ನಿಮಗೆ ಬೇಕಾದ ಗೆಸ್ಚರ್‌ಗಳನ್ನು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗೆ ಸೇರಿಸುವುದು ಹೇಗೆ..?
ಆಂಡ್ರಾಯ್ಡ್ ಅನ್ನುವುದು ಒಂದು ಸ್ಮಾರ್ಟ್ ಡಿವೈಸ್ ಆಗಿದ್ದು ತನ್ನ ಬಳಕೆದಾರರಿಗೆ ಹಲವಾರು ವೈಶಿಷ್ಟ್ಯತೆಗಳನ್ನು ಒದಗಿಸುತ್ತದೆ.ವಿಶ್ವದಾದ್ಯಂತ ಬಹಳ ಮಂದಿ ಬಳಸುವ ಆಪರೇಟಿಂಗ್ ಸಿಸ್ಟಮ್ ಅಂದರೆ ಅದು ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಆಗಿದೆ ಮತ್ತು ಹಲವಾರು ಬಳಕೆದಾರರು ತಮ್ಮ ಆಂಡ್ರಾಯ್ಡ್ ಫೋನಿಗೆ ಇನ್ನಷ್ಟು ವೈಶಿಷ್ಟ್ಯತೆಗಳನ್ನು ಸೇರಿಸಿಕೊಳ್ಳುವ ನಿಟ್ಟಿನಲ್ಲಿ ಹಲವಾರು ರೀತಿಯ ಟ್ರಿಕ್ಸ್ ಗಳನ್ನು ಮತ್ತು ಪ್ರಯತ್ನಗಳನ್ನು ಅಳವಡಿಸುತ್ತಲೇ ಇರುತ್ತಾರೆ.

ಅದರಲ್ಲಿ ಒಂದು ಗೆಸ್ಚರ್ ಫೀಚರ್ ಗಳನ್ನು ಆಡ್ ಮಾಡುವುದು. ಹೆಚ್ಚಿನ ಲೇಟೆಸ್ಟ್ ಆಂಡ್ರಾಯ್ಡ್ ಫೋನ್ ಗಳಲ್ಲಿ ಗೆಸ್ಚರ್ ವೈಶಿಷ್ಟ್ಯವು ಇನ್ ಬಿಲ್ಡ್ ಆಗಿಯೇ ಇರುತ್ತದೆ. ಆದರೆ ಕೆಲವು ಆಂಡ್ರಾಯ್ಡ್ ಫೋನ್ ಗಳಲ್ಲಿ ತಪ್ಪಿಹೋಗಿರಬಹುದು. ಒಂದು ವೇಳೆ ನಿಮ್ಮದು ಕೂಡ ಆ ತಪ್ಪಿ ಹೋದ ಸಾಲಿಗೆ ಸೇರುವ ಸ್ಮಾರ್ಟ್ ಫೋನ್ ಆಗಿದ್ದಲ್ಲಿ, ನೀವು ಗೆಸ್ಚರ್ ವೈಶಿಷ್ಟ್ಯವನ್ನು ಸೇರಿಸಿಕೊಳ್ಳಲು ಈ ಲೇಖನವು ನಿಮಗೆ ಸಹಾಯ ಮಾಡಲಿದೆ.
ನಾವು ಈ ಲೇಖನದಲ್ಲಿ 6 ವಿಧಾನಗಳನ್ನು ಚರ್ಚಿಸಲಿದ್ದು ಅವುಗಳು ನಿಮ್ಮ ಫೋನಿಗೆ ಗೆಸ್ಚರ್ ಕಂಟ್ರೋಲ್ ಗಳನ್ನು ಸೇರಿಸಿಕೊಳ್ಳುವುದಕ್ಕೆ ಸಹಾಯ ಮಾಡಲಿದೆ. ಇದು ನಿಮ್ಮ ಫೋನಿನಲ್ಲಿರುವ ಗೆಸ್ಚರ್ ಸೆನ್ಸರ್ ನಿಂದ ಸಾಧ್ಯವಾಗುತ್ತದೆ. ಹಾಗಾದ್ರೆ ಅದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ತಿಳಿದು ಪಡೆಯಿರಿ.
ಕಸ್ಟಮೈಸ್ಡ್ ಗೆಸ್ಚರ್ ನಿಯಂತ್ರಕಗಳನ್ನು ನಿಮ್ಮ ಆಂಡ್ರಾಯ್ಡ್ ಫೋನ್ ಗೆ ಸೇರಿಸುವ ಬಗೆ ಹೇಗೆ?

ವಿಧಾನ 1: ಕ್ವಿಕ್ ಫೈ ಆಪ್ ಬಳಸಿ
ನೀವು ಲಾಂಚ್ ಮಾಡಬೇಕು ಎಂದುಕೊಂಡಿರ ಅಪ್ಲಿಕೇಷನ್ನಿನ ಐಕಾನ್ ಹುಡುಕಲು ಕಷ್ಟವಾಗುತ್ತಿದೆಯಾ? ನೀವು ವೈಫೈ/ ರಿಂಗ್ ಟೋನ್/ ಬ್ಲೂಟೂತ್ / ಇತರೆ ಫೋನ್ ಸೆಟ್ಟಿಂಗ್ ಗಳನ್ನು ನಿರಂತರವಾಗಿ ಬಳಸುತ್ತಿರುತ್ತೀರಾ? ಕ್ವಿಕ್ ಫೈ ನ್ನು ಬಳಸಿ ಲಾಂಚ್/ಕಾಲ್/ ಯಾವುದೇ ಅಪ್ಲಿಕೇಷನ್ ನ್ನು ಟಾಗಲ್, ಕಾಂಟ್ಯಾಕ್ಟ್ ಅಥವಾ ಸೆಟ್ಟಿಂಗ್ಸ್...ಕಸ್ಟಮ್ ಸೆಟ್ಟಿಂಗ್ ಬಳಸಿ ಮಾಡಬಹುದು!. ಹಾಗಿದ್ದರೆ ಈ ಅಪ್ಲಿಕೇಷನ್ ನ್ನು ನೀವು ಪ್ರಯತ್ನಿಸಲೇಬೇಕು ಮತ್ತು ಸುಲಭದಲ್ಲಿ ನಿಮ್ಮ ಆಂಡ್ರಾಯ್ಡ್ ಅಪ್ಲಿಕೇಷನ್ ಗಳಿಗೆ ಹಲವು ವಿಧಧ ಗೆಸ್ಚರ್ ಕಂಟ್ರೋಲ್ ಗಳನ್ನು ಸೇರಿಸಬಹುದು.

ವಿಧಾನ 2: ನೋವಾ ಲಾಂಚರ್ ಪ್ರೈಮ್ ಆಪ್ ಬಳಸಿ
ಇದು ಒಂದು ನೀವು ಪಾವತಿ ಮಾಡಿ ಖರೀದಿಸಬೇಕಾಗಿರುವ ಆಪ್ ಆಗಿದ್ದು ಹಲವು ವೈಶಿಷ್ಟ್ಯತೆಗಳನ್ನು ನೀಡಲಿದೆ.ಒಮ್ಮೆ ನೀವು ನಿಮ್ಮ ಆಂಡ್ರಾಯ್ಡ್ ನಲ್ಲಿ ಈ ಆಪ್ ನ್ನು ಪಡೆದ ನಂತರ ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಹಂತ 1. ಮೊದಲನೆಯದಾಗಿ ಅಪ್ಲಿಕೇಶನ್ ಡ್ರಾಯರ್ ಐಕಾನ್ ನಲ್ಲಿ ನಿಮ್ಮ ಫಿಂಗರ್ ಸ್ಲೈಡ್ ಅನ್ನು ಬಳಸಿ ಮತ್ತು ಇದು ನೋವಾ ಸೆಟ್ಟಿಂಗ್ ಗಳ ಪ್ರದೇಶವನ್ನು ತೆರೆಯುತ್ತದೆ.
ಹಂತ 2. ಈಗ ಗೆಸ್ಚರ್ ಮತ್ತು ಇನ್ ಪುಟ್ ಆಯ್ಕೆಯನ್ನ ಟ್ಯಾಪ್ ಮಾಡಿ ಮತ್ತು ಇದು ನಿಮಗೆ ನಿಮ್ಮ ಆಂಡ್ರಾಯ್ಡ್ ಗೆ ಲಭ್ಯವಿರುವ ಎಲ್ಲಾ ಗೆಸ್ಚರ್ ಗಳನ್ನು ತೆರೆಯುತ್ತದೆ.
ಹಂತ 3. ಈಗ ನೀವು ಯಾವುದೇ ಗೆಸ್ಚರ್ ನ್ನು ಟ್ಯಾಪ್ ಮಾಡಿ ಮತ್ತು ನಿಮ್ಮ ಇಚ್ಛೆಯಂತೆ ಅದನ್ನು ನೀವು ಸೆಟ್ ಮಾಡಬಹುದು. ಸರಿಯಾಗಿ ಗೆಸ್ಚರ್ ನ್ನು ಬಳಸುವ ವಿಧಾನವನ್ನು ಅಭ್ಯಾಸ ಮಾಡಿಕೊಳ್ಳಿ.
ಅಷ್ಟೇ, ನಿಮ್ಮ ಆಯ್ಕೆಯ ಗೆಸ್ಚರ್ ಕಂಟ್ರೋಲ್ ನಿಮ್ಮ ಮೊಬೈಲ್ ನಲ್ಲಿ ಸೆಟ್ ಆಗಿ ಇರುತ್ತದೆ.

ವಿಧಾನ 3 ಗೂಗಲ್ ಗೆಸ್ಚರ್ ಸರ್ಚ್ ಬಳಸಿ
ಇದೊಂದು ಮತ್ತೊಂದು ಅಧ್ಬುತ ಆಪ್ ಆಗಿದ್ದು, ಗೆಸ್ಚರ್ ಕಂಟ್ರೋಲ್ ವೈಶಿಷ್ಟ್ಯವನ್ನು ನಿಮ್ಮ ಡಿವೈಸ್ ಗೆ ಸೇರಿಸಲು ನಿಮಗೆ ನೆರವು ನೀಡುತ್ತದೆ. ಗೆಸ್ಚರ್ ಸರ್ಚ್ ನಿಮಗೆ ವೇಗವಾಗಿ ನಿಮ್ಮ ಕಾಂಟ್ಯಾಕ್ಟ್, ಅಪ್ಲಿಕೇಷನ್, ಸೆಟ್ಟಿಂಗ್ಸ್, ಮ್ಯೂಸಿಕ್ ಮತ್ತು ಬುಕ್ ಮಾರ್ಕ್ ಗಳನ್ನು ನಿಮ್ಮ ಆಂಡ್ರಾಯ್ಡ್ ಡಿವೈಸ್ ನಲ್ಲಿ ಅಕ್ಷರಗಳು ಮತ್ತು ನಂಬರ್ ಗಳನ್ನು ಬರೆಯುವ ಮೂಲಕ ಆಕ್ಸಿಸ್ ಮಾಡಲು ಅನುವು ಮಾಡಿಕೊಡುತ್ತದೆ.
ಇದು ನಿರಂತರವಾಗಿ ಹುಡುಕಾಟದ ಫಲಿತಾಂಶಗಳನ್ನು ಪ್ರತಿ ಗೆಸ್ಚರ್ ನ್ನು ಸೇರಿಸಿದಾಗಲೂ ರಿಫೈನ್ ಆಗುತ್ತದೆ ಮತ್ತು ಇದು ನಿಮ್ಮ ಸರ್ಚ್ ಹಿಸ್ಟರಿಯಿಂದಾಗಿ ಹೆಚ್ಚು ಕಲಿಯುತ್ತದೆ.

ವಿಧಾನ 4: Xposed Installer ಬಳಸಿ ಗೆಸ್ಚರ್ ಅನ್ ಲಾಕ್ ವೈಶಿಷ್ಟ್ಯವನ್ನು ಆಂಡ್ರಾಯ್ಡ್ ಗೆ ಸೇರಿಸಿ.
ಹಂತ 1. Xposed Installer ನ್ನು ಕೇವಲ ರೂಟೆಡ್ ಆಂಡ್ರಾಯ್ಡ್ ನಲ್ಲಿ ಮಾತ್ರ ಇನ್ಸ್ಟಾಲ್ ಮಾಡಲು ಸಾಧ್ಯವಾಗುವುದರಿಂದಾಗಿನೀವು ಮೊದಲು ಮಾಡಬೇಕಾಗಿರುವ ಕೆಲಸವೇನೆಂದರೆ, ನಿಮ್ಮ ಆಂಡ್ರಾಯ್ಡ್ ನ್ನು ರೂಟ್ ಮಾಡಿ.
ಹಂತ 2. ನಿಮ್ಮ ಡಿವೈಸ್ ನ್ನು ರೂಟ್ ಮಾಡಿದ ನಂತರ, ನೀವು Xposed installer ನ್ನು ನಿಮ್ಮ ಆಂಡ್ರಾಯ್ಡ್ ನಲ್ಲಿ ಇನ್ಸ್ಟಾಲ್ ಮಾಡಬೇಕು. ಅದು ಸ್ವಲ್ಪ ಉದ್ದದ ಕೆಲಸವೇ ಆಗಿರುತ್ತದೆ ಮತ್ತು ಅದಕ್ಕಾಗಿ ನೀವು ನಾವು ಹೇಳುವ ಕೆಳಗಿನ ಹಂತಗಳನ್ನು ಅನುಸರಿಸಿ.
ಕೆಲವು ಹಳೆಯ ವರ್ಷನ್ ನ ಆಂಡ್ರಾಯ್ಡ್ ನಲ್ಲಿ ಇದು ಕೆಲಸ ಮಾಡದೇ ಇರಬಹುದು. ಹಾಗಾದಲ್ಲಿ ನೀವು Xposed apk ಯನ್ನು ತೆಗೆದುಕೊಂಡು ನೇರವಾಗಿ ಇನ್ಸ್ಟಾಲ್ ಮಾಡಲು ಪ್ರಯತ್ನಿಸಬಹುದು. ಎಪಿಕೆಯನ್ನು ಇನ್ಸ್ಟಾಲ್ ಮಾಡಿದ ನಂತರ ಸಿಂಪಲ್ ಆಗಿ ಇನ್ಸ್ಟಾಲ್ ಮತ್ತು ಅಪ್ ಡೇಟ್ ಬಟನ್ ನ್ನು ಕ್ಲಿಕ್ಕಿಸಿ
ಹಂತ 3. ಈಗ, Xposed module ನ್ನು ಇನ್ಸ್ಟಾಲ್ ಮಾಡಿದ ನಂತರ ಕೂಲ್ Xposed module ಬೇಕಾಗುತ್ತದೆ. ಅದು ನಿಮಗೆ ಗೆಸ್ಟರ್ ಅನ್ ಲಾಕ್ ವೈಶಿಷ್ಟ್ಯವನ್ನು ಒದಗಿಸುತ್ತದೆ ಮತ್ತ ಅದಕ್ಕಾಗಿ ಆಪ್ ಗೆಸ್ಚರ್ ಅನ್ ಲಾಕ್ ನ್ನು ಕಸ್ಟಮ್ ಶಾರ್ಟ್ ಕಟ್ ಜೊತೆಗೆ ಬಳಸಬೇಕು.
ಹಂತ 4. ಈಗ ಆಪ್ ನ್ನು ಇನ್ಸ್ಟಾಲ್ ಮಾಡಿ ಮತ್ತು Xposed ನಲ್ಲಿ ಆಪ್ ನ್ನು ಮಾಡ್ಯೂಲ್ ಮಾಡಿ. ಇದಾದ ನಂತರ ನಿಮ್ಮ ಆಂಡ್ರಾಯ್ಡ್ ಡಿವೈಸ್ ನ್ನು ರಿಬೂಟ್ ಮಾಡಬೇಕು ಆ ಮೂಲಕ ನಿಮ್ಮ ಡಿವೈಸ್ ನಲ್ಲಿ ಮಾಡ್ಯೂಲ್ ಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.
ಹಂತ 5 ಈಗ ಜಸ್ಟ್ ನೀವು ನಿಮ್ಮ ಡಿವೈಸ್ ನ್ನು ಅನ್ ಲಾಕ್ ಮಾಡಲು ಗೆಸ್ಚರ್ ಲಾಕ್ ನ್ನು ಸೆಟ್ ಮಾಡಬೇಕು ಮತ್ತು ಅಲ್ಲಿಗೆ ನಿಮ್ಮ ಗೆಸ್ಚರ್ ಸೆಟ್ಟಿಂಗ್ ಮುಗಿದಂತೆ.

ವಿಧಾನ 5: ಆಲ್ ಇನ್ ಗೆಸ್ಚರ್ ಬಳಸಿ
ಆಲ್ ಇನ್ ಒನ್ ಗೆಸ್ಚರ್ ನಿಮಗೆ ಸಾಫ್ಟ್ ಕೀ ಗಳನ್ನು ಮರೆಮಾಚಲು ಅವಕಾಶ ನೀಡುತ್ತದೆ. ನಿಮ್ಮ ಕೈ ಬೆರಳು ಗಳನ್ನು ಸ್ಕ್ರೀನಿನ ಮೇಲೆ ಸ್ವೈಪ್ ಮಾಡಿ ಮತ್ತು ಯಾವ ಆಕ್ಷನ್ ನ್ನು ನೀವು ಮಾಡಬೇಕು ಎಂದುಕೊಂಡಿದ್ದೀರೋ ಅದನ್ನು ಸಾಧಿಸಬಹುದು.,
ಹಂತ 1. ಮೊದಲನೆಯದಾಗಿ, ಆಲ್ ಇನ್ ಒನ್ ಗೆಸ್ಚಕ್ ನ್ನು ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗೆ ಡೌನ್ ಲೋಡ್ ಮಾಡಿ ಮತ್ತು ಇನ್ಸ್ಟಾಲ್ ಮಾಡಿ ಮತ್ತು ಆಪ್ ನ್ನು ಲಾಂಚ್ ಮಾಡಿ.
ಹಂತ 2.ಈಗ ಇದು ನಿಮಗೆ ಕೆಲವು ಪರ್ಮಿಷನ್ ಗಳನ್ನು ಕೇಳುತ್ತದೆ. ಸರಳವಾಗಿ ಕಂಟಿನ್ಯೂ ಅನ್ನು ಟ್ಯಾಪ್ ಮಾಡಿ.
ಹಂತ 3 ಆಲ್ ಇನ್ ಒನ್ ಗೆಸ್ಚರ್ ಆಪ್ ನ್ನು ಆಕ್ಸಿಸೇಬ್ಲಿಟಿ ಸೆಟ್ಟಿಂಗ್ಸ್ ನಲ್ಲಿ ಅನೇಬಲ್ ಮಾಡಬೇಕು.
ಹಂತ 4. ಈಗ, ನಿಮ್ಮ ಇಚ್ಛೆಗೆ ಅನುಸಾರವಾಗಿ ನೀವು ಸೆಟ್ಟಿಂಗ್ ಗಳನ್ನು ಮಾಡಬೇಕು, ಉದಾಹರಣೆಗೆ ರೀಸೆಂಟ್ ಆಪ್ ಗಳನ್ನು ಮೇಲ್ಬಾಗದಲ್ಲಿ ಸೆಟ್ ಆಗುವಂತೆ ಮಾಡಬಹುದು.
ಇದಿಷ್ಟು ಮಾಡಿದರೆ, ನಿಮ್ಮ ಕೆಲಸ ಮುಗಿಯಿತು. ಈ ಆಪ್ ನ್ನು ಇನ್ಸ್ಟಾಲ್ ಮಾಡಿ ಹೆಚ್ಚಿನ ಸೆಟ್ಟಿಂಗ್ಸ್ ಗಾಗಿ ಆಪ್ ನ್ನು ಎಕ್ಸ್ ಪ್ಲೋರ್ ಮಾಡಬೇಕು .

ವಿಧಾನ 6 ಡಾಲ್ಫಿನ್ ಬ್ರೌಸರ್ ಬಳಸಿ
ಡಾಲ್ಫಿನ್ ಬ್ರೌಸರ್ ಒಂದು ಅತ್ಯುತ್ತಮ ಬ್ರೌಸರ್ ಆಗಿದ್ದು ಆಂಡ್ರಾಯ್ಡ್ ಡಿವೈಸ್ ನಲ್ಲಿ ಅದನ್ನು ಹೊಂದಿರುವುದು ಬಹಳ ಒಳ್ಳೆಯದು. ಕೇವಲ ಬ್ರೌಸರ್ ಸೂಪರ್ ಫಾಸ್ಟ್ ಮಾತ್ರವಲ್ಲ, ಆದರೆ ಇದರ ಜೊತೆಗೆ ಹಲವಾರು ವಿಶಿಷ್ಟವಾದ ವೈಶಿಷ್ಟ್ಯಗಳನ್ನು ಕೂಡ ಇದು ಹೊಂದಿರುತ್ತದೆ ಮತ್ತು ಅದರಲ್ಲಿ ಒಂದು ಗೆಸ್ಚರ್ ಸರ್ಚ್. ವೆಬ್ ಸೈಟ್ ನ್ನು ಲಾಂಚ್ ಮಾಡಲು ಬ್ರೌಸರ್ ನ ಒಳಗೆ ಗೆಸ್ಚರ್ ಬಳಸಲು ನೀವು ಡಾಲ್ಫಿನ್ ಬ್ರೌಸರ್ ನ್ನು ಗೆಸ್ಚರ್ ಸರ್ಚ್ ಗಾಗಿ ಬಳಸಬಹುದು.
ಹಂತ 1. ಮೊದಲನೆಯದಾಗಿ ನೀವು ಆಂಡ್ರಾಯ್ಡ್ ಮೊಬೈಲಿನಲ್ಲಿ ಡಾಲ್ಫಿನ್ ಬ್ರೌಸರ್ ನ್ನು ಡೌನ್ ಲೋಡ್ ಮಾಡಬೇಕು. ಇದನ್ನು ನೀವು ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ ಲೋಡ್ ಮಾಡಿ ಇನ್ಸ್ಟಾಲ್ ಮಾಡಬಹುದು.
ಡಾಲ್ಫಿನ್ ವೆಬ್ ಬ್ರೌಸರ್ - ಆಡ್ ಬ್ಲಾಕ್,
ಡೆವಲಪರ್: ಡಾಲ್ಫಿನ್ ಬ್ರೌಸರ್
ಬೆಲೆ - ಉಚಿತ
ಹಂತ 2. ಬ್ರೌಸರ್ ನ್ನು ಲಾಂಚ್ ಮಾಡಿ ಮತ್ತು ಇದನ್ನು ಡೀಫಾಲ್ಟ್ ವೆಬ್ ಬ್ರೌಸರ್ ಆಗಿ ಮಾಡಿ. ಕೆಳಗಿನ ಸ್ಕ್ರೀನ್ ಶಾಟ್ ನಲ್ಲಿ ತೋರಿಸಿರುವಂತೆ ಡಾಲ್ಫಿನ್ ಐಕಾನ್ ನ್ನು ಟ್ಯಾಪ್ ಮಾಡಿ.
ಹಂತ 3. ಇನ್ನು ಮುಂದಿನ ಹಂತದಲ್ಲಿ ನೀವು ‘Gesture and Sonar'ನ್ನು ಟ್ಯಾಪ್ ಮಾಡಬೇಕು.
ಹಂತ 4. ಈಗ ನೀವು ವೆಬ್ ಸೈಟ್ ಹೆಸರನ್ನು ಟೈಪ್ ಮಾಡಬೇಕು. ಸಿಂಪಲ್ ಆಗಿ ನೀವು ಬಳಸಲು ಇಚ್ಛಿಸುವ ಗೆಸ್ಚರ್ ನ್ನು ಡ್ರಾ ಮಾಡಿ.
ಹಂತ 5.ಒಮ್ಮೆ ಮುಗಿದ ನಂತರ, ನೀವು ನಿಮ್ಮ ಹೊಸದಾಗಿ ಸೃಷ್ಟಿಸಿದ ಗೆಸ್ಚರ್ ನ್ನು ಪರೀಕ್ಷಿಸಲು ಹೇಳಲಾಗುತ್ತೆ. ಸರಳವಾಗಿ ಪುನಃ ಗೆಸ್ಚರ್ ಚಿತ್ರಿಸಿ ಪರೀಕ್ಷಿಸಿ.
ಇಷ್ಟು ಮಾಡಿದರೆ ಮುಗಿಯಿತು.ಹೀಗೆ ನೀವು ಯಾವಾಗಲೂ ತೆರಳುವ ವೆಬ್ ಸೈಟ್ ಗೆ ಡಾಲ್ಫಿನ್ ಬ್ರೌಸರ್ ಬಳಸಿ ಗೆಸ್ಚರ್ ನ್ನು ಸೇರಿಸಬಹುದು.
ಈ ಮೇಲೆ ಚರ್ಚಿಸಿದ ಎಲ್ಲಾ ವಿಧಾನಗಳು ಆಂಡ್ರಾಯ್ಡ್ ನಲ್ಲಿ ಗೆಸ್ಚರ್ ಕಂಟ್ರೋಲ್ ವೈಶಿಷ್ಟ್ಯವನ್ನು ಸೇರಿಸಲು ನೆರವಾಗುತ್ತದೆ. ಈ ಸಂಪೂರ್ಣ ಮಾಹಿತಿಯನ್ನು ಬಳಸಿ ಮತ್ತು ಆಶ್ಚರ್ಯಕರವಾಗ ಗೆಸ್ಚರ್ ಕಂಟ್ರೋಲ್ ಗಳನ್ನು ನಿಮ್ಮ ಆಂಡ್ರಾಯ್ಡ್ ನಲ್ಲಿ ಬಳಸಿ,


Click it and Unblock the Notifications








