Home
ಟೆಕ್ ನೌಕರಿ

IRCTC ನಲ್ಲಿ ಬುಕ್ ಮಾಡಿದ ಟಿಕೆಟ್ ನ್ನು ಇನ್ನೊಬ್ಬರ ಹೆಸರಿಗೆ ಮಾಡುವುದು ಹೇಗೆ?

ಆನ್ ಲೈನ್ ನಲ್ಲಿ ರೈಲಿನ ಟಿಕೆಟ್ ಬುಕ್ ಮಾಡುವಾಗ ಅಂದರೆ ಐಆರ್ಸಿಟಿಸಿ (ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಆಪರೇಷನ್) ನಲ್ಲಿ ತಪ್ಪುಗಳನ್ನು ಮಾಡಿದ್ದೀರಾ? ನೀವು ನಿಮ್ಮ ಟಿಕೆಟ್ ನ್ನು ಇನ್ನೊಬ್ಬರಿಗೆ ವರ್ಗಾಯಿಸಲು ಇಚ್ಛಿಸುತ್ತಿದ್ದೀರಾ? ಅಂದರೆ ನಿಮ್ಮ ಟಿಕೆಟ್ ನ್ನು ಮನೆಯ ಬೇರೆಯ ಸದಸ್ಯರ ಹೆಸರಿಗೆ ಅಥವಾ ಸ್ನೇಹಿತರಿಗೆ ಯಾರಿಗಾದರೂ ನೀಡಲು ಬಯಸಿದ್ದೀರಾದ್ರೆ ಅದಕ್ಕೆ ಅವಕಾಶವಿದೆ. ಹೌದು ಐಆರ್ಸಿಟಿಸಿ ಇದೀಗ ರೈಲ್ವೆ ಟಿಕೆಟ್ ಬುಕ್ ಮಾಡಿದ ನಂತರ ನಿಮ್ಮ ಹೆಸರಿನಲ್ಲಿರುವ ಟಿಕೆಟ್ ನ್ನು ಮತ್ತೊಬ್ಬರ ಹೆಸರಿಗೆ ಮಾಡುವುದಕ್ಕೆ ಅವಕಾಶ ನೀಡುತ್ತದೆ. ಆದರೆ ಇಲ್ಲೊಂದು ಗಮನಿಸಬೇಕಾಗಿರುವ ಅಂಶವಿದೆ.

IRCTC ನಲ್ಲಿ ಬುಕ್ ಮಾಡಿದ ಟಿಕೆಟ್ ನ್ನು ಇನ್ನೊಬ್ಬರ ಹೆಸರಿಗೆ ಮಾಡುವುದು ಹೇಗೆ?

ಐಆರ್ ಸಿಟಿಸಿ ಅಧಿಕೃತ ಮಾಹಿತಿ ನೀಡಿರುವ ಪ್ರಕಾರ ಯಾವುದೇ ಒಬ್ಬ ಪ್ರಯಾಣಿಕ ತನ್ನ ಆನ್ ಲೈನ್ ಟಿಕೆಟ್ ನ್ನು ಕೇವಲ ಒಂದು ಬಾರಿ ಹೆಸರು ಬದಲಾಯಿಸುವುದಕ್ಕೆ ಅವಕಾಶವಿರುತ್ತದೆ. ಹಾಗಾದ್ರೆ ಈ ಸೇವೆಯನ್ನು ಪಡೆಯುವುದು ಹೇಗೆ? ನಿಮ್ಮ ಹೆಸರಿನಲ್ಲಿರುವ ಟಿಕೆಟ್ ನ್ನು ಬೇರೆಯವರ ಹೆಸರಿಗೆ ಮಾಡುವುದು ಅಥವಾ ಆನ್ ಲೈನ್ ರೈಲ್ವೇ ಟಿಕೆಟ್ ನಲ್ಲಿ ಹೆಸರು ಬದಲಾಯಿಸುವುದು ಹೇಗೆ ಇಲ್ಲಿದೆ ಹಂತಹಂತವಾಗಿರುವ ಮಾಹಿತಿ.

ಪ್ರಯಾಣಿಕರ ಹೆಸರು ಬದಲಾವಣೆ:

1. ಟಿಕೆಟ್ ನ ಒಂದು ಪ್ರಿಂಟ್ ಔಟ್ ತೆಗೆದುಕೊಳ್ಳಿ

2. ನಿಮ್ಮ ಹತ್ತಿರದ ರೈಲ್ವೇ ರಿಸರ್ವೇಷನ್ ಕೌಂಟರ್ ಗೆ ತೆರಳಿ.

3. ನೀವು ಯಾರಿಗೆ ಟಿಕೆಟ್ ನ್ನು ಬದಲಾಯಿಸಬೇಕು ಎಂದುಕೊಂಡಿದ್ದೀರೋ ಅವರ ಒರಿಜಿನಲ್ ಐಡಿ ಪ್ರೂಫ್ ಜೊತೆಗೆ ಫೋಟೋ ಕಾಪಿಯನ್ನು ತೆಗೆದುಕೊಂಡು ಹೋಗಿ.

4. ಕೌಂಟರ್ ಆಫೀಸ್ ನಲ್ಲಿ ನೀವು ಪ್ರಯಾಣಿಕರ ಹೆಸರನ್ನು ಟಿಕೆಟ್ ನಲ್ಲಿ ಬದಲಾಯಿಸುವಂತೆ ಕೇಳಿಕೊಳ್ಳಬಹುದು.

ಸೂಚನೆ:
ಈ ಸೌಲಭ್ಯವನ್ನು ಪಡೆಯಲು ನೀವು ರೈಲು ಹೊರಡುವ 24 ತಾಸುಗಳ ಮುನ್ನವೇ ಕೌಂಟರ್ ಆಫೀಸ್ ಗೆ ತೆರಳಬೇಕಾಗುತ್ತದೆ.

ನಿಮ್ಮ ಕುಟುಂಬದ ಇತರೆ ಸದಸ್ಯರಿಗೆ ನಿಮ್ಮ ಟಿಕೆಟ್ ನ್ನು ಟ್ರಾನ್ಸ್ ಫರ್ ಮಾಡುವುದಕ್ಕೆ ಹೀಗೆ ಮಾಡಿ:

ಈಗಾಗಲೇ ಮೇಲೆ ತಿಳಿಸಿರುವಂತೆ ಐಆರ್ ಸಿಟಿಸಿ ನಿಮ್ಮ ರಕ್ತಸಂಬಂಧಿಯೊಂದಿಗೆ ಕೂಡ ಈ ಟಿಕೆಟ್ ನ್ನು ಹಂಚಿಕೊಳ್ಳುವುದಕ್ಕೆ ಅವಕಾಶ ನೀಡುತ್ತದೆ. ಉದಾಹರಣೆಗೆ ಅಪ್ಪ, ಅಮ್ಮ, ಅಣ್ಣ, ತಂಗಿ, ಮಗಳು, ಗಂಡ ಯಾರಿಗೆ ಬೇಕಿದ್ದರೂ ಟ್ರಾನ್ಸ್ ಫರ್ ಮಾಡಬಹುದು.

ಅದಕ್ಕಾಗಿ ಅವರು ಅಂದರೆ ಪ್ರಯಾಣ ಕೈಗೊಳ್ಳುವುವವರು ಟಿಕೆಟ್ ನ ಜೊತೆಗೆ ಒರಿಜಿನಲ್ ಐಡಿ ಫ್ರೂಫ್, ರಿಸರ್ವೇಷನ್ ಮಾಡಿಸಿದ್ದ ವ್ಯಕ್ತಿಯ ಜೊತೆಗಿನ ನಿಮ್ಮ ಸಂಬಂಧ ಏನು ಎಂಬ ಬಗ್ಗೆ ಅಂದರೆ ನಿಮ್ಮ ರಕ್ತ ಸಂಬಂಧದ ಬಗ್ಗೆ ಸಾಕ್ಷಿಗಳನ್ನುನೀಡಬೇಕಾಗುತ್ತದೆ

ಟ್ರೈನ್ ಸ್ಟೇಟಸ್, ಬುಕ್ಕಿಂಗ್ ಸ್ಟೇಟಸ್ ಮತ್ತು ಪಿಎನ್ ಆರ್ ಸ್ಟೇಟಸ್ ನ್ನು ತಿಳಿದುಕೊಳ್ಳುವಿಕೆಯನ್ನು ಭಾರತೀಯ ರೈಲ್ವೇ ಬಹಳ ಸರಳ ಗೊಳಿಸಿದೆ ಮತ್ತು ವಾಟ್ಸ್ ಆಪ್ ಜೊತೆಗೆ ಮತ್ತು ಆನ್ ಲೈನ್ ವೆಬ್ ಸೈಟ್ ಮೇಕ್ ಮೈ ಟ್ರಿಪ್ ಜೊತೆದೆ ಪಾರ್ಟ್ನರ್ ಶಿಪ್ ಹೊಂದಿದೆ. ಅದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ. ಅಧಿಕೃತ ವಾಟ್ಸ್ ಆಪ್ ನಂಬರ್ ನ್ನು ಸೇವ್ ಮಾಡಿ ಮತ್ತು ಕೆಲವು ಕೀವರ್ಡ್ಸ್ ಗಳನ್ನು ಸೆಂಡ್ ಮಾಡಿ ಉದಾಹರಣೆಗೆ ಪಿಎನ್ಅರ್ ಸ್ಟೇಟಸ್ ಹೆಚ್ಚಿನ ಮಾಹಿತಿಯನ್ನು ನಿಮ್ಮ ಫೋನಿನಲ್ಲಿ ಪಡೆಯಬಹುದು.

Best Mobiles in India

English summary
How to change passengers name in booked IRCTC ticket
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+