ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ನಲ್ಲಿ ವಾಟ್ಸ್ ಆಪ್ ಬ್ಯಾಕ್ ಅಪ್ ತೆಗೆದಿಟ್ಟುಕೊಳ್ಳುವುದು ಹೇಗೆ?
ವಾಟ್ಸ್ ಆಪ್ ನಮ್ಮೆಲ್ಲರ ಅಗತ್ಯತೆ ಮತ್ತು ಅನಿವಾರ್ಯತೆ ಆಗಿಬಿಟ್ಟಿದೆ. ಒಂದು ಅರ್ಧಗಂಟೆ ವಾಟ್ಸ್ ಆಪ್ ಬಿಟ್ಟಿರೋಕೆ ಆಗಲ್ಲ. ಯುವಕರಿಂದ ಹಿಡಿದು ಮುದುಕರವರೆಗೆ ಎಲ್ಲರಿಗೂ ವಾಟ್ಸ್ ಆಪ್ ನಲ್ಲಿ ಮಾತನಾಡ್ತಾರೆ.ಫೋಟೋ, ವೀಡಿಯೋ, ವಾಯ್ಸ್, ಆಡಿಯೋ ಕಾಲ್, ಹೀಗೆ ಏನಾದರೊಂದು ಚಟುವಟಿಕೆ ಮಾಡುತ್ತಲೇ ಇರುತ್ತಾರೆ.
ಒಂದು ವೇಳೆ ನೀವು ನಿಮ್ಮ ವಾಟ್ಸ್ ಆಪ್ ನ ಬ್ಯಾಕ್ ಅಪ್ ತೆಗೆದಿಟ್ಟುಕೊಂಡಿಲ್ಲ ಎಂದರೆ, ನಿಮ್ಮ ಫೋನ್ ಕಳೆದುಹೋದರೆ, ಅಥವಾ ನಿಮ್ಮ ಫೋನನ್ನು ಬದಲಿಸಬೇಕು ಎಂದುಕೊಂಡಿದ್ದರೆ, ಅಂತಹ ಸಂದರ್ಬದಲ್ಲಿ ನಿಮ್ಮ ವಾಟ್ಸ್ ಆಪ್ ನ ಎಲ್ಲಾ ಡಾಟಾವೂ ಕಳೆದುಹೋಗುತ್ತೆ, ಹಾಗಾಗಿ ನಿಮ್ಮ ವಾಟ್ಸ್ ಆಪ್ ನ ಡಾಟಾಗಳು ಯಾವಾಗಲೂ ಸೇಫ್ ಆಗಿರುವಂತೆ ನೋಡಿಕೊಳ್ಳಿ. ಅದಕ್ಕಾಗಿ ನೀವು ನಿಮ್ಮ ವಾಟ್ಸ್ ಆಪ್ ಚಾಟನ್ನು ಬ್ಯಾಕ್ ಅಪ್ ತೆಗೆದಿಟ್ಟುಕೊಳ್ಳಿ ಮತ್ತು ಮತ್ತೊಂದು ಡಿವೈಸ್ ಗೆ ರಿಸ್ಟೋರ್ ಮಾಡಲು ಆ ಮೂಲಕ ನಿಮಗೆ ಸಹಾಯವಾಗುತ್ತೆ.

ಹಾಗಾದ್ರೆ ವಾಟ್ಸ್ ಆಪ್ ಚಾಟನ್ನು ಬ್ಯಾಕ್ ಅಪ್ ತೆಗೆದಿಟ್ಟುಕೊಳ್ಳುವುದು ಹೇಗೆ? ಈ ಕೆಳಗಿನ ಹಂತಗಳನ್ನು ಅನುಸರಿಸಿ..
ಹಂತ -1: ವಾಟ್ಸ್ ಆಪ್ ಗೆ ತೆರಳಿ. ಪರದೆಯ ಮೇಲಿನ ಬಲ ಮೂಲೆಯಲ್ಲಿ ಲಂಬವಾಗಿರುವ ಚುಕ್ಕಿಗಳ ಐಕಾನ್ ಅನ್ನು ಟ್ಯಾಪ್ ಮಾಡಿ, ಸರ್ಚ್ ಆಯ್ಕೆಯ ಬಳಿ ಇದೆ, ಮತ್ತು ಸೆಟ್ಟಿಂಗ್ಸ್ ಗೆ ತೆರಳಿ..
ಹಂತ -2: ಸೆಟ್ಟಿಂಗ್ಸ್ ನಲ್ಲಿ , ಚಾಟ್ಸ್ ನ್ನು ಟ್ಯಾಪ್ ಮಾಡಿ, ಮತ್ತು ಚಾಟ್ಸ್ ಬ್ಯಾಕ್ ಅಪ್ ಗೆ ತೆರಳಿ. ಚಾಟ್ಸ್ ಬ್ಯಾಕ್ ಅಪ್ ಆಯ್ಕೆಯು ನಿಮಗೆ ಗುಗಲ್ ಡ್ರೈವ್ ನಲ್ಲಿ ಚಾಟ್ಸ್ ನ್ನು ಬ್ಯಾಕ್ ಅಪ್ ತೆಗೆದಿಟ್ಟುಕೊಳ್ಳಲು ಅವಕಾಶ ನೀಡುತ್ತದೆ. ಕೆಲವು Google Drive ಸೆಟ್ಟಿಂಗ್ಸ್ ಗಳನ್ನು ನೀವು ಮಾಡಬೇಕಾಗಿದ್ದು, ಅದನ್ನು ನೀವು ಸುಲಭದಲ್ಲೇ ಮಾಡಬಹುದು, ಉದಾಹರಣೆಗೆ ಚಾಟ್ ಗಳ ಬ್ಯಾಕ್ ಅಪ್ ಪ್ರತಿದಿನದ್ದಾ, ವಾರದ್ದಾ, ತಿಂಗಳಿನದ್ದಾ, ಅಥವಾ ನೀವು ಬ್ಯಾಕ್ ಅಪ್ ಬಟನ್ ಟ್ಯಾಪ್ ಮಾಡಿದಾಗ ಮಾತ್ರ ಬ್ಯಾಕ್ ಅಪ್ ಬೇಕಾ, ಅಥವಾ ಯಾವಾಗಲೂ ಬ್ಯಾಕ್ ಅಪ್ ಬೇಡವಾ ಎಂಬುದನ್ನು ಆಯ್ಕೆ ಮಾಡಿ. ಗೂಗಲ್ ಅಕೌಂಟ್ ನ್ನು ಆಯ್ಕೆ ಮಾಡುವುದು, ಬ್ಯಾಕ್ ಅಪ್ ಮೋಡನ್ನು ಮತ್ತು ವೀಡಿಯೋಗಳು ಬೇಕಾ ಇತ್ಯಾದಿಗಳನ್ನು ಆಯ್ಕೆ ಮಾಡಬೇಕು.
ಹಂತ -3: ಒಂದು ವೇಳೆ ನೀವು ವಾರಕ್ಕೆ ಒಮ್ಮೆ ಬ್ಯಾಕ್ ಅಪ್ ಬಯಸಿದ್ದೀರಾದರೆ, ಆಗ ವೀಕ್ಲಿ ಆಯ್ಕೆಯನ್ನು ಒತ್ತಿ.
ಹಂತ -4: ನೀವು ಬ್ಯಾಕ್ ಅಪ್ ತೆಗೆದುಕೊಳ್ಳಬೇಕಾಗಿರುವ ಗೂಗಲ್ ಅಕೌಂಟನ್ನೂ ಆಯ್ಕೆ ಮಾಡಿ,
ಹಂತ -5: ಬ್ಯಾಕಪ್ಗಾಗಿ ನಿಮ್ಮ ಆದ್ಯತೆಯ ಮೋಡ್ ಅನ್ನು ಆಯ್ಕೆ ಮಾಡಿ, ಇವೆರಡಲ್ಲಿ ಒಂದು - 'Wi-Fi’ ಅಥವಾ 'Wi-Fi or Cellular’.
ಹಂತ -6: ', ನೀವು ವೀಡಿಯೋಗಳನ್ನೂ ಬ್ಯಾಕ್ ಅಪ್ ತೆಗೆದುಕೊಳ್ಳಲು ಇಚ್ಛಿಸುತ್ತೀರಾದರೆ Include videos’ ಆಯ್ಕೆಯನ್ನು ಸೆಲೆಕ್ಟ್ ಮಾಡಿ . ವೀಡಿಯೋಗಳನ್ನು ಸೇರಿಸಿಕೊಳ್ಳುವುದು ಆಪ್ಶನಲ್ ಆಗಿರುತ್ತದೆ. ವಾಟ್ಸ್ ಆಪ್ ನಲ್ಲಿ ಹಂಚಿಕೊಳ್ಳಲಾದ ವೀಡಿಯೋಗಳೂ ನಿಮಗೆ ಬೇಕಿದ್ದರೆ ಅದನ್ನು ಆಯ್ಕೆ ಮಾಡಬಹುದಾ?
ಹಂತ -7: ಒಮ್ಮೆ ನೀವು ಈ ಎಲ್ಲಾ ಗೂಗಲ್ ಡ್ರೈವ್ ಸೆಟ್ಟಿಂಗ್ ನ್ನು ಪೂರ್ಣಗೊಳಿಸಿದ ನಂತರ, ಹಸಿರು ಬಣ್ಣದಲ್ಲಿರುವ ಬ್ಯಾಕ್ ಅಪ್ ಐಕಾನ್ ನ್ನು ಟ್ಯಾಪ್ ಮಾಡಿ.,ಇದು ನಿಮ್ಮ ಎಲ್ಲಾ ಮೆಸೇಜ್ ಗಳನ್ನು ಗೂಗಲ್ ಡ್ರೈವ್ ಗೆ ಬ್ಯಾಕ್ ಅಪ್ ಮಾಡಲಿದೆ.
ಇದು ನಿಮ್ಮ ವಾಟ್ಸ್ ಆಪ್ ಚಾಟನ್ನು ಬ್ಯಾಕ್ ಅಪ್ ಮಾಡುವ ವಿಧಾನ, ಈ ವಿಧಾನದಲ್ಲಿ ನಿಮ್ಮ ಎಲ್ಲಾ ಚಾಟ್ ಗಳು ಗೂಗಲ್ ಡ್ರೈವ್ ನಲ್ಲಿ ಸೇಫ್ ಆಗಿ ಇರಲಿದೆ.
ಒಂದು ವೇಳೆ ನೀವು ನಿಮ್ಮ ಫೋನನ್ನು ಬದಲಿಸುತ್ತಿದ್ದೀರಿ ಎಂದಿಟ್ಟುಕೊಳ್ಳೋಣ, ಹಾಗಾದ್ರೆ ನೀವು ಬ್ಯಾಕ್ ಅಪ್ ತೆಗೆದುಕೊಂಡ ಚಾಟ್ ಗಳನ್ನು ರಿಸ್ಟೋರ್ ಮಾಡುವುದು ಹೇಗೆ?

ನೀವು ಬ್ಯಾಕ್ ಅಪ್ ತೆಗೆದುಕೊಂಡ ಚಾಟ್ ಗಳನ್ನು ರಿಸ್ಟೋರ್ ಮಾಡುವ ಸಿಂಪಲ್ ಹಂತಗಳು ಇಲ್ಲಿವೆ ನೋಡಿ..
ಹಂತ -1: ವಾಟ್ಸ್ ಆಪ್ ನ ಹೊಸ ವರ್ಷನ್ ನ್ನು ಇನ್ಸ್ಟಾಲ್ ಮಾಡಿ. ಇನ್ಸ್ಟಾಲೇಷನ್ ಮುಗಿದ ನಂತ್ರ, ವಾಟ್ಸ್ ಆಪ್ ಗೆ ನಿಮ್ಮ ಕಾಂಟ್ಯಾಕ್ಟ್ , ಫೋಟೋ, ಮೀಡಿಯಾ, ಮತ್ತು ಫೈಲ್ ಗಳನ್ನು ಆಕ್ಸಿಸ್ ಮಾಡುವ ಅನುಮತಿ ನೀಡಿ. ಹೊಸ ವರ್ಷನ್ ಇನ್ಸ್ಟಾಲ್ ಮಾಡುವುದು ಬಹಳ ಮುಖ್ಯ ಯಾಕೆಂದರೆ ನೀವು ಮತ್ತೊಂದು ಫೋನ್ ಬಳಕೆ ಮಾಡಲು ಇಚ್ಛಿಸುತ್ತಿದ್ದರೆ, ( ಹೊಸತಲ್ಲ) ಆಗ ವಾಟ್ಸ್ ಆಪ್ ಈಗಾಗಲೇ ಇನ್ಸ್ಟಾಲ್ ಆಗಿದ್ದರೆ, ನಿಮ್ಮ ಚಾಟ್ ಗಳು ಬ್ಯಾಕ್ ಅಪ್ ಆಗುವುದಿಲ್ಲ. ಒಂದು ವೇಳೆ ವಾಟ್ಸ್ ಆಪ್ ಈಗಾಗಲೇ ಇದ್ದರೆ, ಹಳೆಯ ವರ್ಷನ್ ನ್ನು ಡಿಲೀಟ್ ಮಾಡಿ ಮತ್ತು ಹೊಸ ವರ್ಷನ್ ನ ವಾಟ್ಸ್ ಆಪ್ ನ್ನನು ಮುಂದಿನ ಹಂತಕ್ಕಾಗಿ ಇನ್ಸ್ಟಾಲ್ ಮಾಡಿ.
ಹಂತ -2: ನಿಮ್ಮ ಫೋನ್ ನಂಬರ್ ನ್ನು ಎಂಟರ್ ಮಾಡುವ ಮುಖಾಂತರ ಅದನ್ನು ವೆರಿಫೈ ಮಾಡಿ.6 ನಂಬರ್ ನ ಒಂದು ವೆರಿಫಿಕೇಷನ್ ಕೋಡ್ ಎಸ್ ಎಂ ಎಸ್ ಮುಖಾಂತರ ಲಭ್ಯವಾಗಲಿದೆ,. ಅದು ಅಟೋ ವೆರಿಫೈ ಆಗಲಿದೆ. ಆದರೆ ಇದಕ್ಕಾಗಿ ನೀವು ವಾಟ್ಸ್ ಆಪ್ ಗೆ ಎಸ್ ಎಂ ಎಸ್ ಮೆಸೇಜ್ ಗಳನ್ನು ಕಳುಹಿಸಲು ಅನುಮತಿ ನೀಡಬೇಕಾಗಿರುತ್ತದೆ.
ಹಂತ -3: ನಿಮ್ಮ ನಂಬರ್ ಅಟೋಮ್ಯಾಟಿಕಲಿ ವೆರಿಫೈ ಆದ ನಂತರ,ಸ್ಕ್ರೀನ್ ಜೊತೆಗೆ 'Restore backup’ ಅನ್ನುವ ಪರದೆಯೊಂದು ಬರಲಿದ್ದು, ಅದು ನಿಮಗೆ ನಿಮ್ಮ ಬ್ಯಾಕ್ ಅಪ್ ಇರುವುದನ್ನು ಸೂಚಿಸುತ್ತದೆ. 'Restore’ ನ್ನು ಟ್ಯಾಪ್ ಮಾಡಿ. ಹೀಗೆ ಮಾಡುವುದರಿಂದಾಗಿ ಬ್ಯಾಕ್ ಅಪ್ ಆಗಿರುವ ಮೆಸೇಜ್ ಗಳೆಲ್ಲವೂ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ರಿಸ್ಟೋರ್ ಆಗಲಿದೆ. ಹಂತ-3 ಕ್ಕಾಗಿ ನೀವು ಬ್ಯಾಕ್ ಅಪ್ ಇಟ್ಟಿರುವ ಗೂಗಲ್ ಅಕೌಂಟಿಗೆ ಹೊಸ ಫೋನಿನಲ್ಲಿ ಲಾಗಿನ್ ಆಗಿರಬೇಕಾಗುತ್ತದೆ.
Step-4: ನೆಕ್ಸ್ಟ್ ನ್ನು ಟ್ಯಾಪ್ ಮಾಡಿ.
Step-5: ನಿಮ್ಮ 'Profile info’ ಪರದೆಯಲ್ಲಿ ಹೆಸರನ್ನು ಟೈಪ್ ಮಾಡಿ.
Step-6: ಇನೀಶಿಯಲೈಸೇಷನ್ ಆಗಲು ಇದು ಕೆಲವು ಸೆಕೆಂಡ್ ಗಳನ್ನು ತೆಗೆದುಕೊಳ್ಳಬಹುದು. ಇಷ್ಟು ಮಾಡಿದರೆ ಮುಗೀತು.,. ನಿಮ್ಮ ಮುಂದೆ ನಿಮ್ಮೆಲ್ಲ ವಾಟ್ಸ್ ಆಪ್ ನ ಮೆಸೇಜ್ ಗಳು, ಹಳೆಯ ಮೆಸೇಜ್ ಗಳನ್ನು ಒಳಗೊಂಡ ಪರದೆಯು ತೆರೆದಿರುತ್ತದೆ.


Click it and Unblock the Notifications








