ಜಿಯೋದಲ್ಲಿ ಬೇಡವಾದ ಕರೆಗಳನ್ನು ಬ್ಲಾಕ್ ಮಾಡುವುದು ಹೇಗೆ?
ಜಿಯೋ ಬಹಳ ಸುಲಭವಾಗಿ ಇಂತಹ ಬೇಡವಾದ ಕರೆಗಳನ್ನು ಬ್ಲಾಕ್ ಮಾಡಲು ಆಯ್ಕೆಯನ್ನು ನೀಡಿದೆ.!
ಮೋಸದ ಕರೆಗಳು, ಮೋಸದ ಎಸ್‌ಎಮ್‌ಎಸ್‌ಗಳು, ಪ್ರಮೋಷನಲ್ ಪಾಪ್‌ಗಳು ನಿಮಗೆ ಕಿರಿಕಿರಿ ಉಂಟಾಗುವುದು ಸಹಜವೆ.! ಆದರೆ, ಇವುಗಳನ್ನು ಬ್ಲಾಕ್ ಮಾಡಬೇಕು (DOB: do not disturb) ಎಂದು ನೀವು ಅಂದುಕೊಂಡರೆ ಅದೂ ಕೂಡ ಬಹಳ ಕಿರಿಕಿರಿಯ ವಿಷಯವೇ!! ಅಲ್ಲವೇ?
ಹಾಗಾಗಿಯೇ, ಜಿಯೋ ಬಹಳ ಸುಲಭವಾಗಿ ಇಂತಹ ಬೇಡವಾದ ಕರೆಗಳನ್ನು ಬ್ಲಾಕ್ ಮಾಡಲು ಆಯ್ಕೆಯನ್ನು ನೀಡಿದೆ.! ಬೇಡವಾದ ಕರೆಗಳನ್ನು ಬ್ಲಾಕ್ ಮಾಡಲು ಇತರ ಟೆಲಿಕಾಂ ಕಂಪೆನಿಗಳಲ್ಲಿ ಕಷ್ಟವಾಗಿದ್ದು, ಜಿಯೋದಲ್ಲಿ ಬಹಳ ಸುಲಭವಾಗಿ ಬೇಡವಾದ ಕರೆಗಳನ್ನು ಬ್ಲಾಕ್ ಮಾಡುವುದು ಹೇಗೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!


ಮೈಜಿಯೋ ಆಪ್ ತೆರೆಯಿರಿ.!!
ಬೇಡವಾದ ಕರೆಗಳನ್ನು ಬ್ಲಾಕ್ ಮಾಡಲು ಜಿಯೋ ಆಪ್ ತೆರೆಯಿರಿ. ಜಿಯೋ ಆಪ್ ತೆರೆದ ನಂತರ ನಿಮ್ಮ ಎಡಭಾಗದಲ್ಲಿ ಕಾಣುವ ಮೂರುಗೆರೆಗಳುಳ್ಳ ಐಕಾನ್ ಅನ್ನು ಒತ್ತಿರಿ. ನಂತರ ಜಿಯೋ ಪ್ಲಾನ್ ಮತ್ತು ವೋಚರ್ ಮಾಹಿತಿ ಎಲ್ಲವನ್ನು ಹೊಂರುವ ಪೇಜ್ ತೆರೆಯುತ್ತದೆ.!

ಮೈ ಪ್ರೊಫೈಲ್ ಕ್ಲಿಕ್ ಮಾಡಿ.!!
ಮೂರುಗೆರೆಗಳುಳ್ಳ ಐಕಾನ್ ಕ್ಲಿಕ್ ಮಾಡಿದ ನಂತರ ನಿಮ್ಮ ಪರ್ಸನಲ್ ಡಿಟೇಲ್ಸ್ ಆಯ್ಕೆ ತೆರೆಯುತ್ತದೆ.! ಅಲ್ಲಿ ಕಾಣುವ ಆಯ್ಕೆಗಳಲ್ಲಿ do not disturb ಎಂಬ ಆಯ್ಕೆ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ.! ನಂತರ do not disturb ಪ್ರಿಫರ್ ಮಾಡುವ ಆಯ್ಕೆ ತೆರೆಯುತ್ತದೆ.!!

do not disturb ಪ್ರಿಫರ್ ಮಾಡಿ.!!
do not disturb ಎಂಬ ಆಯ್ಕೆ ಕ್ಲಿಕ್ ಮಾಡಿದ ನಂತರ ಸೆಲೆಕ್ಟ್ DND ಪ್ರಿಫರೆನ್ಸ್ ಎಂಬ ಆಯ್ಕೆ ತೆರಯುತ್ತದೆ.! ನಿಮಗೆ ಯಾವ ಕೆಟಗರಿಯ ಅಂದರೆ ರಿಯಲ್ ಎಸ್ಟೇಟ್, ಎಜುಕೇಷನ್, ಹೆಲ್ತ್ ಹೀಗೆ ನಿಮಗೆ ಬೇಡವಾದ ಪಾಪ್ ಅಪ್‌ಗಳನ್ನು ಬ್ಲಾಕ್ ಮಾಡಿ.!!

ಫುಲ್ DND ಆಯ್ಕೆ ಮಾಡಿ.! (do not disturb)
ಒಂದೇ ಬಾರಿ ಯಾವುದೇ ಬೇಡವಾದ ಕರೆಗಳನ್ನು ಬ್ಲಾಕ್ ಮಾಡಬೇಕು ಎಂದರೆ ಫುಲ್ DND ಎಂಬ ಆಯ್ಕೆ ಇರುತ್ತದೆ. ಅದನ್ನು ಆಯ್ಕೆ ಮಾಡಿದರೆ ನೀವು ಜಿಯೋವಿನಿಂದ ಯಾವುದೇ ಮೋಸದ ಅಥವಾ ಪ್ರಮೋಷನಲ್ ಕರೆಗಳನ್ನು ಪಡೆಯುವುದಿಲ್ಲ.!!


Click it and Unblock the Notifications








