Home
ಟೆಕ್ ನೌಕರಿ

'ಪೆನ್‌ಡ್ರೈವ್‌' ವೇಗವನ್ನು ಹೆಚ್ಚಿಸಲು ಇರುವ ಮಾರ್ಗಗಳು!

ಬೇಕಾದ ಫೈಲ್ಸ್, ಚಿತ್ರಗಳು ವಿಡಿಯೋಗಳು ಸೇರಿದಂತೆ ಎಲ್ಲಾ ಡಾಟಾವನ್ನು ಶೇಖರಿಸಿ ಅದರನ್ನು ಯಾವಾಗ ಬೇಕಾದರೂ ಎಲ್ಲಿ ಬೇಕಾದರೂ ಬಳಸಬಹುದಾದ 'ಪೆನ್‌ಡ್ರೈವ್‌' ಬಗ್ಗೆ ಎಲ್ಲರಿಗೂ ತಿಳಿದಿದೆ ಎನ್ನಬಹುದು. ಪ್ರಸ್ತುತ ದಿನಗಳಲ್ಲಿ ಆನ್‌ಲೈನ್ ಡ್ರೈವ್ ವ್ಯವಸ್ಥೆ ಬಂದ ನಂತರ ಇದರ ಜನಪ್ರಿಯತೆ ಸ್ವಲ್ಪ ಕುಗ್ಗಿದೆ ಎನ್ನಬಹುದಾದರೂ, ಇಂಟರ್‌ನೆಟ್‌ ಅವಶ್ಯಕತೆಯಿಲ್ಲದೇ ಒಂದು ಡಿವೈಸ್‌ನಿಂದ ಇನ್ನೊಂದು ಡಿವೈಸ್ಗೆ ಮಾಹಿತಿ ವರ್ಗಾಯಿಸಬಹುದಾದ 'ಪೆನ್‌ಡ್ರೈವ್' ಕೆಲಸ ಮಾತ್ರ ಕಡಿಮೆಯಾಗಿಲ್ಲ.!

'ಪೆನ್‌ಡ್ರೈವ್‌' ವೇಗವನ್ನು ಹೆಚ್ಚಿಸಲು ಇರುವ ಮಾರ್ಗಗಳು!

ಇಂಟರ್‌ನೆಟ್‌ ಅವಶ್ಯಕತೆಯಿಲ್ಲದೇ ಮಾಹಿತಿ ವರ್ಗಾಯಿಸಬಹುದಾದ ಈ ಡಿವೈಸ್ ಇಂದಿಗೂ ಹೆಚ್ಚು ಬಳಕೆಯಲ್ಲಿರುವ ಒಂದು ಜನಪ್ರಿಯ ಗ್ಯಾಜೆಟ್ ಆಗಿದೆ. ಆನ್‌ಲೈನ್ ವ್ಯವಸ್ಥೆ ಬಂದರೂ ಸಹ ಕಂಪ್ಯೂಟರ್ ಕ್ಷೇತ್ರದಲ್ಲಿ ಪೆನ್‌ಡ್ರೈವ್ ಆವರಿಸಿಕೊಂಡಿರುವುದನ್ನು ನಾವು ನೋಡಬಹುದು. ಆದರೆ ,ಪೆನ್‌ಡ್ರೈವ್‌ ಕಾರ್ಯನಿರ್ವಹಣೆ ವೇಗ ಹೆಚ್ಚಿಲ್ಲದಿರುವುದರಿಂದ 'ಪೆನ್‌ಡ್ರೈವ್‌' ಬಳಕೆ ಇತ್ತೀಚಿಗೆ ಸಮಸ್ಯೆಯಾಗುತ್ತದೆ. ಹಾಗಾಗಿ, ಇಂದಿನ ಲೇಖನದಲ್ಲಿ ಪೆನ್‌ಡ್ರೈವ್‌ ವೇಗವನ್ನು ಹೆಚ್ಚಿಸುವ ಎಲ್ಲಾ ಮಾರ್ಗಗಳ ಬಗ್ಗೆ ನಾವು ತಿಳಿಸಿಕೊಡುತ್ತಿದ್ದೇವೆ.

ಹೇಗೆ ವೇಗ ಹೆಚ್ಚಿಸಬಹುದು..?

ಹೇಗೆ ವೇಗ ಹೆಚ್ಚಿಸಬಹುದು..?

ಪೆನ್‌ಡ್ರೈವ್ ವೇಗವನ್ನು ಹೆಚ್ಚಿಸಲು ಹಲವು ವಿಧಗಳಿದ್ದು, ಅವುಗಳನ್ನು ಅನುಸರಿಸಿದರೆ ಪೆನ್‌ಡ್ರೈವ್ ವೇಗ ಹೆಚ್ಚಾಗುತ್ತದೆ. 1. ಮೊದಲು ಫೈಲ್‌ ವ್ಯವಸ್ಥೆಯನ್ನು ಬದಲಾಯಿಸಬೇಕು. ಏಕೆಂದರೆ, FAT32 ಫೈಲ್ ವ್ಯವಸ್ಥೆ ಬಹಳಷ್ಟು ಪ್ರಮಾಣದ ಡಾಟಾವನ್ನು ಬಯಸುತ್ತದೆ. 2. ಡಿವೈಸ್‌ ಪಾಲಿಸಿ ಬದಲಾಯಿಸಬೇಕು. 3. ಫೈಲ್‌ ವಿಧಗಳನ್ನು ಪರಿಶೀಲಿಸಿ. 4. ಒಎಸ್‌ ಹಾಗೂ ಹಾರ್ಡ್‌ವೇರ್ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿ. 5. ಮತ್ತೀತರ ಹಲವು ಅಂಶಗಳನ್ನು ಅನುಸರಿಸಿ.

ಫೈಲ್‌ ವ್ಯವಸ್ಥೆ ಬದಲಾಯಿಸಿ

ಫೈಲ್‌ ವ್ಯವಸ್ಥೆ ಬದಲಾಯಿಸಿ

1. ಮೊದಲು ನಿಮ್ಮ ಪೆನ್‌ಡ್ರೈವ್‌ನ್ನು ಕಂಪ್ಯೂಟರ್‌ಗೆ ಪ್ಲಗ್‌ ಮಾಡಿ. 2. ನಂತರ ನಿಮ್ಮ ಪೆನ್‌ಡ್ರೈವ್‌ ಐಕಾನ್‌ ಮೇಲೆ ರೈಟ್‌ಕ್ಲಿಕ್‌ ಮಾಡಿ. ಅಲ್ಲೊಂದು ಪಾಪ್‌ಅಪ್‌ ತೆರೆಯುತ್ತದೆ. 3. ಹೊಸ ಪಾಪ್‌ಅಪ್‌ನಲ್ಲಿ ಪ್ರಾಪರ್ಟಿಸ್‌ ಆಯ್ಕೆ ಕ್ಲಿಕ್ ಮಾಡಿ. 4. ನಂತರ ಫಾರ್ಮ್ಯಾಟ್‌ ಆಯ್ಕೆ ಕ್ಲಿಕ್ ಮಾಡಿ. 5. ನಂತರ ಫೈಲ್‌ ಸಿಸ್ಟಮ್‌ನಲ್ಲಿ NTFS ಫೈಲ್‌ ವ್ಯವಸ್ಥೆ ಆಯ್ಕೆ ಮಾಡಿ. ಮತ್ತು ಕ್ವಿಕ್ ಫಾರ್ಮ್ಯಾಟ್‌ ಆಯ್ಕೆಯನ್ನು ಅನ್‌ಚೆಕ್‌ ಮಾಡಿ.6. ನಂತರ ಸ್ಟಾರ್ಟ್‌ ಬಟನ್‌ ಕ್ಲಿಕ್ ಮಾಡಿ. ಪೆನ್‌ಡ್ರೈವ್ ಫಾರ್ಮ್ಯಾಟ್ ಮಾಡುವ ಮುಂಚೆ ನಿಮ್ಮ ಪೆನ್‌ಡ್ರೈವ್‌ನಲ್ಲಿನ ಡಾಟಾವನ್ನು ಬ್ಯಾಕ್‌ಅಪ್‌ ತೆಗೆದಿಟ್ಟುಕೊಳ್ಳಿ ಇಲ್ಲದಿದ್ದರೆ ಎಲ್ಲಾ ಡಾಟಾ ಅಳಿಸಿ ಹೋಗುತ್ತದೆ.

ಡಿವೈಸ್ ಪಾಲಿಸಿ ಬದಲಾಯಿಸಿ

ಡಿವೈಸ್ ಪಾಲಿಸಿ ಬದಲಾಯಿಸಿ

1. ಮೊದಲು ನಿಮ್ಮ ಪೆನ್‌ಡ್ರೈವ್‌ನ್ನು ಕಂಪ್ಯೂಟರ್‌ಗೆ ಪ್ಲಗ್‌ ಮಾಡಿ ನಿಮ್ಮ ಪೆನ್‌ಡ್ರೈವ್‌ ಐಕಾನ್ ಮೇಲೆ ರೈಟ್‌ಕ್ಲಿಕ್‌ ಮಾಡಿ. ಅಲ್ಲೊಂದು ಪಾಪ್‌ಅಪ್‌ ತೆರೆಯುತ್ತದೆ. 2 ಹೊಸ ಪಾಪ್‌ಅಪ್‌ನಲ್ಲಿ ಪ್ರಾಪರ್ಟಿಸ್ ಆಯ್ಕೆ ಕ್ಲಿಕ್ ಮಾಡಿದ ನಂತರ ಹಾರ್ಡ್‌ವೇರ್‌ ಟ್ಯಾಬ್‌ ಆಯ್ಕೆ ಮಾಡಿ. 3 ಈಗ ನಿಮಗೆ ಡ್ರೈವರ್‌ಗಳ ಪಟ್ಟಿಯನ್ನು ಹಾರ್ಡ್‌ವೇರ್‌ ಟ್ಯಾಬ್‌ನಲ್ಲಿ ಕಾಣುತ್ತೇವೆ. ಆ ಡ್ರೈವರ್‌ಗಳ ಪಟ್ಟಿಯಲ್ಲಿ ನಿಮ್ಮ ಡ್ರೈವ್ ಆಯ್ಕೆ ಮಾಡಿಕೊಂಡು, ಪ್ರಾಪರ್ಟಿಸ್ ಬಟನ್ ಕ್ಲಿಕ್ ಮಾಡಿ. 4ಮುಂದಿನ ವಿಜಾರ್ಡ್‌ನಲ್ಲಿ ಸಾಮಾನ್ಯ ಟ್ಯಾಬ್‌ ಸೃಷ್ಟಿಯಾಗುತ್ತದೆ. ಅಲ್ಲಿ ಚೆಂಜ್‌ ಸೆಟ್ಟಿಂಗ್‌ ಬಟನ್‌ ಕ್ಲಿಕ್ ಮಾಡಿ. 5 ನಂತರ ಕಾಣುವ ಪಾಲಿಸಿ ಟ್ಯಾಬ್ ಆಯ್ಕೆ ಮಾಡಿ.ಈಗ ಬೆಟರ್ ಪರ್ಫಾರ್ಮೆನ್ಸ್ ಆಯ್ಕೆಯನ್ನು ಕ್ಲಿಕ್ ಮಾಡಿ.

ಪಿಸಿ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿ

ಪಿಸಿ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿ

ಕೆಲವೊಂದು ಬಾರಿ ನಿಮ್ಮ ಪೆನ್‌ಡ್ರೈವ್‌ ವೇಗ ಕಂಪ್ಯೂಟರ್‌ನ್ನು ಕೂಡ ಅವಲಭಿಸಿರುತ್ತದೆ. ಆದ್ದರಿಮದ ಪಿಸಿ ಕಾರ್ಯನಿರ್ವಹಣೆಯನ್ನು ಸಹ ಪರಿಶೀಲಿಸಬೇಕು. ಟೆಂಪ್ರವರಿ ಫೈಲ್‌ಗಳನ್ನು ಡಿಲೇಟ್‌ ಮಾಡಿ, ರಿಸೈಕಲ್‌ ಬಿನ್ ಖಾಲಿ ಮಾಡಿ, ಡೆಸ್ಕಟಾಪ್‌ನಲ್ಲಿ ಬೇಡದೆ ಇರುವ ಫೈಲ್‌ಗಳನ್ನು ಇಡಬೇಡಿ.ನಿಮ್ಮ ಕಂಪ್ಯೂಟರ್‌ನಲ್ಲಿರುವ ಯುಎಸ್‌ಬಿ ಪೋರ್ಟ್‌ ಡ್ರೈವರ್‌ನ್ನು 2.0 ದಿಂದ 3.0 ಅಥವಾ ಅದಕ್ಕಿಂತಲೂ ಹೆಚ್ಚಿನ ಆವೃತ್ತಿಗೆ ಅಪ್‌ಡೇಟ್‌ ಮಾಡಿ. ಒಂದೇ ಡ್ರೈವ್‌ಗೆ ಮತ್ತೆ ಮತ್ತೆ ರೈಟ್‌ ಮಾಡುವುದರಿಂದ ಪೆನ್‌ಡ್ರೈವ್‌ ವೇಗ ಕಡಿಮೆಯಾಗುತ್ತದೆ. ಆದ್ದರಿಂದ ಫೈಲ್ ರೈಟಿಂಗ್ ಕಡಿಮೆ ಮಾಡಿ. ಮತ್ತು ಏನಿಲ್ಲವೆಂದರೂ ತಿಂಗಳಿಗೆ ಒಂದು ಬಾರಿ ನಿಮ್ಮ ಪೆನ್‌ಡ್ರೈವ್‌ನ್ನು ಫಾರ್ಮ್ಯಾಟ್‌ ಮಾಡಿ. ಇದರಿಂದ ಪೆನ್‌ಡ್ರೈವ್‌ಗೆ ವೇಗ ಸಿಗುತ್ತದೆ.

ಬ್ಯಾಡ್‌ ಸೆಕ್ಟರ್ ಎರರ್ ಪರಿಶೀಲಿಸಿ

ಬ್ಯಾಡ್‌ ಸೆಕ್ಟರ್ ಎರರ್ ಪರಿಶೀಲಿಸಿ

1. ಮೊದಲು ನಿಮ್ಮ ಪೆನ್‌ಡ್ರೈವ್‌ನ್ನು ಕಂಪ್ಯೂಟರ್‌ಗೆ ಪ್ಲಗ್‌ ಮಾಡಿ. 2. ನಂತರ ನಿಮ್ಮ ಪೆನ್‌ಡ್ರೈವ್‌ ಐಕಾನ್‌ ಮೇಲೆ ರೈಟ್‌ಕ್ಲಿಕ್‌ ಮಾಡಿ. ಅಲ್ಲೊಂದು ಪಾಪ್‌ಅಪ್‌ ತೆರೆಯುತ್ತದೆ. 3. ಹೊಸ ಪಾಪ್‌ಅಪ್‌ನಲ್ಲಿ ಪ್ರಾಪರ್ಟಿಸ್‌ ಆಯ್ಕೆ ಕ್ಲಿಕ್ ಮಾಡಿ. 4. ನಂತರ ಟೂಲ್ಸ್‌ ಟ್ಯಾಬ್‌ ಆಯ್ಕೆ ಮಾಡಿ, ಕ್ಲಿಕ್ ನೌ ಬಟನ್‌ ಕ್ಲಿಕ್ ಮಾಡಿ.5. ಇಲ್ಲಿ ಟೂಲ್ಸ್‌ ಆಟೋಮೆಟಿಕ್‌ ಆಗಿ ಸ್ಕ್ಯಾನ್ ಆಗಿ ಬ್ಯಾಡ್‌ ಸೆಕ್ಟರ್ ಎರರ್‌ಗಳನ್ನು ರಿಕವರ್‌ ಮಾಡುತ್ತದೆ. ಇದರಿಂದಲೂ ನಿಮ್ಮ ಪೆನ್‌ಡ್ರೈವ್ ವೇಗವಾಗುತ್ತದೆ.

Best Mobiles in India

English summary
We are going to share an article on increasing your Pendrive Data transfer speed2019. Follow the full article to know much more about it. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+