ನಿಮ್ಮ ಫೋನಿನ ಒಂದೇ ಸ್ಕ್ರಿನ್ ನಲ್ಲಿ ಎರಡು ಕಾರ್ಯ ನಿರ್ವಹಿಸುವುದು ಹೇಗೆ?

|

ನಿಮ್ಮ ಸ್ಮಾರ್ಟ್‌ಫೋನಿನ ಒಂದೇ ಸ್ಕ್ರಿನ್ ನಲ್ಲಿ ಎರಡು ಕಾರ್ಯಗಳನ್ನು ಮಾಡುವ ಆಯ್ಕೆ ನಿಮಗೆ ತಿಳಿಯದೇ ಇದ್ದರೆ ತಿಳಿದುಕೊಳ್ಳಿ. ಏಕೆಂದರೆ, ಆಂಡ್ರಾಯ್ಡ್ ನ್ಯೂಗಾ ನಂತರದ ಎಲ್ಲಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಕೂಡ, ಒಂದೇ ಸ್ಕ್ರಿನ್‌ನಲ್ಲಿ ಎರಡು ಕಾರ್ಯಗಳನ್ನು ಮಾಡಬಹುದಾದ ಅವಕಾಶವಿದ್ದು, ನೀವದನ್ನು ಅತ್ಯುತ್ತಮವಾಗಿ ಸದ್ಬಳಕೆ ಮಾಡಿಕೊಳ್ಳಬಹುದು.

ನೀವು ನಿಮ್ಮ ಮೊಬೈಲ್‌ ಒಂದೇ ಸ್ಕ್ರಿನ್‌ನಲ್ಲಿ ಎರಡು ಆಪ್‌ಗಳನ್ನು ಒಮ್ಮೆಲೇ ಬಳಕೆ ಮಾಡಿಕೊಳ್ಳುವ ಅವಕಾಶ ಇರುವುದು ನಿಮಗೆ ಅತ್ಯುತ್ತಮ ಆಯ್ಕೆ ಕೂಡ ಆಗಿದೆ. ಹಾಗಾದರೆ, ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಗೂಗಲ್ ಅವಕಾಶ ಮಾಡಿಕೊಟ್ಟಿರುವ ಒಮ್ಮೆಗೆ ಎರಡು ಕಾರ್ಯಗಳನ್ನು ಮಾಡಬಹುದಾದ ಸ್ಪ್ಲಿಟ್ ಆಯ್ಕೆಯನ್ನು ಬಳಸುವುದು ಹೇಗೆ ಎಂಬುದನ್ನು ಇಂದು ತಿಳಿಯಿರಿ.

ನಿಮ್ಮ ಫೋನಿನ ಒಂದೇ ಸ್ಕ್ರಿನ್ ನಲ್ಲಿ ಎರಡು ಕಾರ್ಯ ನಿರ್ವಹಿಸುವುದು ಹೇಗೆ?

ಸ್ಮಾರ್ಟ್‌ಫೋನ್‌ನಲ್ಲಿ ಸ್ಪ್ಲಿಟ್ ಸ್ಕ್ರೀನ್ ಬಳಕೆ ಹೇಗೆ..?

1)ರೀಸೆಂಟ್ ಆಪ್ ಲಿಸ್ಟ್ ಓಪನ್ ಮಾಡಿಕೊಳ್ಳುವ ಬಟನ್ ಅನ್ನು ಕ್ಲಿಕ್ ಮಾಡಿರಿ, ಈ ಸಂದರ್ಭದಲ್ಲಿ ನೀವು ರಿಸೆಂಟ್ ಆಗಿ ಬಳಕೆ ಮಾಡಿದ ಆಪ್‌ಗಳ ವಿವರವೂ ಕಾಣಿಸಿಕೊಳ್ಳಲಿದೆ.

2)ಇದಾದ ಮೇಲೆ ನಿಮ್ಮ ಫೋನಿನ ಸ್ಕ್ರಿನ್ ನಲ್ಲಿ ಮೇಲ್ ಭಾಗದಲ್ಲಿ ಸ್ಪ್ಲಿಟ್ ಸ್ಕ್ರಿನ್ ಆಯ್ಕೆಯೂ ಕಾಣಿಸಿಕೊಳ್ಳಲಿದೆ. ಇದರಲ್ಲಿ ನೀವು ಬಳಕೆ ಮಾಡಿಕೊಳ್ಳಬೇಕಾದ ಎರಡು ಆಪ್ ಗಳನ್ನು ಡ್ರಾಗ್ ಮಾಡಿಕೊಳ್ಳಿ.

3)ಇದಾದ ಮೇಲೆ ಸ್ಕ್ರಿನ್ ಮೇಲ್ ಭಾಗ ಮತ್ತು ಕೆಳ ಭಾಗದಲ್ಲಿ ಎರಡು ಆಪ್ ಗಳು ಕಾಣಿಸಿಕೊಳ್ಳಿದೆ, ಇದರಿಂದಾಗಿ ನೀವು ಎರಡು ಕಾರ್ಯಗಳನ್ನು ಒಮ್ಮೆಗೆ ಮಾಡಬಹುದಾಗಿದೆ.

ನಿಮ್ಮ ಫೋನಿನ ಒಂದೇ ಸ್ಕ್ರಿನ್ ನಲ್ಲಿ ಎರಡು ಕಾರ್ಯ ನಿರ್ವಹಿಸುವುದು ಹೇಗೆ?

ಎಕ್ಸಿಟ್ ಆಗುವುದು ಹೇಗೆ..?

ಇದಲ್ಲದೇ ನೀವು ಸ್ಪ್ಲಿಟ್ ಸ್ಕ್ರಿನ್ ಬಳಕೆ ಮಾಡಿದ ಮೇಲೆ ಅದರಿಂದ ಹೊರಗೆ ಬರುವುದು ಹೇಗೆ ಎಂಬುದನ್ನು ತಿಳಿಯಬೇಕಾಗಿದೆ. ಮೇಲಿರುವ ಆಪ್ ಗಳನ್ನು ಒತ್ತಿ ಹಿಡಿದು ಡ್ರಾಗ್ ಮಾಡಿದ ಸಂದರ್ಭದಲ್ಲಿ ಫುಲ್ ಸ್ಕ್ರಿನ್ ನಲ್ಲಿ ಆಪ್ ಕಾಣಿಸಿಕೊಳ್ಳಿದೆ.

ಇದಲ್ಲದೇ ಬಾಟಮ್ ನಲ್ಲಿ ಕಾಣಿಸಿಕೊಳ್ಳುವ ಆಪ್ ಅನ್ನು ಇದೇ ಮಾದರಿಯಲ್ಲಿ ಒತ್ತಿ ಹಿಡಿದರೆ ಸಾಕು ಅದು ಸಹ ಪೂರ್ಣ ಪ್ರಮಾಣದಲ್ಲಿ ಸ್ಕ್ರಿನ್ ನಲ್ಲಿ ಕಾಣಿಸಿಕೊಳ್ಳಲಿದೆ. ಇದರಿಂದಾಗಿ ಬಳಕೆದಾರರು ಎರಡು ಆಪ್ ಗಳನ್ನು ಒಮ್ಮೆಗೆ ಬಳಕೆ ಮಾಡಿಕೊಳ್ಳುವ ಆಯ್ಕೆ ಸಹಾಯಕವಾಗಿದೆ.

Most Read Articles
Best Mobiles in India

English summary
Tap and hold one of the apps that you'd like to have onscreen, then drag it up to the top of the screen. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X