Home
ಟೆಕ್ ನೌಕರಿ

ಆಪಲ್‌ನಿಂದ ಡ್ಯುಯಲ್ ಫೇಸ್‌ ಐಡಿ: ಐಫೋನ್ ಅನ್ನು ನೀವಲ್ಲದೇ ಇನ್ನೋಬ್ಬರು ನೋಡಬಹುದು...!

ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಮುಖವನ್ನು ಸ್ಕ್ಯಾನ್ ಮಾಡುವ ಮೂಲಕ ಫೋನ್ ಅನ್‌ಲಾಕ್ ಮಾಡುವ ಆಯ್ಕೆಯೊಂದಿಗೆ ಕಾಣಿಸಿಕೊಂಡಿದ್ದ ಐಫೋನ್ X ಬಳಕೆದಾರರಿಗೆ ಹೊಸ ಮಾದರಿಯ ಅನುಭವನ್ನು ನೀಡಿತ್ತು. ಇದು ಆಂಡ್ರಾಯ್ಡ್‌ ಫೋನ್‌ಗಳಲ್ಲಿಯೂ ಫೇಸ್‌ಲಾಕ್ ಅಳವಡಿಸಲು ಪ್ರೇರಣೆಯಾಯಿತು. ಆದರೆ ಈ ಬಾರಿ ಆಪಲ್ ಐಫೋನ್ ಫೇಸ್‌ ಐಡಿ ಮತ್ತಷ್ಟು ಅಭಿವೃದ್ಧಿಯನ್ನು ಮಾಡಿದೆ. ತನ್ನ ಬಳಕೆದಾರರಿಗೆ ಆಂಡ್ರಾಯ್ಡ್ ನಲ್ಲಿ ಕಾಣಲು ಸಾಧ್ಯವಾಗದ ಮಾದರಿಯ ಹೊಸ ಆಯ್ಕೆಯನ್ನು ನೀಡಲು ಮುಂದಾಗಿದೆ.

ಆಪಲ್‌ನಿಂದ ಡ್ಯುಯಲ್ ಫೇಸ್‌ ಐಡಿ: ಐಫೋನ್ ಅನ್ನು ನೀವಲ್ಲದೇ ಇನ್ನೋಬ್ಬರು ನೋಡಬಹುದು.

ಹೊಸದಾಗಿ ಇಂದು ಬಿಡುಗಡೆಯಾದ iOS 12 ನಲ್ಲಿ ಫೇಸ್‌ ಐಡಿಯನ್ನು ಹೊಂದಿರುವ ಐಫೋನ್‌ಗಳಲ್ಲಿ ಬಳಕೆದಾರರಿಗೆ ಎರಡನೇ ವ್ಯಕ್ತಿಯ ಫೇಸ್‌ ಸ್ಕ್ಯಾನ್ ಅನ್ನು ಸೇವ್ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ. ಈ ಹಿಂದೆ ಕೇವಲ ಒಬ್ಬರ ಮುಖವನ್ನು ಮಾತ್ರವೇ ಸೇವ್ ಮಾಡಿಕೊಂಡು ಅವರ ಮುಖವನ್ನು ನೋಡಿದರೆ ಮಾತ್ರ ಲಾಕ್ ಒಪನ್ ಆಗುವಂತೆ ಮಾಡಲಾಗಿತ್ತು. ಆದರೆ ಇನ್ನು ಮುಂದೆ ಇಬ್ಬರ ಮುಖವನ್ನು ಸೇವ್ ಮಾಡುವ ಅವಕಾಶವು ದೊರೆಯಲಿದೆ. ಇದರಿಂದಾಗಿ ಇಬ್ಬರು ಫೇಸ್‌ ಐಡಿಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಯಾವ ಐಫೋನ್‌ಗಳಲ್ಲಿ:

ಯಾವ ಐಫೋನ್‌ಗಳಲ್ಲಿ:

ಈಗಾಗಲೇ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಐಫೋನ್ X ಹಾಗೂ ಮಾರುಕಟ್ಟೆಗೆ ಕಾಲಿಡಲಿರುವ ಐಫೋನ್ XS, ಐಫೋನ್ XS ಮ್ಯಾಕ್ಸ್ ಮತ್ತು ಐಫೋನ್ XR ಗಳಲ್ಲಿ ಇನ್ನು ಮುಂದೆ ಡ್ಯುಯಲ್ ಫೇಸ್‌ ಐಡಿಯನ್ನು ಆಡ್‌ ಮಾಡಿಕೊಳ್ಳಬಹುದಾಗಿದೆ.

ಆಂಡ್ರಾಯ್ಡ್‌ನಲ್ಲಿಯೂ ಇಲ್ಲ:

ಆಂಡ್ರಾಯ್ಡ್‌ನಲ್ಲಿಯೂ ಇಲ್ಲ:

ಸದ್ಯ ಆಂಡ್ರಾಯ್ಡ್ ಫೋನ್‌ಗಳಲ್ಲಿಯೂ ಫೇಸ್‌ ಲಾಕ್ ಆನ್ನು ಕಾಣಬಹುದಾಗಿದೆ. ಆದರೆ ಅದು ಐಫೋನಿನಷ್ಟು ಕಾರ್ಯಕ್ಷಮತೆಯನ್ನು ಹೊಂದಿಲ್ಲ. ಅಲ್ಲದೇ ಡ್ಯುಯಲ್ ಫೇಸ್‌ ಸೇವ್ ಮಾಡಿಕೊಳ್ಳುವ ಅವಕಾಶವು ಅದರಲ್ಲಿ ಇಲ್ಲ. ಈ ಹಿನ್ನಲೆಯಲ್ಲಿ ಆಂಡ್ರಾಯ್ಡ್‌ಗೆ ಈ ಹೊಸ ಆಯ್ಕೆಯೂ ಸೆಡ್ಡು ಹೊಡೆಯಲಿದೆ.

iOS 12 ಆಪ್‌ಡೇಟ್:

iOS 12 ಆಪ್‌ಡೇಟ್:

ಇಂದು ಐಫೋನ್ ಬಳಕೆದಾರರಿಗೆ iOS 12 ಆಪ್‌ಡೇಟ್ ಲಭ್ಯವಾಗಿದ್ದು, ಹೊಸ ಮಾದರಿಯ ಆಯ್ಕೆಗಳೊಂದಿಗೆ ಇದು ಕಾಣಿಸಿಕೊಂಡಿದೆ. ಇದೇ ಮಾದರಿಯಲ್ಲಿ ಡ್ಯುಯಲ್ ಫೇಸ್ ಐಡಿಯನ್ನು ಸೇವ್ ಮಾಡಿಕೊಳ್ಳುವ ಮಾದರಿಯಲ್ಲಿ ಕಾರ್ಯಚರಣೆಯನ್ನು ಹೊಂದಿದೆ. ಈ ಹಿನ್ನಲೆಯಲ್ಲಿ ಫೇಸ್‌ ಐಡಿಯನ್ನು ಸೇವ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನವು ಇದಾಗಿದೆ.

ಹಂತ 01;

ಹಂತ 01;

ಐಫೋನ್ X, ಐಫೋನ್ XS, ಐಫೋನ್ XS ಮ್ಯಾಕ್ಸ್ ಮತ್ತು ಐಫೋನ್ XR ಗಳಲ್ಲಿ ಮೊದಲಿಗೆ ಸೆಟ್ಟಿಂಗ್‌ ಓಪನ್ ಮಾಡಿ.

ಹಂತ 02:

ಹಂತ 02:

ಮಾಡಿದ ನಂತರದಲ್ಲಿ ಫೇಸ್‌ ಐಡಿ ಮತ್ತು ಪಾಸ್ ಕೋಡ್ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿರಿ.

ಹಂತ 03:

ಹಂತ 03:

ಇದಾದ ನಂತರದಲ್ಲಿ ಈಗಾಗಲೇ ಇರುವ ಫೇಸ್‌ ಐಡಿಯೊಂದಿಗೆ ಆಟ್ರನೆಟಿವ್ ಫೇಸ್‌ ಐಡಿ ಸೆಟಪ್ ಎನ್ನುವ ಆಯ್ಕೆಯ ಕಾಣಿಸಿಕೊಳ್ಳಲಿದ್ದು, ಅಲ್ಲಿ ಕ್ಲಿಕ್ ಮಾಡಿ ಇನ್ನೊಬ್ಬ ಬಳಕೆದಾರರ ಫೇಸ್‌ ಅನ್ನು ಸ್ನ್ಕಾನ್ ಮಾಡಿರಿ. ಮಾಡಿದ ನಂತರದಲ್ಲಿ ಸೇವ್ ಮಾಡಿರಿ.

Best Mobiles in India

English summary
How to add a second person to Face ID on iPhone, to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+