ಯೂಬರ್ ಟ್ಯಾಕ್ಸಿ ಬುಕ್ ಮಾಡುವುದು ಹೇಗೆ?

By Shwetha
|

ಐಫೋನ್ ಮತ್ತು ಆಂಡ್ರಾಯ್ಡ್ ಡಿವೈಸ್‌ಗಳನ್ನು ಬಳಸಿಕೊಂಡು ಖಾಸಗಿ ಚಾಲಕರನ್ನು ಗೊತ್ತುಪಡಿಸುವ ಕಾರು ಸೇವೆಯಾಗಿದೆ ಯೂಬರ್. ನಿಮ್ಮ ಸ್ಥಳದಲ್ಲಿರುವ ಚಾಲಕರನ್ನು ನಿಯೋಜಿಸಲು ಈ ಸೇವೆ ವಿತರಣಾ ಸಾಫ್ಟ್‌ವೇರ್ ಅನ್ನು ಬಳಸುತ್ತದೆ. ನಿಮಗೆ ಈ ಸೇವೆಯು ಕ್ಯಾಬ್ ಅಥವಾ ಇನ್ನಿತರ ವಾಹನಗಳನ್ನು ಒದಗಿಸಬಹುದು ಎಂದು ಧೃತಿಗೆಡದಿರಿ.

ಅತ್ಯಾಕರ್ಷಕ ಟ್ಯಾಕ್ಸಿಯನ್ನು ಇದು ನಿಮಗೆ ಕಳುಹಿಸುತ್ತದೆ. ಇದು ಯಾವುದೇ ನಗದು ಪಾವತಿಯನ್ನು ಬಯಸುವುದಿಲ್ಲ ಕೇವಲ ಕ್ರೆಡಿಟ್ ಕಾರ್ಡ್ ಪಾವತಿಯನ್ನು ನೀವು ಮಾಡಬೇಕಾಗುತ್ತದೆ. ಹಾಗಿದ್ದರೆ ಕಾರು ಸೇವೆಗಾಗಿ ಯೂಬರ್ ಅನ್ನು ಬಳಸುವುದು ಹೇಗೆ ಎಂಬ ಉಪಯೋಗಕಾರಿ ಮಾಹಿತಿಯನ್ನು ನಾವು ನಿಮಗಿಲ್ಲಿ ನೀಡುತ್ತಿದ್ದೇವೆ.

ಹಂತ:1

ಹಂತ:1

ಮೊದಲು ಯೂಬರ್ ವೆಬ್‌ಸೈಟ್‌ಗೆ ಭೇಟಿ ನೀಡಿ.

ಹಂತ:2

ಹಂತ:2

ನೀವು ಇಲ್ಲಿ ಖಾತೆಯನ್ನು ತೆರೆಯಬೇಕಾಗುತ್ತದೆ. ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ಇಮೇಲ್, ಭಾಷೆ ಮತ್ತು ಬಿಲ್ಲಿಂಗ್ ಮಾಹಿತಿಯನ್ನು ಒದಗಿಸಿ ಖಾತೆಯನ್ನು ತೆರೆಯಿರಿ. ಮಾನ್ಯವಾಗಿರುವ ಕ್ರೆಡಿಟ್ ಕಾರ್ಡ್ ಅನ್ನು ನೀವು ಈ ಸೇವೆಯನ್ನು ಬಳಸಲು ಉಪಯೋಗಿಸಬೇಕಾಗುತ್ತದೆ.

ಹಂತ: 3

ಹಂತ: 3

ಸೇವೆಯನ್ನು ಮುಂದುವರಿಸುವ ಮುನ್ನ ಯೂಬರ್‌ನ ನಿಯಮಗಳು ಮತ್ತು ಷರತ್ತುಗಳಿಗೆ ನೀವು ಒಪ್ಪಿದ್ದೀರಿ ಎಂಬುದನ್ನು ಅಂಗೀಕರಿಸಿ.

ಹಂತ: 4

ಹಂತ: 4

ನಿಮ್ಮ ಖಾತೆ ರಚನೆಯಾಗಿರುತ್ತದೆ. ಮತ್ತು ನಿಮ್ಮ ಖಾತೆ ರಚನೆಯಾಗಿರುವುದನ್ನು ದೃಢೀಕರಿಸಿ ನಿಮಗೆ ಇಮೇಲ್ ಕಳುಹಿಸಲಾಗುತ್ತದೆ. ಯೂಬರ್ ಸೇವೆಯನ್ನು ಬಳಸಲು ನೀವಿಗ ಸಿದ್ಧರಾಗಿರುವಿರಿ.

ಹಂತ:5

ಹಂತ:5

ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಆಪಲ್ ಅಪ್ಲಿಕೇಶನ್, ಗೂಗಲ್ ಪ್ಲೇ ಸ್ಟೋರ್‌ ಹಾಗೂ ಬ್ಲ್ಯಾಕ್‌ಬೆರ್ರಿ ಅಪ್ಲಿಕೇಶನ್‌ನಲ್ಲಿ ಯೂಬರ್ ಅಪ್ಲಿಕೇಶನ್ ಉಚಿತವಾಗಿದೆ. ನಿಮ್ಮ ಫೋನ್‌ನಲ್ಲಿ ಈ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡಿ ಮತ್ತು ಅದನ್ನು ತೆರೆಯಿರಿ.

ಹಂತ: 6

ಹಂತ: 6

ಅಪ್ಲಿಕೇಶನ್ ಅನ್ನು ನೀವು ಡೌನ್‌ಲೋಡ್ ಮಾಡಿದ ನಂತರ, ನೀವು ಅದನ್ನು ಮೊದಲ ಬಾರಿಗೆ ಪ್ರಾರಂಭಿಸುತ್ತಿದ್ದೀರಿ ಎಂದಾದಲ್ಲಿ ನೀವು ಸೈನ್ ಇನ್ ಮಾಡಬೇಕಾಗುತ್ತದೆ. ನೀವು ಸೈನ್ ಅಪ್ ಆಗಿರುವ ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್ ಅನ್ನು ಬಳಸಿಕೊಂಡು ಲಾಗಿನ್ ಮಾಡಿ.

ಹಂತ: 7

ಹಂತ: 7

ಯೂಬರ್ 5 ಪ್ರಕಾರದ ವಾಹನ ವಿಧಗಳನ್ನು ಬಳಸುತ್ತದೆ. ನೀವು ಯಾವ ನಗರದಲ್ಲಿದ್ದೀರಿ ಎಂಬುದನ್ನು ಅನುಸರಿಸಿ ಕಾರನ್ನು ಆಯ್ಕೆಮಾಡಬೇಕಾಗುತ್ತದೆ.

ಹಂತ: 8

ಹಂತ: 8

ನಿಮ್ಮ ವಾಹನದ ವಿಧವನ್ನು ನೀವು ಆರಿಸಿಕೊಂಡ ನಂತರ, ಮ್ಯಾಪ್‌ನಲ್ಲಿ ನಿಮ್ಮ ಸ್ಥಳವನ್ನು ಗುರುತಿಸಿ. ಪರದೆಯಲ್ಲಿ ಗೋಚರವಾಗುವುದನ್ನು ನೀವು ಆರಿಸಬೇಕಾಗುತ್ತದೆ.

ಹಂತ: 9

ಹಂತ: 9

ನಿಮ್ಮ ಕಾರು ಎಲ್ಲಿಯವರೆಗೆ ಪ್ರಯಾಣಿಸಬೇಕೆಂಬ ಅಂದಾಜನ್ನು ನೀವು ನೀಡಬೇಕಾಗುತ್ತದೆ. ಯಾವುದೇ ಕಾರು ಲಭ್ಯವಿಲ್ಲ ಎಂದಾದಲ್ಲಿ, ಕೆಲವು ನಿಮಿಷಗಳಲ್ಲಿ ಪುನಃ ಪ್ರಯತ್ನಿಸಿ ನೀವು ಗೊತ್ತುಪಡಿಸಿರುವ ಕಾರಿನ ಚಾಲಕ ಪ್ರಯಾಣಿಕರನ್ನು ತಲುಪಿಸಿ ನಂತರ ನಿಮ್ಮನ್ನು ಕರೆದುಕೊಂಡು ಹೋಗುತ್ತಾನೆ.

ಹಂತ:10

ಹಂತ:10

ಸಮಯ ಮತ್ತು ಪ್ರಯಾಣದ ಅಂತರವನ್ನು ಆಧರಿಸಿ ಯೂಬರ್ ದರವನ್ನು ನಿಗದಿಪಡಿಸುತ್ತದೆ.

ಹಂತ:11

ಹಂತ:11

ಯೂಬರ್ ಸೇವೆ ಮತ್ತು ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ಆಧರಿಸಿ ಎಲ್ಲಾ ಪಾವತಿಗಳು ಹಾಗೂ ಟಿಪ್ಸ್‌ಗಳನ್ನು ನಿರ್ವಹಿಸಲಾಗುತ್ತದೆ.

ಹಂತ:12

ಹಂತ:12

ಯೂಬರ್ ಅಪ್ಲಿಕೇಶನ್‌ಗೆ ನೀವು ಪ್ರವೇಶವನ್ನು ಹೊಂದಿಲ್ಲ ಎಂದಾದಲ್ಲಿ, ಯೂಬರ್ ಮೊಬೈಲ್ ಸೈಟ್‌ಗೆ ಹೋಗುವ ಮೂಲಕ ಕಾರನ್ನು ನಿಮಗೆ ವಿನಂತಿಸಬಹುದು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X