ಆಧಾರ್ ಮೂಲಕ ಜಿಯೋ ಡಿಟಿಹೆಚ್ ಬುಕ್ ಮಾಡುವುದು ಹೇಗೆ?
ಜಿಯೋ ಸಿಮ್ ರೀತಿಯಲ್ಲಿಯೇ ಜಿಯೋ ಡಿಟಿಹೆಚ್ ಸಹ ಮೂರು ತಿಂಗಳು ಉಚಿತವಾಗರಲಿದೆ. !!
ಪ್ರೈಮ್ ಮೆಂಬರ್‌ಶಿಪ್ ಪಡೆಯಲು ಕೊನೆಯ ದಿನ, ಅಂದರೆ ಏಪ್ರಿಲ್ 15 ರಂದು ಜಿಯೋ ಡಿಟಿಹೆಚ್ ಲಾಂಚ್ ಮಾಡುತ್ತಾರೆ ಎನ್ನುವ ಸುದ್ದಿ ಹೊರಬಿದ್ದಿದೆ.!! ರಿಲಯನ್ಸ್ ಮಾಲೀಕತ್ವದ ಜಿಯೋ ಡಿಟಿಹೆಚ್ ಲಾಂಚ್ ಪ್ರಕ್ರಿಯೇ ಈಗಾಗಲೇ ಪೂರ್ಣಗೊಂಡಿದ್ದು, ಇದೇ ತಿಂಗಳು 15ನೇ ತಾರೀಖಿನಂದು ಜಿಯೋ ಡಿಟಿಹೆಚ್ ಅಫಿಷಿಯಲ್ ಆಗಿ ಲಾಂಚ್ ಆಗುತ್ತದೆ ಎನ್ನಲಾಗಿದೆ.!!
ಓದಿರಿ: ಜಿಯೋ ಸಮ್ಮರ್ ಆಫರ್ ಕ್ಯಾನ್ಸಲ್..ಏಕೆ? ಒಂದೇ ರಾತ್ರಿಯಲ್ಲಿ ಏನೆಲ್ಲಾ ಆಯ್ತು?
ಜಿಯೋ ತನ್ನ ಬಳಕೆದಾರಿಗಾಗಿ ನಾಲ್ಕು ಡಿಟಿಹೆಚ್ ಪ್ಲಾನ್‌ಗಳನ್ನು ಬಿಡುಗಡೆ ಮಾಡಿದ್ದು, ಜಿಯೋ ಸಿಮ್ ರೀತಿಯಲ್ಲಿಯೇ ಜಿಯೋ ಡಿಟಿಹೆಚ್ ಸಹ ಮೂರು ತಿಂಗಳು ಉಚಿತವಾಗರಲಿದೆ. !! ಹಾಗಾಗಿ, ಜಿಯೋ ಡಿಟಿಹೆಚ್ ಲಾಂಚ್ ಆಗುತ್ತಿದ್ದಂತೆ ಖರೀದಿಸಬೇಕು ಎನ್ನುವವರು ಈಗಲೇ ಆನ್‌ಲೈನ್‌ನಲ್ಲಿ ಮುಂಗಡವಾಗಿ ಡಿಟಿಹೆಚ್ ಬುಕ್ ಮಾಡಬಹುದು. ಬುಕ್ ಮಾಡುವುದು ಹೇಗೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಏಪ್ರಿಲ್ 15ಕ್ಕೆ ಜಿಯೋ ಡಿಟಿಹೆಚ್ ಲಾಂಚ್!!
ಈಗಾಗಲೇ ಟ್ರೆಂಡ್ ಸೃಷ್ಟಿಸಿರುವ ಜಿಯೋ ಡಿಟಿಹೆಚ್ ಏಪ್ರಿಲ್ 15ಕ್ಕೆ ಲಾಂಚ್ ಆಗುತ್ತದೆ ಎನ್ನಲಾಗಿದ್ದು, ಜಿಯೋ ಡಿಟಿಹೆಚ್ ಪಡೆಯಲು ಬಯಸುವವರು ಮಾರುಕಟ್ಟೆಗೆ ಬರುವವರೆಗು ಕಾಯಬೇಕಿದೆ.ಇನ್ನು ಜಿಯೋ ಖರೀದಿಸಲು ಆನ್‌ಲೈನ್ ಮತ್ತು ಸ್ಟೋರ್‌ಗಳಲ್ಲಿಯೂ ಜನದಟ್ಟಣೆ ಉಂಟಾಗಬಹುದು. ಆದ್ದರಿಂದ ಜಿಯೋ ಡಿಟಿಹೆಚ್ ಅನ್ನು ಮುಂಗಡವಾಗಿ ಬುಕ್ ಮಾಡಲು ಜಿಯೋದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
ಜಿಯೋ ಡಿಟಿಹೆಚ್ ಅನ್ನು ಮುಂಗಡವಾಗಿ ಬುಕ್ ಮಾಡಲು ಜಿಯೋದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. (WWW.JIO.com)ಗೆ ಭೇಟಿ ನೀಡಿರಿ. ನಂತರ ಮೊಬೈಲ್ ಮತ್ತು ಜಿಯೋ ಡಿಟಿಹೆಚ್ ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ಡಿಟಿಹೆಚ್ ಐಕಾನ್ ಕ್ಲಿಕ್ ಮಾಡಿರಿ.

ಆಧಾರ್ ಮಾಹಿತಿ ನೀಡಿ.
ಪೇಮೆಂಟ್ ಆಪ್ಶನ್‌ಗೆ ಹೋಗಿ ಡಿಟಿಹೆಚ್ ಖರೀದಿಸಲು ನಿಮ್ಮ ಫೋನ್ ನಂಬರ್ ಮತ್ತು ಆಧಾರ್ ಮಾಹಿತಿಯನ್ನು ನೀಡಿ, ಲ್ಲಿ ಕಾರ್ಡ್ ಅಥವಾ ಕ್ಯಾಶ್ ಆನ್ ಡೆಲಿವರಿ ಆಪ್ಶನ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಆರ್ಡರ್ ಕನ್ಫರ್ಮ್ ಮಾಡಿ. ನಂತರ ಕನ್ಫರ್ಮೇಶನ್ ಮೆಸೇಜ್ ಪಡೆಯುತ್ತೀರಿ.

ನೆನಪಿರಬೇಕಾದ ಅಂಶಗಳು
#1 ಜಿಯೋ ಡಿಟಿಹೆಚ್ ಲಾಂಚ್ ನಂತರ ಅಧಿಕೃತವಾಗಿ ಜಿಯೋ ವೆಬ್‌ಸೈಟ್‌ನಲ್ಲಿಯೇ ಮಾರಾಟವಾಗುತ್ತವೆ.
#2 ಇನ್ನು ಇ-ಕಾಮರ್ಸ್ ಸೈಟ್ ಅಥವಾ ಇತರೆ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಜಿಯೋ ಡಿಟಿಹೆಚ್ ಮಾರಾಟಮಾಡಲು ಅಂಬಾನಿ ಚಿಂತಿಸಿದ್ದಾರೆ ಎನ್ನಲಾಗಿದೆ.


Click it and Unblock the Notifications








