಬೆಂಬಲ 1,031, ಬ್ಯಾನ್ ಮೇಲ್ಮನವಿ 7,396, ಇತರ ಬೆಂಬಲ 1,518, ಉತ್ಪನ್ನ ಬೆಂಬಲ 370 ಮತ್ತು ಸುರಕ್ಷತೆ 127 ಎಲ್ಲವನ್ನು ಸೇರಿ ಒಟ್ಟು 10,442 ಬಳಕೆದಾರರ ವರದಿಗಳನ್ನು ಸ್ವೀಕರಿಸಿರುವುದಾಗಿ ವಾಟ್ಸಾಪ್ ಹೇಳಿದೆ.


Click it and Unblock the Notifications








