ಈ ಕೆಳಗಿನ ಒಂದು ತಪ್ಪು ಕೂಡ ನೀವು ಹಣ ಕಳೆದುಕೊಳ್ಳುವಂತೆ ಮಾಡುತ್ತದೆ!!

|

ಇಂಟರ್‌ನೆಟ್ ಸಹಾಯದಿಂದ ಡಿಜಿಟಲ್‌ ಯುಗ ಬೆಳೆದಂತೆಲ್ಲಾ ಹಣದ ವ್ಯವಹಾರವು ಸಹ ಈಗ ಡಿಜಿಟಲ್ ಆಗಿದೆ. ಹಳೆ ಬ್ಯಾಂಕಿಂಗ್ ವ್ಯವಸ್ಥೆಗಳಲ್ಲಿನ ಡಿಡಿ, ಚೆಕ್‌ ವ್ಯವಸ್ಥೆ ಹೋಗಿ ಮೊಬೈಲ್‌ ಬ್ಯಾಂಕಿಂಗ್‌, ಯುಪಿಐ ಪೇಮೆಂಟ್, ಇಂಟರ್‌ನೆಟ್‌ ಬ್ಯಾಂಕಿಂಗ್‌, ಎಸ್‌ಎಂಎಸ್‌ ಬ್ಯಾಂಕಿಂಗ್‌ ವ್ಯವಸ್ಥೆ ಬಂದಿದೆ. ಭಾರತ ಈಗ ಡಿಜಿಟಲ್ ಮತ್ತು ಕ್ಯಾಶ್‌ಲೆಸ್‌ ಆಗುತ್ತಿದೆ. ಆದರೆ, ಈ ಸಮಯದಲ್ಲಿ ನಾವು ಎಚ್ಚರದಿಂದಿರಬೇಕಾಗಿರುವುದು ಅವಶ್ಯವಾಗಿದೆ. ಏಕೆಂದರೆ, ನೀವೆಲ್ಲಾ ಈಗ ಸೈಬರ್ ಕ್ರೈಂ ಪ್ರಕರಣಗಳನ್ನು ಕೇಳಿರುತ್ತೀರಾ.!

ಈ ಕೆಳಗಿನ ಒಂದು ತಪ್ಪು ಕೂಡ ನೀವು ಹಣ ಕಳೆದುಕೊಳ್ಳುವಂತೆ ಮಾಡುತ್ತದೆ!!

ಹೌದು, ಇತ್ತಿಚಿಗೆ ಹ್ಯಾಕಿಂಗ್ ಎಂಬ ಭೂತ ಪ್ರಭಲವಾಗುತ್ತಿದ್ದು, ಇಮೇಲ್‌, ಎಸ್‌ಎಂಎಸ್‌ನಲ್ಲಿ ಬಂದ ಮೇಲ್‌ ಮತ್ತು ಮೇಸೆಜ್‌ಗಳಿಂದ ಹಣ ಕಳೆದುಕೊಂಡ ವರದಿಗಳು ದಿನಕ್ಕೆ ಹತ್ತಾರು ಸಿಗುತ್ತಿವೆ. ಈ ಹ್ಯಾಕಿಂಗ್ ಜಗತ್ತಿನಲ್ಲಿ ನಿಮ್ಮ ಹಣ ಸೇಫ್‌ ಆಗಿರಬೇಕೆಂದರೆ ನೀವು ಕೂಡ ವ್ಯವಹಾರ ಮಾಡುವಾಗ ಎಚ್ಚರದಿಂದಿರಬೇಕಿದೆ. ಕೇವಲ ಒಂದು ತಪ್ಪು ಕೂಡ ನೀವು ಹಣ ಕಳೆದುಕೊಳ್ಳುವಂತೆ ಮಾಡುತ್ತದೆ. ಅದಕ್ಕಾಗಿ ಬ್ಯಾಂಕಿಂಗ್ ಅಥವಾ ಡಿಜಿಟಲ್ ಬ್ಯಾಂಕಿಂಗ್‌ ವ್ಯವಹಾರ ಮಾಡುವಾಗ ಇಲ್ಲಿನ ಸಲಹೆಗಳನ್ನು ಅನುಸರಿಸಿ ಸೇಫ್‌ ಬ್ಯಾಂಕಿಂಗ್‌ ಮಾಡಿ.

ಪಬ್ಲಿಕ್‌ ವೈ ಫೈನಲ್ಲಿ ಹಣಕಾಸು ವ್ಯವಹಾರ ಬೇಡ

ಪಬ್ಲಿಕ್‌ ವೈ ಫೈನಲ್ಲಿ ಹಣಕಾಸು ವ್ಯವಹಾರ ಬೇಡ

ನೀವು ಹಣಕಾಸು ವ್ಯವಹಾರವನ್ನು ಇಂಟರ್‌ನೆಟ್‌ನಲ್ಲಿ ಮಾಡುತ್ತೀರಿ ಎಂದರೆ ಪಬ್ಲಿಕ್‌ ವೈ ಫೈ ಅಥವಾ ಅಸುರಕ್ಷಿತ ವೈ ಫೈ ಅಥವಾ ಇಂಟರ್‌ನೆಟ್‌ ಬಳಸಲೆಬೇಡಿ. ಸ್ಮಾರ್ಟ್‌ಫೋನ್‌ನಲ್ಲಿ ಪಬ್ಲಿಕ್ ವೈ ಫೈ ಸಂಪರ್ಕ ಪಡೆದುಕೊಂಡು ನಿಮ್ಮ ಕ್ರೆಡಿಟ್‌ ಕಾರ್ಡ್‌ ಮತ್ತು ಡೆಬಿಟ್‌ ಕಾರ್ಡ್‌ ಮಾಹಿತಿಯನ್ನು ನಮೂದಿಸಿದ್ದೀರಿ ಎಂದರೆ ಹ್ಯಾಕರ್‌ಗಳ ಕೈಯಲ್ಲಿ ಸಿಲುಕಿದಂತೆ ಅದಕ್ಕೆ ಪಬ್ಲಿಕ್‌ ವೈ ಫೈನಲ್ಲಿ ಹಣಕಾಸು ವ್ಯವಹಾರ ಬೇಡ.

ಪಾಸ್‌ವರ್ಡ್‌ನ್ನು ನಿಯಮಿತವಾಗಿ ಬದಲಿಸಿ

ಪಾಸ್‌ವರ್ಡ್‌ನ್ನು ನಿಯಮಿತವಾಗಿ ಬದಲಿಸಿ

ಅತಿ ಸರಳ ಭದ್ರತಾ ವಿಧಾನವೆಂದರೆ ನಿಯಮಿತವಾಗಿ ಪಾಸ್‌ವರ್ಡ್‌ ಬದಲಾಯಿಸುವುದು. ಇಂಟರ್‌ನೆಟ್‌ ಬ್ಯಾಂಕಿಂಗ್‌ ಅಥವಾ ಯುಪಿಐ ಪಾಸ್‌ವರ್ಡ್‌, ಪಿನ್‌ ನಂಬರ್‌ನ್ನು ಸ್ಟ್ರಾಂಗ್‌ ಆಗಿ ತಯಾರಿಸಿ. ನಿಮ್ಮ ಹೆಸರು ಅಥವಾ ನಿಮ್ಮ ಮೊಬೈಲ್‌ ಸಂಖ್ಯೆಯನ್ನು ಪಾಸ್‌ವರ್ಡ್‌ ಆಗಿ ನಮೂದಿಸಬೇಡಿ. ಪಾಸ್‌ವರ್ಡ್‌ನಲ್ಲಿ ಸಂಖ್ಯೆ, ಅಕ್ಷರ ಮತ್ತು ಚಿಹ್ನೆಗಳನ್ನು ಬಳಸಿ ಪಾಸ್‌ವರ್ಡ್‌ ರಚಿಸಿ.

ಇಮೇಲ್‌ ಲಿಂಕ್‌ಗಳಿಂದ ನೆಟ್‌ ಬ್ಯಾಂಕಿಂಗ್‌ ಸೈನ್‌ ಇನ್‌ ಬೇಡ

ಇಮೇಲ್‌ ಲಿಂಕ್‌ಗಳಿಂದ ನೆಟ್‌ ಬ್ಯಾಂಕಿಂಗ್‌ ಸೈನ್‌ ಇನ್‌ ಬೇಡ

ಎಲ್ಲರೂ ಮಾಡುವ ಬಹಳ ತಪ್ಪೆಂದರೆ ಇಮೇಲ್‌ ಲಿಂಕ್‌ಗಳಿಂದ ನೆಟ್‌ ಬ್ಯಾಂಕಿಂಗ್‌ ಸೈನ್‌ಇನ್‌ ಮಾಡುವುದು. ಇದರಿಂದ ಹ್ಯಾಕರ್‌ಗಳಿಗೆ ನಿಮ್ಮ ಮಾಹಿತಿ ಸುಲಭವಾಗಿ ಸಿಗುತ್ತದೆ. ಇಮೇಲ್‌ಗಳಲ್ಲಿ ಶೇ.90ರಷ್ಟು ಮೇಲ್‌ಗಳು ಸ್ಪ್ಯಾಮ್‌ ಆಗಿರುತ್ತವೆ ಎಂಬ ವರದಿ ಇದೆ. ಆದ್ದರಿಂದ ಅನ್‌ನೌನ್‌ ಅಥವಾ ಇಮೇಲ್‌ ಲಿಂಕ್‌ಗಳಿಂದ ನೆಟ್‌ ಬ್ಯಾಂಕಿಂಗ್ ಸೈನ್‌ ಇನ್ ಮಾಡಬೇಡಿ.

ಸೆಕ್ಯೂರ್ ವೆಬ್‌ಸೈಟ್ ಎಂಬುದನ್ನು ಪರಿಶೀಲಿಸಿ

ಸೆಕ್ಯೂರ್ ವೆಬ್‌ಸೈಟ್ ಎಂಬುದನ್ನು ಪರಿಶೀಲಿಸಿ

ನೆಟ್‌ ಬ್ಯಾಂಕಿಂಗ್‌ ವ್ಯವಹಾರ ಮಾಡುವಾಗ ಮೊದಲು ಅದು ಸೆಕ್ಯೂರ್ ವೆಬ್‌ಸೈಟ್‌ ಆಗಿದಿಯಾ ಎಂಬುದನ್ನು ಪರಿಶೀಲಿಸಿ. ವೆಬ್‌ಸೈಟ್‌ ಯುಆರ್‌ಎಲ್‌ನಲ್ಲಿ http ಎಂಬಲ್ಲಿ https ಇದೆಯಾ ಎಂಬುದನ್ನು ಖಚಿತ ಪಡಿಸಿಕೊಳ್ಳಿ. s ಎಂಬುದು ಸೆಕ್ಯೂರ್ ಎಂದರ್ಥ. https ಇದ್ದರೆ ಆ ವೆಬ್‌ಸೈಟ್‌ ಸೆಕ್ಯೂರ್ ಎನ್ನಲಾಗುತ್ತಿದೆ.

ಲಾಗ್‌ಔಟ್‌ ಮಾಡಿ

ಲಾಗ್‌ಔಟ್‌ ಮಾಡಿ

ಇ ಬ್ಯಾಂಕಿಂಗ್ ವ್ಯವಹಾರ ಮುಗಿದ ನಂತರ ಲಾಗ್‌ಔಟ್ ಮಾಡುವುದನ್ನು ಮರೆಯಬೇಡಿ. ಲಾಗ್‌ಔಟ್‌ ಮಾಡದಿದ್ದರೆ ಹ್ಯಾಕರ್‌ಗಳು ಮಾಹಿತಿಯನ್ನು ಕದಿಯುವ ಸಾಧ್ಯತೆ ಹೆಚ್ಚಿರುತ್ತದೆ. ಇಲ್ಲವೇ ಯಾರಾದರೂ ಮಿಸ್ಸಾಗಿ ಬಳಸುವ ಸಾಧ್ಯತೆಯು ಇರುತ್ತದೆ.

ಬ್ಯಾಂಕ್‌ನ ಅಧಿಕೃತ ಆಪ್‌ ಬಳಸಿ

ಬ್ಯಾಂಕ್‌ನ ಅಧಿಕೃತ ಆಪ್‌ ಬಳಸಿ

ಮೊಬೈಲ್‌ ಬ್ಯಾಂಕಿಂಗ್‌ ವ್ಯವಹಾರವನ್ನು ಬ್ಯಾಂಕ್‌ನ ಅಧಿಕೃತ ಅಥವಾ ಪ್ಲೇ ಸ್ಟೋರ್‌ನ ಸೆಕ್ಯೂರ್‌ ಆಪ್‌ಗಳಲ್ಲಿಯೇ ಮಾಡಿ. ಯಾಕೆಂದರೆ ಇಲ್ಲಿ ನಿಮ್ಮ ಮಾಹಿತಿ ಸೋರಿಕೆಯಾಗುವ ಸಾಧ್ಯತೆ ಇರುತ್ತದೆ. ಮಾಹಿತಿ ಸೋರಿಕೆಯಾದರೂ ಬ್ಯಾಂಕ್‌ಗಳ ಮೇಲೆ ಕಾನೂನು ಕ್ರಮವನ್ನು ಕೈಗೊಳ್ಳಬಹುದು.

ಆಯಂಟಿ ವೈರಸ್‌ ಅಪ್‌ಡೇಟ್‌ ಮಾಡಿ

ಆಯಂಟಿ ವೈರಸ್‌ ಅಪ್‌ಡೇಟ್‌ ಮಾಡಿ

ಯಾವಾಗಲೂ ನಿಮ್ಮ ಪಿಸಿ ಅಥವಾ ಮೊಬೈಲ್‌ನ ಆಯಂಟಿ ವೈರಸ್‌ ಅಪ್‌ಡೇಟ್‌ ಮಾಡಿ. ನಿಮ್ಮ ಪಿಸಿ ಮತ್ತು ಮೊಬೈಲ್ ಶೇ.100ರಷ್ಟು ಸುರಕ್ಷಿತವಾಗಿದೆ ಎಂಬುದನ್ನು ಖಚಿತ ಪಡಿಸಿಕೊಂಡು ನೆಟ್‌ ಬ್ಯಾಂಕಿಂಗ್‌ ವ್ಯವಹಾರ ಮಾಡಿ.

ಪಬ್ಲಿಕ್‌ ಅಥವಾ ಬೇರೆಯವರ ಡಿವೈಸ್‌ಗಳಲ್ಲಿ ಹಣಕಾಸು ವ್ಯವಹಾರ ಬೇಡ

ಪಬ್ಲಿಕ್‌ ಅಥವಾ ಬೇರೆಯವರ ಡಿವೈಸ್‌ಗಳಲ್ಲಿ ಹಣಕಾಸು ವ್ಯವಹಾರ ಬೇಡ

ಪಬ್ಲಿಕ್‌ ಸೈಬರ್ ಸೆಂಟರ್‌ಗಳಲ್ಲಿ ಅಥವಾ ಬೇರೆಯವರ ಕಂಪ್ಯೂಟರ್‌ಗಳಲ್ಲಿ ಇ ಬ್ಯಾಂಕಿಂಗ್‌ ಮಾಡುವುದು ಬೇಡ. ಸೈಬರ್ ಸೆಂಟರ್‌ಗಳಲ್ಲಿ ಕೀ ಲಾಗರ್‌ ಇನ್‌ಸ್ಟಾಲ್‌ ಮಾಡಿಕೊಂಡು ನಿಮ್ಮ ಪಾಸ್‌ವರ್ಡ್‌ಗಳನ್ನು ಸೇವ್‌ ಮಾಡಿರುವ ಸಾಧ್ಯತೆ ಹೆಚ್ಚು. ಆಕಸ್ಮಿಕವಾಗಿ ನೀವು ಲಾಗ್‌ಔಟ್‌ ಮಾಡದೇ ಇದ್ದರೆ ದುರ್ಬಳಕೆಯಾಗುವ ಸಾಧ್ಯತೆಯೇ ಹೆಚ್ಚು.

ವ್ಯವಹಾರ ಮಾಡುವಾಗ ಪ್ಯಾಡ್‌ಲಾಕ್‌ ನೋಡಿ

ವ್ಯವಹಾರ ಮಾಡುವಾಗ ಪ್ಯಾಡ್‌ಲಾಕ್‌ ನೋಡಿ

httpsನಂತೆ ಪ್ಯಾಡ್‌ಲಾಕ್‌ ಕೂಡ ಸುರಕ್ಷಿತ ವಿಧಾನ. ಯಾವಾಗಲೂ ಆನ್‌ಲೈನ್‌ ವ್ಯವಹಾರ ಮಾಡುವಾಗ ಪ್ಯಾಡ್‌ಲಾಕ್‌ ಚಿಹ್ನೆಯನ್ನು ಗಮನಿಸಿ. ಪ್ಯಾಡ್‌ಲಾಕ್‌ ಲಾಕ್‌ ಆಗಿದ್ದರೆ ಅದು ಸೆಕ್ಯೂರ್ ವೆಬ್‌ಸೈಟ್‌ ಎಂದು ಅರ್ಥ.

ಅಪರಿಚಿತರಿಗೆ ಅಕೌಂಟ್ ವಿವರ ನೀಡಬೇಡಿ

ಅಪರಿಚಿತರಿಗೆ ಅಕೌಂಟ್ ವಿವರ ನೀಡಬೇಡಿ

ನಿಮ್ಮ ಅಕೌಂಟ್‌ ವಿವರಗಳನ್ನು ಅಪರಿಚಿತರಿಗೆ ಶೇರ್ ಮಾಡಬೇಡಿ. ಅಥವಾ ಅಪರಿಚಿತರಿಗೆ ಹಣ ವರ್ಗಾವಣೆ ಮಾಡುವಾಗ ಎಚ್ಚರ ವಹಿಸಿ. ಅಪರಿಚಿತರು ಈ ವಿವರಗಳನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

Best Mobiles in India

English summary
The Most Fantastic Ways to Lose Money Online. How to avoid losing your hard earned money in online. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X