ಶಾಶ್ವತವಾಗಿ ಡೇಟಾ ಸೇಫ್ ಆಗಿರಲು ನಿಮ್ಮ ಲ್ಯಾಪ್‌ಟಾಪ್ ಲಾಕ್ ಮಾಡುವುದು ಹೇಗೆ?

ನಿಮಗೆ ಗೊತ್ತಾ? ಒಂದು ವೇಳೆ ನೀವು ನಿಮ್ಮ ಲ್ಯಾಪ್‌ಟಾಪ್ ಅನ್ನು ಕಳೆದುಕೊಂಡರೇ ಅದಕ್ಕೆ ನೀವು ಎಷ್ಟೇ ಅತ್ಯುತ್ತಮ ಪಾಸ್‌ವರ್ಡ್ ನೀಡಿದರೂ ಸಹ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾರಾದರೂ ಸುಲಭವಾಗಿ ಕದಿಯಬಹುದು.!!

|

ನಿಮ್ಮ ಲ್ಯಾಪ್‌ಟಾಪ್ ಪಾಸ್‌ವರ್ಡ್‌ನಿಂದ ಸುರಕ್ಷಿತವಾಗಿದೆ ಎಂದು ನೀವಂದುಕೊಂಡಿದ್ದಿರಾ. ಆದರೆ ನಿಮಗೆ ಗೊತ್ತಾ? ಒಂದು ವೇಳೆ ನೀವು ನಿಮ್ಮ ಲ್ಯಾಪ್‌ಟಾಪ್ ಅನ್ನು ಕಳೆದುಕೊಂಡರೇ ಅದಕ್ಕೆ ನೀವು ಎಷ್ಟೇ ಅತ್ಯುತ್ತಮ ಪಾಸ್‌ವರ್ಡ್ ನೀಡಿದರೂ ಸಹ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾರಾದರೂ ಸುಲಭವಾಗಿ ಕದಿಯಬಹುದು.!!

ಹೌದು, ನೀವು ನೀವು ನೀಡಿರುವ ಪಾಸ್‌ವರ್ಡ್‌ ನಿಮ್ಮ ಕಂಪ್ಯೂಟರ್‌ಗೆ ಲಾಗ್‌ಇನ್‌ ಆಗುವುದನ್ನು ತಡೆಯುತ್ತದೆಯೇ ಹೊರತು ಅದರಲ್ಲಿರುವ ಫೈಲ್‌ಗಳನ್ನು ನಕಲು ಮಾಡಿಕೊಳ್ಳುವುದನ್ನಲ್ಲ.! ಕಳ್ಳರು ಲ್ಯಾಪ್‌ಟಾಪ್‌ನ ಹಾರ್ಡ್‌ ಡ್ರೈವ್‌ ತೆಗೆದು ಅದನ್ನು ಇನ್ನೊಂದು ಕಂಪ್ಯೂಟರ್‌ಗೆ ಅಳವಡಿಸಿ ನೀವು ಸಂಗ್ರಹಿಸಿದ್ದ ಫೈಲ್‌ಗಳನ್ನು ತೆಗೆದುಕೊಳ್ಳಬಹುದು.!!

ಶಾಶ್ವತವಾಗಿ ಡೇಟಾ ಸೇಫ್ ಆಗಿರಲು ನಿಮ್ಮ ಲ್ಯಾಪ್‌ಟಾಪ್ ಲಾಕ್ ಮಾಡುವುದು ಹೇಗೆ?

ಹಾಗಾಗಿ, ನೀವು ಮತ್ತಷ್ಟು ಜಾಗರೂಕರಾಗದೇ ಇದ್ದರೆ ನಿಮ್ಮ ಲ್ಯಾಪ್‌ಟಾಪ್ ಡೇಟಾ ಬೇರೆಯವರ ಪಾಲಾಗಬಹದು. ಹಾಗಾದರೆ, ಇಂದಿನ ಲೇಖನದಲ್ಲಿ ನಿಮ್ಮ ಲ್ಯಾಪ್‌ಟಾಪ್ ಅನ್ನು ಕಳೆದುಕೊಂಡರೂ ಸಹ ನಿಮ್ಮ ಡೇಟಾವನ್ನು ಯಾರೂ ಕದಿಯದ ಹಾಗೆ ಮಾಡುವುದು ಹೇಗೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಲ್ಯಾಪ್‌ಟಾಪ್ ಎನ್‌ಕ್ರಿಪ್ಷನ್ ಮಾಡಿ!!

ಲ್ಯಾಪ್‌ಟಾಪ್ ಎನ್‌ಕ್ರಿಪ್ಷನ್ ಮಾಡಿ!!

ನಿಮ್ಮ ಲ್ಯಾಪ್‌ಟಾಪ್ ಡೇಟಾ ಬೇರೆಯವರ ಪಾಲಾಗಬಹುದಾದ ಅಪಾಯಗಳಿಂದ ದತ್ತಾಂಶ ರಕ್ಷಿಸಿಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಈಗ ನಿಮಗೆ ಮೂಡಿದ್ದರೆ ಲ್ಯಾಪ್‌ಟಾಪ್ ಎನ್‌ಕ್ರಿಪ್ಷನ್ ಮಾಡುವದೇ ಇದಕ್ಕೆ ಪರಿಹಾರ. ಸುಲಭವಾಗಿ ಪಾಸ್‌ವರ್ಡ್‌ ಕ್ರಾಕ್ ಮಾಡಿದರೂ ಎನ್‌ಕ್ರಿಪ್ಷನ್ ಇದ್ದರೆ ನಿಮ್ಮ ಡೇಟಾ ಸೇಫ್ ಆಗಿರುತ್ತದೆ.!!

ಎನ್‌ಕ್ರಿಪ್ಟ್ನಿಂದ ಏನು ಉಪಯೋಗ?

ಎನ್‌ಕ್ರಿಪ್ಟ್ನಿಂದ ಏನು ಉಪಯೋಗ?

ಲ್ಯಾಪ್‌ಟಾಪ್ ಅನ್ನು ಎನ್‌ಕ್ರಿಪ್ಟ್ ಮಾಡಿದರೆ ನಿಮ್ಮ ಲ್ಯಾಪ್‌ಟಾಪ್‌ ಕಳುವಾದರೂ ಅದರಲ್ಲಿರುವ ದತ್ತಾಂಶ ಪಡೆಯಲಾಗುವುದಿಲ್ಲ.! ಎನ್‌ಕ್ರಿಪ್ಟ್ ಎಂಬುದು ದತ್ತಾಂಶವನ್ನು ಅದಲುಬದಲಾಗಿ ಮಾಡುವ ಗಣಿತ ಪ್ರಕ್ರಿಯೆ ಆಗಿರುವುದರಿಂದ ಲ್ಯಾಪ್‌ಟಾಪ್‌ ಅನ್ನೇ ಎನ್‌ಕ್ರಿಪ್ಟ್ ಮಾಡಿದರೆ ಪಾಸ್‌ವರ್ಡ್‌ ರೀಸೆಟ್ ಮಾಡುವುದು ಕಷ್ಟಸಾದ್ಯ.!!

ಎನ್‌ಕ್ರಿಪ್ಟ್ ಖಚಿತಪಡಿಸಿಕೊಳ್ಳಿ!!

ಎನ್‌ಕ್ರಿಪ್ಟ್ ಖಚಿತಪಡಿಸಿಕೊಳ್ಳಿ!!

ನೀವು ಈಗಾಗಲೇ ವಿಂಡೋಸ್‌ 10 ಮಾದರಿಯ ಲ್ಯಾಪ್‌ಟಾಪ್ ಅನ್ನು ಉಪಯೋಗಿಸುತ್ತಿದ್ದರೆ, ಅದರಲ್ಲಿ ಡಿಫಾಲ್ಟ್‌ ಆಗಿ ಎನ್‌ಕ್ರಿಪ್ಟ್ ಸೌಲಭ್ಯ ನೀಡಿರಲಾಗುತ್ತದೆ. ಒಂದು ವೇಳೆ ನಿಮ್ಮ ಲ್ಯಾಪ್‌ಟಾಪ್ ಎನ್‌ಕ್ರಿಪ್ಟ್ ಆಗಿದಯೇ ಎಂಬುದು ನಿಮಗೆ ತಿಳಿಯಬೇಕಾದರೆ ಸೆಟ್ಟಿಂಗ್ಸ್ ತೆರೆದು ಎಬೌಟ್‌, ಡಿವೈಸ್‌ ಎನ್‌ಕ್ರಿಪ್ಷನ್ ಮೂಲಕ ಖಚಿತಪಡಿಸಿಕೊಳ್ಳಿ.!!

ಎನ್‌ಕ್ರಿಪ್ಟ್ ಮಾಡುವುದು ಹೇಗೆ?

ಎನ್‌ಕ್ರಿಪ್ಟ್ ಮಾಡುವುದು ಹೇಗೆ?

ಕೆಲವೇ ನಿಮಿಷಗಳಲ್ಲಿ ಯಾರು ಬೇಕಾದರೂ ಲ್ಯಾಪ್‌ಟಾಪ್ ಅನ್ನು ಎನ್‌ಕ್ರಿಪ್ಟ್ ಮಾಡಬಹುದು. ನಿಮ್ಮ ಲ್ಯಾಪ್‌ಟಾಪ್‌ ಎನ್‌ಕ್ರಿಪ್ಷನ್‌ಗೆ ಲಭ್ಯವಿಲ್ಲದಿದ್ದರೆ, ಬಿಟ್‌ಲಾಕರ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ವಿಂಡೋಸ್‌ನ ಕಂಟ್ರೋಲ್‌ ಪ್ಯಾನೆಲ್‌, ಸಿಸ್ಟಂ ಮತ್ತು ಸೆಕ್ಯುರಿಟಿ, ಮ್ಯಾನೇಜ್‌ ಬಿಟ್‌ಲಾಕರ್ ವಿಧಾನವನ್ನು ಅಳವಡಿಸಿಕೊಂಡು ಎನ್‌ಕ್ರಿಪ್ಟ್ ಮಾಡಬಹುದು.!!

How to find out where you can get your Aadhaar card done (KANNADA)
ಎನ್‌ಕ್ರಿಪ್ಟ್  ಮಾಡುವುದು ಒಳಿತು!!

ಎನ್‌ಕ್ರಿಪ್ಟ್ ಮಾಡುವುದು ಒಳಿತು!!

ನಿಮ್ಮ ಲ್ಯಾಪ್‌ಟಾಪ್ ಕಳುವಾಗಲಿ ಅಥವಾ ಬಿಡಲಿ ನಿಮ್ಮ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಅನ್ನು ಎನ್‌ಕ್ರಿಪ್ಟ್ ಮಾಡುವುದು ಒಳಿತು. ಇತ್ತೀಚಿನ ದಿನಗಳಲ್ಲಿ ಎಲ್ಲ ವ್ಯವಹಾರಗಳೂ ಕೂಡ ಕಂಪ್ಯೂಟರ್ ಮೂಲಕವೇ ನಡೆಯುವುದರಿಂದ ಪ್ರತಿಯೋರ್ವರ ಕಂಪ್ಯೂಟರ್ ಎನ್‌ಕ್ರಿಪ್ಟ್ ಆಗಿರಲೇಬೇಕು ಎಂಬುದು ಕಂಪ್ಯೂಟರ್ ಯುಗದ ಮಾತು.!!

ಹೆದ್ದಾರಿ ಪ್ರಯಾಣಿಕರಿಗಾಗಿ ಆಪ್!..ಪ್ರಯಾಣಿಸುವಾಗ ಆಪ್ ಮೂಲಕ ವಿಡಿಯೋ ಮಾಡಬಹುದು!!ಹೆದ್ದಾರಿ ಪ್ರಯಾಣಿಕರಿಗಾಗಿ ಆಪ್!..ಪ್ರಯಾಣಿಸುವಾಗ ಆಪ್ ಮೂಲಕ ವಿಡಿಯೋ ಮಾಡಬಹುದು!!

Best Mobiles in India

English summary
Click the lock in the bottom left-hand corner of the window to make changes. Type in your password when prompted. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X