ನಿಮ್ಮ ಸ್ಮಾರ್ಟ್‌ಫೋನಿನ ತಾಂತ್ರಿಕ ನಿರ್ವಹಣೆ ಹೇಗೆ?..ನಿಮಗಿದು ಗೊತ್ತಿಲ್ಲ!!

|

ಒಂದು ಜೀವಿಯೇ ಆಗಿರಬಹುದು ಅಥವಾ ಯಂತ್ರವೇ ಆಗಿರಬಹುದು ಅದಕ್ಕೆ ವಿಶ್ರಾಂತಿ ಮತ್ತು ನಿರ್ವಹಣೆ ಅತ್ಯಗತ್ಯ ಎನ್ನಬಹುದು. ಉದಾಹರಣೆಗೆ, ಯಂತ್ರಗಳಾದ ನಿಮ್ಮ ಬೈಕ್ ಅಥವಾ ಕಾರನ್ನು ಹೆಚ್ಚು ದೂರ ಚಾಲನೆ ಮಾಡಿದ ನಂತರ ಅದರ ಇಂಜಿನ್ ಹೀಟ್ ಆಗುತ್ತದೆ ಎಂಬುದು ನಿಮಗೆ ತಿಳಿದಿರುತ್ತದೆ. ಹಾಗೆಯೇ, ನೀವು ಅವುಗಳನ್ನು ಕಾಲಕಾಲಕ್ಕೆ ಸರ್ವಿಸ್ ಮಾಡಿಸದೇ ಇದ್ದರೆ ಅವುಗಳು ತನ್ನ ಕಾರ್ಯಕ್ಷಮತೆಯನ್ನು ಕಳೆದುಕೊಳ್ಳುತ್ತಾ ಹೋಗುವುದು ಕೂಡ ನಿಮ್ಮ ಅನುಭವಕ್ಕೆ ಬರುತ್ತದೆ ಎಂಬುದು ಸತ್ಯ.

ನಿಮ್ಮ ಸ್ಮಾರ್ಟ್‌ಫೋನಿನ ತಾಂತ್ರಿಕ ನಿರ್ವಹಣೆ ಹೇಗೆ?..ನಿಮಗಿದು ಗೊತ್ತಿಲ್ಲ!!

ನಿಮಗೆ ಗೊತ್ತಾ?, ಇದಕ್ಕೆ ಸ್ಮಾರ್ಟ್‌ಫೋನ್‌ಗಳು ಕೂಡ ಹೊರತಾಗಿಲ್ಲ.! ನಿಮ್ಮ ಸ್ಮಾರ್ಟ್‌ಫೋನಿಗೆ ಕೂಡ ವಿಶ್ರಾಂತಿ ನೀಡದಿದ್ದರೆ ಅದು ಕೂಡ ಬಿಸಿಯಾಗಿ ಹಾಳಾಗುವ ಸಂಭವ ಹೆಚ್ಚಿರುತ್ತದೆ. ಹಾಗೆಯೇ, ನಿಮ್ಮ ಸ್ಮಾರ್ಟ್‌ಫೋನನ್ನು ಸರಿಯಾಗಿ ನಿರ್ವಹಣೆ ಮಾಡದೇ ಇದ್ದರೂ ಅದು ಕಾರ್ಯಕ್ಷಮತೆಯನ್ನು ಕಳೆದುಕೊಳ್ಳುತ್ತದೆ. ಹಾಗಾಗಿ, ಇಂದಿನ ಲೇಖನದಲ್ಲಿ ನಿಮ್ಮ ಸ್ಮಾರ್ಟ್‌ಪೋನಿಗೆ ವಿಶ್ರಾಂತಿ ನೀಡುವುದು ಹೇಗೆ ಮತ್ತು ಅದನ್ನು ನಿರ್ವಹಣೆ ಮಾಡುವುದು ಹೇಗೆ ಎಂಬುದನ್ನು ನಾನು ತಿಳಿಸಿಕೊಡುತ್ತಿದ್ದೇನೆ.

ಸ್ಮಾರ್ಟ್‌ಫೋನಿಗೆ ವಿಶ್ರಾಂತಿ ಹೇಗೆ?

ಸ್ಮಾರ್ಟ್‌ಫೋನಿಗೆ ವಿಶ್ರಾಂತಿ ಹೇಗೆ?

ಅಯ್ಯೋ ಇದೇನಿದು ಸ್ಮಾರ್ಟ್‌ಫೋನಿಗೆ ವಿಶ್ರಾಂತಿ ಕೊಡುವುದು ಹೇಗೆ ಎಂದು ನೀವು ಪ್ರಶ್ನಿಸಬಹುದು. ಅಥವಾ ಸ್ಮಾರ್ಟ್‌ಫೋನನ್ನು ಬಳಸದೇ ಇರುವುದನ್ನು ವಿಶ್ರಾಂತಿ ಎಂದು ನೀವು ತಿಳಿಯಬಹುದು. ಆದರೆ, ಇದು ಖಂಡಿತ ತಪ್ಪು. ನಿಮ್ಮ ಸ್ಮಾರ್ಟ್‌ಫೋನಿಗೆ ವಿಶ್ರಾಂತಿ ಕೊಡಲು ಮತ್ತು ಅದನ್ನು ಸರಿಯಾಗಿ ನಿರ್ವಹಣೆ ಮಾಡಲು ತಾಂತ್ರಿಕ ಮಾರ್ಗಗಳಿವೆ. ಉದಾಹರಣೆಗೆ ನಿಮ್ಮ ಫೋನಿಗೆ ವಿಶ್ರಾಂತಿ ನೀಡಬೇಕಿದ್ದರೆ ಅದನ್ನು ರೀಬೂಟ್ ಮಾಡಬೇಕು ಎಂಬ ವಿಚಾರ ನಿಮಗೆ ಗೊತ್ತಾ?, ಹೀಗೆಯೇ ಹಲವು ತಾಂತ್ರಿಕ ವಿಷಯಗಳನ್ನು ತಜ್ಞರು ಹೇಳಿದ್ದಾರೆ.

ಸ್ಮಾರ್ಟ್‌ಫೋನಿಗೆ ಪವರ್ ಆಫ್ ವಿಶ್ರಾಂತಿ!

ಸ್ಮಾರ್ಟ್‌ಫೋನಿಗೆ ಪವರ್ ಆಫ್ ವಿಶ್ರಾಂತಿ!

ಕೆಲವೊಮ್ಮೆ ನಮಗೆ ಗೊತ್ತಿಲ್ಲದ ಕಾರಣಗಳಿಂದಲೋ ಅಥವಾ ಯಾವ ಆಪ್‌ಗಳು ಹಿನ್ನೆಲೆಯಲ್ಲಿ ಕೆಲಸ ಮಾಡುತ್ತವೆಂಬುದೇ ತಿಳಿಯದೆಯೋ ಈ ರೀತಿಯಾಗುವುದುಂಟು. ಇದಕ್ಕೆ ಪರಿಹಾರವೆಂದರೆ, ನಿಮ್ಮ ಫೋನಿನ ಪವರ್ ಆಫ್ ಮಾಡಿ ಆನ್ ಮಾಡುವುದು. ಮೊಬೈಲ್‌ಗೆ ವಿಶ್ರಾಂತಿ ನೀಡಬೇಕಿದ್ದರೆ ರೀಬೂಟ್ ಮಾಡಿದರೆ ಸಾಕಾಗುತ್ತದೆ. ಹೀಗೆ ಮಾಡುವುದರಿಂದ ಸ್ಮಾರ್ಟ್‌ಫೋನ್‌ಗೆ ಪುನಶ್ಚೇತನ ನೀಡಿದಂತೆ ಆಗುತ್ತದೆ. ಇದೇ ಕಾರ್ಯವನ್ನು ನಿಮ್ಮ ಫೋನ್ ಹ್ಯಾಂಗ್ ಆದಾಗಲೂ ಮಾಡಬಹುದಾಗಿದೆ.

ಸ್ಮಾರ್ಟ್‌ಫೋನಿಗೆ ರೀಬೂಟ್ ವಿಶ್ರಾಂತಿ

ಸ್ಮಾರ್ಟ್‌ಫೋನಿಗೆ ರೀಬೂಟ್ ವಿಶ್ರಾಂತಿ

ನಿಮಗೆ ಗೊತ್ತಾ?, ನಿಮ್ಮ ಫೋನನ್ನು ರೀಬೂಟ್ ಮಾಡಿದರೆ, ಅದು ಕೇವಲ ನಿಮ್ಮ ಫೋನ್‌ನ ತಂತ್ರಾಂಶವನ್ನಷ್ಟೇ ಮರುಪ್ರಾರಂಭಗೊಳಿಸುತ್ತದೆ. ಆದರೆ, ಆಫ್ ಮಾಡಿ ರೀಸ್ಟಾರ್ಟ್ ಮಾಡಿದಾಗ, ಈ ಪ್ರಕ್ರಿಯೆಯು ಶೂನ್ಯದಿಂದಲೇ ಆರಂಭವಾಗುತ್ತದೆ. ಅಂದರೆ, ಆನ್ ಆಗುವಾಗ ಅದು ಹಾರ್ಡ್‌ವೇರ್‌ನ ಎಲ್ಲ ವ್ಯವಸ್ಥೆಗಳ ಪರೀಕ್ಷೆ ನಡೆಸುತ್ತದೆ, ಏನಾದರೂ ಸಮಸ್ಯೆಯಿದ್ದರೆ ತನ್ನಿಂತಾನಾಗಿ ಸರಿಪಡಿಸಿಕೊಂಡು ಸಿಸ್ಟಂ ಮರುಪ್ರಾರಂಭವಾಗುತ್ತದೆ. ಹೀಗೆ ಮಾಡಿದಾಗ ನಿಮ್ಮ ಫೋನಿನಲ್ಲಿರುವ ಕೆಲವೊಂದು ಜಂಕ್ ಡೇಟಾ ಕೂಡ ನಿವಾರಣೆಯಾಗುತ್ತದೆ.

ಪವರ್ ಆಫ್/ಆನ್ VS ರೀಬೂಟ್

ಪವರ್ ಆಫ್/ಆನ್ VS ರೀಬೂಟ್

ಪ್ರತಿಕ್ಷಣ ಫೋನ್ ಬಳಸುತ್ತಲೇ ಇರುವುದರಿಂದ ಆಪ್‌ಗಳು ಕೆಲವೊಮ್ಮೆ ಹ್ಯಾಂಗ್ ಆಗಬಹುದು. ಫೋನ್‌ನ ಮೆಮೊರಿಯಲ್ಲಿ ಹಲವಾರು ಆಪ್‌ಗಳ ಕ್ಯಾಶ್ ಫೈಲ್‌ಗಳು ಶೇಖರಣೆಯಾಗಿ ಸಹಜವಾಗಿ ಫೋನ್ ನಿಧಾನವಾಗಿ ಕೆಲಸ ಮಾಡಲಾರಂಭಿಸುತ್ತದೆ. ಅಂಥ ಸಂದರ್ಭದಲ್ಲಿ ಪವರ್ ಆಫ್ ಮಾಡಿ, ಆನ್ ಮಾಡಿದರೆ, ಫೋನ್‌ಗೆ ಪುನಶ್ಚೇತನ ನೀಡಿದಂತೆ. ಆದರೆ, ನಿಮ್ಮ ಫೋನನ್ನು ರೀಸ್ಟಾರ್ಟ್ ಮಾಡಿದಾಗ ಅದು ಹೊಸದರಂತೆ ಕೆಲಸ ಮಾಡುತ್ತದೆ. ಹೀಗೆ ಮಾಡಿದರೆ ನಿಮ್ಮ ಸ್ಮಾರ್ಟ್‌ಫೋನ್ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

ಸ್ಮಾರ್ಟ್‌ಫೋನಿನ ನಿರ್ವಹಣೆ ಹೇಗೆ?

ಸ್ಮಾರ್ಟ್‌ಫೋನಿನ ನಿರ್ವಹಣೆ ಹೇಗೆ?

ಈ ಮೇಲೆ ನಾವು ಸ್ಮಾರ್ಟ್‌ಪೋನಿಗೆ ವಿಶ್ರಾಂತಿ ಹೇಗೆ ನೀಡಬೇಕು ಎಂಬುದನ್ನು ತಿಳಿದೆವು. ಹಾಗೆಯೇ, ನಾವು ಸ್ಮಾರ್ಟ್‌ಫೋನನ್ನು ಸರಿಯಾಗಿ ನಿರ್ವಹಣೆ ಕೂಡ ಮಾಡಬೇಕು. ನಿರಂತರ ಕಾರ್ಯಾಚರಣೆ, ಹಲವಾರು ಆಪ್‌ಗಳನ್ನು ತೆರೆದಿಟ್ಟಿರುವುದು, ತಾತ್ಕಾಲಿಕ ಫೈಲ್‌ಗಳು ಮೊಬೈಲಲ್ಲಿ ಶೇಖರವಾಗಿರುವುದು, ನೆಟ್‌ವರ್ಕ್ ಸಂಪರ್ಕದ ಸಮಸ್ಯೆ, ಸ್ಮಾರ್ಟ್‌ಫೋನ್ ಬಿಸಿಯಾಗುವ ಸಮಸ್ಯೆ ಮತ್ತು ಸ್ಮಾರ್ಟ್‌ಫೋನ್ ಸ್ಕ್ರೀನ್ ಹಾಳಾಗುವ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಅವುಗಳನ್ನು ಈ ಕೆಳಗಿನಂತೆ ನಿರ್ವಹಣೆ ಮಾಡಿ.

ಫೋನ್ ಒದ್ದೆಯಾಗುವುದರಿಂದ ರಕ್ಷಿಸಿ

ಫೋನ್ ಒದ್ದೆಯಾಗುವುದರಿಂದ ರಕ್ಷಿಸಿ

ನಿಮ್ಮ ಫೋನ್ ಜಲಪ್ರತಿರೋಧಕ ಶಕ್ತಿಯನ್ನು ಹೊಂದಿಲ್ಲ ಎಂದಾದಲ್ಲಿ ಫೋನ್ ಹಾಳಾಗುವುದ ಖಚಿತ.ಇನ್ನು ಒದ್ದೆಯಾಗಿರುವ ಸ್ಥಳಗಳಲ್ಲಿಯೂ ಸಹ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಇಡಬೇಡಿ. ಇದರಿಂದ ನಿಮ್ಮ ಸ್ಮಾರ್ಟ್‌ಪೋನ್ ಹಾಳಾಗಬಹುದು. ನಿಮಗೆ ಗೊತ್ತಾ?, ಗೋರಿಲ್ಲಾ ಗ್ಲಾಸ್ ರಕ್ಷಣೆ ಹೊಂದಿರುವ ಸ್ಮಾರ್ಟ್‌ಫೋನ್ ಅತ್ಯುತ್ತಮ ಎಂದು ಹೇಳಬಹುದು. ಆದರೆ, ಅದಕ್ಕೆ ಸರಿಯಾದ ರಕ್ಷಣೆಯನ್ನು ನೀವು ಮಾಡಿಲ್ಲ ಎಂದಾದಲ್ಲಿ ನಿಮ್ಮ ಫೋನ್‌ನ ಪರದೆಯನ್ನು ಆಗಾಗ್ಗೆ ರಿಪೇರಿ ಮಾಡಿಸುವುದೇ ಕೆಲಸವಾಗಿಬಿಡುತ್ತದೆ.

ವಿಪರೀತ ಅಪ್ಲಿಕೇಶನ್ ಇನ್‌ಸ್ಟಾಲ್ ಬೇಡ

ವಿಪರೀತ ಅಪ್ಲಿಕೇಶನ್ ಇನ್‌ಸ್ಟಾಲ್ ಬೇಡ

ನಿಮ್ಮ ಫೋನ್‌ಗೆ ವಿಪರೀತ ಅಪ್ಲಿಕೇಶನ್ ಇನ್‌ಸ್ಟಾಲ್ ಬೇಡ. ನಿಮ್ಮ ಫೋನಿನಲ್ಲಿ ಶೇ.50ರಷ್ಟು ಮೊಬೈಲ್ ಮೆಮೊರಿ ಉಳಿದಿರಲಿ. ಯಾವುದೇ ಕಾರಣಕ್ಕೂ ಪರವಾನಗಿ ಇಲ್ಲದ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳದಿರಿ. ಇಂತಹ ಕಾರ್ಯಗಳನ್ನು ಮಾಡುವಾಗ ಆದಷ್ಟು ಜಾಗರೂಕರಾಗಿರಿ. ಅಪ್ಲಿಕೇಶನ್‌ಗಳ ಸುರಿಮಳೆ ನಿಮ್ಮ ಫೋನ್‌ನ ಜೀವಿತವನ್ನು ಹಾಳುಗೆಡವಬಹುದು. ಗೂಗಲ್ ಪ್ಲೇನಲ್ಲಿ ನಿಮಗೆ ಆಂಡ್ರಾಯ್ಡ್‌ನ ಹೊಸ ಹೊಸ ನವೀಕರಣಗಳು ದೊರೆಯುತ್ತಿರುತ್ತವೆ. ಆದ್ದರಿಂದ ನಿಮ್ಮ ಫೋನ್ ಅನ್ನು ಆಗಾಗ್ಗೆ ಅಪ್‌ಡೇಟ್ ಮಾಡುತ್ತಿರಿ.

ಫೋನ್ ಚಾರ್ಜಿಂಗ್ ಬಗ್ಗೆ ಜಾಗೃತವಾಗಿರಿ!

ಫೋನ್ ಚಾರ್ಜಿಂಗ್ ಬಗ್ಗೆ ಜಾಗೃತವಾಗಿರಿ!

ನಿಮ್ಮ ಸ್ಮಾರ್ಟ್‌ಫೋನ್ ನಿರ್ವಹಣೆಯಲ್ಲಿ ಮೊದಲ ಆದ್ಯತೆ ಫೋನ್ ಚಾರ್ಜಿಂಗ್ ಬಗ್ಗೆ ಇರಲಿ. ನಿಮ್ಮ ಫೋನ್‌ ಅನ್ನು ಹೆಚ್ಚು ಕಾಲ ಚಾರ್ಜ್ ಮಾಡುವುದು ಫೋನ್‌ನ ಬಿಸಿಯನ್ನು ಏರಿಸಬಹುದು. ಸೊನ್ನೆಯ ತನಕ ಫೋನ್ ಬ್ಯಾಟರಿಯನ್ನು ಖಾಲಿಯಾಗಿಸುವುದು ಇಲ್ಲವೇ ಪೂರ್ಣ ಚಾರ್ಜ್ ಆದ ನಂತರ ಕೂಡ ಸಾಕೆಟ್‌ನಿಂದ ಫೋನ್ ಅನ್ನು ಬೇರ್ಪಡಿಸದೇ ಇರುವುದು ಫೋನ್‌ನ ಜೀವನವನ್ನು ನಾಶಪಡಿಸಬಹುದು. ಇನ್ನು ಯುಎಸ್‌ಬಿ ಪೋರ್ಟ್‌ಗೆ ನಿಮ್ಮ ಫೋನ್‌ನ ಚಾರ್ಜರ್ ಅನ್ನು ಅಳವಡಿಸುವುದು ಸರಿಯಾದ ವಿಧಾನವಲ್ಲ ಎಂಬುದನ್ನು ತಿಳಿಯಿರಿ.

Best Mobiles in India

English summary
How to Maintain Your smartPhone and 7 Ways to Keep Your Smartphone Running Like New. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X