ಅಮೆಜಾನ್ ಪ್ರೈಮ್ ಸದಸ್ಯರಾಗಿ ಜಾಸ್ತಿನೇ ಲಾಭ ಪಡೆಯಿರಿ..!
ಕಡಿಮೆ ಬೆಲೆಗೆ ಸಿಗುತ್ತೆ ಅಂದ್ರೆ ಯಾರಿಗೆ ತಾನೆ ಯಾವ ವಸ್ತು ಬೇಡ ಅಂತಾರೆ ಹೇಳಿ. ಅದೇ ಕಾರಣಕ್ಕೆ ಪ್ರತಿಯೊಬ್ಬರೂ ಕೂಡ ರಿಯಾಯಿತಿಗಾಗಿ ಕಾಯುತ್ತಿರುತ್ತಾರೆ. ಒಂದಕ್ಕೆ ಒಂದು ಉಚಿತ, ಒಂದಕ್ಕೆ ಇನ್ನೊಂದು ಕೊಡುಗೆ ಇಂತಹ ಲಾಭಗಳನ್ನು ಪ್ರತಿಯೊಬ್ಬ ಗ್ರಾಹಕನೂ ಬಯಸುತ್ತಾನೆ. ಅದೇ ಕಾರಣಕ್ಕೆ ಇತ್ತೀಚಿಗೆ ಇ ಕಾಮರ್ಸ್ ವೆಬ್ ಸೈಟ್ ಗಳು ಇಂತಹ ಆಫರ್ ಗಳನ್ನು ನೀಡಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ.

ಇ-ಕಾಮರ್ಸ್ ವೆಬ್ ಸೈಟ್ ಅಮೇಜಾನ್ ವಿಶೇಷ ಮಾರಾಟ ಆರಂಭವಾಗಿದೆ ಮತ್ತು ಇದರ ಲಾಭವನ್ನು ಪ್ರೈಮ್ ಸದಸ್ಯರು ಪಡೆದುಕೊಳ್ಳಬಹುದಾಗಿದೆ.36 ಘಂಟೆಗಳ ಈ ಮಾರಾಟವು ಮಧ್ಯಾಹ್ನ 12 ಗಂಟೆಗೆ ಆರಂಭವಾಗಿದೆ. ಜುಲೈ 17 ರ ಮಧ್ಯರಾತ್ರಿವರೆಗೆ ಈ ವಿಶೇಷ ಮಾರಾಟ ನಡೆಯಲಿದ್ದು ಇದರ ಲಾಭಗಳು ಗ್ರಾಹಕರು ಪಡೆದುಕೊಳ್ಳಬಹುದು. ಆದರೆ ಯಾರಿಗೆ ಈ ವಿಚಾರ ತಿಳಿದಿಲ್ಲವೋ ಅವರಿಗಾಗಿ ಹೇಳುತ್ತಿದ್ದೇವೆ, ಇದು ಕೇವಲ ಒಂದು ದಿನದ ಮಾರಾಟವಲ್ಲ ಬದಲಾಗಿ ಯುಎಸ್ ಮೂಲದ ಇ-ಟೈಲರ್ ಪ್ರೈಮ್ ಸದಸ್ಯರಿಗಾಗಿ ಮಾಡುತ್ತಿರುವ ವರ್ಷದ ಮಾರಾಟವಾಗಿದೆ. ಸುಮಾರು 200 ಹೊಸ ವಸ್ತುಗಳು ಈ ಮಾರಾಟದಲ್ಲಿ ಬಿಡುಗಡೆಗೊಳ್ಳುತ್ತಿದೆ.

ಪ್ರೈಮ್ ಸದಸ್ಯರಾದರೆ ನಿಮಗೇನು ಸಿಗುತ್ತದೆ?
ಪ್ರೈಮ್ ಸದಸ್ಯತ್ವ ಪಡೆದುಕೊಂದರೆ ನಿಮಗೆ ಹೊಸದಾಗಿ ಬಿಡುಗಡೆಗೊಳ್ಳುವ ಸೇವೆಗಳ ಲಭ್ಯತೆ ಇರುತ್ತದೆ . ಉದಾಹರಣೆಗೆ ಉಚಿತ ಕೊಡುಗೆಗಳು, ಕೆಲವು ವಸ್ತುಗಳ ಮೇಲೆ ವೇಗವಾದ ವಿತರಣೆ ಇತ್ಯಾದಿ ಸವಲತ್ತುಗಳು ಅಮೇಜಾನ್ ನಿಂದ ಲಭ್ಯವಾಗುತ್ತದೆ.ಜಾಹಿರಾತು ರಹಿತ ಮ್ಯೂಸಿಕ್, ಅನಿಯಮಿತ ವೀಡಿಯೋ ಸ್ಟ್ರೀಮಿಂಗ್ ಇತ್ಯಾದಿಗಳು ಸಿಗುತ್ತದೆ. ಇದನ್ನು ಹೊರತು ಪಡಿಸಿ, ಗ್ರಾಹಕರಿಗೆ ವಿಶೇಷ ಉತ್ಪನ್ನಗಳ ಮೇಲಿನ ರಿಯಾಯಿತಿ ಮತ್ತು ಲೈಟನಿಂಗ್ ಡೀಲ್ ಗಳಿಗೆ ಪ್ರವೇಶತೆ ಲಭ್ಯವಾಗುತ್ತದೆ. ಒಟ್ಟಾರೆ ಉಳಿತಾಯಕ್ಕಾಗಿ, ಲಾಭಕ್ಕಾಗಿ ಸದಸ್ಯತ್ವ ಪಡೆದುಕೊಳ್ಳುವುದು ಒಳ್ಳೆಯದು.

ಅಮೇಜಾನ್ ಪ್ರೈಮ್ ಸದಸ್ಯರಾಗುವುದು ಹೇಗೆ?
ಎಲ್ಲಾ ರೀತಿಯ ಲಾಭಗಳನ್ನು ಪಡೆಯುವ ಉದ್ದೇಶದಿಂದಾಗಿ ಅಮೇಜಾನ್ ಪ್ರೈಮ್ ಸದಸ್ಯತ್ವವನ್ನು ಪಡೆದುಕೊಳ್ಳುವುದು ಒಳ್ಳೆಯದು. ಗ್ರಾಹಕರು ಕಂಪೆನಿ ನೀಡಿರುವ ಎರಡು ರೀತಿಯ ಪ್ಲಾನ್ ಗಳನ್ನು ಖರೀದಿಸಲು ಅವಕಾಶವಿರುತ್ತದೆ. ಒಂದ ಮಾಸಿಕ ಪ್ಲಾನ್ ಮತ್ತೊಂದು ವಾರ್ಷಿಕ ಸದಸ್ಯತ್ವ. ಹೌದು ಮಾಸಿಕ ಸದಸ್ಯತ್ವ ಪಡೆಯಲು ಇಚ್ಛಿಸುವ ಗ್ರಾಹಕರು 129 ರುಪಾಯಿ ಪಾವತಿ ಮಾಡಿ ಖರೀದಿ ಮಾಡಬಹುದು. ಅದುವೇ ವಾರ್ಷಿಕ ಪ್ರೈಮ್ ಸದಸ್ಯರಾಗಲು ಇಚ್ಛಿಸುವವರು 999 ರುಪಾಯಿ ಪಾವತಿ ಮಾಡಬೇಕಾಗುತ್ತದೆ. ಮಾಸಿಕ ಸದಸ್ಯತ್ವ ಪಡೆಯುವ ಗ್ರಾಹಕರು ಅಗತ್ಯವಿದ್ದರೆ ಪ್ರತಿ ತಿಂಗಳು ತಮ್ಮ ಚಂದಾದಾರಿಕೆಯನ್ನು ನವೀಕರಣಗೊಳಿಸಿಕೊಳ್ಳಬೇಕಾಗುತ್ತದೆ.

ಅಮೇಜಾನ್ ಪ್ರೈಮ್ ಸದಸ್ಯತ್ವ ಪಡೆಯಲು ಹೀಗೆ ಮಾಡಬಹುದು.
1. ಅಮೇಜಾನ್ ಪ್ರೈಮ್ ಪೇಜ್ ಗೆ ತೆರಳಿ
2. ಸೈನ್ ಅಪ್ ಬಟನ್ ನ್ನು ಕ್ಲಿಕ್ ಮಾಡಿ ಅಥವಾ ಟ್ಯಾಪ್ ಮಾಡಿ.
3. ಸ್ಕ್ರೀನ್ ನಲ್ಲಿ ಬರುವ ಸೂಚನೆಯನ್ನು ಪಾಲಿಸುತ್ತಾ ಸಾಗಿ ಮತ್ತು ಪಾವತಿಯನ್ನು ಪೂರ್ಣಗೊಳಿಸಿ,
ಮಾಸಿಕ ಅಥವಾ ವಾರ್ಷಿಕ ಚಂದಾದಾರಿಕೆಯನ್ನು ಒಂದು ವೇಳೆ ನೀವು ನಿಮ್ಮ ಪ್ಲಾನ್ ನ್ನು ಬದಲಾಯಿಸಬೇಕು ಅಥವಾ ನಿಲ್ಲಿಸಬೇಕು ಎಂದುಕೊಂಡಿದ್ದರೆ, ಈ ಹಂತಗಳನ್ನು ಅನುಸರಿಸಿ.

ಪ್ರೈಮ್ ಸದಸ್ಯತ್ವವನ್ನು ಪೂರ್ಣಗೊಳಿಸುವುದು ಹೇಗೆ?
ಯಾವುದೋ ಕಾರಣಕ್ಕೆ ನೀವು ಪ್ರೈಮ್ ಸದಸ್ಯತ್ವವನ್ನು ಪೂರ್ಣಗೊಳಿಸಬೇಕು ಅಂದುಕೊಂಡಿದ್ದರೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.
1.Manage Prime Membership ಇಲ್ಲಿಗೆ ತೆರಳಿ
2. ಎಂಡ್ ಮೆಂಬರ್ ಶಿಪ್ ಅನ್ನು ಕ್ಲಿಕ್ ಮಾಡಿ.
3. ಪರದೆಯ ಮೇಲೆ ಬರುವ ಮಾಹಿತಿಗಳನ್ನು ಅನುಸರಿಸುತ್ತಾ ಸಾಗಿ.
ಅಮೇಜಾನ್ ಪ್ರೈಮ್ ಡೇ ಸೇಲ್ ಈಗಾಗಲೇ ಆರಂಭಗೊಂಡಿದೆ. ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.


Click it and Unblock the Notifications








