ಮೊಬೈಲ್ ಲಾಕ್ ಮಾಡಿದ್ದರೂ ನಿಮ್ಮ ಸಂಪರ್ಕ ಡಿಸ್‌ಪ್ಲೇ ಮೇಲೆ ಮೂಡುವಂತೆ ಹೀಗೆ ಮಾಡಿ!

, ಸ್ಮಾರ್ಟ್‌ಫೋನ್ ಸಜ್ಜನರಿಗೆ ಸಿಕ್ಕದರೂ ಕೂಡ ಅದು ಲಾಕ್ ಆಗಿರುವುದರಿಂದ ಸ್ಮಾರ್ಟ್‌ಫೋನ್ ಮಾಲಿಕರು ಯಾರು ಎಂಬುದುದನ್ನು ತಿಳಿಯಲು ಮೊಬೈಲ್ ಸಿಕ್ಕವರಿಗೆ ಸಾಧ್ಯವಾಗುವುದಿಲ್ಲ.!

|

ಕಳೆದ ಫೋನ್ ಮತ್ತೆ ವಾಪಸ್ ಸಿಗುವುದು ಅಸಾಧ್ಯವೇ ಸರಿ ಎನ್ನಬಹುದು. ಆದರೆ, ಕೆಲವೊಮ್ಮೆ ನಿಮ್ಮ ಕಳೆದುಹೋದ ಫೋನ್‌ ಓರ್ವ ಸಜ್ಜನ ವ್ಯಕ್ತಿಗೆ ಸಿಕ್ಕಿಬಹುದು ಮತ್ತು ಅವರು ಅದನ್ನು ನಿಮಗೆ ಮರಳಿಸಲು ಪ್ರಯತ್ನ ಮಾಡುತ್ತಿರಬಹುದು. ಆದರೆ ಅವರಿಗೆ ನಿಮಗೆ ಫೋನ್ ಅನ್ನು ಮರಳಿಸಲು ಸಾಧ್ಯವಾಗುತ್ತಿಲ್ಲ.

ಹೌದು, ಮೊಬೈಲ್ ಕಳೆಯಿತೆಂದು ಪೊಲೀಸ್ ದೂರು ದಾಖಲಿಸುವ ಹಲವರು ಸಿಮ್ ಬ್ಲಾಕ್ ಮಾಡಿಸಿಬಿಡುತ್ತಾರೆ. ಹಾಗಾಗಿ, ಸ್ಮಾರ್ಟ್‌ಫೋನ್ ಸಜ್ಜನರಿಗೆ ಸಿಕ್ಕದರೂ ಕೂಡ ಅದು ಲಾಕ್ ಆಗಿರುವುದರಿಂದ ಸ್ಮಾರ್ಟ್‌ಫೋನ್ ಮಾಲಿಕರು ಯಾರು ಎಂಬುದುದನ್ನು ತಿಳಿಯಲು ಮೊಬೈಲ್ ಸಿಕ್ಕವರಿಗೆ ಸಾಧ್ಯವಾಗುವುದಿಲ್ಲ.

ಮೊಬೈಲ್ ಲಾಕ್ ಮಾಡಿದ್ದರೂ ನಿಮ್ಮ ಸಂಪರ್ಕ ಡಿಸ್‌ಪ್ಲೇ ಮೇಲೆ ಮೂಡುವಂತೆ ಹೀಗೆ ಮಾಡಿ!

ಹಾಗಾಗಿ, ಇಂದಿನ ಲೇಖನದಲ್ಲಿ ಸಜ್ಜನರಿಗೆ ಮೊಬೈಲ್ ಸಿಕ್ಕಿದರೆ ಅವರೆ ನಿಮಗೆ ಸುಲಭವಾಗಿ ವಾಪಸ್ ತಂದುಕೊಡುವಂತೆ, ಮೊಬೈಲ್ ಲಾಕ್ ಮಾಡಿದ್ದರೂ ಅವರಿಗೆ ನಿಮ್ಮ ಸಂಪರ್ಕ ಕಾಣಿಸುವ ಹಾಗೆ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ. ಮುಂದಿನ ಸ್ಲೈಡರ್‌ಗಳಲ್ಲಿ ಈ ಬಗ್ಗೆ ಮಾಹಿತಿ ಪಡೆಯಿರಿ.

'ಎಮರ್ಜೆನ್ಸಿ ಕಾಲ್‌' ಸೌಲಭ್ಯ

'ಎಮರ್ಜೆನ್ಸಿ ಕಾಲ್‌' ಸೌಲಭ್ಯ

ಮೊಬೈಲ್ ಲಾಕ್ ಮಾಡಿದ್ದರೂ ನಿಮ್ಮ ಸಂಪರ್ಕ ಡಿಸ್‌ಪ್ಲೇ ಮೇಲೆ ಮೂಡುವಂತೆ ಇರುವ ಸೌಲಭ್ಯ ಈ 'ಎಮರ್ಜೆನ್ಸಿ ಕಾಲ್‌' ಲಾಕ್‌ ಆದ ಸ್ಕ್ರೀನ್‌ನ ಮೇಲೆ ಸುಮ್ಮನೆ ಸ್ವೈಪ್ ಮಾಡುವಾಗ ಅದರಲ್ಲಿ 'ಎಮರ್ಜೆನ್ಸಿ ಕಾಲ್‌' ಸೌಲಭ್ಯ ಕಾಣಿಸುತ್ತದೆ. ಅದರಲ್ಲಿ ನಿಮ್ಮ ಫೋನ್‌ನಲ್ಲಿನ ಆಯ್ದ ನಂಬರ್‌ಗಳನ್ನು ಸಹ ಎಮರ್ಜೆನ್ಸಿ ಕಾಂಟ್ಯಾಕ್ಟ್ ಆಗಿ ನೀವು ಸೇವ್ ಮಾಡಬಹುದು.

ಉಪಯೋಗ ಹೇಗೆ?

ಉಪಯೋಗ ಹೇಗೆ?

ನಿಮ್ಮ ಫೋನ್‌ನಲ್ಲಿನ ಆಯ್ದ ನಂಬರ್‌ಗಳನ್ನು ಸಹ ಎಮರ್ಜೆನ್ಸಿ ಕಾಂಟ್ಯಾಕ್ಟ್ ಆಗಿ ನೀವು ಸೇವ್ ಮಾಡುವುದರಿಂದ ಮೊಬೈಲ್ ಸಿಕ್ಕ ವ್ಯಕ್ತಿಗೆ ನಿಮ್ಮ ಸಂಪರ್ಕ ಸಂಖ್ಯೆ ಮಾತ್ರ ಕಾಣಿಸುತ್ತದೆ. ನೀವು ಸಿಮ್ ಬ್ಲಾಕ್ ಮಾಡಿದ್ದರೂ ಕೂಡ ಅವರು ನಿಮ್ಮನ್ನು ಆ ನಂಬರ್ ಮೂಲಕ ಸಂಪರ್ಕಿಸಲು ಸಾಧ್ಯವಾಗುತ್ತದೆ.

'ಎಮರ್ಜೆನ್ಸಿ ಕಾಲ್‌' ಆಯ್ಕೆ ಹೇಗೆ?

'ಎಮರ್ಜೆನ್ಸಿ ಕಾಲ್‌' ಆಯ್ಕೆ ಹೇಗೆ?

ಇತ್ತೀಚಿಗೆ ಮಾರುಕಟ್ಟೆಗೆ ಬಂದಿರುವ ಬಹುತೇಕ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಈ 'ಎಮರ್ಜೆನ್ಸಿ ಕಾಲ್‌' ಆಯ್ಕೆ ಲಭ್ಯವಿರುತ್ತದೆ. ಆಂಡ್ರಾಯ್ಡ್, ಐಫೋನ್ ಮತ್ತು ಸ್ಯಾಮ್‌ಸಂಗ್ ಫೋನ್‌ಗಳಲ್ಲಿ ಇವುಗಳ ಸೆಟ್ಟಿಂಗ್ಸ್ ಬೇರೆ ಬೇರೆ ರೀತಿಯಲ್ಲಿದ್ದು, ಅವುಗಳಲ್ಲಿ ಸೆಟ್ಟಿಂಗ್ಸ್ ಹೇಗೆ ಎಂದು ತಿಳಿಯಿರಿ.

ಆಂಡ್ರಾಯ್ಡ್‌ನಲ್ಲಿ 'ಎಮರ್ಜೆನ್ಸಿ ಕಾಲ್‌' ಆಯ್ಕೆ

ಆಂಡ್ರಾಯ್ಡ್‌ನಲ್ಲಿ 'ಎಮರ್ಜೆನ್ಸಿ ಕಾಲ್‌' ಆಯ್ಕೆ

ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಸೆಟ್ಟಿಂಗ್ಸ್ ತೆರೆದು ನಂತರ ಯೂಸರ್ಸ್ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ. ಅಲ್ಲಿ ಎಮರ್ಜೆನ್ಸಿ ಇನ್‌ಫಾರ್ಮೇಶನ್‌ಗೆ ಹೋಗಿ ನಿಮ್ಮ ಸ್ವ ವಿವರಗಳನ್ನು ತುಂಬಬಹುದು. ಇಲ್ಲಿ ನಿಮ್ಮದೇ ನಂಬರ್ ನೀಡುವುದರಿಂದ ಎಮರ್ಜೆನ್ಸಿ ಕಾಲ್ ಆಯ್ಕೆಯಲ್ಲಿ ಅದು ಕಾಣಿಸುತ್ತದೆ.

ಐಫೋನ್‌ಗಳಲ್ಲಿ 'ಎಮರ್ಜೆನ್ಸಿ ಕಾಲ್‌' ಆಯ್ಕೆ

ಐಫೋನ್‌ಗಳಲ್ಲಿ 'ಎಮರ್ಜೆನ್ಸಿ ಕಾಲ್‌' ಆಯ್ಕೆ

ಐಫೋನ್‌ನಲ್ಲಿ 'ಹೆಲ್ತ್' ಆಪ್‌ ಓಪನ್‌ ಮಾಡಿ, 'ಮೆಡಿಕಲ್ ಐಡಿ' ಟ್ಯಾಪ್ ಮಾಡಿ, ನಂತರ 'ಎಡಿಟ್‌' ಅನ್ನು ಒತ್ತಿ. ಈ ಮಾಹಿತಿ ನಿಮ್ಮ ಫೋನ್‌ನಲ್ಲಿ ಸೇವ್ ಆಗಿದ್ದರೆ, ಆ ನಿಮ್ಮ ಹತ್ತಿರದವರಿಗೆ ನಿಮ್ಮ ಫೋನ್‌ನ್ನು ಯಾರು ಪಡೆದಿದ್ದಾರೆ ಎಂಬ ವಿಷಯ ತಿಳಿಯಬಹುದು.

ಸ್ಯಾಮ್ಸಂಗ್ ಫೋನ್‌

ಸ್ಯಾಮ್ಸಂಗ್ ಫೋನ್‌

ಸ್ಯಾಮ್‌ಸಂಗ್ ಫೋನ್‌ಗಳು ಆಂಡ್ರಾಯ್ಡ್ ಮೂಲಕವೇ ಕಾರ್ಯನಿರ್ವಹಣೆ ನೀಡಿದರೂ ಸಹ ಕೆಲವು ಸ್ಯಾಮ್ಸಂಗ್ ಫೋನ್‌ಗಳಲ್ಲಿ ಈ ಸೇವೆಯ ಸೆಟ್ಟಿಂಗ್ಸ್ ಬೇರೆಯಾಗಿರುತ್ತದೆ. ಫೋನ್ ಕಾಂಟ್ಯಾಕ್ಸ್ಟ್ ತೆರೆದು ಗ್ರೂಫ್ಸ್ ಆಯ್ಕೆ ಮಾಡಿ ನಂತರ ಐಸಿಇ- ಎಮರ್ಜೆನ್ಸಿ ಕಾಂಟ್ಯಾಕ್ಸ್ಟ್‌ಗೆ ಹೋಗಿ ನಂಬರ್‌ ಸೇವ್ ಮಾಡಬೇಕು.

'ಬಿಟ್‌ಕಾಯಿನ್' ಮೇಲೆ ಆತಂಕದ ಕರಿಮೋಡ!!..ಖರೀದಿಸಿದವರಿಗೆ ಬಿಗ್ ಶಾಕ್!?'ಬಿಟ್‌ಕಾಯಿನ್' ಮೇಲೆ ಆತಂಕದ ಕರಿಮೋಡ!!..ಖರೀದಿಸಿದವರಿಗೆ ಬಿಗ್ ಶಾಕ್!?

Best Mobiles in India

English summary
ಸ್ಮಾರ್ಟ್‌ಫೋನ್ ಸಜ್ಜನರಿಗೆ ಸಿಕ್ಕದರೂ ಕೂಡ ಅದು ಲಾಕ್ ಆಗಿರುವುದರಿಂದ ಸ್ಮಾರ್ಟ್‌ಫೋನ್ ಮಾಲಿಕರು ಯಾರು ಎಂಬುದುದನ್ನು ತಿಳಿಯಲು ಮೊಬೈಲ್ ಸಿಕ್ಕವರಿಗೆ ಸಾಧ್ಯವಾಗುವುದಿಲ್ಲ.!

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X