ಸುಲಭವಾಗಿ ಇಎಂಐನಲ್ಲಿ ಸ್ಮಾರ್ಟ್‌ಫೋನ್ ಖರೀದಿಸುವುದು ಹೇಗೆ..?

By GizBot Bureau
|

ಮಗ ಅಪ್ಪನ ಬಳಿ ತನಗೊಂದು ಮೊಬೈಲ್ ಕೊಡಿಸುವಂತೆ ಪ್ರಸ್ತಾಪಿಸಿದ. ಒಂದೇ ಸಲ ಅಷ್ಟೊಂದು ದುಡ್ಡು ಕೊಟ್ಟು ಮೊಬೈಲ್ ಕೊಡಿಸೋಕೆ ನನ್ನನ್ನೇನು ಕೊಟ್ಯಾಧೀಶರ ಮೊಮ್ಮಗ ಅನ್ಕೊಂಡಿದಿಯೇನೋ ಅಂತ ಅಪ್ಪ ಮಗನನ್ನು ದಬಾಯಿಸಿದರು. ಸಹಜವೇ ಅಲ್ವಾ? ದಿನದಿಂದ ದಿನಕ್ಕೆ ಅಪ್ ಡೇಟ್ ಆಗುತ್ತಿರುವ ಜಗತ್ತಲ್ಲಿ ಮಕ್ಕಳೂ ಕೂಡ ಸಣ್ಣ ಮಟ್ಟದ ಮೊಬೈಲ್ ಕೇಳುವುದಿಲ್ಲ, ಅವರಿಗೂ ದುಬಾರಿ ಬೆಲೆಯ ಸ್ಮಾರ್ಟ್ ಫೋನ್ ಗಳೇ ಬೇಕು ಅನ್ನಿಸುತ್ತದೆ. ಆದರೆ ಅಂತಹ ಫೋನ್ ತಂದೆಗೆ ಒಮ್ಮೆಲೆ ಹಣ ಹಾಕಿ ಕೊಡಿಸುವುದು ಕಷ್ಟವಾಗಬಹುದು.

ಸುಲಭವಾಗಿ ಇಎಂಐನಲ್ಲಿ ಸ್ಮಾರ್ಟ್‌ಫೋನ್ ಖರೀದಿಸುವುದು ಹೇಗೆ..?

ಇದೊಂದೇ ಪ್ರಕರಣ ಅಲ್ಲ, ಅದೆಷ್ಟೊ ಸಲ ಒಂದು ಫೋನ್ ಖರೀದಿಸಬೇಕು ಎಂದು ಅಂದುಕೊಂಡರೂ ಅಷ್ಟೊಂದು ದುಡ್ಡು ಇಲ್ಲವಲ್ಲ ಮತ್ತೊಮ್ಮೆ ನೋಡೋಣ ಅಂತ ಮುಂದೂಡುತ್ತೇವೆ. ಆದರೆ ಈಗೆಲ್ಲ ನಿಮ್ಮ ಮೊಬೈಲ್ ಕನಸನ್ನ ಪೂರೈಸಿಕೊಳ್ಳದೇ ಹಾಗೆ ಮರೀಚಿಕೆ ಮಾಡಿಕೊಳ್ಳುವ ಅಗತ್ಯವಿಲ್ಲ. ಯಾಕೆಂದರೆ ಸಾಕಷ್ಟು ಆನ್ ಲೈನ್ ರೀಟೈಲ್ ವೆಬ್ ಸೈಟ್ ಗಳು ಹಲವಾರು ರೀತಿಯ ಆಫರ್ ಗಳನ್ನು, ರಿಯಾಯಿತಿ ದರವನ್ನು, ಕ್ಯಾಷ್ ಬ್ಯಾಕ್ ಮತ್ತು ನೋ-ಕಾಸ್ಟ್ ಇಎಂಐ ಆಯ್ಕೆಗಳನ್ನು ಒದಗಿಸುತ್ತಿದ್ದಾರೆ. ಅದರಲ್ಲಿ ಪ್ರಮುಖವಾಗಿ ಇಎಂಐ ಅಂದರೆ ಕಂತಿನ ರೂಪದಲ್ಲಿ ಪ್ರತಿ ತಿಂಗಳು ಇಂತಿಷ್ಟು ಎಂದು ಹಣ ಪಾವತಿಸಿ ಮೊಬೈಲ್ ಖರೀದಿ ಮಾಡಬಹುದು.

ನಮ್ಮ ದೇಶದಲ್ಲಿ ಅದೆಷ್ಟೊ ಜನ ಇಎಂಐ ಆಯ್ಕೆಯಲ್ಲಿ ಮೊಬೈಲ್ ಖರೀದಿಸಲು ಉತ್ಸುಕರಾಗಿದ್ದಾರೆ. ಬೇರೆ ಬೇರೆ ಕಂತಿನ ರೂಪವನ್ನೂ ಇದಕ್ಕೆ ನೀಡಲಾಗುತ್ತದೆ.ಆಯ್ಕೆ ನಿಮ್ಮದಾಗಿರುತ್ತದೆ. ಒಂದೊಂದರಲ್ಲಿ ಒಂದೊಂದು ರೀತಿಯ , ಒಂದೊಂದು ಫೋನಿಗೆ ಒಂದೊಂದು ಸ್ವರೂಪದ ಇಎಂಐ ಆಯ್ಕೆಗಳಿರುತ್ತದೆ.

ಇಎಂಐ ನಲ್ಲಿ ಮೊಬೈಲ್ ಖರೀದಿಸುವುದು ಬಹಳ ಸುಲಭವಾದ ಮಾರ್ಗವಾಗಿದೆ. ಸರಿಯಾದ ಕ್ರೆಡಿಟ್ ಲಿಮಿಟ್ ಇರುವ ಕ್ರೆಡಿಟ್ ಕಾರ್ಡ್ ಬೇಕಾಗುತ್ತದೆ ಅಷ್ಟೇ. ಒಂದು ವೇಳೆ ನೀವು ಇಎಂಐ ಆಯ್ಕೆಯಲ್ಲಿ ಮೊಬೈಲ್ ಖರೀದಿಸುವ ಬಗ್ಗೆ ತಿಳಿದಿಲ್ಲವಾದರೆ ಈ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ.

ಮೊದಲಿಗೆ ತಿಳಿದಿರಬೇಕಾಗಿರುವ ಪ್ರಾಥಮಿಕ ಅಂಶಗಳು

• ಇಎಂಐ ಮೂಲಕ ಫೋನ್ ಖರೀದಿಸಬೇಕು ಎಂದರೆ, ನೀವು ಸರಿಯಾದ ಕ್ರೆಡಿಟ್ ಲಿಮಿಟ್ ಇರುವ ಕ್ರೆಡಿಟ್ ಕಾರ್ಡ್ ನ್ನು ಬಳಕೆ ಮಾಡಬೇಕು.

• ಇಎಂಐ ಆಯ್ಕೆಯು ಆನ್ ಲೈನ್ ಮತ್ತು ಆಫ್ ಲೈನ್ ಎರಡರಲ್ಲೂ ಲಭ್ಯವಾಗುತ್ತದೆ.

• ನಿಮ್ಮ ಕಾರ್ಡಿನ ವಿವರಗಳನ್ನು ರೆಡಿ ಮಾಡಿ ಇಟ್ಟುಕೊಳ್ಳಿ

• ಓಟಿಪಿಗಾಗಿ ನಿಮ್ಮ ಫೋನಿಗೆ ಆಕ್ಸಿಸ್ ಇಟ್ಟುಕೊಂಡಿರಿ.


ಆನ್ ಲೈನ್ ಖರೀದಿಗೆ ಹೇಗೆ ? :

1. ಆನ್ ಲೈನ್ ವೆಬ್ ಸೈಟ್ ಅಥವಾ ಆಪ್ ನ್ನು ತೆರೆಯಿರಿ .

2. ಯಾವ ಸ್ಮಾರ್ಟ್ ಫೋನ್ ಖರೀದಿಸಲು ನೀವು ಇಚ್ಛಿಸುತ್ತಿದ್ದೀರಿ ಅದನ್ನು ಆಯ್ಕೆ ಮಾಡಿಕೊಳ್ಳಿ.

3. 'Buy Now’ ಆಯ್ಕೆಯನ್ನು ಟ್ಯಾಪ್ ಮಾಡಿ.

4. ನಿಮ್ಮ ವಿಳಾಸವನ್ನು ಆಯ್ಕೆ ಮಾಡಿ ಅಥವಾ ಬರೆಯಿರಿ ಮತ್ತು ಕಂಟಿನ್ಯೂ ಆಯ್ಕೆಯನ್ನು ಒತ್ತಿ.ಇದು ನಿಮ್ಮನ್ನು ಪಾವತಿ ವಿಭಾಗಕ್ಕೆ ಕೊಂಡೊಯ್ಯುತ್ತದೆ.

5. ಇಲ್ಲಿ ಪಾವತಿ ಮೋಡ್ ನ್ನು ಇಎಂಐ ಎಂದು ಆಯ್ಕೆ ಮಾಡಿ ಮತ್ತು ಕಂಟಿನ್ಯೂ ಬಟನ್ ನ್ನು ಒತ್ತಿ.

6. ನಿಮ್ಮ ಕ್ರೆಡಿಟ್ ಕಾರ್ಡ್ ನ ಬ್ಯಾಂಕ್ ನ್ನು ಆಯ್ಕೆ ಮಾಡಿ.

7. ಇಎಂಐ ನ ಟೈಮ್ ಪಿರೇಡ್ ನ್ನು ಆಯ್ಕೆ ಮಾಡಿ ( 3 ತಿಂಗಳಿನಿಂದ 24 ತಿಂಗಳವರೆಗಿನ ಆಯ್ಕೆಗಳಿರುತ್ತದೆ. )

8. ಕಾರ್ಡಿನ ವಿವರಗಳನ್ನು ಬರೆಯಿರಿ ಮತ್ತು ಮುಂದುವರಿಯಲು ಕ್ಲಿಕ್ಕಿಸಿ.

9.ಈಗ ನಿಮಗೊಂದು ಒಟಿಪಿ ಬರಲಿದೆ ಅದು ನೀವು ಬ್ಯಾಂಕ್ ನಲ್ಲಿ ರಿಜಿಸ್ಟರ್ ಮಾಡಿರುವ ಮೊಬೈಲ್ ನಂಬರಿಗೆ ಅದನ್ನು ಕಳುಹಿಸಿಕೊಡಲಾಗುತ್ತದೆ.

10. ಓಟಿಪಿಯನ್ನು ಬರೆದು ಪಾವತಿಯನ್ನು ಪೂರ್ಣಗೊಳಿಸಿ .


ಆಫ್ ಲೈನ್ ಖರೀದಿ ಮಾಡುವುದು ಹೇಗೆ?

ನಿಮ್ಮ ಇಷ್ಟವಾದ ಆಫ್ ಲೈನ್ ರೀಟೈಲರ್ ಶಾಪ್ ಗೆ ತೆರಳಿ ಮತ್ತು ಯಾವ ಫೋನ್ ಖರೀದಿಸಬೇಕು ಎಂಬುದನ್ನು ಆಯ್ಕೆ ಮಾಡಿ. ಕ್ರೆಡಿಟ್ ಕಾರ್ಡ್ ಬಳಸಿ ಪೇಮೆಂಟ್ ಮಾಡಿ ಮತ್ತು ನಂತರ ಅದನ್ನು ಇಎಂಐ ಯಾಗಿ ಕನ್ವರ್ಟ್ ಮಾಡುವ ಅವಕಾಶವಿರುತ್ತದೆ. ಅದನ್ನು ಬ್ಯಾಂಕಿನ ಕಸ್ಟಮರ್ ಕೇರ್ ಗೆ ಕರೆ ಮಾಡಬಹುದು ಇಲ್ಲವೇ ಬ್ಯಾಂಕಿನ ಮೊಬೈಲ್ ಆಪ್ ಬಳಸಿ ಕೂಡ ಮಾಡಬಹುದು.

Best Mobiles in India

English summary
How to buy a smartphone on EMI. To know more this visit Kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X