Home
ಟೆಕ್ ನೌಕರಿ

ಇನ್ಮುಂದೆ ವಾಹನ ಎಲ್ಲಿ ಪಾರ್ಕ್ ಮಾಡಿದ್ದೇವೆ ಎಂಬ ಚಿಂತೆ ನಿಮಗೆ ಇರುವುದಿಲ್ಲ..!

By Gizbot Bureau

ಶಾಪಿಂಗ್ ಮಾಲ್ ಗೆ ತೆರಳಿದಾಗ ಗಾಡಿಯನ್ನು ಗಡಿಬಿಡಿಯಲ್ಲಿ ಎಲ್ಲೋ ಸಿಕ್ಕಿದ ಜಾಗದಲ್ಲಿ ತೂರಿಸಿ ಹೇಗ್ಹೋ ಪಾರ್ಕ್ ಮಾಡಿದ್ದಾಗಿದೆ. ಎರಡು ಗಂಟೆ ಬಿಟ್ಟು ಶಾಪಿಂಗ್ ಮುಗಿಸಿ ಬಂದು ಹುಡುಕಿದರೆ ಗಾಡಿ ಎಲ್ಲಿದೆಯಪ್ಪಾ ಎಂದು ತಡಕಾಡುವಂತಾಗುತ್ತಿದೆಯಾ? ಎಲ್ಲಿ ಪಾರ್ಕ್ ಮಾಡಿದ್ದು ಎಂದು ನೆನಪೇ ಇಲ್ವಾ? ಕೇವಲ ಗಾಡಿ ನಂಬರ್ ಇಟ್ಕೊಂಡು ನಿಮ್ಮ ಗಾಡಿನ ಹುಡುಕೋಕೆ ಸಾಧ್ಯವಿಲ್ಲ ಅಲ್ವಾ?

ಯಾಕಂದ್ರೆ ಪಾರ್ಕಿಂಗ್ ಜಾಗ ದೊಡ್ಡದಿರುತ್ತೆ ಮತ್ತು ಎಲ್ಲಿದೆ ನಿಮ್ಮ ವೆಹಿಕಲ್ ಎಂದು ಹುಡುಕಾಡುವುದು ಕಠಿಣ ಸಲಾವಾಗಿ ಬಿಡುತ್ತದೆ. ಶಾಪಿಂಗ್ ಮಾಡಿದ ಸಮಯಕ್ಕಿಂತ ವೆಹಿಕಲ್ ನ್ನು ಪಾರ್ಕಿಂಗ್ ಜಾಗದಲ್ಲಿ ಹುಡುಕಾಡಿದ ಸಮಯವೇ ಅಧಿಕವಾಗಿ ಬಿಡುತ್ತದೆ. ಆದರೆ ಇನ್ನು ಮುಂದೆ ಈ ಚಿಂತೆ ಇಲ್ಲ. ನಿಮ್ಮ ಗಾಡಿಯಲ್ಲಿ ಎಲ್ಲಿ ಪಾರ್ಕ್ ಮಾಡಿದಿರಿ ಎಂಬುದು ನಿಮಗೆ ನೆನಪಿಲ್ಲದೇ ಇದ್ದರೆ ಏನಂತೆ ನಮ್ಮ ಗೂಗಲ್ ಮಹಾಶಯ ನೆನಪಿಟ್ಟುಕೊಂಡಿರುತ್ತಾನೆ..

ಇನ್ಮುಂದೆ ವಾಹನ ಎಲ್ಲಿ ಪಾರ್ಕ್ ಮಾಡಿದ್ದೇವೆ ಎಂಬ ಚಿಂತೆ ನಿಮಗೆ ಇರುವುದಿಲ್ಲ..!

ಗೂಗಲ್ I/O 2018ನಲ್ಲಿ ಗೂಗಲ್ ಅಸ್ಟಿಸ್ಟೆಂಟ್ ಗೆ ಗೂಗಲ್ ಹೊಸ ವೈಶಿಷ್ಟ್ಯವೊಂದನ್ನು ಸೇರಿಸುತ್ತಿದೆ. ಈಗಾಗಲೇ ಹಲವಾರು ವೈಶಿಷ್ಟ್ಯತೆಗಳನ್ನು ಈ ಪಟ್ಟಿಯಲ್ಲಿ ಸೇರಿಸಲಾಗುತ್ತದೆ ಎಂಬುದನ್ನು ನಾವು ಕೇಳಿದ್ದೇವೆ, ಅದಕ್ಕೆ ಹೊಸ ಸೇರ್ಪಡೆಯೊಂದು ಆಗಿದೆ. ನಿಮ್ಮ ವೆಹಿಕಲ್ ನ್ನು ಎಲ್ಲಿ ಪಾರ್ಕ್ ಮಾಡಲಾಗಿದೆ ಎಂಬುದನ್ನು ಗೂಗಲ್ ಮ್ಯಾಪ್ ನಲ್ಲಿ ನೆನಪಿಟ್ಟುಕೊಳ್ಳುವಂತ ವೈಶಿಷ್ಟ್ಯವು ಗೂಗಲ್ ಅಸಿಸ್ಟೆಂಟ್ ನಲ್ಲಿ ಇರಲಿದೆ.

ನಮ್ಮಲ್ಲಿ ಹಲವರು ಈ ಸಮಸ್ಯೆಯನ್ನು ಎದುರಿಸಿರುತ್ತವೆ. ಆದರೆ ಇನ್ನು ಮುಂದೆ ಇದಕ್ಕಾಗಿ ಚಿಂತಿಸುವ ಅಗತ್ಯವಿಲ್ಲ. ನೀವೂ ಕೂಡ ಈ ವೈಶಿಷ್ಟ್ಯವನ್ನು ಬಳಸಲು ಇಚ್ಛಿಸುತ್ತೀರಾದರೆ ಈ ಕೆಳಗಿನ ಮೆಥೆಡ್ ಗಳನ್ನು ಫಾಲೋ ಮಾಡಿ.

• ನೀವು ಗೂಗಲ್ ಅಸಿಸ್ಟೆಂಟ್ ಆಪ್ ನ ಲೇಟೆಸ್ಟ್ ವರ್ಷನ್ ನ್ನು ಬಳಕೆ ಮಾಡಬೇಕು.

• ನಿಮ್ಮ ಸ್ಮಾರ್ಟ್ ಫೋನ್ iOS 10 ಅಥವಾ ಅದಕ್ಕಿಂತ ಮೇಲಿನ ವರ್ಷನ್ ನಲ್ಲಿ ಅಥವಾ ಆಂಡ್ರಾಯ್ಡ್ Marshmallow ದಲ್ಲಿ ರನ್ ಆಗುತ್ತಿದೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ

• ನಿಮ್ಮ ಲೋಕೇಷನ್ ಸರ್ವೀಸನ್ನು ಅನೇಬಲ್ ಮಾಡಿ

• ಗೂಗಲ್ ಅಸಿಸ್ಟೆಂಟ್ ಸೇವೆಯು ಧ್ವನಿ ಕಮಾಂಡ್ ಗಳಿಂದ ಕಾನ್ಫಿಗರ್ ಆಗಿರಬೇಕು ಮತ್ತು ಅದಕ್ಕೆ ಅಗತ್ಯವಿರುವ ಎಲ್ಲಾ ಪರ್ಮಿಷನ್ ಗಳನ್ನೂ ನೀಡಿರಬೇಕು..

ಇನ್ಮುಂದೆ ವಾಹನ ಎಲ್ಲಿ ಪಾರ್ಕ್ ಮಾಡಿದ್ದೇವೆ ಎಂಬ ಚಿಂತೆ ನಿಮಗೆ ಇರುವುದಿಲ್ಲ..!

ಪಾರ್ಕಿಂಗ್ ಲೋಕೇಷನ್ ನ್ನು ಸೇವ್ ಮಾಡಲು ಇರುವ ಹಂತಗಳು ..


1. ಓಕೆ ಗೂಗಲ್ ಕಮಾಂಡ್ ನಿಂದ ಗೂಗಲ್ ಅಸಿಸ್ಟೆಂಟ್ ನ್ನು ತೆರೆಯಿರಿ

2. Remember where I parked’ ಹೇಳುವ ಮುಖಾಂತರ ಗೂಗಲ್ ಅಸಿಸ್ಟೆಂಟ್ ಗೆ ನೀವು ಪಾರ್ಕ್ ಮಾಡಿದ ಜಾಗದಲ್ಲಿ ನಿಂತು ಹೇಳಿದರೆ ಆಯಿತು.

3. ಗೂಗಲ್ ಅಸಿಸ್ಟೆಂಟ್ ಜಿಪಿಎಸ್ ನೊಂದಿಗೆ ಸಂಧಿಸಿ, ಒಂದು ವಿಶೇಷ ಪಾರ್ಕಿಂಗ್ ಪಿನ್ ಮುಖಾಂತರ ನಿಮ್ಮ ಗೂಗಲ್ ಅಸಿಸ್ಟೆಂಟ್ ನಿಮ್ಮ ಪಾರ್ಕಿಂಗ್ ಜಾಗವನ್ನು ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಮಾಡುತ್ತೆ.


ಪಾರ್ಕಿಂಗ್ ಲೋಕೇಷನ್ ನ್ನು ವಾಪಾಸ್ ಬಂದ ನಂತರ ರಿಟ್ರೀವ್ ಮಾಡುವುದು ಹೇಗೆ ಎಂಬ ಹಂತಗಳು :

ಪಾರ್ಕಿಂಗ್ ಲೋಕೇಷನ್ ನ್ನು ಕಂಡು ಹಿಡಿಯಲು ಎರಡು ವಿಧಾನಗಳಿವೆ,


ವಿಧಾನ 1:

1. ಓಕೆ ಗೂಗಲ್ ಕಮಾಂಡ್ ಮೂಲಕ ಗೂಗಲ್ ಅಸಿಸ್ಟೆಂಟ್ ನ್ನು ತೆರೆಯಿರಿ

2. ಸರಳವಾಗಿ ಕೇಳಿ ' Where’s my car’.

3. ಇದು ಕೂಡಲೇ ಅದು ಸೇವ್ ಆಗಿರುವ ಜಾಗವನ್ನು ತಿಳಿಸುತ್ತದೆ.

4. ನೇವಿಗೇಷನ್ ನ್ನು ಟ್ಯಾಪ್ ಮಾಡಿ ಅದರಂತೆಯೇ ಸಾಗಿದರೆ ನೀವು ಕಾರ್ ನಿಲ್ಲಿಸಿದ ಜಾಗಕ್ಕೆ ತೆರಳಬಹುದು.

ವಿಧಾನ 2 :

1. ಗೂಗಲ್ ಮ್ಯಾಪ್ ನ್ನು ತೆರೆಯಿರಿ ಮತ್ತು ' Saved parking’ card ನ್ನು ಟ್ಯಾಪ್ ಮಾಡಿ.

2. ಈಗ, 'Direction’ ನ್ನು ಟ್ಯಾಪ್ ಮಾಡಿ ಮತ್ತು ಸ್ಟಾರ್ಟ್ ಬಟನ್ ಒತ್ತಿ ಅದರಂತೆಯೇ ಸಾಗಿ..

ಇದರ ಜೊತೆಗೆ , ಭವಿಷ್ಯದ ರೆಫರೆನ್ಸ್ ಗಾಗಿ ನೀವು ಪಾರ್ಕಿಂಗ್ ನಂಬರ್ ಮತ್ತು ಸ್ಟೋರ್ ಗಳ ಹೆಸರನ್ನು ಕೂಡ ಆಡ್ ಮಾಡಿ ಇಡಬಹುದು.

Best Mobiles in India

English summary
How to ask Google Assistant to remember your parking location. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+