ನಿಮ್ಮ ಫೇವರೇಟ್ ವೆಬ್‌ಪೇಜ್ ಅನ್ನು ಬುಕ್‌ಮಾರ್ಕ್ ಮಾಡುವುದು ಹೇಗೆ?

ಪ್ರತಿಬಾರಿ ವೆಬ್‌ಸೈಟ್ ಲಿಂಕ್ ಟೈಪಿಸದೇ ವೆಬ್‌ಸೈಟ್ ತೆರೆಯಲು ಬುಕ್‌ಮಾರ್ಕ್ ಬಳಕೆ ಮಾಡಿದರೆ ಉತ್ತಮ.!!

|

ಇದು ಇಂಟರ್‌ನೆಟ್ ಯುಗ. ಹಾಗಾಗಿ, ನೀವು ಪ್ರತಿದಿನವೂ ಒಂದಿಲ್ಲೊಂದು ವೆಬ್‌ಸೈಟ್‌ಗೆ ಭೇಟಿ ನೀಡಬೇಕಿರುತ್ತದೆ. ಅಥವಾ ಒಂದೇ ವೆಬ್‌ಸೈಟ್‌ಗೆ ಪ್ರತಿದಿನ ಭೇಟಿ ನೀಡಬೇಕಾಗುತ್ತೆದೆ.!! ಹಾಗಾಗಿ, ಪ್ರತಿಬಾರಿ ವೆಬ್‌ಸೈಟ್ ಲಿಂಕ್ ಟೈಪಿಸದೇ ವೆಬ್‌ಸೈಟ್ ತೆರೆಯಲು ಬುಕ್‌ಮಾರ್ಕ್ ಬಳಕೆ ಮಾಡಿದರೆ ಉತ್ತಮ.!!

ಉದಾಹರಣೆಗೆ ನೀವು ಪ್ರತಿನಿತ್ಯ 'ಕನ್ನಡ ಗಿಜ್‌ಬಾಟ್' ವೆಬ್‌ಸೈಟ್‌ಗೆ ಭೇಟಿ ನೀಡುತ್ತಿದ್ದರೆ ನೀವು ಪ್ರತಿ ಬಾರಿ ಬ್ರೌಸರ್‌ ತೆರೆದು Kannada.gizbot.com ಎಂದು ಟೈಪಿಸುವ ಅಗತ್ಯವಿಲ್ಲ.!! ಬುಕ್‌ಮಾರ್ಕ್ ಬಳಕೆ ಮಾಡಿದರೆ ಬ್ರೌಸರ್ ತೆರೆದಾಕ್ಷಣವೇ ನಿಮಗೆ ಕನ್ನಡ ಗಿಜ್‌ಬಾಟ್ ಲಿಂಕ್ ಸಿಗುತ್ತದೆ.!!

Kannada.gizbot.com ವೆಬ್‌ಪೇಜ್‌ ಅನ್ನು ಬುಕ್‌ಮಾರ್ಕ್‌ ಮಾಡಿಕೊಂಡರೆ, ಬ್ರೌಸರ್ ತೆರೆದಾಕ್ಷಣ ಬುಕ್‌ಮಾರ್ಕ್ಸ್‌ ಬಾರ್‌ನಲ್ಲಿ ಕಾಣುವ ಲಿಂಕ್‌ ಕ್ಲಿಕ್‌ ಮಾಡಿದರೆ ಕನ್ನಡ ಗಿಜ್‌ಬಾಟ್ ಪೇಜ್ ತೆರೆಯುತ್ತದೆ.! ಹಾಗಾದರೆ, ವೆಬ್‌ಪೇಜ್ ಬುಕ್‌ಮಾರ್ಕ್ ಮಾಡುವುದು ಹೇಗೆ ಎಂಬುದನ್ನು ಇಂದು ತಿಳಿಯೋಣ.!!

ವೆಬ್‌ಪೇಜ್‌ ಬುಕ್‌ಮಾರ್ಕ್‌ ಮಾಡಿಕೊಳ್ಳುವುದು ಹೇಗೆ?

ವೆಬ್‌ಪೇಜ್‌ ಬುಕ್‌ಮಾರ್ಕ್‌ ಮಾಡಿಕೊಳ್ಳುವುದು ಹೇಗೆ?

ನೀವು ಬುಕ್‌ಮಾರ್ಕ್‌ ಮಾಡಬೇಕಿರುವ ವೆಬ್‌ಸೈಟ್‌ನ ಯುಆರ್‌ಎಲ್‌ ಅನ್ನು ಬ್ರೌಸರ್‌ನ ಅಡ್ರೆಸ್‌ಬಾರ್‌ನಲ್ಲಿ ಕ್ಲಿಕ್‌ ಮಾಡಿ. ವೆಬ್‌ಸೈಟ್‌ನ ಪೇಜ್‌ ತೆರೆದುಕೊಂಡ ಬಳಿಕ ಬ್ರೌಸರ್‌ನ ಅಡ್ರೆಸ್‌ಬಾರ್‌ನ ಬಲಕ್ಕೆ ಕಾಣುವ ಮೂರು ಚುಕ್ಕೆಯ ಸೆಟ್ಟಿಂಗ್ಸ್ ಮೆನು ಮೇಲೆ ಕ್ಲಿಕ್‌ ಮಾಡಿ.!

ಬುಕ್‌ಮಾರ್ಕ್ ದಿಸ್‌ ಪೇಜ್ ಕ್ಲಿಕ್ಕಿಸಿ!!

ಬುಕ್‌ಮಾರ್ಕ್ ದಿಸ್‌ ಪೇಜ್ ಕ್ಲಿಕ್ಕಿಸಿ!!

ಮೂರು ಚುಕ್ಕೆಯ ಸೆಟ್ಟಿಂಗ್ಸ್ ಮೆನು ಮೇಲೆ ಕ್ಲಿಕ್ ಮಾಡಿದ ನಂತರ, ಮೆನುವಿನಲ್ಲಿ ಕಾಣುವ Bookmarks ಮೇಲೆ ಕ್ಲಿಕ್‌ ಮಾಡಿ. ಬಳಿಕ Bookmark this page ಕ್ಲಿಕ್ಕಿಸಿ. ಈಗ ನೀವು ಭೇಟಿ ನೀಡಿರುವ ವೆಬ್‌ಸೈಟ್‌ ಪೇಜ್‌ ಬುಕ್‌ಮಾರ್ಕ್‌ ಬಾರ್‌ನಲ್ಲಿ ಕಾಣಿಸಿಕೊಳ್ಳುತ್ತದೆ. ಬುಕ್‌ಮಾರ್ಕ್‌ ಲಿಂಕ್‌ ಮೇಲೆ ಕ್ಲಿಕ್ಕಿಸಿದರೆ ಆ ಪೇಜ್‌ ತೆರೆದುಕೊಳ್ಳುತ್ತದೆ.!!

ಕೆಲವನ್ನು ಮಾತ್ರ ಆಯ್ಕೆ ಮಾಡಿಕೊಳ್ಳಿ!!

ಕೆಲವನ್ನು ಮಾತ್ರ ಆಯ್ಕೆ ಮಾಡಿಕೊಳ್ಳಿ!!

ಬುಕ್‌ ಮಾರ್ಕ್ ಮಾಡಲು ನೀವು ಪ್ರತಿದಿನ ಯಾವ ವೆಬ್‌ಪೇಜ್‌ ಹೆಚ್ಚು ತೆರೆಯುತ್ತೀರೋ ಆ ಪೇಜ್‌ ಅನ್ನು ಬುಕ್‌ಮಾರ್ಕ್‌ ಮಾಡಿಕೊಳ್ಳಿ. ಹೆಚ್ಚು ಪೇಜ್‌ಗಳನ್ನು ಬುಕ್‌ಮಾರ್ಕ್ ಮಾಡಿಕೊಂಡರೆ ನಿಮಗೆ ಸ್ವಲ್ಪ ಕಿರಿಕಿರಿಯಾಗುತ್ತದೆ.!!

ಬುಕ್‌ಮಾರ್ಕ್ ತೆಗೆಯುವುದು ಸಹ ಸುಲಭ!!

ಬುಕ್‌ಮಾರ್ಕ್ ತೆಗೆಯುವುದು ಸಹ ಸುಲಭ!!

ದುಬಾರಿ ಬೆಲೆಯಲ್ಲಿ ''ಶಿಯೋಮಿ ಎಂಐ ಮಿಕ್ಸ್ 2''!!..ಒಪ್ಪುತ್ತಾರಾ ಭಾರತೀಯರು?
ಬುಕ್‌ಮಾರ್ಕ್‌ ಮಾಡಿರುವ ವೆಬ್‌ಪೇಜ್‌ ಅನ್ನು ತೆಗೆದು ಹಾಕಬೇಕಿದ್ದರೆ ಬುಕ್‌ಮಾರ್ಕ್‌ ಬಾರ್‌ನಲ್ಲಿ ಕಾಣುವ ಆಯಾ ವೆಬ್‌ಪೇಜ್‌ ಲಿಂಕ್‌ನ ಮೇಲೆ ರೈಟ್ ಕ್ಲಿಕ್‌ ಮಾಡಿ. ನಂತರ ಕಾಣುವ ಆಯ್ಕೆಗಳಲ್ಲಿ Delete ಮೇಲೆ ಕ್ಲಿಕ್‌ ಮಾಡಿದರೆ ನೀವು ಬುಕ್‌ಮಾರ್ಕ್‌ ಮಾಡಿದ್ದ ಪೇಜ್‌ ಡಿಲೀಟ್ ಆಗುತ್ತದೆ.!!

ದುಬಾರಿ ಬೆಲೆಯಲ್ಲಿ ''ಶಿಯೋಮಿ ಎಂಐ ಮಿಕ್ಸ್ 2''!!..ಒಪ್ಪುತ್ತಾರಾ ಭಾರತೀಯರು?ದುಬಾರಿ ಬೆಲೆಯಲ್ಲಿ ''ಶಿಯೋಮಿ ಎಂಐ ಮಿಕ್ಸ್ 2''!!..ಒಪ್ಪುತ್ತಾರಾ ಭಾರತೀಯರು?

Best Mobiles in India

English summary
Bookmarking (or favoriting) a Web page adds it to a list in your Web browser for quick access. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X