Home
ಟೆಕ್ ನೌಕರಿ

ಅಮೆಜಾನ್, ಫ್ಲಿಪ್‌ಕಾರ್ಟ್‌ನಲ್ಲಿ ಸಾಲ ಪಡೆಯುವುದು ಹೇಗೆ..?

ಇ-ಕಾಮರ್ಸ್ ಕಂಪೆನಿಗಳಾದ ಫ್ಲಿಪ್ ಕಾರ್ಟ್ ಮತ್ತು ಅಮೇಜಾನ್ ಗಳಲ್ಲಿ ಇದೀಗ ಗ್ರಾಹಕರಿಗೆ ಇನ್ಸೆಂಟ್ ಕ್ರೆಡಿಟ್ ಅಥವಾ ದಿಢೀರ್ ಸಾಲ ಸೌಲಭ್ಯವನ್ನು ಯಾವುದೇ ಇಎಂಐ ಇಲ್ಲದೆಯೇ ಕೆಲವು ನಿಯಮಗಳ ಅನುಸಾರವಾಗಿ 60,000 ರುಪಾಯಿವರೆಗೆ ನೀಡಲಾಗುತ್ತದೆ.

ಅಮೆಜಾನ್, ಫ್ಲಿಪ್‌ಕಾರ್ಟ್‌ನಲ್ಲಿ ಸಾಲ ಪಡೆಯುವುದು ಹೇಗೆ..?

ನೀವು ಯಾವುದೋ ದೊಡ್ಡ ವಸ್ತುವೊಂದನ್ನು ಖರೀದಿಸುವ ಭರಾಟೆಯಲ್ಲಿದ್ದಾಗ ಯಾವುದೋ ಅನಿವಾರ್ಯ ಕಾರಣಕ್ಕೆ ಹಣದ ಕೊರತೆಯುಂಟಾದಾಗ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು. ಹಾಗಾದ್ರೆ ಈ ವಿಶಿಷ್ಟ ಸಾಲ ಸೌಲಭ್ಯವನ್ನು ಈ ಆನ್ ಲೈನ್ ಕಂಪೆನಿಗಳು ಆಫರ್ ಮಾಡುವುದಾದರೂ ಹೇಗೆ? ಈ ಬಗೆಗಿನ ಸಂಪೂರ್ಣ ವಿವರ ಇಲ್ಲಿದೆ.

ಪ್ರಾಥಮಿಕ ಅಗತ್ಯತೆಗಳು:

ಪ್ರಾಥಮಿಕ ಅಗತ್ಯತೆಗಳು:

ಒಂದು ವೇಳೆ ನೀವು ಈ ಸೌಲಭ್ಯದಲ್ಲಿ ಎಷ್ಟು ಸಾಲವನ್ನು ಪಡೆಯಲು ಯೋಗ್ಯರಾಗಿದ್ದೀರಿ ಎಂಬುದನ್ನು ತಿಳಿಯಬೇಕಾದಲಲಿ ಕೆವೈಸಿ ಪ್ರೊಸೆಸ್ ನ್ನು ಪೂರ್ಣಗೊಳಿಸಬೇಕು. ಕೆವೈಸಿ ಪ್ರೊಸೆಸ್ ಗೂ ಮುನ್ನ ಆಧಾರ್ ಮತ್ತು ಪಾನ್ ವಿವರಗಳು ಬಹಳ ಮುಖ್ಯ.ಆದರೆ ಸುಪ್ರೀಂ ಕೋರ್ಟ್ ಇತ್ತೀಚೆಗಷ್ಟೇ ಖಾಸಗಿ ಕಂಪೆನಿಗಳು ಆಧಾರ್ ಕಾರ್ಡ್ ನ್ನು ಯಾವುದೇ ಭದ್ರತಾ ಉದ್ದೇಶಕ್ಕೆ ಬಳಸುವಂತಿಲ್ಲ ಎಂದು ಆದೇಶ ನೀಡಿತ್ತು.

ಈಗಾಗಲೇ ಫ್ಲಿಪ್ ಕಾರ್ಟ್ ಮತ್ತು ಅಮೇಜಾನ್ ಗೆ ಈ ಬಗ್ಗೆ ಇಮೇಲ್ ಕಳುಹಿಸಿರುವುದರಿಂದಾಗಿ ಈ ಕಂಪೆನಿಗಳು ಯಾವ ರೀತಿಯಲ್ಲಿ ಆಧಾರ್ ಪೋಸ್ಟ್ ನ್ನು ಬಳಸಿಕೊಳ್ಳುತ್ತವೆ ಎಂಬ ಬಗ್ಗೆ ಪ್ರಶ್ನೆಗಳು ಎದ್ದಿವೆ. ಫ್ಲಿಪ್ ಕಾರ್ಟ್ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಉತ್ತರವನ್ನು ನೀಡಿಲ್ಲ. ಆದರೆ ಅಮೇಜಾನ್ ತಾವು ಸ್ಥಳೀಯ ನಿಯಮಗಳಿಗೆ ಬದ್ಧರಾಗಿರುತ್ತೇವೆ ಮತ್ತು ಈಗಾಗಲೇ ಆಧಾರ್ ಆಧಾರಿತ ರಿಜಿಸ್ಟ್ರೇಷನ್ ನ್ನು ನಿಲ್ಲಿಸಿದ್ದೇವೆ ಎಂದು ಇಮೇಲ್ ಮಾಡಿದ್ದಾರೆ.

ಒಮ್ಮೆ ಕೆವೈಸಿ ಪ್ರೊಸೆಸ್ ಮುಗಿದಿದ್ದರೆ, ನೀವು ಈ ಸಾಲವನ್ನು ಪಡೆಯಲು ಯೋಗ್ಯರಾಗಿದ್ದೀರೋ ಅಥವಾ ಇಲ್ಲವೋ ಎಂದು ತಿಳಿಯಲು ಸಾಧ್ಯವಾಗುತ್ತದೆ ಮತ್ತು ಎಷ್ಟು ಪಡೆಯಲು ಯೋಗ್ಯರು ಎಂಬುದನ್ನು ಕೂಡ ತಿಳಿದುಕೊಳ್ಳಬಹುದು. ಈ ಸಾಲವನ್ನು ಪಡೆಯಲು ನೀವು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಹೊಂದಿರಬೇಕು ಎಂಬುದಿಲ್ಲ ಆದರೆ ಸಾಲದ ಮರುಪಾವತಿಗಾಗಿ ನೀವು ಬ್ಯಾಂಕ್ ಖಾತೆಯ ವಿವರವನ್ನು ನೀಡಬೇಕು.

EMI ಆಯ್ಕೆಗಳು ಹೇಗಿರುತ್ತದೆ?

EMI ಆಯ್ಕೆಗಳು ಹೇಗಿರುತ್ತದೆ?

ಎರಡೂ ಇ-ಕಾಮರ್ಸ್ ಕಂಪೆನಿಗಳು 4 ವಿಭಿನ್ನ ಕಂತುಗಳಲ್ಲಿನ ಕ್ರೆಡಿಟ್ ಮಾಡುವ ಇಎಂಐ ಪ್ಲಾನ್ ಗಳನ್ನು ನೀಡುತ್ತದೆ. ಉದಾಹರಣೆಗೆ ಮೂರು, ಆರು, ಒಂಬತ್ತು ಮತ್ತು 12 ತಿಂಗಳಲ್ಲಿ ಯಾವುದೇ ಡೌನ್ ಪೇಮೆಂಟ್ ಇಲ್ಲದೆಯೇ ನೀಡಲಾಗುತ್ತದೆ.

ಫ್ಲಿಪ್ ಕಾರ್ಟ್ ನಲ್ಲಿ ಪೇ ಲೇಟರ್ ನೆಕ್ಸ್ಟ್ ಮಂತ್ ಅನ್ನೋ ವಿಶೇಷ ಆಯ್ಕೆಯೊಂದನ್ನು ನೀಡಲಾಗುತ್ತದ. ಇದರ ಅನ್ವಯ ಯಾರು ಇಎಂಐ ಆಯ್ಕೆಯಲ್ಲಿ ಪಾವತಿಸಲು ಇಚ್ಛಿಸುವುದಿಲ್ಲವೋ ಅವರು ಮುಂದಿನ ಒಂದು ತಿಂಗಳಲ್ಲಿ ಸಂಪೂರ್ಣ ಮೊತ್ತವನ್ನು ಪಾವತಿ ಮಾಡಬಹುದು. ಸಾಲವಾಗಿ ಪಡೆದ ಹಣವನ್ನು ಮುಂದಿನ ತಿಂಗಳ 15 ರಂದು ಪಾವತಿ ಮಾಡಬೇಕಾಗುತ್ತದೆ.

ಪ್ರೀಪೇಮೆಂಟ್ ಗೆ ಅವಕಾಶವಿಲ್ಲ

ಪ್ರೀಪೇಮೆಂಟ್ ಗೆ ಅವಕಾಶವಿಲ್ಲ

ಮೊಬೈಲ್ ಆಪ್ ನ FAQ ವಿಭಾಗದ ಮಾಹಿತಿಯ ಆಧಾರದಲ್ಲಿಯೇ ಹೇಳುವುದಾದರೆ ಫ್ಲಿಪ್ ಕಾರ್ಡ್ ನಲ್ಲಿ ಸಾಲದ ಪ್ರೀಪೇಮೆಂಟ್ ಗೆ ಅವಕಾಶವಿರುವುದಿಲ್ಲ. ಅಮೇಜಾನ್ ಪೇ ಇಎಂಐ ನಲ್ಲಿ ಉಳಿದಿರುವ ಸಾಲದ ಮೊತ್ತವನ್ನು ನಿಮಗೆ ಸಾಧ್ಯವಾದಲ್ಲಿ ಪ್ರೀಪೇಮೆಂಟ್ ನ್ನು ಯಾವುದೇ ಕ್ಷಣದಲ್ಲಿ ಬೇಕಿದ್ದರೂ ಮಾಡಲು ಅವಕಾಶವಿರುತ್ತದೆ. ಹಾಗಾದ್ರೆ ಇದರ ನೀತಿ-ನಿಯಮಗಳ ಬಗ್ಗೆ ತಿಳಿದುಕೊಳ್ಳೋಣ.

ಅಮೇಜಾನ್ ಪೇ ಇಎಂಐ ಆಯ್ಕೆ:

ಅಮೇಜಾನ್ ಪೇ ಇಎಂಐ ಆಯ್ಕೆ:

ಅಮೇಜಾನ್ ಆಪ್ ಮೂಲಕ ನೀವು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಆಯ್ದ ಕೆಲವು ಗ್ರಾಹಕರಿಗೆ ಮಾತ್ರವೇ ಈ ಸೌಲಭ್ಯ ಲಭ್ಯವಿರುತ್ತದೆ. ಸದ್ಯ ಎಲ್ಲಾ ಗ್ರಾಹಕರಿಗೂ ಈ ಸೌಲಭ್ಯವನ್ನು ನೀಡಲಾಗುತ್ತಿಲ್ಲ. ಕ್ರೆಡಿಟ್ ಆಫರ್ ನ ಅಡಿಯಲ್ಲಿ ನೀವು ಕೇವಲ ಒಂದು ವಸ್ತುವನ್ನು ಮಾತ್ರ ಏಕಕಾಲಕ್ಕೆ ಖರೀದಿ ಮಾಡಬಹುದು ಅದರ ಕನಿಷ್ಟ ಮೊತ್ತ 8,000 ರುಪಾಯಿ. ಇನ್ಸ್ಟೆಂಟ್ ಬ್ಯಾಂಕ್ ರಿಯಾಯಿತಿಗಳು ಮತ್ತು ಎಕ್ಸ್ ಚೇಂಜ್ ಆಫರ್ ಗಳು ಇದರಲ್ಲಿ ಲಭ್ಯವಿರುವುದಿಲ್ಲ.

ಸದ್ಯ ಅಮೇಜಾನ್ ನಲ್ಲಿ ಹೆಚ್ ಡಿಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೆನರಾ ಬ್ಯಾಂಕ್, ಸಿಟಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ನ ಡೆಬಿಟ್/ನೆಟ್ ಬ್ಯಾಂಕಿಂಗ್ ಮೂಲಕ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಬಡ್ಡಿದರವು ನೀವು ಆಯ್ಕೆ ಮಾಡಿಕೊಂಡ ಇಎಂಐ ಪ್ಲಾನ್ ಮತ್ತು ನೀವು ಪಡೆದ ಸಾಲದ ಮೊತ್ತವನ್ನು ಆಧರಿಸಿರುತ್ತದೆ. ಕೆಲವು ನಿರ್ಬಂಧಿಸಿದ ವಸ್ತುಗಳನ್ನು ಇನ್ಸೆಂಟ್ ಕ್ರೆಡಿಟ್ ಫೆಸಿಲಿಟಿಯಲ್ಲಿ ಖರೀದಿಸಲು ಗ್ರಾಹಕರಿಗೆ ಅವಕಾಶವಿರುವುದಿಲ್ಲ. ಅದರಲ್ಲಿ ಕೆಲವು ಜ್ಯುವೆಲರಿಗಳು, ಗಿಫ್ಟ್ ಕಾರ್ಡ್ ಗಳು, ಅಮೇಜಾನ್ ಪೇ ಬ್ಯಾಲೆನ್ಸ್ ಟಾಪ್ ಅಪ್ ಗಳು ಇತ್ಯಾದಿಗಳು ಸೇರಿವೆ.

ಪೆನಾಲ್ಟಿ ಬೀಳಲಿದೆ..!

ಪೆನಾಲ್ಟಿ ಬೀಳಲಿದೆ..!

ನೀವು ಖರೀದಿಸಿದ ತಿಂಗಳಿನ ಮುಂದಿನ ಎರಡನೇ ತಿಂಗಳ ಐದನೇ ತಾರೀಕಿನಿಂದ ನಿಮ್ಮ ಮರುಪಾವತಿ ಪ್ರಕ್ರಿಯೆಗಳು ಆರಂಭವಾಗುತ್ತದೆ. ಉದಾಹರಣೆಗೆ ನೀವು ಮೇ ತಿಂಗಳಲ್ಲಿ ಯಾವುದೋ ಖರೀದಿ ಮಾಡಿದ್ದರೆ ಇಎಂಐ ಜುಲೈ ತಿಂಗಳ ಐದನೇ ತಾರೀಕಿನಿಂದ ಆರಂಭವಾಗುತ್ತದೆ. ದಿನಾಂಕವನ್ನು ಬದಲಿಸುವುದಕ್ಕೆ ಅವಕಾಶವಿರುವುದಿಲ್ಲ. ರೂಪಾಯಿ ಕಾರ್ಡ್ ನ್ನು ಆಟೋ ಪೇಮೆಂಟ್ ಸೆಟ್ ಅಪ್ ಗಾಗಿ ಬಳಕೆ ಮಾಡಬಹುದು.

ಒಂದು ವೇಳೆ ನೀವು ಪಾವತಿ ಮಾಡುವುದನ್ನು ನಿಧಾನಗೊಳಿಸಿದರೆ ಪೆನಲ್ಟಿಯನ್ನು ಹಾಕಲಾಗುತ್ತದೆ. ನೀವು ಬಾಕಿ ಉಳಿಸಿರುವ ಮೊತ್ತದ ಆಧಾರದಲ್ಲಿ ಪೆನಲ್ಟಿಯನ್ನು ಹಾಕಲಾಗುತ್ತದೆ. ಮತ್ತು ಎಷ್ಟು ದಿನಗಳ ವರೆಗೆ ಪಾವತಿಯನ್ನು ನಿಧಾನಗೊಳಿಸಿದ್ದೀರಿ ಎಂಬುದನ್ನೂ ಕೂಡ ಇದು ಆಧರಿಸಿರುತ್ತದೆ.

ಎಷ್ಟು ಪೆನಾಲ್ಟಿ ಬೀಳಲಿದೆ..?

ಎಷ್ಟು ಪೆನಾಲ್ಟಿ ಬೀಳಲಿದೆ..?

ಒವರ್ ಡ್ಯೂ ಆದ ಮೊತ್ತ DPD 1 to 15 DPD 16 to 30 DPD 31+

Rs 3000 ದ ವರೆಗೆ Rs 50 Rs 150 Rs 150

Rs 3,001 - Rs 6,000 Rs 75 Rs 150 Rs 300

Rs 6,001 - Rs 9,000 Rs 100 Rs 250 Rs 450

Rs 9,001 ಮತ್ತು ಹೆಚ್ಚು Rs 150 Rs 300 Rs 600

ಫ್ಲಿಪ್ ಕಾರ್ಟ್ ನ ಕಾರ್ಡ್ ಲೆಸ್ ಕ್ರೆಡಿಟ್ ಆಯ್ಕೆ

ಫ್ಲಿಪ್ ಕಾರ್ಟ್ ನ ಕಾರ್ಡ್ ಲೆಸ್ ಕ್ರೆಡಿಟ್ ಆಯ್ಕೆ

ಫ್ಲಿಪ್ ಕಾರ್ಟ್ ನಲ್ಲೂ ಕೂಡ ಇದೇ ರೀತಿಯ ಆಫರ್ ಗಳಿದ್ದು ಕೆಲವು ಆಯ್ದ ಗ್ರಾಹಕರಿಗೆ ಕಾರ್ಡ್ ಲೆಸ್ ಕ್ರೆಡಿಟ್ ಆಯ್ಕೆಗಳಿದೆ. ಆಧಾರ್ ಆಧಾರಿತ ಓಟಿಪಿ ಮೂಲಕ ಕೆವೈಸಿ ಮಾಡಿದ ನಂತರ ಎಷ್ಟು ಮೊತ್ತದ ಸಾಲ ಸೌಲಭ್ಯಕ್ಕೆ ನೀವು ಅರ್ಹರು ಎಂಬುದು ನಿಮಗೆ ತಿಳಿದುಬರುತ್ತದೆ. ಇಲ್ಲೂ ಕೂಡ ಚಿನ್ನ ಮತ್ತು ಆಭರಣಗಳನ್ನು ಖರೀದಿಸಲು ಅವಕಾಶವಿರುವುದಿಲ್ಲ.

ಕಾರ್ಡ್ ಲೆಸ್ ಕ್ರೆಡಿಟ್ ನಲ್ಲಿ ಖರೀದಿಸುವುದಕ್ಕೆ ಯಾವುದೇ ಕನಿಷ್ಟ ಆರ್ಡರ್ ವ್ಯಾಲ್ಯೂ ಇಲ್ಲ ಎಂಬುದಾಗಿ ಎಫ್ಎಕ್ಯೂ ಸೆಕ್ಷನ್ ನಲ್ಲಿ ಹೇಳಲಾಗಿದೆ.ಆದರೆ ಇಎಂಐ ಆಯ್ಕೆಯು ಕನಿಷ್ಟ 3000 ರುಪಾಯಿ ಖರೀದಿಗೆ ಮಾತ್ರವೇ ಅವಕಾಶ ನೀಡುತ್ತದೆ. ಬಡ್ಡಿದರವು ಫ್ಲಿಪ್ ಕಾರ್ಟ್ ಆಪ್ ನಲ್ಲಿ 14 ಶೇ. ದಿಂದ 25 ಶೇ.ದ ವರೆಗೂ ಕೂಡ ಇರುತ್ತದೆ.

ಒಂದು ಪಾವತಿ ತಪ್ಪಿಸಿದರೆ ಲೇಟಾಗಿ ಪಾವತಿಸಿರುವುದಕ್ಕೆ 200 ರುಪಾಯಿ ದಂಡ ಅಥವಾ ಒಟ್ಟು ಮೊತ್ತದ 3 ಶೇಕಡಾ ಹೆಚ್ಚುವರಿ ಪಾವತಿಯನ್ನು ಮಾಡಬೇಕಾಗುತ್ತದೆ ಎಂದು ಫ್ಲಿಪ್ ಕಾರ್ಟ್ ತಿಳಿಸಿದೆ.

ಆದರೆ ಫ್ಲಿಪ್ ಕಾರ್ಟ್ ನಲ್ಲಿ ಯಾವ ಗ್ರಾಹಕರನ್ನು ಈ ಸಾಲ ಸೌಲಭ್ಯಕ್ಕೆ ಆಯ್ಕೆ ಮಾಡಲಾಗುತ್ತದೆ ಅದರ ಕ್ರೈಟೀರಿಯಾ ಏನು ಎಂಬ ಬಗ್ಗೆ ಯಾವುದೇ ಮಾಹಿತಿಯನ್ನು ಕೂಡ ನೀಡಲಾಗಿಲ್ಲ. ಇನ್ನು ಮರುಪಾವತಿ ಮಾಡುವ ದಿನಾಂಕವನ್ನು ಆಯ್ಕೆ ಮಾಡಿಕೊಳ್ಳಲು ಗ್ರಾಹಕರಿಗೆ ಅವಕಾಶವಿರುತ್ತದೆ.

ನೀವಿದನ್ನು ಪಡೆದುಕೊಳ್ಳಬೇಕಾ?

ನೀವಿದನ್ನು ಪಡೆದುಕೊಳ್ಳಬೇಕಾ?

ನೀವು ಒಂದು ವೇಳೆ ಈ ಸಾಲ ಸೌಲಭ್ಯವನ್ನು ಪಡೆಯುಬೇಕು ಎಂದುಕೊಳ್ಳುತ್ತಿದ್ದೀರಾದರೆ ನೆನಪಿನಲ್ಲಿ ಇಡಬೇಕಾಗಿರುವ ಅಂಶವೇನೆಂದರೆ, ಸಾಲದ ರೂಪದಲ್ಲಿ ಶಾಪಿಂಗ್ ಮಾಡುವ ಯಾವುದೇ ವಸ್ತುವಿಗೂ ಕೂಡ ರಿಯಾಯಿತಿ ಬೆಲೆ ಲಭ್ಯವಿರುವುದಿಲ್ಲ. ಎಕ್ಸ್ ಚೇಂಜ್ ಆಫರ್ ಇರುವುದಿಲ್ಲ. ನೀವು ಇಲ್ಲಿ ಸಾಲದ ರೂಪದಲ್ಲಿ ಪಡೆಯುವ ವಸ್ತುವು ಇತರೆ ಫ್ಲಾಟ್ ಫಾರ್ಮ್ ಗಳಲ್ಲಿ ಕಡಿಮೆ ಬೆಲೆಗೆ ಲಭ್ಯವಿದೆಯಾ ಎಂಬುದನ್ನು ಒಮ್ಮೆ ಪರೀಕ್ಷೆ ಮಾಡಿಕೊಳ್ಳಿ. ಆಫ್ ಲೈನ್ ಫ್ಲಾಟ್ ಫಾರ್ಮ್ ಗಳಲ್ಲೂ ಕೂಡ ನಿಮಗೆ ಇದು ಲಭ್ಯವಿರುವ ವಸ್ತುವೇ ಆಗಿರಬಹುದು ಎಂಬ ಬಗ್ಗೆ ನಿಮಗೆ ತಿಳಿದಿದ್ದರೆ ಒಳಿತು.

ಒಟ್ಟಾರೆ ಹೇಳುವುದಾದರೆ ಸಾಲ ಮಾಡಿ ತುಪ್ಪ ತಿನ್ನುವ ಗೋಜಿಗೆ ಯಾಕೆ ಹೋಗಬೇಕು ಹೇಳಿ?

Best Mobiles in India

English summary
How Amazon, Flipkart's 'instant credit' offers work. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+