ನಕಲಿ ಆಪ್‌ಗಳು ಡೌನ್‌ಲೋಡ್ ಆಗುತ್ತಿವೆಯಾ..? ತಡೆಯಲು ಹೀಗೆ ಮಾಡಿ..!
ಎಷ್ಟೋ ಸಂದರ್ಬಗಳಲ್ಲಿ ಯಾವುದೋ ಆಪ್ ಇನ್ಸ್ಟಾಲ್ ಮಾಡಲು ಹೋಗಿ ಯಾಮಾರಿ ಬಿಡುವುದೇ ಹೆಚ್ಚು. ಇಂತಹ ಸಣ್ಣದೊಂದು ತಪ್ಪು ನಿಮಗೆ ದೊಡ್ಡ ಹಾನಿಯನ್ನುಂಟು ಮಾಡಿ ಬಿಡಬಹುದು. ಫೇಕ್ ಆಪ್ ಗಳನ್ನು ಇನ್ಸ್ಟಾಲ್ ಮಾಡಿಕೊಳ್ಳುವುದರ ಪರಿಣಾಮದಿಂದಾಗಿ ನಿಮ್ಮ ವಯಕ್ತಿಕ ಮಾಹಿತಿಗಳು ಸೇರಬಾರದವರ ಕೈ ಸೇರಿ ಬಿಡಬಹುದು.

ಹಾಗಾಗಿ ನಿಜವಾದ ಆಪ್ ಗಳ ಇನ್ಸ್ಟಾಲೇಷನ್ ಮಾಡುವುದು ಬಹಳ ಮುಖ್ಯ ವಿಚಾರವಾಗಿದೆ. ಆದರೆ ಸುಳ್ಳು ಆಪ್ ಗಳು ನಮ್ಮ ಕಣ್ಣಿಗೆ ಮಣ್ಣೆರಚುವ ಕೆಲಸವನ್ನು ಮಾಡಿ ಬಿಡುತ್ತದೆ. ಹಾಗಾಗಿ ಸುಳ್ಳು ಆಪ್ ಗಳಿಂದ ನಿಮ್ಮ ಸ್ಮಾರ್ಟ್ ಫೋನ್ ಗಳನ್ನು ರಕ್ಷಿಸಿಕೊಳ್ಳುವುದು ಹೇಗೆ ಮತ್ತು ಅವುಗಳ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಇನ್ಸ್ಟಾಲ್ ಆಗದಂತೆ ತಡೆಯಲು ಏನು ಮಾಡಬಹುದು ಎಂಬ ಬಗ್ಗೆ ಕೆಲವು ಸರಳ ಉಪಾಯಗಳನ್ನು ನಾವಿಲ್ಲಿ ನಿಮಗೆ ತಿಳಿಸುತ್ತಿದ್ದೇವೆ.

ಅಧಿಕೃತ ಆಪ್ ಸ್ಟೋರ್ ಗಳಿಂದಲೇ ಯಾವಾಗಲೂ ಡೌನ್ ಲೋಡ್ ಮಾಡಿ
ಯಾವಾಗಲೂ ಅಧಿಕೃತ ಸ್ಟೋರ್ ಗಳಿಂದಲೇ ಆಪ್ ಗಳನ್ನು ಡೌನ್ ಲೋಡ್ ಮಾಡಬೇಕು. ನಿಮಗೆ ಬೇರೆ ಕಡೆಗಳಲ್ಲಿ ಆಪ್ ಗಳನ್ನು ಡೌನ್ ಲೋಡ್ ಮಾಡಲು ಅವಕಾಶಗಳಿರಬಹುದು ಆದರೆ ಎಷ್ಟು ಸಾಧ್ಯವೋ ಅಷ್ಟು ಇತರೆ ಕಡೆಗಳಲ್ಲಿ ಆಪ್ ಗಳನ್ನು ಡೌನ್ ಲೋಡ್ ಮಾಡುವುದನ್ನು ತಪ್ಪಿಸಿ.
ಅದೆಷ್ಟೋ ದುರುದ್ದೇಶಪೂರಿತ ಆಪ್ ಗಳನ್ನು ಖಂಡಿತವಾಗಲೂ ಅಧಿಕೃತ ಸ್ಟೋರ್ ಗಳಲ್ಲೂ ಗಮನಿಸಬಹುದು ಎಂಬುದೇನೋ ನಿಜ. ಆದರೆ ಅಂತವುಗಳನ್ನು ಅಧಿಕೃತ ಸ್ಟೋರ್ ಗಳಲ್ಲಿ ಆದಷ್ಟು ಬೇಗ ರಿಮೂವ್ ಮಾಡಲಾಗುತ್ತದೆ. ಹೀಗೆ ಮಾಡುವುದರಿಂದಾಗಿ ಆದಷ್ಟು ಫೇಕ್ ಆಪ್ ಗಳು ನಿಮ್ಮ ಸ್ಮಾರ್ಟ್ ಫೋನ್ ಸೇರುವುದನ್ನು ತಡೆಯಬಹುದು.

ಆಪ್ ನ ವಿವರಣೆಯನ್ನು ಓದಿಕೊಳ್ಳಿ
ಅತೀ ಹೆಚ್ಚು ವ್ಯಾಕರಣ ಮತ್ತು ಅಕ್ಷರಗಳ ತಪ್ಪುಗಳನ್ನು ಗಮನಿಸಿದರೆ ಅದು ಫೇಕ್ ಆಪ್ ಗಳ ಕೆಂಪು ಚಿಹ್ನೆಯಾಗಿರುತ್ತದೆ ಎಂಬುದನ್ನು ನೆನಪಿನಲ್ಲಿಡಿ.ನಂಬಿಕಸ್ಥ ಡೆವಲಪರ್ ಗಳು ಇಂತಹ ತಪ್ಪುಗಳನ್ನು ತಮ್ಮ ಆಪ್ ಗಳಲ್ಲಿ ಮಾಡಲಾರರು ಮತ್ತು ಕೆಲವು ಸಾಮಾನ್ಯ ತಪ್ಪುಗಳಿರುವ ಆಪ್ ಗಳು ಖಂಡಿತ ಫೇಕ್ ಆಪ್ ಗಳಾಗಿರುತ್ತದೆ.

ವಿಮರ್ಶೆಗಳು ಬಹಳ ಮುಖ್ಯ
ಕೆಲವು ವಿಮರ್ಷೆಗಳನ್ನು ಓದುವುದರಲ್ಲಿ ಯಾವುದೇ ತಪ್ಪಿಲ್ಲ. ಯಾವುದೇ ಆಪ್ ನ್ನು ಡೌನ್ ಲೋಡ್ ಮಾಡುವ ಮುನ್ನ ವಿಮರ್ಷೆಗಳನ್ನು ಗಮನಿಸಿ. ಫೇಕ್ ಆಪ್ ಗಳಿಗೂ ಕೂಡ ಕೆಲವು ವಿಮರ್ಷೆಗಳನ್ನು ಹಾಕಲಾಗಿರುತ್ತದೆ ಮತ್ತು ಅವು ಸ್ಪಷ್ಟವಾಗಿ ನಿಮಗೆ ಇದು ಫೇಕ್ ಆಪ್ ಎಂದು ಹೇಳುತ್ತದೆ. ಹಾಗಾಗಿ ಯಾವುದೇ ಆಪ್ ಡೌನ್ ಲೋಡ್ ಮಾಡುವ ಮುನ್ನ ಇತರರು ಏನು ಹೇಳುತ್ತಾರೆ ಆಪ್ ಬಗ್ಗೆ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ.

ಡೆವಲಪರ್ ಬಗೆಗಿನ ಹಿನ್ನೆಲೆಯನ್ನು ಸ್ವಲ್ಪ ತಿಳಿದುಕೊಳ್ಳಿ
ಆಪ್ ಡೆವಲಪರ್ ಬಗೆಗಿನ ಮಾಹಿತಿಗಾಗಿ ಅವರ ವೆಬ್ ಸೈಟ್ ಗೆ ತೆರಳಿ ಮತ್ತು ಅವರ ಬಗೆಗಿನ ವಿವರಣೆಯನ್ನು ಓದಿ ತಿಳಿದುಕೊಳ್ಳಿ. ಯಾವುದೇ ಆಪ್ ಡೌನ್ ಲೋಡ್ ಮಾಡುವ ಮುನ್ನ ಅದರ ಡೆವಲಪರ್ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದಿರುವುದು ಬಹಳ ಒಳ್ಳೆಯದು. ಒಂದು ವೇಳೆ ನೀವು ಯಾವುದೇ ಅನುಮಾನಾಸ್ಪದ ಸಂಗತಿಗಳನ್ನು ಗಮನಿಸಿದರೆ ಅಂದರೆ ಅವರದ್ದು ಯಾವುದೇ ವೆಬ್ ಸೈಟ್ ಇಲ್ಲ ಅಥವಾ ಸೋಷಿಯಲ್ ಮೀಡಿಯಾ ಇಲ್ಲ ಎಂದಾದರೆ ನೀವು ಆ ಆಪ್ ನ್ನು ಡೌನ್ ಲೋಡ್ ಮಾಡದೇ ಇರುವುದೇ ಒಳ್ಳೆಯದು.

ಎಷ್ಟು ಮಂದಿ ಡೌನ್ ಲೋಡ್ ಮಾಡಿದ್ದಾರೆ
ಒಂದು ಆಪ್ ಸತ್ಯವಾದದ್ದೋ ಅಥವಾ ಸುಳ್ಳೋ ಎಂದು ತಿಳಿದುಕೊಳ್ಳಲು ಇರುವ ಬಹಳ ದೊಡ್ಡ ಸೂಚಕವೆಂದರೆ ಅದು ಎಷ್ಟು ಮಂದಿ ಡೌನ್ ಲೋಡ್ ಮಾಡಿದ್ದಾರೆ ಎಂದು ತಿಳಿಸುವ ನಂಬರ್.
ಮೇಲಿನ ಎಲ್ಲಾ ಅಂಶಗಳನ್ನು ಯಾವುದೇ ಆಪ್ ಡೌನ್ ಲೋಡ್ ಮಾಡುವಾಗ ನೆನಪಿನಲ್ಲಿ ಇಟ್ಟುಕೊಂಡು ಅನುಸರಿಸಿದರೆ ಫೇಕ್ ಆಪ್ ಗಳನ್ನು ಡೌನ್ ಲೋಡ್ ಮಾಡುವುದರಿಂದ ತಪ್ಪಿಸಿಕೊಳ್ಳಬಹುದು ಮತ್ತು ನಿಮ್ಮ ಸ್ಮಾರ್ಟ್ ಫೋನ್ ಸುರಕ್ಷಿತವಾಗಿರುವಂತೆ ನೋಡಿಕೊಳ್ಳಬಹುದು.


Click it and Unblock the Notifications