ಅತ್ಯುತ್ತಮ ಇಯರ್‌ಫೋನ್‌ ಒಂದನ್ನು ಖರೀದಿಸುವುದು ಹೇಗೆ?

|

ನಿಮಗೆ ತಿಳಿದರಲಿ. ಯಾವುದೇ ಮೊಬೈಲ್‌ ಜೊತೆ ಕೆಲವು ಕಂಪೆನಿಗಳು ನೀಡುವ ಇಯರ್‌ಫೋನಿನ ಗುಣಮಟ್ಟ ಅಷ್ಟಕ್ಕಷ್ಟೆ ಎನ್ನುವಂತಿರುತ್ತದೆ. ಕಡಿಮೆ ಬೆಲೆಯ ಇಯರ್‌ಫೋನ್‌ ಅಷ್ಟೇ ನೀಡುತ್ತಾರೆ. ಎಷ್ಟೇ ಒಳ್ಳೆಯ ಮೊಬೈಲ್‌ ಇದ್ದರೂ, ಅದರಲ್ಲಿ ಉತ್ತಮ ಆಡಿಯೋ ಇಂಜಿನ್ ಇದ್ದರೂ ಆ ಇಯರ್‌ಫೋನ್‌ ಕಡಿಮೆ ದರ್ಜೆಯದಾದ್ದರಿಂದ ಸಂಗೀತ ಹಿತಾನುಭವ ನೀಡುವುದಿಲ್ಲ. ಅದಕ್ಕಾಗಿಯೇ, ಇತ್ತೀಚಿನ ಬಹುತೇಕ ಮೊಬೈಲ್ ಕಂಪೆನಿಗಳು ಮೊಬೈಲ್ ಜೊತೆ ಇಯರ್ ಫೋನ್ ಅನ್ನು ನೀಡುತ್ತಿಲ್ಲ.

ಅತ್ಯುತ್ತಮ ಇಯರ್‌ಫೋನ್‌ ಒಂದನ್ನು ಖರೀದಿಸುವುದು ಹೇಗೆ?

ಉದಾಹರಣೆಗೆ ಒನ್‌ಪ್ಲಸ್‌, ಶಿಯೋಮಿ, ಹಾನರ್ ಮತ್ತಿತರ ಮೊಬೈಲ್ ಕಂಪೆನಿಗಳು ತಮ್ಮ ಮೊಬೈಲ್ ಬಾಕ್ಸ್‌ನಲ್ಲಿ ಇಯರ್ ಫೋನ್‌ ನೀಡುವುದಿಲ್ಲ.ಇದಕ್ಕೆ ಬೆಲೆ ಹೆಚ್ಚಳವಾಗುವುದು ಒಂದು ಕಾರಣವಾದರೆ, ಆ ಮೊಬೈಲ್ ಜೊತೆಗೆ ಅತ್ಯುತ್ತಮ ಹೆಡ್‌ಫೋನ್ ಅನ್ನು ನೀಡಲು ಸಾಧ್ಯವಿಲ್ಲ ಎಂಬುದು ಅವುಗಳ ವಾದ. ಹಾಗಾಗಿ, ನಾವೀಗ ಬಿಡಿಯಾಗಿಯೇ ಹೆಡ್‌ಪೋನ್ ಒಂದನ್ನು ಖರೀದಿಸಬೇಕು. ಹಾಗಾದರೆ, ಅತ್ಯುತ್ತಮ ಇಯರ್ ಫೋನ್‌ ಒಂದನ್ನು ಖರೀದಿಸುವುದು ಹೇಗೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಬ್ರ್ಯಾಂಡ್ ನೋಡಿ ಖರೀದಿಸುವುದು ಮುಖ್ಯ!

ಬ್ರ್ಯಾಂಡ್ ನೋಡಿ ಖರೀದಿಸುವುದು ಮುಖ್ಯ!

ಮಾರುಕಟ್ಟೆಯಲ್ಲಿ ಕನಿಷ್ಠ 600 ರೂ. ನಿಂದ ಆರಂಭವಾಗಿ ಸಾವಿರಾರು ರೂ.ಗಳವರೆಗೆ ಉತ್ತಮ ಇಯರ್‌ಫೋನ್‌ ದೊರಕುತ್ತವೆ. ಆದರೆ, ಅವುಗಳನ್ನು ಖರೀದಿಸುವಾಗ ಬ್ರ್ಯಾಂಡ್‌ಗಳು ಸಹ ಮುಖ್ಯವಾಗುತ್ತವೆ. ಕೆಲವೊಮ್ಮೆ ನಿಮಗೆ ತಿಳಿಯದ ಬ್ರ್ಯಾಂಡ್‌ಗಳ ಹೆಡ್‌ಪೋನ್ ಕೂಡ ನಿಮಗೆ ಇಷ್ಟವಾಗುತ್ತದೆ. ಇಂತಹ ಸಮಯದಲ್ಲಿ ಫ್ಲಿಪ್‌ಕಾರ್ಟ್ ಅಥವಾ ಅಮೆಜಾನ್ ವೆಬ್‌ಸೈಟ್‌ಗಳ ಮೂಲಕ ಅವುಗಳ ರಿವ್ಯೂ ನೋಡಿ ಅವನ್ನು ಖರೀದಿಸಬಹುದು. ಇದು ಉತ್ತಮ ಇಯರ್ ಫೋನ್‌ ಖರೀದಿಗೆ ಇರುವ ಮೊದಲ ಹೆಜ್ಜೆ.!

1500-2000 ರೂ.ವರೆಗೂ ಬಜೆಟ್ ವಿಸ್ತರಿಸಿಕೊಳ್ಳಿ!

1500-2000 ರೂ.ವರೆಗೂ ಬಜೆಟ್ ವಿಸ್ತರಿಸಿಕೊಳ್ಳಿ!

ಮಾರುಕಟ್ಟೆಯಲ್ಲಿ ಕನಿಷ್ಠ 600 ರೂ. ನಿಂದ ಆರಂಭವಾಗಿ ಸಾವಿರಾರು ರೂ.ಗಳವರೆಗೆ ಉತ್ತಮ ಇಯರ್‌ಫೋನ್‌ ದೊರಕುತ್ತವೆ. ಆದರೆ, ನೀವು ಸಂಗೀತ ಪ್ರಿಯರಾಗಿದ್ದರೆ ನಿಮಗೆ 1500-2000 ರೂ.ವರೆಗಿನ ಇಯರ್‌ಫೋನ್‌ಗಳು ಬೆಸ್ಟ್ ಎಂದು ಹೇಳಬಹುದು. ನನ್ನ ಅನುಭವದಂತೆ, ಪ್ರಸ್ತುತ 1500-2000 ರೂ.ವರೆಗಿನ ಬೆಲೆಯಲ್ಲಿ ನಮ್ಮ ಬಜೆಟ್‌ಗೆ ಅತ್ಯುತ್ತಮ ಎನಿಸುವಂತಹ ಇಯರ್‌ಫೋನ್‌ ಸಿಗುತ್ತದೆ. ಬೆಲೆ ಹೆಚ್ಚಿದಂತೆ ಇಯರ್‌ಫೋನ್ ಗುಣಮಟ್ಟ ಕೂಡ ಹೆಚ್ಚಾಗುತ್ತದೆ.

ಸೆನ್‌ಹೈಸರ್ ಸಿಎಕ್ಸ್ 275 ಎಸ್‌

ಸೆನ್‌ಹೈಸರ್ ಸಿಎಕ್ಸ್ 275 ಎಸ್‌

ಇಯರ್‌ಫೋನ್‌ ವಿಷಯಕ್ಕೆ ಬಂದರೆ ಸೋನಿ, ಸೆನ್‌ಹೈಸರ್‌, ಸ್ಕಲ್‌ಕ್ಯಾಂಡಿ ಬ್ರಾಂಡ್‌ಗಳಿಗೆ ಉತ್ತಮ ಹೆಸರಿದೆ ಎಂಬುದು ನಿಮಗೆ ತಿಳಿದಿರಲಿ. ಶಿಯೋಮಿ ಕೂಡ ಕಡಿಮೆ ದರದಲ್ಲಿ ಉತ್ತಮ ಇಯರ್‌ಫೋನ್‌ಗಳನ್ನು ನೀಡುತ್ತಿದೆ.ಇವುಗಳಲ್ಲಿ ಬಜೆಟ್ ಬೆಲೆಯ ಸೆನ್‌ಹೈಸರ್‌ನಲ್ಲಿ ಸಿಎಕ್ಸ್‌ 275 ಎಸ್‌ ಇಯರ್‌ಫೋನ್ ನಿಮ್ಮ ಮೊದಲ ಆಯ್ಕೆಯಾಗಬಹುದು.ಗುಣಮಟ್ಟದ ಧ್ವನಿ, ಬಾಸ್‌ ಮತ್ತು ಟ್ರೆಬಲ್ ತಂತ್ರಜ್ಞಾವನ್ನು ಹೊಂದಿರುವ ಇದರ ದರ 1575 ರೂಪಾಯಿಗಳಾಗುತ್ತವೆ.

ಸೋನಿ ಎಂಡಿಆರ್ ಎಕ್ಸ್‌ಬಿ 55

ಸೋನಿ ಎಂಡಿಆರ್ ಎಕ್ಸ್‌ಬಿ 55

ಸೆನ್‌ಹೈಸರ್‌ನಲ್ಲಿ ಸಿಎಕ್ಸ್‌ 275 ಎಸ್‌ ಮೊದಲ ಆಯ್ಕೆಯಾದರೆ, ಸೋನಿ ಎಂಡಿಆರ್ ಎಕ್ಸ್‌ಬಿ 55 ಇಯರ್‌ಫೋನ್‌ ನಿಮ್ಮ ಎರಡನೇ ಆಯ್ಕೆಯಾಗಬಹುದು. ಸಂಗೀತ ಕೇಳುವಾಗ ಇರುವ ಇಯರ್‌ಫೋನ್‌ ಬೇಕೆನ್ನುವವರಿಗೆ ಈ ಮಾಡೆಲ್‌ ಉತ್ತಮ ಆಯ್ಕೆ. ಇದರ ದರ ಅಮೆಜಾನ್‌.ಇನ್‌ ನಲ್ಲಿ 1500 ರೂಪಾಯಿಗಳಾಗಿವೆ. ಇದರಲ್ಲಿ ಮೈಕ್ ಇಲ್ಲ ಎನ್ನುವ ಕೊರತೆ ಕಾಡುತ್ತದೆ. ಅಂದರೆ ಕರೆ ಬಂದಾಗ ನೀವು ಈ ಇಯರ್‌ಫೋನ್‌ ಮೂಲಕ ಮಾತನಾಡಲಾಗುವುದಿಲ್ಲ.

ಸೋನಿ ಎಂಡಿಆರ್ ಎಕ್ಸ್‌ಬಿ 55 ಎಪಿ

ಸೋನಿ ಎಂಡಿಆರ್ ಎಕ್ಸ್‌ಬಿ 55 ಎಪಿ

ಸೋನಿ ಎಂಡಿಆರ್ ಎಕ್ಸ್‌ಬಿ 55 ಇಯರ್‌ಫೋನಿನಲ್ಲಿ ಇಲ್ಲದ ಮೈಕ್ ಕೊರತೆಯನ್ನು ಈ ಸೋನಿ ಎಂಡಿಆರ್ ಎಕ್ಸ್‌ಬಿ 55 ಎಪಿ ಇಯರ್‌ಫೋನ್ ನೀಗಿಸುತ್ತದೆ. ಇಯರ್‌ಫೋನ್‌ನಲ್ಲಿ ಉತ್ತಮ ಬಾಸ್‌ ಮತ್ತು ಟ್ರೆಬಲ್‌ ಹಾಗೂ ಆಡಿಯೋ ತಂತ್ರಜ್ಞಾನದ ಜೊತೆಗೆ ಮೈಕ್‌ ಸೌಲಭ್ಯದ ಜೊತೆ ಬಂದಿರುವ ಇಯರ್‌ಪೋನ್ ಇದಾಗಿದೆ. . ಇದರ ದರ 1950 ರೂಪಾಯಿಗಳಾಗಿದ್ದು, ಸೋನಿ ಎಂಡಿಆರ್ ಎಕ್ಸ್‌ಬಿ 55 ಖರೀದಿಗಿಂತ ಇದು ಉತ್ತಮವಾಗಿದೆ.

ಬಜೆಟ್‌ನಲ್ಲಿ ಎಂಐ ಬೆಸ್ಟ್!

ಬಜೆಟ್‌ನಲ್ಲಿ ಎಂಐ ಬೆಸ್ಟ್!

ಇತ್ತ ಬೇಸಿಕ್ ಬೇಡ, ದುಬಾರಿಯೂ ಬೇಡ ಎನ್ನುವವರಿಗೆ ಶಿಯೋಮಿ ಕಂಪೆನಿಯ ಮಿ ಇಯರ್‌ಫೋನ್‌ಗಳು ಅತ್ಯುತ್ತಮ ಆಯ್ಕೆಯಾಗುತ್ತವೆ. ಮಿ ಇಯರ್‌ಫೋನ್‌ ಬೇಸಿಕ್ ಎಂಬ ಮಾಡೆಲ್‌ 399 ರೂ.ಗೆ ದೊರಕುತ್ತದೆ.ಬೆಸಿಕ್ ಇಯರ್‌ಫೋನ್‌ಗಳಲ್ಲಿ ಇದು ಉತ್ತಮ ಇಯರ್‌ಫೋನ್‌ ಎಂದು ಹೇಳಬಹುದು. ಹಾಗೆಯೇ, 699 ರೂ. ಗೆ ಎಂಐ ಇಯರ್‌ಫೋನ್‌ ಒಂದು ದೊರೆಯುತ್ತದೆ. ಇದು ಬೇಸಿಕ್‌ ಬೇಡ, ದುಬಾರಿಯೂ ಬೇಡ ಅನ್ನುವವರಿಗೆ ಅತ್ಯುತ್ತಮ ಇಯರ್‌ಫೋನ್‌ ಆಗುತ್ತದೆ ಎನ್ನಬಹುದು.

ಬೋಟ್‌ ಬಾಸ್‌ಹೆಡ್ಸ್ 225

ಬೋಟ್‌ ಬಾಸ್‌ಹೆಡ್ಸ್ 225

ಅಧಿಕ ಬಾಸ್‌ಗೆ ಹೆಸರಾಗಿರುವ ಈ ಮಾಡೆಲ್‌ ಅಮೆಜಾನ್‌ನಲ್ಲಿ 500 ರೂ.ಗೆ ಮಾರಾಟವಾಗುತ್ತಿದೆ. ಇದು ಸಹ ಜನಪ್ರಿಯ ಇಯರ್‌ ಫೋನ್‌ ಆಗಿದೆ. ಇನ್ನು ಜೆಬಿಎಲ್, ಸ್ಕಲ್‌ಕ್ಯಾಂಡಿ, ಕ್ರಿಯೇಟಿವ್‌ ಬ್ರಾಂಡ್‌ಗಳಲ್ಲೂ ಉತ್ತಮ ಇಯರ್‌ಫೋನ್‌ಗಳಿವೆ. ಇತ್ತೀಚಿಗೆ ಝೆಬ್ರಾನಿಕ್ಸ್ ಕೂಡ ಅತ್ಯಂತ ಕಡಿಮೆ ಬೆಲೆಯಲ್ಲಿ ಪರವಾಗಿಲ್ಲ ಎನ್ನುವ ಗುಣಮಟ್ಟದಲ್ಲಿ ಇಯರ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಇವುಗಳ ಆಯ್ಕೆಯಲ್ಲಿ ಜಾಣ್ಮೆ ನಿಮ್ಮದು.

Best Mobiles in India

English summary
How to buy a good earphone? Buy earphone online at best prices in India. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X