Home
ಟೆಕ್ ನೌಕರಿ

ಡ್ರೈವ್‌ ಮಾಡುವಾಗ ಮೊಬೈಲ್ ನಿಮ್ಮನ್ನು ಡಿಸ್ಟರ್ಬ್ ಮಾಡದಿರುವಂತೆ ಮಾಡುವುದು ಹೇಗೆ..?

ಸ್ಮಾರ್ಟ್‌ಫೋನ್ ಜಮಾನದಲ್ಲಿ ಟೆಕ್ಸ್ಟ್ ಮಾಡುವುದು, ಗೇಮ್ ಆಡುವುದು, ಬ್ರೌಸ್ ಮಾಡುವುದು ಹೆಚ್ಚಾಗುತ್ತಿದೆ. ಇದರಿಂದಾಗಿ ಅಪಘಾತಗಳು ಹೆಚ್ಚಾಗುತ್ತಿದೆ. ಇದು ಹೆಚ್ಚಾಗಿ ಕಾರು ಮತ್ತು ಬೈಕ್ ಸವಾರರಲ್ಲಿ ಹೆಚ್ಚು ಕಂಡುಬರುತ್ತಿದೆ.

By Srinidhi

ಇಂದಿನ ದಿನದಲ್ಲಿ ಡ್ರೈವ್ ಮಾಡುವ ಸಂದರ್ಭದಲ್ಲಿ ಮೊಬೈಲ್ ಬಳಸುವವ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿಂದೆ ಡ್ರೈವ್ ಮಾಡುವ ಸಂದರ್ಭದಲ್ಲಿ ಫೋನಿನಲ್ಲಿ ಮಾತನಾಡುವವರನ್ನು ಕಾಣಬಹುದಾಗಿತ್ತು. ಆದರೆ ಸ್ಮಾರ್ಟ್‌ಫೋನ್ ಜಮಾನದಲ್ಲಿ ಟೆಕ್ಸ್ಟ್ ಮಾಡುವುದು, ಗೇಮ್ ಆಡುವುದು, ಬ್ರೌಸ್ ಮಾಡುವುದು ಹೆಚ್ಚಾಗುತ್ತಿದೆ. ಇದರಿಂದಾಗಿ ಅಪಘಾತಗಳು ಹೆಚ್ಚಾಗುತ್ತಿದೆ. ಇದು ಹೆಚ್ಚಾಗಿ ಕಾರು ಮತ್ತು ಬೈಕ್ ಸವಾರರಲ್ಲಿ ಹೆಚ್ಚು ಕಂಡುಬರುತ್ತಿದೆ. ಈ ಅಭ್ಯಾಸದಿಂದ ಅಮಾಕರ ಜೀವಕ್ಕೆ ಕುತ್ತು ಬರುತ್ತಿದೆ.

ಡ್ರೈವ್‌ ಮಾಡುವಾಗ ಮೊಬೈಲ್ ನಿಮ್ಮನ್ನು ಡಿಸ್ಟರ್ಬ್ ಮಾಡದಿರುವಂತೆ ಮಾಡುವುದು ಹೇಗೆ..

ಓದಿರಿ: ಪ್ರೀಪೆಯ್ಡ್ ಗ್ರಾಹಕರಿಗೆ ಭರ್ಜರಿ ಲಾಭ: ಏರ್‌ಟೆಲ್‌ನಿಂದ ಪ್ರತಿ ನಿತ್ಯ 3GB ಡೇಟಾ!!

ವಾಹನ ಚಾಲನೆ ಮಾಡುವ ವೇಳೆ ಮೊಬೈಲ್‌ ಫೋನ್ ಬಳಕೆ ಮಾಡಬೇಡಿ ಎಂಬ ಸೂಚನೆಗೆ ಯಾವುದೇ ಬೆಲೆಯೂ ಇಲ್ಲ. ನಿಮ್ಮ ಜೀವ ನಿಮಗೆ ಅಮೂಲ್ಯವಾಗಿದೆಯೋ ಇಲ್ಲವೋ ತಿಳಿದಿಲ್ಲ ಆದರೆ ದಾರಿಯಲ್ಲಿ ತಮ್ಮ ಪಾಡಿಗೆ ಸಾಗುತ್ತಿರುವ ಜೀವಗಳು ಅಮೂಲ್ಯವಾದ್ದು, ನಿಮ್ಮ ತಪ್ಪಿನಿಂದ ಅವರ ಜೀವಕ್ಕೆ ಹಾನಿ ಮಾಡುವುದು ಸರಿಯಾದದ್ದು ಅಲ್ಲ. ಈ ಹಿನ್ನಲೆಯಲ್ಲಿ ಡ್ರೈವಿಂಗ್ ಸಮಯದಲ್ಲಿ ನಿಮ್ಮ ಫೋನ್‌ ಅನ್ನು ಬಳಸದಿರುವಂತೆ ಮಾಡುವುದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನ ಇದಾಗಿದೆ.

ಎರೋಪ್ಲೇನ್ ಮೊಡ್ ಆಕ್ಟಿವೇಟ್ ಮಾಡಿಕೊಳ್ಳಿ:

ಎರೋಪ್ಲೇನ್ ಮೊಡ್ ಆಕ್ಟಿವೇಟ್ ಮಾಡಿಕೊಳ್ಳಿ:

ಚಾಲನೆ ವೇಳೆ ಮೊಬೈಲ್‌ ನಿಮಗೆ ತೊಂದರೆ ಕೊಡದಂತೆ ಮಾಡಲು ಹಲವು ಆಯ್ಕೆಗಳಿವೆ. ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಎರೋಪ್ಲೇನ್ ಮೋಡ್ ಆಕ್ಟೀವೇಟ್ ಮಾಡಿಕೊಳ್ಳಿ. ಇಲ್ಲವಾದರೆ ಡ್ರೈವಿಂಗ್ ನಿಲ್ಲಿಸುವವ ವರೆಗೆ ನಿಮ್ಮ ಮೊಬೈಲ್‌ ಸೈಲೆಂಟ್‌ ಮೋಡ್‌ನಲ್ಲಿಡಿ.

ಡ್ರೈವಿಂಗ್ ಮೊಡ್:

ಡ್ರೈವಿಂಗ್ ಮೊಡ್:

ಇದಲ್ಲದೇ ಅನೇಕ ಫೋನ್‌ಗಳಲ್ಲಿ ಡ್ರೈವಿಂಗ್ ಮೊಡ್ ಸಹ ಲಭ್ಯವಿದ್ದು, ಇದನ್ನು ಆಕ್ಟೀವ್ ಮಾಡಿಕೊಳ್ಳುವುದರಿಂದ ಡ್ರೈವಿಂಗ್ ಸಮಯದಲ್ಲಿ ನಿಮ್ಮ ಫೋನ್ ನಿಷ್ಕ್ರಿಯವಾಗಿರಲಿದ್ದು, ನೀವು ಸುರಕ್ಷಿತವಾಗಿ ಚಾಲನೆ ಮಾಡಬಹುದಾಗಿದೆ.

ಡೇಟಾ ಆಫ್ ಮಾಡಿ:

ಡೇಟಾ ಆಫ್ ಮಾಡಿ:

ಹೆಚ್ಚಿನ ಪ್ರಮಾಣದಲ್ಲಿ ಆಪ್ ಗಳ ನೋಟಿಫಿಕೇಷನ್ ಗಳು ನಿಮ್ಮ ಡ್ರೈವಿಂಗ್ ಅನ್ನು ಡಿಸ್ಟರ್ಬ್ ಮಾಡುತ್ತವೆ. ನೀವು ಕಾರು ಚಾಲನೆ ಆರಂಭಿಸಿದ ಸಂದರ್ಭದಲ್ಲಿ ಡೇಟಾ ಆಫ್ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇಂತಹ ಸಂದರ್ಭದಲ್ಲಿ ಯಾವುದಾರರು ಕರೆ ಬಂದಲ್ಲಿ ಕಾರು ಇಲ್ಲವೇ ಬೈಕ್ ಅನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಮಾತನಾಡಿ, ಡ್ರೈವ್ ಮಾಡುತ್ತಿರುವ ಸಂದರ್ಭದಲ್ಲಿ ಕರೆಯನ್ನು ಸ್ವೀಕರಿಸಬೇಡಿ.

Best Mobiles in India

English summary
If you happen to have this problem, then try one of the following tips. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+