Home
ಟೆಕ್ ನೌಕರಿ

ಆಂಡ್ರಾಯ್ಡ್ ಫೋನ್ ಗಳಲ್ಲಿ ಫೋನ್ ನಂಬರ್ ಬ್ಲಾಕ್ ಮಾಡುವುದು ಹೇಗೆ ಗೊತ್ತಾ?

ನಮ್ಮ ದೈನಂದಿನ ಬದುಕಿನಲ್ಲಿ ಫೋನ್ ಕಾಲ್ ಗಳು ಬಹಳ ಮುಖ್ಯ ಪಾತ್ರ ವಹಿಸುತ್ತವೆ ಅನ್ನುವುದೇನೋ ನಿಜ. ಆದರೆ ಕೆಲವು ದಿನ ಈ ಟೆಲಿಮಾರ್ಕೆಟಿಂಗ್ ಮಂದಿ ಸೇರಿದಂತೆ ಕೆಲವು ಕರೆಗಳು ನಿಜಕ್ಕೂ ತಲೆನೋವಾಗಿರುತ್ತದೆ. ಯಾಕಾದ್ರೂ ನಮ್ಮ ಮೊಬೈಲಿಗೆ ಈ ಕರೆ ಬರುತ್ತದೆಯೋ ಎಂದೆನಿಯೋ ಕರೆಗಳನ್ನು ನಿಮ್ಮ ಫೋನ್ ನಲ್ಲಿ ಬ್ಲಾಕ್ ಮಾಡಿ ಶಾಶ್ವತವಾಗಿ ಆ ಫೋನ್ ನಂಬರಿನಿಂದ ಕರೆಗಳು ಬರದಂತೆ ಮಾಡುವುದಕ್ಕೆ ಸಾಧ್ಯವಾಗುತ್ತದೆ.

ಆಂಡ್ರಾಯ್ಡ್ ಫೋನ್ ಗಳಲ್ಲಿ ಫೋನ್ ನಂಬರ್ ಬ್ಲಾಕ್ ಮಾಡುವುದು ಹೇಗೆ ಗೊತ್ತಾ?

ಆಂಡ್ರಾಯ್ಡ್ ಫೋನ್ ನಲ್ಲಿ ಕರೆಗಳನ್ನು ಬರದಂತೆ ಫೋನ್ ನಂಬರ್ ನ್ನು ಬ್ಲಾಕ್ ಮಾಡುವುದು ಹೇಗೆ ಎಂಬ ಬಗ್ಗೆ ಹಂತಹಂತವಾಗಿರುವ ಮಾಹಿತಿ ಇಲ್ಲಿದೆ ನೋಡಿ.

ಮೊದಲು ಗಮನಿಸಬೇಕಾಗಿರುವ ಅಂಶಗಳು:

ಮೊದಲು ಗಮನಿಸಬೇಕಾಗಿರುವ ಅಂಶಗಳು:

ವಿಭಿನ್ನ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ತಯಾರಕರು ತಮ್ಮದೇ ಆದ ಗ್ರಾಹಕ ಇಂಟರ್ ಫೇಸ್ ನ್ನು ಹೊಂದಿರುತ್ತಾರೆ ಮತ್ತು ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ನ್ನು ಅಳವಡಿಸಿರುತ್ತಾರೆ. ಹಾಗಾಗಿ ಪ್ರತಿಯೊಂದರಲ್ಲಿ ವಿಭಿನ್ನ ರೀತಿಯಲ್ಲಿ ಕಾಲ್ ಬ್ಲಾಕಿಂಗ್ ಫೀಚರ್ ನ್ನು ಇಂಪ್ಲಿಮೆಂಟ್ ಮಾಡಲಾಗಿರುತ್ತದೆ. ಹಾಗಾಗಿ ನಾವಿಲ್ಲ ಬ್ರ್ಯಾಂಡ್ ಆಧಾರದಲ್ಲಿ ವಿಭಿನ್ನ ಸ್ಮಾರ್ಟ್ ಫೋನ್ ಗಳು ಈ ಫೀಚರ್ ನ್ನು ಹೇಗೆ ಅಳವಡಿಸಿರುತ್ತದೆ ಎಂಬುದನ್ನು ನೀವು ಗಮನಿಸಿಕೊಳ್ಳಬಹುದು.

ಸ್ಟಾಕ್ ಆಂಡ್ರಾಯ್ಡ್(ಆಂಡ್ರಾಯ್ಡ್ ಒನ್) ಸ್ಮಾರ್ಟ್ ಫೋನ್ ಗಳು :

ಸ್ಟಾಕ್ ಆಂಡ್ರಾಯ್ಡ್(ಆಂಡ್ರಾಯ್ಡ್ ಒನ್) ಸ್ಮಾರ್ಟ್ ಫೋನ್ ಗಳು :

ಒಂದು ವೇಳೆ ನೀವು ಗೂಗಲ್ ಪಿಕ್ಸಲ್ ಅಥವಾ ಯಾವುದೇ ಇತರೆ ಸ್ಟಾಕ್ ವರ್ಷನ್ ನ ಆಂಡ್ರಾಯ್ಡ್ ಫೋನ್ ಬಳಕೆ ಮಾಡುತ್ತಿದ್ದಲ್ಲಿ ಎರಡು ರೀತಿಯಲ್ಲಿ ಫೋನ್ ನಂಬರ್ ನ್ನು ಬ್ಲಾಕ್ ಮಾಡುವುದಕ್ಕೆ ಅವಕಾಶವಿರುತ್ತದೆ.

1.ಫೋನ್ ಆಪ್ ಗೆ ತೆರಳಿ ಮತ್ತು ಕಾಂಟ್ಯಾಕ್ಟ್ ನ್ನು ಲಾಂಗ್ ಪ್ರೆಸ್ ಮಾಡಿ ಮತ್ತು ಬ್ಲಾಕ್ ನಂಬರ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ.

2.ಫೋನ್ ಆಪ್ ನ್ನು ತೆರೆಯಿರಿ ಮತ್ತು ಮೇಲಿನ ಬಲ ಬದಿಯಲ್ಲಿರುವ ಮೂರು ಚುಕ್ಕಿಗಳನ್ನು ಟ್ಯಾಪ್ ಮಾಡಿ, ಸೆಟ್ಟಿಂಗ್ಸ್ ಗೆ ತೆರಳಿ ಮತ್ತು ಕಾಲ್ ಬ್ಲಾಕಿಂಗ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ. ಇಲ್ಲಿ ನೀವು ಮ್ಯಾನುವಲ್ ಆಗಿ ಫೋನ್ ನಂಬರ್ ನ್ನು ಆಡ್ ಮಾಡಿ ಬ್ಲಾಕ್ ಮಾಡುವುದಕ್ಕೆ ಅವಕಾಶವಿರುತ್ತದೆ.

ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್( ಸ್ಯಾಮ್ ಸಂಗ್ ಎಕ್ಸ್ ಪೀರಿಯನ್ಸ್ ಯುಐ)

ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್( ಸ್ಯಾಮ್ ಸಂಗ್ ಎಕ್ಸ್ ಪೀರಿಯನ್ಸ್ ಯುಐ)

1.ಡಯಲರ್ ಆಪ್ ನ್ನು ತೆರೆಯಿರಿ

2.ನೀವು ಬ್ಲಾಕ್ ಮಾಡಬೇಕು ಅಂದುಕೊಂಡಿರುವ ನಂಬರ್ ನ್ನು ಸೆಲೆಕ್ಟ್ ಮಾಡಿ ಮತ್ತು ಮೇಲಿನ ಬಲಭಾಗದಲ್ಲಿರುವ ಮೂರು ಚುಕ್ಕಿಗಳನ್ನು ಟ್ಯಾಪ್ ಮಾಡಿ.

3.ಬ್ಲಾಕ್ ಕಾಂಟ್ಯಾಕ್ಟ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ.

ಶಿಯೋಮಿ ಸ್ಮಾರ್ಟ್ ಫೋನ್( ಎಂಐಯುಐ)

ಶಿಯೋಮಿ ಸ್ಮಾರ್ಟ್ ಫೋನ್( ಎಂಐಯುಐ)

1.ಸೆಕ್ಯುರಿಟಿ ಆಪ್ ನ್ನು ತೆರೆಯಿರಿ.

2.ಬ್ಲಾಕ್ ಲಿಸ್ಟ್ ಆಯ್ಕೆಯನ್ನು ಟ್ಯಾಪ್ ಮಾಡಿ.

3.ಸೆಟ್ಟಿಂಗ್ಸ್ ಬಟನ್ ನ್ನು ಟ್ಯಾಪ್ ಮಾಡಿ.

4.ನೀವು ಬ್ಲಾಕ್ ಮಾಡಬೇಕು ಅಂದುಕೊಂಡಿರುವ ಫೋನ್ ನಂಬರ್ ನ್ನು ಸೇರಿಸಿ ಮತ್ತು ರೂಲ್ಸ್ ನ್ನು ಸೆಟ್ ಮಾಡಿ.

5.ಬ್ಲಾಕ್ಡ್ ನಂಬರ್ಸ್ ನ್ನು ಟ್ಯಾಪ್ ಮಾಡಿ.

ಓಪ್ಪೋ ಸ್ಮಾರ್ಟ್ ಫೋನ್(ColorOS)

1.ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಸೆಟ್ಟಿಂಗ್ಸ್ ನ್ನು ತೆರೆಯಿರಿ.

2.ಕಾಲ್ಸ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ.

3.ಇದೀಗ ಬ್ಲಾಕ್ ಲಿಸ್ಟ್ ಆಯ್ಕೆಗೆ ತೆರಳಿ.

4.ಮಾನ್ಯುವಲ್ ಆಗಿ ಸೇರಿಸಲು '+' ಐಕಾನ್ ನ್ನು ಟ್ಯಾಪ್ ಮಾಡಿ ಅಥವಾ ಕಾಂಟ್ಯಾಕ್ಟ್ ನ್ನು ಸೆಲೆಕ್ಟ್ ಮಾಡಿ

ವಿವೋ ಸ್ಮಾರ್ಟ್ ಫೋನ್ ( ಫನ್ ಟಚ್ ಓಎಸ್)

1.ಸೆಟ್ಟಿಂಗ್ಸ್ ಗೆ ತೆರಳಿ

2.ನಂತರ ಮೆಸೇಜಸ್ ಗೆ ತೆರಳಿ

3.ಬ್ಲಾಕ್ ಲಿಸ್ಟ್ ಆಯ್ಕೆಯನ್ನು ಟ್ಯಾಬ್ ಮಾಡಿ.

4.ನೀವು ಬ್ಲಾಕ್ ಲಿಸ್ಟ್ ಗೆ ಸೇರಿಸಬೇಕು ಅಂದುಕೊಂಡಿರುವ ಕಾಂಟ್ಯಾಕ್ಟ್ ನ್ನು ಆಯ್ಕೆ ಮಾಡಿ.

ಒನ್ ಪ್ಲಸ್ ಸ್ಮಾರ್ಟ್ ಫೋನ್ (ಆಕ್ಸಿಜನ್ ಓಎಸ್)

ಸ್ಟಾಕ್ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ಈ ಕೆಳಗಿನ ಹಂತಗಳನ್ನು ಅನುಸರಿಸಿ

ಹುವಾಯಿ ಮತ್ತು ಹಾನರ್ ಸ್ಮಾರ್ಟ್ ಫೋನ್ (EMUI)

1.ಕಾಂಟ್ಯಾಕ್ಸ್ ಗೆ ತೆರಳಿ.

2.ಕಾಂಟ್ಯಾಕ್ಟ್ ನ್ನು ಸೆಲೆಕ್ಟ್ ಮಾಡಿ.

3.ಕೆಳಗಿನ ಬಲಭಾಗದಲ್ಲಿರುವ ಮೂರು ಚುಕ್ಕಿಗಳನ್ನು ಟ್ಯಾಪ್ ಮಾಡಿ.

4.ಬ್ಲಾಕ್ ಕಾಲ್ಸ್ ನ್ನು ಆಯ್ಕೆ ಮಾಡಿ.

ಸೂಚನೆ: ಗೂಗಲ್ ಪ್ಲೇ ಸ್ಟೋರ್ ನಲ್ಲಿ ಹಲವಾರು ಥರ್ಡ್ ಪಾರ್ಟಿ ಆಪ್ ಗಳು ಕೂಡ ಲಭ್ಯವಿದ್ದು ಹೆಚ್ಚುವರಿ ಕಾಲ್ ಬ್ಲಾಕಿಂಗ್ ಫೀಚರ್ ಗಳನ್ನು ಇದು ಒಳಗೊಂಡಿರುತ್ತದೆ.

Best Mobiles in India

English summary
How to block a phone number on Xiaomi, Samsung, OnePlus and other Android smartphones
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+