ವಾಟ್ಸ್‌ಆಪ್ ವೆಬ್‌ನಲ್ಲಿ ಚಾಟ್ ವಾಲ್‌ಪೇಪರ್ ಬದಲಾಯಿಸುವುದು ಹೇಗೆ..?

By GizBot Bureau
|

ಅತೀ ಹೆಚ್ಚು ಜನರು ಬಳಕೆ ಮಾಡುವ ಮತ್ತು ಅತ್ಯಂತ ಹೆಚ್ಚು ಪ್ರಸಿದ್ಧಿಯಾಗಿರುವ ಮೆಸೇಜಿಂಗ್ ಆಪ್ ಅಂದರೆ ಅದು ವಾಟ್ಸ್ ಆಪ್. ಸದ್ಯ ಸುಮಾರು ವಿಶ್ವದಾದ್ಯಂತ 1.2 ಬಿಲಿಯನ್ ಮಂದಿ ಮಾಸಿಕ ಬಳಕೆದಾರರು ಇದರಲ್ಲಿ ಆಕ್ಟೀವ್ ಆಗಿ ಇದ್ದಾರೆ. ಟೆಕ್ಸ್ಟ್, ಪಿಕ್ಚರ್, ವೀಡಿಯೋ ಗಳು, ಫೈಲ್ ಗಳನ್ನು ಕುಟುಂಬದವರೊಂದಿಗೆ ಮತ್ತು ಸ್ನೇಹಿತರೊಂದಿಗೆ ಸುಲಭದಲ್ಲಿ ಹಂಚಿಕೊಳ್ಳಲು ಇದು ಅಧ್ಬುತ ಮೆಸೇಜಿಂಗ್ ಆಪ್ ಆಗಿದೆ.

ಈ ವರ್ಷದ ಆರಂಭದಲ್ಲಿ ವಾಟ್ಸ್ ಆಪ್ ಡೆಸ್ಕ್ ಟಾಪ್ ವರ್ಷನ್ ನ್ನು ಬಿಡುಗಡೆಗೊಳಿಸಿತು ಅದನ್ನು ವಾಟ್ಸ್ ಆಪ್ ವೆಬ್ ಎಂದು ಕೂಡ ಕರೆಯಲಾಯಿತು. ವಾಟ್ಸ್ ಆಪ್ ವೆಬ್ ನಲ್ಲಿ ಹೆಚ್ಚು ಕಡಿಮೆ ಮೊಬೈಲ್ ನಲ್ಲಿ ಲಭ್ಯವಾಗುವ ಎಲ್ಲಾ ಸೌಲಭ್ಯಗಳೂ ಇದ್ದವು. ಆದರೆ ಕರೆ ಮಾಡುವ ಅವಕಾಶವೊಂದನ್ನು ಹೊರತು ಪಡಿಸಿ ಮತ್ತೆಲ್ಲವೂ ವೆಬ್ ವರ್ಷನ್ ನಲ್ಲಿ ಬಳಕೆದಾರರ ಅನುಕೂಲಕ್ಕೆ ನೆರವಾದವು.

ವಾಟ್ಸ್‌ಆಪ್ ವೆಬ್‌ನಲ್ಲಿ ಚಾಟ್ ವಾಲ್‌ಪೇಪರ್ ಬದಲಾಯಿಸುವುದು ಹೇಗೆ..?

ವಾಟ್ಸ್ ಆಪ್ ವೆಬ್ ನಲ್ಲಿ ಕೆಲವು ಕಸ್ಟಮೈಸ್ಡ್ ವೈಶಿಷ್ಟ್ಯಗಳೂ ಕೂಡ ಇದ್ದು ಅದರಲ್ಲಿ ಒಂದು ಚಾಟ್ ವಾಲ್ ಪೇಪರ್ ನ್ನು ಬದಲಾವಣೆ ಮಾಡುವ ವೈಶಿಷ್ಟ್ಯವೂ ಆಗಿದೆ. ಹಾಗಾದ್ರೆ ವೆಬ್ ವರ್ಷನ್ ನಲ್ಲಿ ಚಾಟ್ ವಾಲ್ ಪೇಪರ್ ಬದಲಾಯಿಸುವುದು ಹೇಗೆ ಎಂದು ನೀವು ನಿರೀಕ್ಷಿಸುತ್ತಿದ್ದರೆ ಈ ಲೇಖನವನ್ನು ಫಾಲೋ ಮಾಡುವುದು ಒಳಿತು. ಇಲ್ಲಿ ನಾವು ಆ ಮಾಹಿತಿಯನ್ನು ಹಂತಹಂತವಾಗಿ ನಿಮಗೆ ವಿವರಿಸುತ್ತಿದ್ದೇವೆ.

ಮೊದಲಿಗೆ ಅಗತ್ಯವಿರುವ ಅಂಶಗಳು:

•ಎರಡೂ ಡಿವೈಸ್ ಗಳಿಗೂ ನಿರಂತರ ಅಂತರ್ಜಾಲ ಸಂಪರ್ಕವಿರಬೇಕು. (ಮೊಬೈಲ್ ಮತ್ತು ಪಿಸಿ ಎರಡಕ್ಕೂ)

•ವಾಟ್ಸ್ ಆಪ್ ನ ಲೇಟೆಸ್ಟ್ ವರ್ಷನ್ (2.18) ನ್ನು ನೀವು ರನ್ ಮಾಡಿಕೊಂಡಿರಬೇಕು.

•ನಿಮ್ಮ ಕಂಪ್ಯೂಟರ್ ನಲ್ಲಿ ನಿಮ್ಮದೇ ವಾಟ್ಸ್ ಆಪ್ ವೆಬ್ ಲಾಗಿನ್ ಆಗಿರಬೇಕು.


ಒಂದು ವೇಳೆ ನಿಮಗೆ ನಿಮ್ಮ ಕಂಪ್ಯೂಟರ್ ನಲ್ಲಿ ವಾಟ್ಸ್ ಆಪ್ ಬಳಕೆ ಮಾಡುವುದು ಹೇಗೆ ಎಂದು ತಿಳಿಯದೇ ಇದ್ದಲ್ಲಿ ಈ ಕೆಳಗಿನ ಹಂತಗಳನ್ನು ಅನುಸರಿಸಿ.

•ಗೂಗಲ್ ಕ್ರೋಮ್ ನ್ನು ತೆರೆಯಿರಿ ಅಥವಾ ಯಾವುದೇ ಇತರೆ ಬ್ರೌಸರ್ ನ್ನು ತೆರೆಯಿರಿ ಮತ್ತು ಅಲ್ಲಿ 'web.whatsapp.com’ ಎಂದು ಅಡ್ರೆಸ್ ಬಾರ್ ನಲ್ಲಿ ಟೈಪ್ ಮಾಡಿ.

•ಈಗ, ಫೋನ್ ನಲ್ಲಿ ವಾಟ್ಸ್ ಆಪ್ ನ್ನು ತೆರೆಯಿರಿ ಮತ್ತು ಮೂರು ವರ್ಟಿಕಲ್ ಚುಕ್ಕಿಗಳನ್ನು ಟ್ಯಾಪ್ ಮಾಡಿ.

•'WhatsApp web’ ಆಯ್ಕೆಯನ್ನು ಸೆಲೆಕ್ಟ್ ಮಾಡಿ ಮತ್ತು QR ಕೋಡನ್ನು ಸ್ಕ್ಯಾನ್ ಮಾಡಿ.

ವಾಟ್ಸ್‌ಆಪ್ ವೆಬ್‌ನಲ್ಲಿ ಚಾಟ್ ವಾಲ್‌ಪೇಪರ್ ಬದಲಾಯಿಸುವುದು ಹೇಗೆ..?

ವೆಬ್ ವರ್ಷನ್ ನಲ್ಲಿ ಚಾಟ್ ವಾಲ್ ಪೇಪರ್ ಬದಲಾಯಿಸುವ ಹಂತಗಳು :

1.ನಿಮ್ಮ ಕಂಪ್ಯೂಟರ್ ನಲ್ಲಿ ವಾಟ್ಸ್ ಆಪ್ ವೆಬ್ ನ್ನು ತೆರೆಯಿರಿ ಮತ್ತು ಕ್ಯೂಆರ್ ಕೋಡನ್ನು ಸ್ಕ್ಯಾನ್ ಮಾಡಿ ಲಾಗಿನ್ ಆಗಿ.

2.ಪ್ರೊಫೈಲ್ ಚಿತ್ರದ ಬಲಭಾಗದಲ್ಲಿರುವ ಮೂರು ವರ್ಟಿಕಲ್ ಚುಕ್ಕಿಗಳನ್ನು ಕ್ಲಿಕ್ಕಿಸಿ.

3.ಅಲ್ಲಿರುವ ಸೆಟ್ಟಿಂಗ್ಸ್ ಗೆ ತೆರಳಿ ಮತ್ತು 'Wallpaper' ಆಯ್ಕೆಯನ್ನು ಕ್ಲಿಕ್ಕಿಸಿ.

4.ಈಗ ನಿಮ್ಮ ಇಚ್ಛೆಯ ವಾಲ್ ಪೇಪರ್ ನ್ನು ಆಯ್ಕೆ ಮಾಡಿ ಕ್ಲಿಕ್ ಮಾಡಿ.

5.ಈಗ ಬ್ಯಾಕ್ ಗ್ರೌಂಡ್ ಬದಲಾಯಿಸಲು ಓಕೆಯನ್ನು ಒತ್ತಿ. ನಿಮ್ಮ ವಾಲ್ ಪೇಪರ್ ಬದಲಾಗಿರುತ್ತದೆ.

Best Mobiles in India

English summary
How to change chat wallpaper on WhatsApp web. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X