Home
ಟೆಕ್ ನೌಕರಿ

ಕ್ರೋಮ್ ಬ್ರೌಸರ್ ನಲ್ಲಿ ಲಭ್ಯವಾಗಿದೆ ಹಿಡನ್ ರೀಡರ್ ಮೋಡ್- ಬಳಸುವುದು ಹೇಗೆ ಇಲ್ಲಿದೆ ನೋಡಿ!

By Gizbot Bureau

ಒಂದು ವೇಳೆ ನೀವು ಹೊಸ ಟೆಕ್ನಾಲಜಿ ಸುದ್ದಿಗಳ ಬಗ್ಗೆ ಅಪ್ ಡೇಟ್ ಆಗುತ್ತಿರುವವರಾದರೆ ಖಂಡಿತ ನಿಮಗೆ ಇತ್ತೀಚೆಗೆ ಗೂಗಲ್ ತನ್ನ ಕ್ರೋಮ್ ವರ್ಷನ್ 75 ನ್ನು ಅಪ್ ಡೇಟ್ ನ್ನು ರಿಲೀಸ್ ಮಾಡಿರುವ ಬಗ್ಗೆ ತಿಳಿದೇ ಇರುತ್ತದೆ. ಹೊಸ ಅಪ್ ಡೇಟ್ ನಲ್ಲಿ ಹಲವು ಉಪಯುಕ್ತ ಫೀಚರ್ ಗಳಿವೆ. ಅವುಗಳಲ್ಲಿ ಪ್ರಮುಖವಾಗಿ ಮೋಸಗೊಳಿಸುವ ಸೈಟ್ ಗಳನ್ನು ಪತ್ತೆಹಚ್ಚಿಕೊಳ್ಳುವ ಸಾಮರ್ಥ್ಯ ಇದಕ್ಕಿದೆ.

ಕ್ರೋಮ್ ಬ್ರೌಸರ್ ನಲ್ಲಿ ಲಭ್ಯವಾಗಿದೆ ಹಿಡನ್ ರೀಡರ್ ಮೋಡ್

ಇದೆಲ್ಲವುಗಳಿಗಿಂತ ಬಹಳ ಮುಖ್ಯವಾದ ಮತ್ತು ಆಸಕ್ತಿದಾಯಕವಾಗಿರುವ ಫೀಚರ್ ಎಂದರೆ ಅದು ಹಿಡನ್ ರೀಡರ್ ಮೋಡ್. ಒಂದು ವೇಳೆ ನೀವು ವಿಂಡೋಸ್ ನಲ್ಲಿ ಯಾವುದು ಬೆಸ್ಟ್ ವೆಬ್ ಬ್ರೌಸರ್ ಎಂಬ ಬಗ್ಗೆ ಮಾತನಾಡುವುದಾದರೆ ಯಾವುದೇ ಅನುಮಾನವಿಲ್ಲದೆ ಹೇಳಬಹುದು ಗೂಗಲ್ ಕ್ರೋಮ್ ಎಂದು.ಲಿಸ್ಟ್ ನಲ್ಲಿ ಮೇಲ್ದರ್ಜೆಯ ಸ್ಥಾನದಲ್ಲಿ ಗೂಗಲ್ ಕ್ರೋಮ್ ನಿಲ್ಲುತ್ತದೆ. ಸದ್ಯ ಗೂಗಲ್ ಕ್ರೋಮ್ ಅತೀ ಹೆಚ್ಚು ಜನಪ್ರಿಯವಾಗಿರುವ ವೆಬ್ ಬ್ರೌಸರ್ ಆಗಿದ್ದು ಎಲ್ಲಾ ಪ್ರಮುಖ ಫ್ಲ್ಯಾಟ್ ಫಾರ್ಮ್ ಗಳಲ್ಲೂ ಕೂಡ ಇದು ಲಭ್ಯವಿದೆ.

ಉತ್ತಮ ವೆಬ್ ಬ್ರೌಸಿಂಗ್ ಅನುಭವಕ್ಕಾಗಿ ಬೇಕಾಗುವ ಹೆಚ್ಚಿನ ಎಲ್ಲಾ ಪ್ರಮುಖ ಫೀಚರ್ ಗಳು ಈ ವೆಬ್ ಬ್ರೌಸರ್ ನಲ್ಲಿ ಲಭ್ಯವಿದೆ. ಇದುವರೆಗೂ ಸಿಕ್ರೇಟ್ ರೀಡರ್ ಮೋಡ್ ಬಗ್ಗೆ ಗೂಗಲ್ ಇದುವರೆಗೂ ಯಾವುದೇ ವಿಚಾರವನ್ನು ಖಾತ್ರಿಗೊಳಿಸಿಲ್ಲ. ಆದರೆ ಬಳಕೆದಾರರು ಇದನ್ನು ಮ್ಯಾನುವಲ್ ಆಗಿ ಆಕ್ಟಿವೇಟ್ ಮಾಡುವುದಕ್ಕೆ ಅವಕಾಶವಿದೆ. ಕ್ರೋಮ್ ಸೆಟ್ಟಿಂಗ್ಸ್ ನಲ್ಲಿ ಇದು ಸಾಧ್ಯವಾಗುತ್ತದೆ.

ಗೂಗಲ್ ಕ್ರೋಮ್ ಬ್ರೌಸರ್ ನ ಹಿಡನ್ ರೀಡರ್ ಮೋಡ್ ಬಹಳ ಹ್ಯಾಂಡಿ ಆಗಿರುವ ಟೂಲ್ ಆಗಿದ್ದು ನ್ಯೂಸ್ ಗಳ ಸ್ಟೋರಿಯನ್ನು ಸರಳಗೊಳಿಸುತ್ತದೆ ಮತ್ತು ದೊಡ್ಡ ದೊಡ್ಡ ಕಟೆಂಟ್ ಗಳನ್ನು ಕೂಡ ಸುಲಭದಲ್ಲಿ ಓದುವುದಕ್ಕೆ ನೆರವು ನೀಡುತ್ತದೆ.

ನೀವು ಭೇಟಿ ನೀಡುವ ವೆಬ್ ಸೈಟ್ ನಲ್ಲಿರುವ ಎಲ್ಲಾ ಕ್ಲಟ್ಟರ್ ಗಳನ್ನು ಈ ಸೀಕ್ರೆಟ್ ರೀಡರ್ ಮೋಡ್ ರಿಮೂವ್ ಮಾಡುತ್ತದೆ ಮತ್ತು ನೀವು ಓದಬಯಸುವ ಆರ್ಟಿಕಲ್ ನ ಕಡೆಗೆ ಸಂಪೂರ್ಣ ಗಮನವನ್ನು ಕೇಂದ್ರಿಕರಿಸಿ ನಿಮ್ಮ ಓದುವಿಕೆಗೆ ನೆರವು ನೀಡುತ್ತದೆ.ಕ್ರೋಮಿನ ರೀಡರ್ ಮೋಡ್ ಮೈಕ್ರೋಸಾಫ್ಟಿನ ಎಡ್ಜ್ ರೀಡರ್ ಮೋಡ್ ನಂತೆಯೇ ಇದೆ. ಆದರೆ ಇದರಲ್ಲಿ ಕೆಲವು ಉಪಯುಕ್ತ ಫೀಚರ್ ತಪ್ಪಿಹೋಗಿವೆ. ಒಂದು ವಿಚಾರ ನೆನಪಿರಲಿ ಈ ಫೀಚರ್ ಇನ್ನು ಅಧಿಕೃತವಾಗಿ ಪ್ರಕಟವಾಗಿಲ್ಲ ಹಾಗಾಗಿ ಇನ್ನು ಹೆಚ್ಚಿನ ಅಭಿವೃದ್ಧಿಯನ್ನು ನಾವು ನಿರೀಕ್ಷಿಸಬಹುದು.

ಕ್ರೋಮ್ ಬ್ರೌಸರ್ ನಲ್ಲಿ ಹಿಡನ್ ರೀಡರ್ ಮೋಡ್ ನ್ನು ಆಕ್ಟಿವೇಟ್ ಮಾಡುವುದು ಹೇಗೆ?

ಒಂದು ವೇಳೆ ನೀವು ಕೂಡ ಸೀಕ್ರೆಟ್ ರೀಡರ್ ಮೋಡ್ ನ್ನು ಕ್ರೋಮ್ 75 ನಲ್ಲಿ ಆಕ್ಟಿವೇಟ್ ಮಾಡುವುದಕ್ಕೆ ಆಸಕ್ತಿ ವಹಿಸಿದ್ದರೆ ಕೆಲವು ಸರಳವಾಗಿರುವ ಹಂತಗಳನ್ನು ಈ ಕೆಳಗೆ ನಾವು ತಿಳಿಸಿದ್ದೇವೆ. ಅದನ್ನು ಫಾಲೋ ಮಾಡಿ. ರೀಡರ್ ಮೋಡ್ ಬಳಸುವಾಗ ಕೆಲವು ಬಗ್ಸ್ ಗಳು ಬರುವ ಸಾಧ್ಯತೆಗಳಿವೆ ಯಾಕೆಂದರೆ ಈ ಫೀಚರ್ ಈಗಲೂ ಕೂಡ ಅಭಿವೃದ್ಧಿಯ ಹಂತದಲ್ಲಿದೆ. ಕ್ರೋಮ್ 75 ನಲ್ಲಿ ರೀಡರ್ ಮೋಡ್ ಅನೇಬಲ್ ಮಾಡುವುದು ಹೇಗೆ ಇಲ್ಲಿದೆ ನೋಡಿ.

ಹಂತ 1. ಮೊದಲನೆಯದಾಗಿ, ಕ್ರೋಮ್ ಬ್ರೌಸರ್ ನ್ನು ತೆರೆಯಿರಿ ಮತ್ತು ಮೆನುಗೆ ತೆರಳಿ>ಹೆಲ್ಪ್> ಅಬೌಟ್ ಗೂಗಲ್ ಕ್ರೋಮ್ ಗೆ ತೆರಳಿ.

ಹಂತ 2. ಮೊದಲನೆಯದಾಗಿ ನೀವು ಕ್ರೋಮ್ 75 ನ್ನೇ ಬಳಸುತ್ತಿದ್ದೀರಾ ಅಥವಾ ಅದಕ್ಕಿಂತ ಹಿಂದಿನ ವರ್ಷನ್ ಏನಾದರೂ ಬಳಕೆ ಮಾಡುತ್ತಿದ್ದೀರಾ ಎಂಬುದನ್ನು ಚೆಕ್ ಮಾಡಬೇಕು. ಒಂದು ವೇಳೆ ನೀವು ಹಳೆಯ ಕ್ರೋಮ್ ವರ್ಷನ್ ರನ್ ಮಾಡುತ್ತಿದ್ದರೆ ಅದನ್ನು ಅಪ್ ಡೇಟ್ ಮಾಡಿಕೊಳ್ಳಿ.

ಹಂತ 3. ಇದೀಗ ಯುಆರ್ಎಲ್ ಬಾರ್ ನಲ್ಲಿ “chrome://flags/#enable-reader-mode” ಎಂದು ಟೈಪ್ ಮಾಡಿ ಮತ್ತು ಎಂಟರ್ ಪ್ರೆಸ್ ಮಾಡಿ.

ಹಂತ 4. ಮೇಲಿನ ಯುಆರ್ ಎಲ್ ನಿಮ್ಮನ್ನ 'Enable Reader Mode’ ಆಯ್ಕೆಗೆ ಕರೆದುಕೊಂಡು ಹೋಗುತ್ತದೆ. ಡ್ರಾಪ್ ಡೌನ್ ಮೆನುವಿನಲ್ಲಿ ಅನೇಬಲ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ.

ಹಂತ 5. ಇದೀಗ 'ರೀಲಾಂಚ್ ನೌ’ ಬಟನ್ ನ್ನು ಪೇಜಿನ ಕೆಳಭಾಗದಲ್ಲಿ ಪ್ರೆಸ್ ಮಾಡಿ ವೆಬ್ ಬ್ರೌಸರ್ ನ್ನು ರೀಸ್ಟಾರ್ಟ್ ಮಾಡಿ.

ಅಷ್ಟೇ. ನೀವು ಮಾಡಬೇಕಾಗಿರುವುದನ್ನು ಸಾಧಿಸಿ ಆಯ್ತು. ಈ ರೀತಿಯಾಗಿ ನೀವು ಕ್ರೋಮ್ ಬ್ರೌಸರ್ ನಲ್ಲಿ ಸಿಕ್ರೇಟ್ ರೀಡರ್ ಮೋಡ್ ನ್ನು ಅನೇಬಲ್ ಮಾಡಿಕೊಳ್ಳಬಹುದು. ಇದೀಗ ನೀವು ಯಾವುದೇ ವೆಬ್ ಪೇಜ್ ತೆರಳಿ ಮತ್ತು ಮೆನುವನ್ನು ತೆರೆಯಿರಿ. ರೀಡರ್ ಮೋಡ್ ಅನೇಬಲ್ ಗಾಗಿ 'Distill Page’ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಬಹುದು.

Best Mobiles in India

English summary
How And Why You Should Activate Hidden Reader Mode on Google Chrome
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+