PUBG ಮೊಬೈಲ್ ನಲ್ಲಿ ಹೆಸರು ಬದಲಾಯಿಸುವುದು ಹೇಗೆ?

|

ಸ್ಮಾರ್ಟ್ ಫೋನ್ ಗೇಮಿಂಗ್ ಜಗತ್ತು ಪ್ಲೇಯರ್ ಅನ್ ನೋನ್ಸ್ ಬ್ಯಾಟಲ್ ಗ್ರೌಂಡ್ ಅಥವಾ PUBGಯ ಮೊಬೈಲ್ ಅವತರಣಿಕೆ ಈ ವರ್ಷದ ಆರಂಭದಲ್ಲಿ ಬಿಡುಗಡೆಗೊಂಡ ನಂತರದ ದಿನಗಳಲ್ಲಿ ಹೊಸ ದಿಕ್ಕಿನತ್ತ ಸಾಗುತ್ತಿದೆ. ಈ ಆಟವು ಬ್ಯಾಟಲ್ ರಾಯಲ್ ಕಾನ್ಸೆಪ್ಟ್ ನ್ನು ಹೊಂದಿದ್ದು ಆಟಗಾರರು ತಮ್ಮ ಗೆಲುವಿಗಾಗಿ ಯುದ್ಧಭೂಮಿಯಲ್ಲಿ ಹೋರಾಟ ನಡೆಸುವ ಆಟ ಇದಾಗಿದೆ. ಆಟದಲ್ಲಿ ರಿಯಲಿಸ್ಟಿಕ್ ಆಗಿರುವ ಗ್ರಾಫಿಕ್ಸ್ ಗಳಿದ್ದು ಹಲವಾರು ರೀತಿಯ ಕಸ್ಟಮೈಸೇಷನ್ ಗಳು ಉದಾಹರಣೆಗೆ ಹೆಸರು, ನೋಟ ಇತ್ಯಾದಿ ಅಂಶಗಳು ಭಿನ್ನವಿಭಿನ್ನವಾಗಿದ್ದು ಜನರನ್ನು ಆಟದತ್ತ ಸೆಳೆಯುವಂತೆ ಮಾಡುತ್ತಿದೆ.

ಆಟದ ಸೆಟ್ ಅಪ್ ಮಾಡಿ, ಲಾಗಿನ್ ಆಗಿ ಆಟ ಶುರು ಮಾಡಿ:

ಆಟದ ಸೆಟ್ ಅಪ್ ಮಾಡಿ, ಲಾಗಿನ್ ಆಗಿ ಆಟ ಶುರು ಮಾಡಿ:

ಪಿಯುಬಿಜಿ ಮೊಬೈಲ್ ಬಳಕೆದಾರರು ಮೊದಲು ಪ್ರೊಸೆಸ್ ನ್ನು ಸೆಟ್ ಅಪ್ ಮಾಡಿಕೊಳ್ಳುವಾಗ ಅವರ ಹೆಸರು ಮತ್ತು ಅವತಾರವನ್ನು ಕಸ್ಟಮೈಜ್ ಮಾಡಿಕೊಳ್ಳುವುದಕ್ಕೆ ಕೇಳುತ್ತದೆ. ಒಮ್ಮೆ ಪ್ಲೇಯರ್ ಆ ಎಲ್ಲಾ ಪ್ರೊಸೀಜರ್ ಗಳನ್ನು ಮುಗಿಸಿದ ನಂತರ ಲಾಗಿನ್ ಮೆಥೆಡ್ ಬಳಸಿ ಆಟವನ್ನು ಆಡಲು ಪ್ರಾರಂಭಿಸಬಹುದು.

ಪಿಯುಬಿಜಿ ಪ್ರಿಯರೇ ಇಲ್ಲಿ ಕೇಳಿ!

ಪಿಯುಬಿಜಿ ಪ್ರಿಯರೇ ಇಲ್ಲಿ ಕೇಳಿ!

ಆದರೆ ಕೆಲವೊಮ್ಮೆ ನಾವು ಆಟವನ್ನು ಆರಂಭಿಸಲು ಗಡಿಬಿಡಿ ಮಾಡಿಕೊಳ್ಳುತ್ತೇವೆ ಮತ್ತು ಕೆಲವು ಸಣ್ಣಪುಟ್ಟ ವಿಚಾರಗಳ ಬಗ್ಗೆ ಗಮನ ಕೊಡುವುದೇ ಇಲ್ಲ ಅದರಲ್ಲೂ ಪ್ರಮುಖವಾಗಿ ಹೆಸರು ಮತ್ತು ಅದನ್ನು ನಾವು ನಂತರದ ಸಮಯದಲ್ಲಿ ಬದಲಾಯಿಸಲು ಕೂಡ ಇಚ್ಛಿಸಬಹುದು.

ಹಾಗಾಗಿ ಒಂದು ವೇಳೆ ನೀವು ಪಿಯುಬಿಜಿಯಲ್ಲಿ ಹೆಸರನ್ನು ಬದಲಾಯಿಸಲು ಇಚ್ಛಿಸುತ್ತಿದ್ದರೆ ಏನು ಮಾಡಬೇಕು ಎಂಬ ಸ್ಟೆಪ್-ಬೈ-ಸ್ಟೆಪ್ ಮಾಹಿತಿಯನ್ನು ನಾವಿಲ್ಲಿ ನೀಡುತ್ತಿದ್ದೇವೆ. ಮುಂದೆ ಓದಿ..

ಮೊದಲಿನದಕ್ಕೆ ಮೊದಲು ಆದ್ಯತೆ:

ಮೊದಲಿನದಕ್ಕೆ ಮೊದಲು ಆದ್ಯತೆ:

ಮೊದಲನೆಯದ್ದಾಗಿ ಬಳಕೆದಾರರು ಗೇಮ್ ವರ್ಷನ್ ನ್ನು 0.4 ಅಥವಾ ಅದಕ್ಕಿಂತ ಮೇಲಿನದ್ದಕ್ಕೆ ಅಪ್ ಡೇಟ್ ಮಾಡಿಕೊಳ್ಳಬೇಕು. ಜೊತೆಗೆ ಬಳಕೆದಾರರಿಗೆ ಸಪರೇಟ್ ನೇಮ್ ಕಾರ್ಡ್ ಒಂದಿರುತ್ತದೆ ಅದನ್ನು ಅವರು ಕಲೆಕ್ಟ್ ಮಾಡಬೇಕು ಮತ್ತು ಅದನ್ನು ಹೆಸರು ಬದಲಾಯಿಸುವುದಕ್ಕೆ ಬಳಸಿಕೊಳ್ಳಬೇಕಾಗುತ್ತದೆ.

“ನೇಮ್ ಕಾರ್ಡ್” ನ್ನು ಸಂಗ್ರಹಿಸುವುದು ಹೇಗೆ?

“ನೇಮ್ ಕಾರ್ಡ್” ನ್ನು ಸಂಗ್ರಹಿಸುವುದು ಹೇಗೆ?

ಕೆಳಗಡೆ ಬಲಭಾಗದಲ್ಲಿರುವ ಇವೆಂಟ್ ಸೆಕ್ಷನ್ ಗೆ ತೆರಳಿ ಮತ್ತು ಎಲ್ಲಾ ಅಪ್ ಡೇಟ್ ರಿವಾರ್ಡ್ ಗಳನ್ನು ಕಲೆಕ್ಟ್ ಮಾಡಿಕೊಳ್ಳಿ

ಇದೀಗ ಇನ್ವೆಂಟರಿ ಗೆ ತೆರಳಿ ಮತ್ತು ಕೆಳಗೆ ಇರುವ ಬಾಕ್ಸ್ ಐಟಂನ್ನು ಟ್ಯಾಪ್ ಮಾಡಿ

ಅಲ್ಲಿ ನೇಮ್ ಕಾರ್ಡ್ ಗಾಗಿ ಹುಡುಕಾಡಿ ಮತ್ತು ಅದನ್ನು ಟ್ಯಾಪ್ ಮಾಡಿ

ಇದೀಗ, ನೀವು ಬದಲಾಯಿಸಲು ಇಚ್ಛಿಸುವ ನೇಮ್ ನ್ನು ಎಂಟರ್ ಮಾಡುವಂತೆ ಅದು ಕೇಳುತ್ತದೆ. ಬದಲಾಯಿಸಲು ಇಚ್ಛಿಸುವ ಹೆಸರನ್ನು ಬರೆಯಿರಿ ಮತ್ತು ಒಮ್ಮೆ ಮುಗಿದ ನಂತರ ಒಕೆ ಒತ್ತಿ ಚೇಂಜ್ ಆಗಿರುವ ಬದಲಾವಣೆಯನ್ನು ಸೇವ್ ಮಾಡಿ.

ಒಂದು ವೇಳೆ ನೀವು 0.4 ಅಪ್ ಡೇಟ್ ನಲ್ಲಿ ಈಗಾಗಲೇ ನೇಮ್ ಕಾರ್ಡ್ ನ್ನು ಹೆಸರು ಬದಲಾಯಿಸಲು ಬಳಸಿದ್ದರೆ ಮತ್ತೊಂದು ವಿಧಾನ ಕೂಡ ಪಿಯುಬಿಜಿಯಲ್ಲಿ ಲಭ್ಯವಿದೆ.

- ಗೇಮ್ ನಲ್ಲಿ ಲೆವೆಲ್ 10 ಕ್ಕೆ ತಲುಪಿ

- ಮಿಷನ್ ರಿವಾರ್ಡ್ಸ್ ಗೆ ತಲುಪಿ ಮತ್ತು ಎಲ್ಲಾ ರಿವಾರ್ಡ್ಸ್ ಗಳನ್ನು ಸಂಗ್ರಹಿಸಿ

- ಲೆವೆಲ್ 10 ರಲ್ಲಿ ನಿಮಗೆ ನೇಮ್ ಕಾರ್ಡ್ ಮತ್ತೆ ಸಿಗುತ್ತದೆ.

- ಇದೀಗ, ಮೇಲೆ ತಿಳಿಸಿರುವ ಹಂತಗಳನ್ನು ಅನುಸರಿಸಿ ಮತ್ತು ಹೆಸರನ್ನು ಬದಲಾಯಿಸಿ

Best Mobiles in India

Read more about:
English summary
How to change name in PUBG Mobile

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X