Home
ಟೆಕ್ ನೌಕರಿ

ಹ್ಯಾಕರ್‌ಗಳಿಗೆ ಹೆಚ್ಚುತ್ತಿವೆ ಲಕ್ಷ ಲಕ್ಷ ಸಂಬಳದ ಉದ್ಯೋಗವಕಾಶಗಳು!!

ಹ್ಯಾಕಿಂಗ್ ಮಾಡುವುದು ಗುರುತರ ಅಪರಾಧವಾಗಿರುವುದರಿಂದ ಅವರಿಗೆ ಜೈಲೂಟ ಗ್ಯಾರಂಟಿ ಎಂದರೆ ನಿಮ್ಮ ಊಹೆ ತಪ್ಪು. ಏಕೆಂದರೆ, ಹ್ಯಾಕರ್‌ಗಳ ಕೈಗೆ ತಿಂಗಳಿಗೆ ಲಕ್ಷ ಲಕ್ಷ ಸಂಬಳ ಕೊಟ್ಟು ಕೆಲಸಕ್ಕೆ ಇಟ್ಟುಕೊಳ್ಳುವ ಕಂಪೆನಿಗಳಿವೆ.!

By Bhaskar N J

ಹ್ಯಾಕರ್‍ಗಳನ್ನು ಹಿಡಿಯಲು ನೀವು ಹ್ಯಾಕರ್ ಆಗಬೇಕು ಎನ್ನುವುದು ಟೆಕ್ ಜಗತ್ತಿನಲ್ಲಿ ಪ್ರಚಲಿತದಲ್ಲಿರುವ ಮಾತು.! ಆದರೆ, ಹ್ಯಾಕಿಂಗ್ ಮಾಡುವುದು ಗುರುತರ ಅಪರಾಧವಾಗಿರುವುದರಿಂದ ಅವರಿಗೆ ಜೈಲೂಟ ಗ್ಯಾರಂಟಿ ಎಂದರೆ ನಿಮ್ಮ ಊಹೆ ತಪ್ಪು. ಏಕೆಂದರೆ, ಹ್ಯಾಕರ್‌ಗಳ ಕೈಗೆ ತಿಂಗಳಿಗೆ ಲಕ್ಷ ಲಕ್ಷ ಸಂಬಳ ಕೊಟ್ಟು ಕೆಲಸಕ್ಕೆ ಇಟ್ಟುಕೊಳ್ಳುವ ಕಂಪೆನಿಗಳಿವೆ.!

ಹೌದು, ಕಂಪ್ಯೂಟರ್ ಜಗತ್ತನ್ನು ಬೆಚ್ಚಿಬೀಳಿಸುವ ಸಾವಿರಾರು ಹ್ಯಾಕರ್‍ಗಳು ಜಗತ್ತಿನಲ್ಲಿದ್ದಾರೆ.ಸಾವಿರಾರು ಕೋಟಿ ಕೋಟಿ ವ್ಯವಹಾರ ನಡೆಸುವ ಕಂಪನಿಗಳು ಇಂತಹ ಹ್ಯಾಕರ್‍ಗಳಿಗೆ ಭಯಪಡುತ್ತಿವೆ. ಹಾಗಾಗಿ, ಇಂತಹ ಹ್ಯಾಕರ್‍ಗಳಿಂದ ತಮ್ಮ ಸಂಸ್ಥೆಯನ್ನು ಪಾರು ಮಾಡಲು ಕಂಪನಿಗಳು, ಬ್ಯಾಂಕ್‍ಗಳು ನೈತಿಕ ಹ್ಯಾಕರ್‍ಗಳನ್ನು ನೇಮಕ ಮಾಡಿಕೊಳ್ಳುತ್ತಿವೆ.!

ಹ್ಯಾಕರ್‌ಗಳಿಗೆ ಹೆಚ್ಚುತ್ತಿವೆ ಲಕ್ಷ ಲಕ್ಷ ಸಂಬಳದ ಉದ್ಯೋಗವಕಾಶಗಳು!!

ತನ್ನ ಕಂಪ್ಯೂಟರ್ ವ್ಯವಸ್ಥೆ ಅಥವಾ ನೆಟ್‍ವರ್ಕ್ ವ್ಯವಸ್ಥೆಯನ್ನು ಬಲಪಡಿಸಲು ಹ್ಯಾಕರ್‍ಗಳನ್ನು ಎಲ್ಲಾ ಕಂಪೆನಿಗಳು ನೇಮಕ ಮಾಡಿಕೊಳ್ಳುತ್ತವೆ. ಈ ವ್ಯಕ್ತಿಯು ಇತರ ಕಳ್ಳ ಹ್ಯಾಕರ್‍ಗಳು ಬಳಸುವ ಹಲವು ತಂತ್ರಗಳನ್ನೇ ಬಳಸಿ ಆ ಸಂಸ್ಥೆಯ ಕಂಪ್ಯೂಟರ್/ನೆಟ್‍ವರ್ಕ್ ವ್ಯವಸ್ಥೆಯನ್ನು ಸುರಕ್ಷಿತವಾಗಿ ಇಡುವುದರಿಂದ ಇವರನ್ನು ನೈತಿಕ ಹ್ಯಾಕರ್‌ಗಳು ಎಂದು ಕರೆಯಲಾಗುತ್ತದೆ.

ಹ್ಯಾಕಿಂಗ್ ಎಂದರೇನು?

ಹ್ಯಾಕಿಂಗ್ ಎಂದರೇನು?

ಕಂಪ್ಯೂಟರ್ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಅನ್ನು ಅದನ್ನು ನಿರ್ಮಿಸಿದವರ ಪ್ರಮುಖ ಉದ್ದೇಶಕ್ಕೆ ಬದಲಾಗಿ ಅನ್ಯವ್ಯಕ್ತಿ ತನಗೆ ಬೇಕಾದಂತೆ ಬದಲಾಯಿಸುವುದನ್ನು ಸರಳವಾಗಿ ಕಂಪ್ಯೂಟರ್ ಹ್ಯಾಕಿಂಗ್ ಎನ್ನಬಹುದು. ಕಂಪ್ಯೂಟರ್ ಸಾಫ್ಟ್‌ವೇರ್‌ ಅಪೂರ್ಣಗೊಂಡಿದ್ದರೆ ಹ್ಯಾಕರ್‍ಗಳ ದಾಳಿಗೆ ತುತ್ತಾಗುತ್ತವೆ ಎಂಬುದು ಕಂಪ್ಯೂಟರ್ ಜಗತ್ತಿನ ಬಹುತೇಕ ಸತ್ಯ.!

ನೈತಿಕ ಹ್ಯಾಕರ್‌ಗೆ ಉತ್ತಮ ಬೇಡಿಕೆ!

ನೈತಿಕ ಹ್ಯಾಕರ್‌ಗೆ ಉತ್ತಮ ಬೇಡಿಕೆ!

ಕಂಪನಿಯ ಆನ್‍ಲೈನ್ ಭದ್ರತೆಯನ್ನು ಹೆಚ್ಚಿಸಿಕೊಳ್ಳಲು ಸಹ ಈ ಹ್ಯಾಕರ್‍ಗಳು ಕಾರಣವಾಗುತ್ತಾರೆ. ಕೆಲವೊಮ್ಮೆ ದುರುದ್ದೇಶಪೂರಿತ ಹ್ಯಾಕರ್‍ಗಳು ಕಂಪನಿಯೊಂದರ ಲಕ್ಷಾಂತರ ಬಳಕೆದಾರರ ಮಾಹಿತಿಯನ್ನೆಲ್ಲ ಕದಿಯುವುದುಂಟು. ಇಂತಹ ಅಪಾಯದಿಂದ ಪಾರಾಗಲು ಕಂಪೆನಿಗಳು ನೈತಿಕ ಹ್ಯಾಕರ್‌ಗಳ ಮೊರೆಹೋಗಿವೆ.

ಎಥಿಕಲ್ ಹ್ಯಾಕರ್ ಆಗುವುದು ಹೇಗೆ?

ಎಥಿಕಲ್ ಹ್ಯಾಕರ್ ಆಗುವುದು ಹೇಗೆ?

ಕಂಪ್ಯೂಟರ್ ಇಂಜಿನಿಯರಿಂಗ್ ಕಲಿತಷ್ಟೆ ಸುಲಭವಾಗಿ ಹ್ಯಾಕಿಂಗ್ ಅನ್ನು ಸಹ ಕಲಿಯಬಹುದು.! ನೀವು ಒಂದು ರಾತ್ರಿಯಲ್ಲಿ ಹ್ಯಾಕರ್ ಆಗಲು ಸಾಧ್ಯವಿಲ್ಲ.ಕಂಪ್ಯೂಟರ್ ಅಪರೇಟಿಂಗ್ ಸಿಸ್ಟಮ್, ಅದರ ಕಾರ್ಯಚಟುವಟಿಕೆಗಳು, ಕಂಪ್ಯೂಟರ್ ನೆಟ್‍ವರ್ಕ್‍ಗಳು, ಕಂಪ್ಯೂಟರ್ ಭದ್ರತೆ ಇತ್ಯಾದಿಗಳ ಬಗ್ಗೆ ಉತ್ತಮ ಮಾಹಿತಿ, ಜ್ಞಾನವಿದ್ದರೆ ನೀವು ನೈತಿಕ ಹ್ಯಾಕಿಂಗ್ ಅನ್ನು ಕಲಿಯಬಹುದು.

ಉದ್ಯೋಗಾವಕಾಶಗಳು!

ಉದ್ಯೋಗಾವಕಾಶಗಳು!

ಎಥಿಕಲ್ ಹ್ಯಾಕರ್‍ಗಳಿಗೆ ಸೆಕ್ಯೂರಿಟಿ ಥ್ರೀಟ್ಸ್, ರಿಸ್ಕ್ ಮತ್ತು ಕೌಂಟರ್‍ಮೆಷರ್‍ಗಳ ಜ್ಞಾನ ಇದ್ದರೆ ಸಾಕು ಹೆಚ್ಚಿನ ಕಂಪನಿಗಳು ಪ್ರತಿಭಾನ್ವಿತ ನೈತಿಕ ಹ್ಯಾಕರ್‍ಗಳಿಗೆ ತಮ್ಮ ಕಂಪನಿಯಲ್ಲಿ ಸ್ಥಾನ ನೀಡುತ್ತವೆ. ಇತ್ತೀಚಿಗೆ ನೀವು ಇಂಜಿನಿಯರಿಂಗ್ ಮುಗಿಸಿದ್ದರೂ ಸಹ ಐಟಿ ಸೆಕ್ಯೂರಿಟಿ ಅನುಭವ ಇಲ್ಲದೆ ಎಥಿಕಲ್ ಹ್ಯಾಕರ್ ಆಗಿ ಕೆಲಸ ಗಿಟ್ಟಿಸಿಕೊಳ್ಳುವುದು ಕಷ್ಟ.!

Best Mobiles in India

English summary
Not all hackers do evil work. Here's what you need to know to use your hacking skills to do good. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+