TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಫಿಂಗರ್ ಪ್ರಿಂಟ್ ಸ್ಕ್ಯಾನರ್ ಗೂ ಸ್ಪರ್ಧೆಯೊಡ್ಡಿ ಹೊಸ ಐಫೋನ್ ಎಕ್ಸ್ಎಸ್, ಎಕ್ಸ್ಎಸ್ ಮ್ಯಾಕ್, ಎಕ್ಸ್ ಆರ್ ನಲ್ಲಿ ಆಪಲ್ ಸಂಸ್ಥೆಯು ಫೇಸ್ ಐಡಿಯನ್ನು ಪರಿಚಯಿಸಿದೆ. ಐಫೋನ್ ಗಳಲ್ಲಿ ಫೋನ್ ಅನ್ ಲಾಕ್ ಮಾಡುವುದಕ್ಕೆ ಫೇಸ್ ಐಡಿ ತುಂಬಾ ಸುಲಭದ ಮತ್ತು ಬೇಗನೆ ಸಾಧ್ಯವಾಗುವ ವಿಧಾನವಾಗಿದೆ. ಆದರೆ ಆಕ್ಯುರೆಸಿ ಮತ್ತು ಎಫೀಷಿಯನ್ಸಿ ವಿಚಾರದಲ್ಲಿ ಐಫೋನ್ ಎಕ್ಸ್ ಬಿಡುಗಡೆಯಾದಾಗಲೇ ಈ ಬಗ್ಗೆ ಪ್ರಶ್ನೆ ಉದ್ಭವವಾಗಿತ್ತು.
ಇದೀಗ ಹೊಸ ಐಓಎಸ್ ಅಪ್ ಡೇಟ್ ನಲ್ಲಿ ಆಪಲ್ ಇನ್ನೊಂದು ಫೇಸ್ ನ್ನು ಆಡ್ ಮಾಡುವುದಕ್ಕೆ ಅವಕಾಶ ನೀಡುತ್ತಿದ್ದು , ಇನ್ನೊಬ್ಬರ ಫೇಸ್ ಐಡಿ ಮೂಲಕ ಫೋನ್ ಅನ್ ಲಾಕ್ ಮಾಡುವುದಕ್ಕೆ ಅವಕಾಶವಿರುತ್ತದೆ. ಐಫೋನ್ ಎಕ್ಸ್, ಎಕ್ಸ್ಎಸ್,ಎಕ್ಸ್ ಎಸ್ ಮ್ಯಾಕ್ ಮತ್ತು ಎಕ್ಸ್ ಆರ್ ನಲ್ಲಿ ಇದಕ್ಕೆ ಅವಕಾಶವಿರುತ್ತದೆ.
ನಿಮ್ಮ ಮುಖವನ್ನೇ ಎರಡು ಬಾರಿ ರಿಜಿಸ್ಟ್ರರ್ ಮಾಡುವುದು:
ಈ ವೈಶಿಷ್ಟ್ಯತೆಯು ಹೆಚ್ಚು ಬಯೋಮೆಟ್ರಿಕ್ ವಿವರಗಳನ್ನು ನೀಡಲು ಒಂದೇ ಫೇಸ್ ಐಡಿಯನ್ನು ಎರಡು ಬಾರಿ ನೊಂದಾಯಿಸುವುದಕ್ಕೆ ಅವಕಾಶ ನೀಡುತ್ತದೆ ಮತ್ತು ಇದು ಫೇಸ್ ಐಡಿ ದಕ್ಷತೆಯನ್ನು ಹೆಚ್ಚಿಸುದಕ್ಕೆ ಇದು ನೆರವಾಗುತ್ತದೆ. ಆ ಮೂಲಕ ಐಫೋನ್ ಗಳಲ್ಲಿ ಫೋನ್ ಅನ್ ಲಾಕ್ ಆಗುವಿಕೆಯ ವೇಗವು ಹೆಚ್ಚುತ್ತದೆ.
ಕನ್ನಡಕ ಬಳಸುವವರಿಗೆ ಅನುಕೂಲ:
ಒಂದು ವೇಳೆ ಕನ್ನಡಕ ಬಳಸುವವರು ನೀವಾಗಿದ್ದರೆ ಕನ್ನಡಕ ಧರಿಸಿ ಒಂದು ಫೇಸ್ ಐಡಿಯನ್ನು ಮತ್ತು ಧರಿಸದೆಯೇ ಇನ್ನೊಂದು ಫೇಸ್ ನ್ನು ಫೇಸ್ ಅನ್ ಲಾಕ್ ಗೆ ರಿಜಿಸ್ಟರ್ ಮಾಡಿದ್ದರೆ ಎರಡೂ ಸಂದರ್ಬಗಳಲ್ಲೂ ಮೊಬೈಲ್ ಅನ್ ಲಾಕ್ ಗೆ ನೆರವಾಗುತ್ತದೆ. ಎರಡು ರೀತಿಯ ಮುಖಗಳನ್ನು ಸೇರಿಸುವುದರ ಪರಿಣಾಮದಿಂದಾಗಿ ಐಫೋನ್ ಅನ್ ಲಾಕ್ ಸುಲಭವಾಗುತ್ತದೆ. ಅಷ್ಟೇ ಅಲ್ಲ ಇಬ್ಬರು ಸದಸ್ಯರನ್ನೂ ಕೂಡ ಸೇರಿಸುವುದಕ್ಕೆ ಅವಕಾಶವಿರುತ್ತದೆ. ಉದಾಹರಣೆಗೆ ಗಂಡ ಮತ್ತು ಹೆಂಡತಿ ಇಬ್ಬರೂ ಬಳಸುವ ಐಫೋನ್ ನಲ್ಲಿ ಇಬ್ಬರೂ ತಮ್ಮ ಮುಖವನ್ನು ಫೋನ್ ಅನ್ ಲಾಕ್ ಮಾಡುವುದಕ್ಕೆ ಈ ಸೌಲಭ್ಯದ ಮೂಲಕ ಬಳಸಿಕೊಳ್ಳಲು ಅವಕಾಶವಿರುತ್ತದೆ.
ನಿಮ್ಮ ಸಂಗಾತಿಗೂ ಫೇಸ್ ಐಡಿ ಕೊಡಿ
ಅಂದರೆ ಒಟ್ಟಾರೆಯಾಗಿ ನಿಮ್ಮ ನಂಬಿಕೆಯ ವ್ಯಕ್ತಿಗಳನ್ನು ನಿಮ್ಮ ಐಫೋನ್ ಫೇಸ್ ಅನ್ ಲಾಕ್ ಗೆ ಸೇರಿಸುವುದಕ್ಕೆ ಅವಕಾಶವಿದೆ. ನಿಮ್ಮ ಸಂಗಾತಿಯೊಡನೆ ಪಾಸ್ ಕೋಡ್ ಹಂಚಿಕೊಳ್ಳುವುದರ ಬದಲು ಅವರ ಫೇಸ್ ನ್ನೇ ಫೇಸ್ ಐಡಿಗೆ ಸೇರಿಸಿದರೆ ನಿಮ್ಮ ಫೋನ್ ಅನ್ ಲಾಕ್ ನ್ನು ಅವರೂ ಕೂಡ ಫೇಸ್ ಐಡಿ ಮೂಲಕವೇ ಮಾಡಿಕೊಂಡು ಬಳಸಲು ಅವಕಾಶವಿರುತ್ತದೆ. ಅಂದರೆ ಕೇವಲ ನಿಮ್ಮ ಫೋನ್ ನ್ನು ನಿಮ್ಮ ಸಂಗಾತಿ ನೋಡುವುದರ ಮೂಲಕವೇ ಫೋನ್ ಅನ್ ಲಾಕ್ ಮಾಡಲು ಸಾಧ್ಯವಾಗುತ್ತದೆ.
ಹಾಗಾದ್ರೆ ಐಓಎಸ್ ಬೇಸ್ ಆಗಿರುವ ಐಫೋನ್ ಎಕ್ಸ್, ಎಕ್ಸ್ಎಸ್, ಎಕ್ಸ್ ಎಸ್ ಮ್ಯಾಕ್ಸ್ ಮತ್ತು ಎಕ್ಸ್ ಆರ್ ನಲ್ಲಿ ಇದಕ್ಕೆ ಅವಕಾಶವಿರುತ್ತದೆ.ಹಾಗಾದ್ರೆ ಇನ್ನೊಬ್ಬರನ್ನು ಸೇರಿಸುವುದು ಹೇಗೆ ಇಲ್ಲಿದೆ ನೋಡಿ ಹಂತಹಂತವಾದ ಮಾಹಿತಿ.
ಫೇಸ್ ಐಡಿಗೆ ಇನ್ನೊಂದು ಮುಖ ಸೇರಿಸುವ ಹಂತಗಳು:
1. ಸೆಟ್ಟಿಂಗ್ಸ್ ಗೆ ತೆರಳಿ.
2. ಫೇಸ್ ಐಡಿ ಮತ್ತು ಪಾಸ್ ಕೋಡ್ ನ್ನು ಟ್ಯಾಪ್ ಮಾಡಿ.
3. ಪಾಸ್ ಕೋಡ್ ನ್ನು ಎಂಟರ್ ಮಾಡಿ.
4. "Setup an alternative appearance"ಟ್ಯಾಪ್ ಮಾಡಿ.
5. "How to setup Face ID" ವಿಂಡೋದಲ್ಲಿ ಗೆಟ್ ಸ್ಟಾರ್ಟೆಡ್ ನ್ನು ಟ್ಯಾಪ್ ಮಾಡಿ.
6. ಫೇಸ್ ಐಡಿಯನ್ನು ರಿಜಿಸ್ಟರ್ ಮಾಡಿ ಸೇವ್ ಮಾಡಿ.