Subscribe to Gizbot

ಇನ್ಮುಂದೆ ಮನೆ\ಆಸ್ತಿ ಖರೀದಿಸುವವರು ಆನ್‌ಲೈನಿನಲ್ಲಿಯೇ ದಾಖಲೆ ಪರಿಶೀಲಿಸಬಹುದು!!

Written By:

ಬೆಂಗಳೂರಿನಲ್ಲಿ ಮನೆ ಅಥವಾ ಸೈಟ್ ಖರೀದಿಸುವ ಸಲುವಾಗಿ ಸಂಬಂಧಪಟ್ಟ ಸ್ಥಳದ ದಾಖಲೆಗಳ ಬಗ್ಗೆ ನೀವು ಕುಳಿತಲ್ಲಿಯೇ ಆನ್‌ಲೈನ್ ಮೂಲಕ ಮಾಹಿತಿ ಪಡೆಯಬಹುದಾದ ಯೋಜನೆಯನ್ನು ತರಲಾಗಿದೆ.! ಕ್ರಿಮಿನಲ್‌ಗಳಿಂದ ಮೋಸಹೋಗದಂತೆ ಇನ್ಮುಂದೆ ಮನೆ ಮತ್ತು ಸೈಟ್‌ಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದಾಗಿದೆ.!!

ಇನ್ಮುಂದೆ ಮನೆ\ಆಸ್ತಿ ಖರೀದಿಸುವವರು ಆನ್‌ಲೈನಿನಲ್ಲಿಯೇ ದಾಖಲೆ ಪರಿಶೀಲಿಸಬಹುದು!!

ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ(ರೇರಾ) ಈ ಯೋಜನೆಯನ್ನು ಜಾರಿಗೆ ತಂದಿದ್ದು, ರಾಜ್ಯದಲ್ಲಿನ ಬಹುತೇಕ ಕಟ್ಟಡಗಳ ದಾಖಲೆಗಳನ್ನು ಸಾರ್ವಜನಿಕಗೊಳಿಸಿದೆ. ಹಾಗಾದರೆ, ಯಾವುದೇ ಮನೆ ಅಥವಾ ಸೈಟ್ ಖರೀದಿಸುವ ಮುನ್ನ ಆ ಕಟ್ಟಡದ ಮಾಹಿತಿಯನ್ನು ಆನ್‌ಲೈನ್ ಮೂಲಕ ಹೇಗೆ ತಿಳಿಯಬಹುದು ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೊದಲ ಬಾರಿಗೆ ಸೌಲಭ್ಯ!!

ಮೊದಲ ಬಾರಿಗೆ ಸೌಲಭ್ಯ!!

ಇದೇ ಮೊದಲ ಬಾರಿಗೆ ಸರ್ಕಾರಿ ಇಲಾಖೆಯೊಂದು ಸ್ವಯಂಪ್ರೇರಿತವಾಗಿ ಸಾರ್ವಜನಿಕರಿಗೆ ಈ ರೀತಿಯ ಸೌಲಭ್ಯವನ್ನು ನೀಡಿದೆ. ಯಾವುದೇ ಮನೆ ಅಥವಾ ಸೈಟ್ ಖರೀದಿಸುವ ಮೊದಲು ಜನರು ಸರ್ಕಾರದ ಅಧಿಕೃತ ವೆಬ್ ಸೈಟ್ ಆಸ್ತಿಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ತಪಾಸಣೆ ಮಾಡಬಹುದು.

ವೆಬ್‌ಸೈಟ್ ಯಾವುದು?

ವೆಬ್‌ಸೈಟ್ ಯಾವುದು?

http://rera.karnataka.gov.inವೆಬ್‌ಸೈಟ್‌ನಲ್ಲಿ ಆಸ್ತಿಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ತಪಾಸಣೆ ಮಾಡಬಹುದು. ರಾಜ್ಯದಲ್ಲಿನ 1,331 ಕಟ್ಟಡಗಳ 50,000ಕ್ಕೂ ಹೆಚ್ಚು ದಾಖಲೆಗಳನ್ನು ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ(ರೇರಾ) ಈ ವೆಬ್‌ಸೈಟ್‌ನಲ್ಲಿ ಸಾರ್ವಜನಿಕಗೊಳಿಸಿದೆ.

ಯೂಸರ್ ಐಡಿ ಸೃಷ್ಟಿಸಿ!!

ಯೂಸರ್ ಐಡಿ ಸೃಷ್ಟಿಸಿ!!

http://rera.karnataka.gov.in ವೆಬ್‌ಸೈಟ್‌ ತೆರೆದು ಬಳಕೆದಾರರು ಯೂಸರ್ ಐಡಿಯನ್ನು ಸೃಷ್ಟಿ ಮಾಡಬೇಕು. ನಂತರ ನಿಮ್ಮ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ನೀಡಿ ಲಾಗಿನ್ ಆದರೆ ಅಲ್ಲಿ ಅನುಮೋದನೆಗೊಂಡ ಪ್ರಾಜೆಕ್ಟ್ ಗಳ ಎಲ್ಲಾ ದಾಖಲೆಗಳು ಎಂಬ ಸ್ಕ್ರಾಲ್ ಬರುತ್ತದೆ .!

How to search your lost smartphone!!! ಕಳೆದು ಹೋದ ನಿಮ್ಮ ಸ್ಮಾರ್ಟ್‌ಫೋನ್ ಹುಡುಕುವುದೇಗೆ...?
ಆಸ್ತಿಯ ಪೂರ್ಣ ಮಾಹಿತಿ!!

ಆಸ್ತಿಯ ಪೂರ್ಣ ಮಾಹಿತಿ!!

ನಂತರ ರೇರಾ ಹೋಂ ಪೇಜ್ ನಲ್ಲಿರುವ ಪ್ರಾಜೆಕ್ಟ್ ಪಟ್ಟಿ ಮೇಲೆ ಕ್ಲಿಕ್ ಮಾಡಿದರೆ ವ್ಯೂ ಪ್ರಾಜೆಕ್ಟ್ ಡಾಕ್ಯುಮೆಂಟ್ ಸಿಗುತ್ತದೆ. ಪ್ರಾಜೆಕ್ಟ್ ಹೆಸರು ಮತ್ತು ನಿರ್ಮಾಣಕಾರರ ಹೆಸರು ತೆರೆದು ಕ್ಲಿಕ್ ಮಾಡಿದರೆ ಪ್ರಾಜೆಕ್ಟ್‌ನ ವಿವರಗಳು ಬರುತ್ತವೆ.ಜೊತೆಗೆ ಪ್ರಾಜೆಕ್ಟ್ ಹೆಸರು ಮತ್ತು ನಿರ್ಮಾಣಕಾರರ ಹೆಸರು ಬರುತ್ತದೆ.

ದೂರು ಸಲ್ಲಿಸಬಹುದು!!

ದೂರು ಸಲ್ಲಿಸಬಹುದು!!

http://rera.karnataka.gov.in ವೆಬ್‌ಸೈಟ್‌ ಮೂಲಕ ನಾಗರೀಕರು ತಮ್ಮ ದೂರು ಸಲ್ಲಿಸಲು ಅವಕಾಶ ನೀಡಲಾಗಿದೆ. ವಸತಿ ಇಲಾಖೆ, ಸಂಸತ್ತಿನ ವ್ಯವಹಾರಗಳು , ವಸತಿ ಮತ್ತು ಬಡತನದ ಸಚಿವಾಲಯ ಹೀಗೆ ಎಲ್ಲಾ ಪ್ರಮುಖ ಸೈಟ್‌ಗಳ ಕೊಂಡಿಯನ್ನು ಸಹ ನೀಡಲಾಗಿದ್ದು, ಸಾರ್ವಜನಿಕರು ಈ ಸೇವೆಯನ್ನು ಮುಕ್ತವಾಗಿ ಬಳಕೆ ಮಾಡಿಕೊಳ್ಳಬಹುದು.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
If you are planning to buy a house, now you can cross check all the key documents. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot