ಸಾಫ್ಟ್‌ವೇರ್ ಅಪ್‌ಡೇಟ್ ನಂತರ ಆಂಡ್ರಾಯ್ಡ್ ಫೋನ್ ವೇಗ ಹೆಚ್ಚಿಸುವುದು ಹೇಗೆ?
ಸ್ಮಾರ್ಟ್‌ಫೋನ್‌ಗಳನ್ನು ಅಪ್‌ಡೇಟ್ ಮಾಡಿಕೊಳ್ಳುವುದೇನೋ ಉತ್ತಮವೇ ಆದರೆ, ಫೋನ್ ಅಪ್‌ಡೇಟ್ ಮಾಡಿಕೊಳ್ಳವುದರಿಂದಲೇ ಅದರಿಂದಲೇ ಸಮಸ್ಯೆಯನ್ನು ಎದುರಿಸಿದರೆ?..
ಸ್ಮಾರ್ಟ್‌ಪೋನ್‌ಗಳನ್ನು ಪದೇ ಪದೇ ಅಪ್‌ಡೇಟ್ ಮಾಡುವುದು ಫೋನ್ ಬಳಕೆದಾರರ ಅತ್ಯಂತ ಬಹುಮುಖ್ಯ ಕಾರ್ಯಗಳಲ್ಲಿ ಒಂದು.! ಕನಿಷ್ಟ ತಿಂಗಳಿಗೊಮ್ಮೆ ಸ್ಮಾರ್ಟ್‌ಫೋನ್ ಅಪ್‌ಡೇಟ್ ಮಾಡುವುದರಿಂದ ಬಳಕೆದಾರರಿಗೆ ಹೊಸಹೊಸ ಸೇವೆಗಳ ಜೊತೆಯಲ್ಲಿಯೇ ಸುರಕ್ಷತೆಯೂ ದೊರೆಯುವುದರಿಂದ ಇದು ಅತ್ಯಗತ್ಯ ಕಾರ್ಯ ಕೂಡ ಹೌದು.!!
ಸ್ಮಾರ್ಟ್‌ಫೋನ್‌ಗಳನ್ನು ಅಪ್‌ಡೇಟ್ ಮಾಡಿಕೊಳ್ಳುವುದೇನೋ ಉತ್ತಮವೇ ಆದರೆ, ಫೋನ್ ಅಪ್‌ಡೇಟ್ ಮಾಡಿಕೊಳ್ಳವುದರಿಂದಲೇ ಅದರಿಂದಲೇ ಸಮಸ್ಯೆಯನ್ನು ಎದುರಿಸಿದರೆ?.. ಹೌದು, ಫೋನ್ ಅಪ್‌ಡೇಟ್ ಮಾಡಿಕೊಂಡ ನಂತರ ನಾವು ಮಾಡುವ ಸಣ್ಣ ತಪ್ಪುಗಳು ಸ್ಮಾರ್ಟ್‌ಫೋನ್‌ಗಳು ನಿಧಾನವಾಗುವಂತೆ ಮಾಡುತ್ತವೆ.!

ಫೋನ್ ಅಪ್‌ಡೇಟ್ ಮೂಲಕ ಹೊಸಹೊಸ ಸೇವೆಗಳ ಜೊತೆಯಲ್ಲಿಯೇ ಸುರಕ್ಷತೆ ಸಿಕ್ಕಿದರೂ ತೊಂದರೆ ಕೂಡ ಎದುರಾಗುತ್ತದೆ.! ಹಾಗಾದರೆ, ಸ್ಮಾರ್ಟ್‌ಪೋನ್ ಅಪ್‌ಡೇಟ್ ಮಾಡುವ ಮುನ್ನ ನಾವು ಅನುಸರಿಸಬೇಕಾದ ಕಾರ್ಯಗಳು ಮತ್ತು ಅಪ್‌ಡೇಟ್ ನಂತರ ಮಾಡಬೇಕಾದ ಕಾರ್ಯಗಳು ಯಾವುವು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

ಕ್ಲೀನ್ ಇನ್‌ಸ್ಟಾಲ್ ಮಾಡಿ!!
ಎಲ್ಲಾ ಮೊಬೈಲ್ ಕಂಪೆನಿಗಳು ಒಂದೆ ಕ್ಲಿಕ್‌ನಲ್ಲಿ ಹೊಸ ಆಪರೇಟಿಂಗ್ ಸಿಸ್ಟಂಗೆ ಅಪ್‌ಗ್ರೇಡ್ ಮಾಡಲು ಸೂಚಿಸುತ್ತವೆ. ಹಾಗಾಗಿ, ಮೊಬೈಲ್ ಅಪ್‌ಡೇಟ್ ಮಾಡುವ ಮುನ್ನ ನಿಮ್ಮೆಲ್ಲಾ ಮೊಬೈಲ್ ಡೇಟಾ ಖಾಲಿ ಮಾಡಿ ಅಪ್‌ಡೇಟ್ ಮಾಡಿ.! ಮೊಬೈಲ್ ಅನ್ನು ಹಾಗೆಯೇ ಅಪ್‌ಡೇಟ್ ಮಾಡಿದರೆ ಒಎಸ್ ಕ್ರಾಶ್ ಆಗುವ ಸಂಭವ ಹೆಚ್ಚಿರುತ್ತದೆ.!!

ಮೆಮೊರಿ ಬಗ್ಗೆ ಗಮನವಿರಲಿ!!
16GB, 32GB ಮೆಮೊರಿ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಇಂದು ಹೆಚ್ಚು ಜನರ ಬಳಕೆಯಲ್ಲಿವೆ. ಹಾಗೆಂದು 16GB, 32GB ಮೆಮೊರಿ ತುಂಬಿಸಿಕೊಳ್ಳಬಹುದು ಎಂದುಕೊಳ್ಳದಿರಿ. ಏಕೆಂದರೆ ಹೆಚ್ಚು ಸ್ಟೋರೇಜ್‌ನಿಂದಾಗಿ ಸ್ಮಾರ್ಟ್‌ಫೋನ್‌ಗಳು ನಿಧಾನವಾಗುತ್ತವೆ.! ಹಾಗಾಗಿ, ಮೆಮೊರಿ ಇರುವ ಅರ್ಧಕ್ಕಿಂತ ಕಡಿಮೆ ಸ್ಟೋರೇಜ್ ಇರಲಿ.!!

ಆನ್‌ಲೈನ್ ಸೇವೆ ಬಳಸಿಕೊಳ್ಳಿ.!!
ಯಾವುದೇ ಡಾಕ್ಯುಮೆಂಟ್ ಮತ್ತು ಇನ್ನಿತರ ಫೈಲ್‌ಗಳನ್ನು ಗೂಗಲ್ ಡ್ರೈವ್‌ನಂತಹ ಆನ್‌ಲೈನ್ ಸ್ಟೋರೇಜ್‌ನಲ್ಲಿ ಸೇವ್ ಮಾಡಿಕೊಳ್ಳಬಹುದು.ಇನ್ನು ಫೋಟೊಗಳು ಹೆಚ್ಚಿದ್ದಷ್ಟು ಫೋನ್ ನಿಧಾನವಾಗುವ ಸಾಧ್ಯತೆ ಇದ್ದು, ಫೋಟೊ ಲೈಬ್ರೆರಿಯನ್ನು ಗೂಗಲ್ ಫೋಟೊಸ್‌ನಂಥ ತಾಣಗಳಿಗೆ ಮೂವ್ ಮಾಡುವ ಮೂಲಕ ಮೆಮೊರಿ ಸಾಮರ್ಥ್ಯ ಹೆಚ್ಚಿಸಬಹುದು.!!

ಕ್ಲೀನಿಂಗ್ ಅಪ್ ಮಾಡಿ!!
ದೀರ್ಘ ಅವಧಿಯಲ್ಲಿ ಕೆಲವು ಅನವಶ್ಯಕ ಫೈಲ್‌ಗಳು ಫೋನ್ ಮೆಮೊರಿಯಲ್ಲಿ ಸಂಗ್ರಹಗೊಂಡು ಮೊಬೈಲ್‌ನ ವೇಗ ಕುಂಠಿತವಾಗುತ್ತದೆ. ಹಾಗಾಗಿ, ಫೋನ್‌ನಲ್ಲಿರುವ ಅನವಶ್ಯಕ ಫೈಲ್‌ಗಳನ್ನು ಡಿಲೀಟ್ ಮಾಡಿ ಫೋನ್ ವೇಗ ಹೆಚ್ಚಿಸಿ.! ಫೋನ್ ಸೆಟ್ಟಿಂಗ್ಸ್ ತೆರೆದು ಫೋನ್ ರಿಸೆಟ್ ಮಾಡಿದರೆ ಅನವಶ್ಯಕ ಫೈಲ್‌ಗಳು ಡಿಲೀಟ್ ಆಗಲಿದೆ.!! ಆದರೆ, ಫೋನ್ ರಿಸೆಟ್ ಮಾಡುವ ಮುನ್ನ ಉಪಯುಕ್ತ ಡೇಟಾವನ್ನು ಸೇವ್ ಮಾಡಿಕೊಳ್ಳಿ.!!

ಕಡಿಮೆ ಆಪ್‌ಗಳನ್ನು ಬಳಸಿ.!!
ಒಂದೇ ಸಾರಿ ಹಲವು ಆಪ್‌ಗಳನ್ನು ಬಳಕೆ ಮಾಡಬಹುದಾದ ಶಕ್ತಿ ಸ್ಮಾರ್ಟ್‌ಫೋನ್‌ಗಳಿಗಿದ್ದರೂ ಸಹ, ಒಮ್ಮೆಲೆ ಹೆಚ್ಚು ಆಪ್‌ಗಳನ್ನು ಬಳಕೆ ಮಾಡುವುದು ಫೋನ್ ಸ್ಲೋ ಆಗಲು ಕಾರಣವಾಗಿರುತ್ತದೆ. ಹಾಗಾಗಿ, ಒಂದೇ ಸಾರಿ ಹಲವು ಆಪ್‌ಗಳನ್ನು ಬಳಕೆ ಮಾಡದಿರುವುದು ಒಳ್ಳೆಯದು.!!

ಓದಿರಿ: ಇದು ಭಾರತೀಯರ 'ಲವರ್ಸ್, ಫ್ರೆಂಡ್ಸ್ ಅಂಡ್ ಡಿವೈಸಸ್’ ಶಾಕಿಂಗ್ ರಿಪೋರ್ಟ್!!
ಇಂದಿನ ಆನ್‌ಲೈನ್ ಯುಗದಲ್ಲಿ ಪಾಸ್‌ವರ್ಡ್‌ಗಗಳ ಮಹತ್ವ ಎಲ್ಲರಿಗೂ ಗೊತ್ತು.! ಹಾಗಾಗಿ, ಭಾರತೀಯರು ಪಾಸ್‌ವರ್ಡ್ ಸುರಕ್ಷತೆಗೆ ಎಷ್ಟು ಮಹತ್ವ ನೀಡುತ್ತಾರೆ ಎಂಬುದನ್ನು ತಿಳಿಯಲು ಸೈಬರ್‌ಭದ್ರತಾ ಕಂಪನಿ 'ಮ್ಯಾಕೆಫೆ' ಒಂದು ಅಧ್ಯಯನ ನಡೆಸಿದೆ. ಅಧ್ಯಯನದ ಫಲಿತಾಂಶ ಎಲ್ಲರಿಗೂ ಶಾಕ್ ನೀಡಿದೆ.!
ಹೌದು, ಭಾರತೀಯ ಆನ್‌ಲೈನ್ ವರ್ತನೆ ಹಾಗೂ ಈ ಆನ್‌ಲೈನ್ ವರ್ತನೆ ಅವರ ವಾಸ್ತವ ಜಗತ್ತಿನ ಸಂಬಂಧಗಳ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಕಂಡುಕೊಳ್ಳಲು 'ಮ್ಯಾಕೆಫೆ' ಕಂಪನಿಯು 'ತ್ರೀಸ್ ಕಂಪನಿ: ಲವರ್ಸ್, ಫ್ರೆಂಡ್ಸ್ ಅಂಡ್ ಡಿವೈಸಸ್' ಎಂಬ ಹೆಸರಿನಲ್ಲಿ ಅಧ್ಯಯನ ನಡೆಸಿತ್ತು.!
ಸೈಬರ್ ಭಧ್ರತೆಗಿಂತ ಭಿನ್ನವಾದ ಅಧ್ಯಯನ ಇದಾಗಿದ್ದು, ಖಾಸಗಿತನದಲ್ಲಿ ಜನರ ಆನ್‌ಲೈನ್ ವರ್ತನೆ ಹೇಗಿರಲಿದೆ ಎಂಬುದನ್ನು ಈ ಅಧ್ಯಯನ ಹೊರಹಾಕಿದೆ.! ಹಾಗಾದರೆ, ಲವರ್ಸ್, ಫ್ರೆಂಡ್ಸ್ ಅಂಡ್ ಡಿವೈಸಸ್ ಅಧ್ಯಯನದ ಪ್ರಮುಖ ಫಲಿತಾಂಗಳೇನು? ಅಧ್ಯಯನದಲ್ಲಿ ಸಿಕ್ಕಿರುವ ವಿಶೇಷ ಮಾಹಿತಿಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!


ಏನಿದು ಲವರ್ಸ್, ಫ್ರೆಂಡ್ಸ್ ಅಂಡ್ ಡಿವೈಸಸ್’?
ಮೊದಲೇ ಹೇಳಿದಂತೆ ಜನರ ಆನ್‌ಲೈನ್ ವರ್ತನೆ ಮತ್ತು ಈ ವರ್ತನೆ ಅವರ ವಾಸ್ತವ ಜಗತ್ತಿನ ಸಂಬಂಧಗಳ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಕಂಡುಕೊಳ್ಳಲು ಈ ಅಧ್ಯಯನ ನಡೆಸಲಾಗಿದೆ. ಈ ಸಮೀಕ್ಷೆಯಲ್ಲಿ 18ಕ್ಕಿಂತ ಹೆಚ್ಚು ವಯಸ್ಸಿನ 600 ಜನರು ಪಾಲ್ಗೊಂಡಿದ್ದರು.!!

ಸಂಗಾತಿ ಮೇಲೆ ಬೇಹುಗಾರಿಕೆ!
ಸಂಗಾತಿಗೆ ಅರಿವಿಲ್ಲದಂತೆ ಅವರ ಸಾಮಾಜಿಕ ಜಾಲತಾಣ ಖಾತೆಗಳು ಅಥವಾ ಇಂಟರ್‌ನೆಟ್ ಸಂಪರ್ಕ ಹೊಂದಿರುವ ಉಪಕರಣಗಳನ್ನು ಜಾಲಾಡಿರುವುದಾಗಿ ಶೇ 45 ಮಂದಿ ಒಪ್ಪಿಕೊಂಡಿದ್ದಾರೆ. ಇಂಟರ್‌ನೆಟ್ ಎಂಬ ಮಾಯಾ ಪ್ರಪಂಚದ ಭಯ ಇವರಿಗೆ ಕಾಡಿದೆಯಂತೆ.!!

ತಂತ್ರಜ್ಞಾನದ ಬಳಕೆ ಸಂಬಂಧಕ್ಕೆ ಹಾನಿಕರ!!
ತಂತ್ರಜ್ಞಾನದ ಬಳಕೆ ಸಂಬಂಧಗಳನ್ನು ದೂರಮಾಡುತ್ತದೆ ಎಂದು ಶೇ. 77% ಪರ್ಸೆಂಟ್ ಜನರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿಗೆ ಸಮಯ ಕಳೆಯುವಾಗ ಮೊಬೈಲ್ ಮೇಲೆ ಹೆಚ್ಚು ಗಮನ ನೀಡಿದ್ದಕ್ಕೆ ಸ್ನೇಹಿತ, ಕುಟುಂಬದ ಸದಸ್ಯ ಅಥವಾ ಇತರೆ ಆತ್ಮೀಯ ವ್ಯಕ್ತಿಯೊಂದಿಗೆ ವಾಗ್ವಾದ ನಡೆಸಿದ್ದಾಗಿ 81% ಜನರು ಹೇಳಿದ್ದಾರೆ.!!

ಸಂಗಾತಿಗೆ ನಿರ್ಬಂಧ!!
ಸಂಗಾತಿಯೊಡನೆ ಇದ್ದ ಸಮಯದಲ್ಲಿ ಇಂಟರ್‌ನೆಟ್ ಸಂಪರ್ಕ ಹೊಂದಿರುವ ಉಪಕರಣ ಬಳಸದಂತೆ ನಾವು ನಿರ್ಬಂಧ ಹೇರುತ್ತೇವೆ ಎಂದು ಶೇ 20% ಪರ್ಸೆಂಟ್ ಜನರು ಹೇಳಿದ್ದಾರೆ.! ತಂತ್ರಜ್ಞಾನದ ಬಳಕೆ ಸಂಬಂಧಗಳನ್ನು ದೂರಮಾಡುತ್ತದೆ ಎಂದು ಇವರು ಅಭಿಪ್ರಾಯಪಟ್ಟಿದ್ದಾರೆ.!!

ಸಂಬಂಧ ಬಹಿರಂಗಪಡಿಸುವುದು!!
ಫೇಸ್‌ಬುಕ್ ಮತ್ತು ಟ್ವಿಟ್ಟರ್‌ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಸಂಬಂಧದ ಬಗ್ಗೆ ಬಹಿರಂಗ ಪಡಿಸುವುದು 70% ರಷ್ಟು ಜನರಿಗೆ ಮುಖ್ಯವಾಗಿದೆ. ಆದರೆ, ಇನ್ನುಳಿದ ಶೇ 30%ರಷ್ಟು ಜನರಿಗೆ ತಮ್ಮ ಸಂಬಂಧದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬಹಿರಂಗ ಪಡಿಸುವುದು ಮುಖ್ಯವಲ್ಲ ಎಂದು ಹೇಳಿದ್ದಾರೆ.!!

ಡೇಟಿಂಗ್ ಸೈಟ್ ಬೆಸ್ಟ್ ಅಂತೆ!!
ಹೊಸ ಸಂಗಾತಿ ಹುಡುಕಾಟದಲ್ಲಿ ಸ್ನೇಹಿತರು ಮತ್ತು ಕುಟುಂಬಕ್ಕಿಂತಲೂ ಡೇಟಿಂಗ್ ಆಪ್ ಮತ್ತು ವೆಬ್‌ಸೈಟ್‌ಗಳು ಹೆಚ್ಚು ಉತ್ತಮ ಎಂದು ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಅರ್ಧಕ್ಕಿಂತಲೂ ಹೆಚ್ಚು ಜನರ ಅಭಿಪ್ರಾಯ ಪಟ್ಟಿದ್ದಾರೆ. ಶೇ 58% ಜನರು ಇಂತಹ ಅಭಿಪ್ರಾಯ ನೀಡಿರುವುದು ಈ ಅಧ್ಯಯನದ ವಿಶೇಷತೆ ಎನ್ನಬಹುದು.!!

ಯಾವುದೆಲ್ಲ ಪಾಸ್‌ವರ್ಡ್?
ಬ್ಯಾಂಕ್ ಹಾಗೂ ಹಣಕಾಸು ಸೇವೆ ನೀಡುವ ಸಂಸ್ಥೆಗಳ ಪಾಸ್‌ವರ್ಡ್, ಸೋಶಿಯಲ್ ನೆಟ್‌ವರ್ಕ್, ಇ-ಮೇಲ್ ಖಾತೆ, ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್‌ಗಳೂ, ವಿಡಿಯೋ ಜಾಲತಾಣ ನೆಟ್‌ಫ್ಲಿಕ್ಸ್ ಹೀಗೆ ಬಹುತೇಕ ಎಲ್ಲಾ ಪಾಸ್‌ವರ್ಡ್‌ಗಳನ್ನು ತಮ್ಮ ಸಂಗಾತಿಗಳೊಡನೆ ಹಂಚಿಕೊಂಡಿದ್ದಾರೆ.!!

ಅಧ್ಯಯನದ ಪ್ರಮುಖ ಫಲಿತಾಂಶ ಏನು?
‘ತ್ರೀಸ್ ಕಂಪನಿ: ಲವರ್ಸ್, ಫ್ರೆಂಡ್ಸ್ ಅಂಡ್ ಡಿವೈಸಸ್' ಅಧ್ಯಯನದಲ್ಲಿ "ಸಂಬಂಧಗಳಲ್ಲಿ ಖಾಸಗಿತನ ಅತ್ಯಂತ ಮುಖ್ಯ ಎಂದು ಬಹುಪಾಲು ಜನರು ಅಭಿಪ್ರಾಯಪಟ್ಟರೂ ಸಹ ತಮ್ಮ ಸಂಗಾತಿಗಳೊಂದಿಗೆ ಅವರು ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳುತ್ತಾರೆ ಎಂದು ಹೇಳಿದೆ".!!

ಖಾಸಾಗಿತನಕ್ಕಿಂತ ಸಂಬಂಧಗಳು ಹೆಚ್ಚು!!
ಶೇ 89% ಪರ್ಸೆಂಟ್ ಜನರು ಸಂಬಂಧದಲ್ಲಿ ಖಾಸಗಿತನ ಅತ್ಯಂತ ಮುಖ್ಯ ಎಂದು ಹೇಳಿದರೆ, ಅದರಲ್ಲಿ ಶೇ. 84% ಪರ್ಸೆಂಟ್ ಜನರು ವೈಯಕ್ತಿಕ ಪಾಸ್‌ವರ್ಡ್, ಪಿನ್‌ಗಳನ್ನು ತಮ್ಮ ಸಂಗಾತಿಗಳೊಡನೆ ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ. ಹಾಗಾಗಿ, ಖಾಸಾಗಿತನಕ್ಕಿಂತ ಸಂಬಂಧಗಳು ಹೆಚ್ಚು ಎನ್ನುವ ತೀರ್ಮಾನಕ್ಕೆ ಬರಬಹುದಾಗಿದೆ.!!


Click it and Unblock the Notifications








