ಸ್ಮಾಟ್ ಪೋನ್ ನಲ್ಲಿ ಸುರಕ್ಷಿತವಾಗಿ ಬ್ರೌಸ್ ಮಾಡುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್
ಇಂದಿನ ದಿನದಲ್ಲಿ ಸ್ಮಾಟ್ ಪೋನ್ ನಲ್ಲಿ, ಇಂಟರ್ನೆಟ್ ಬ್ರೌಸ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಅದರಲ್ಲಿಯೂ ಮೊಬೈಲ್ ಬ್ಯಾಕಿಂಗ್ ತೀವ್ರ ಗತಿಯಲ್ಲಿ ಬೆಳವಣಿಗೆಯನ್ನು ಸಾಧಿಸುತ್ತದೆ. ಈ ಹಿನ್ನಲೆಯಲ್ಲಿ ನಿಮ್ಮ ಸ್ಮಾಟ್ ಪೋನ್ ಗಳ ಮೇಲೆ ಕಣ್ಣಿಟ್ಟಿರುವ ಹ್ಯಾಕರ್ಸ್, ಬ್ರೌಸರ್ ಗಳ ಮೂಲಕ ನಿಮ್ಮ ಮಾಹಿತಿಯನ್ನು ಕದಿಯುವ ಸಾಧ್ಯತೆಯು ತೀರಾ ದಟ್ಟವಾಗಿದೆ. ಹಾಗಾಗಿ ನಿಮ್ಮ ಸ್ಮಾಟ್ ಪೋನ್ ಗಳನ್ನು ಸುರಕ್ಷಿತವಾಗಿರಿಸುವ ಅನೇಕ ವಿಧಾನಗಳು ಸ್ಮಾಟ್ ಪೋನ್ ನಲ್ಲಿ ಲಭ್ಯವಿದ್ದು ಅವುಗಳನ್ನು ಬಳಕೆ ಮಾಡಿಕೊಳ್ಳವುದು ಹೇಗೆ ಎಂಬುದನ್ನು ಮುಂದಿನಂತೆ ತಿಳಿಯಿರಿ.

ಕ್ರೋಮ್
ನೀವು ಕ್ರೋಮ್ ನಲ್ಲಿ ಬ್ರೌಸ್ ಮಾಡಿತ್ತಿದ್ದರೆ, ಸೆಟ್ಟಿಂಗ್ಸ್ ಗೆ ಹೋಗಿ, ಅಲ್ಲಿ ಪ್ರೈವಸಿ ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮಗೆ ಹಲವು ಆಯ್ಕೆ ಸಿಗುತ್ತವೆ. ಅದರಲ್ಲಿ
ಸೇಫ್ ಮೋಡ್- ಈ ಮೋಡ್ ನಲ್ಲಿ ಬ್ರೌಸ್ ಮಾಡಿದರೆ ಯಾವುದಾದರೂ ವೈರಸ್ ಇದ್ದರೆ ನಿಮಗೆ ಹೆಚ್ಚರಿಕೆ ನೀಡುತ್ತದೆ.
ಡು ನಾಟ್ ಟ್ರಾಕ್- ಈ ಮೋಡ್ ನಲ್ಲಿ ನೀವು ಬ್ರೌಸ್ ಮಾಡಿದರೆ, ಟ್ರಾಕ್ ಮಾಡಲು ಸಾಧ್ಯವಿಲ್ಲ. ಆದರೆ ಕೆಲವೊಮ್ಮೆ ಇದು ಕಾರ್ಯ ನಿರ್ವಹಿಸದೇ ಇರಬಹುದು
ಇನ್ ಕಾಗ್ ನಿಟೋ ಮೋಡ್- ಇಲ್ಲಿ ನೀವು ಬ್ರೌಸ್ ಮಾಡಿದರೆ ನಿಮ್ಮ ಯಾವುದೇ ಬ್ರೌಸಿಂಗ್ ಹಿಸ್ಟ್ರಿ ಸೇವ್ ಆಗುವುದಿಲ್ಲ

ಫಯರ್ ಫಾಕ್ಸ್- ಮೆನುವಿನಲ್ಲಿ ಸೆಟ್ಟಿಂಗ್ಸ್ ಗೆ ಹೋಗಿ, ಹೇಗೆ ಮಾಡಿ
ಟ್ರಾಕಿಂಗ್ ಪ್ರೋಟೆಕ್ಷನ್- ಬ್ರೌಸರ್ ನಲ್ಲಿ ಕಾಣುವ ಶೀಲ್ದ್ ಮಾದರಿಯ ಐಕಾನ್ ಮೇಲೆ ಕ್ಲಿಕ್ ಮಾಡಿದರೆ ಈ ಮೋಡ್ ಆಕ್ಟಿವೇಟ್ ಆಗಲಿದ್ದು ಸುರಕ್ಷಿತವಾಗಿ ಬ್ರೌಸ್ ಮಾಡಬಹುದು


ಸಫಾರಿ
ಈ ಬ್ರೌಸರ್ ನಲ್ಲಿ ಸೆಟ್ಟಿಂಗ್ಸ್ ಗೆ ಹೋಗಿ, ಅಲ್ಲಿ ಪ್ರೈವಸಿ ಮತ್ತು ಸೆಕ್ಯೂರಿಟಿ ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮಗೆ ಹಲವು ಆಯ್ಕೆ ಸಿಗುತ್ತವೆ.
ಪ್ರಿವೆಂಟ್ ಕ್ರಾಸ್ ಸೈಟ್ ಚೆಕಿಂಗ್- ನೀವು ಯಾವುದೇ ವೆಬ್ ಪೇಜ್ ಗೆ ಹೋದರೂ ಅದನ್ನು ಬ್ರೌಸರ್ ಟ್ರಾಕ್ ಮಾಡುವುದಿಲ್ಲ
ಬ್ಲಾಕ್ ಆಲ್ ಕುಕ್ಕೀಸ್- ನೀವು ಯಾವುದೇ ವೆಬ್ ಸೈಟ್ ಗೆ ಬೇಟಿ ಕೊಟ್ಟರೂ ಅದನ್ನು ಸೇವ್ ಮಾಡಿಕೊಳ್ಳುವುದಿಲ್ಲ
ಇದಲ್ಲದೆ, ಮೃಕ್ರೋ ಫೋನ್ ಮತ್ತು ಕ್ಯಾಮರಾವನ್ನು ಡಿಸೇಬಲ್ ಮಾಡಬಹುದು
ಡಕ್ ಡಕ್ ಗೋ- ಇದು ಬ್ರೌಸಿಂಗ್ ಆಪ್ ಆಗಿದ್ದು, ಬಳಕೆದಾರರ ಮಾಹಿತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೋರಿ ಹೋಗದಂತೆ ತಡೆಯುತ್ತದೆ. ಮತ್ತು ಸುರಕ್ಷತವಾಗಿ ಎನ್ ಸ್ಕ್ರಿಪ್ ಟೆಡ್ ಬ್ರೌಸ್ ಮಾಡಲು ಸಹಾಯ ಮಾಡುತ್ತದೆ.


Click it and Unblock the Notifications








