ನಿಮ್ಮ ಸ್ನ್ಯಾಪ್‌ಚಾಟ್ ಯೂಸರ್‌ನೇಮ್ ಬದಲಾಯಿಸಬಹುದು..! ಹೇಗೆ ಗೊತ್ತಾ..?
ನೀವು ಒಂದು ಸ್ನ್ಯಾಪ್ ಚಾಟ್ ನ ಅಕೌಂಟನ್ನು ಸೃಷ್ಟಿಮಾಡಿ ಅದನ್ನು ಬಳಸಲು ಶುರುಮಾಡಿದ್ದೀರಿ ಕೆಲವೇ ದಿನದ ನಂತರ ನಿಮಗೆ ನಿಮ್ಮ ಸ್ನ್ಯಾಪ್ ಚಾಟ್ ನ ಯೂಸರ್ ನೇಮ್ ಹೀಗಿರಬಾರದಿತ್ತು, ಬೇರೆ ಯಾವುದಾದರೂ ಇರಬೇಕಿತ್ತು ಅಂತ ಅನ್ನಿಸುತ್ತದೆ. ಯಾಕಂದರೆ ಪ್ರಾರಂಭದಲ್ಲಿ ನೀವು ಸ್ನ್ಯಾಪ್ ಚಾಟ್ ಗೆ ಸೇರುವಾಗ ಯಾವುದೋ ಅವಿವೇಕದ ಕಾರಣದಿಂದ ಕೆಟ್ಟ ಯೂಸರ್ ನೇಮ್ ನ್ನು ಆಯ್ಕೆ ಮಾಡಿಕೊಂಡುಬಿಟ್ಟಿದ್ದೀರಿ. ಈಗ ಅದನ್ನು ಬದಲಿಸಬೇಕು.
ಹೊಸ ಯೂಸರ್ ನೇಮ್ ಒಂದನ್ನು ನಿಮ್ಮ ಸ್ನ್ಯಾಪ್ ಚಾಟ್ ಅಕೌಂಟ್ ಗೆ ಬಳಸಬೇಕು ಎಂದು ನೀವು ಬಯಸುತ್ತಿದ್ದರೆ, ಖಂಡಿತ ಅದು ಸಾಧ್ಯವಿದೆ. ಆದರೆ ಅದು ಸಾಧ್ಯವಾಗುವುದು ಹೇಗೆ ಎಂದರೆ ನೀವು ನೀವು ಹೊಸ ಸ್ನ್ಯಾಪ್ ಚಾಟ್ ಅಕೌಂಟನ್ನು ಸೃಷ್ಟಿಸಬೇಕು. ಭದ್ರತಾ ದೃಷ್ಟಿಯಿಂದ ಸ್ನ್ಯಾಪ್ ಚಾಟ್ ನ ಯ್ಯೂಸರ್ ನೇಮ್ ಬದಲಾವಣೆಗೆ ಅವಕಾಶವಿಲ್ಲ ಎಂದು ತಿಳಿಸುತ್ತದೆ ಸ್ನ್ಯಾಪ್ ಚಾಟ್. ಅಂದರೆ ನಿಮ್ಮ ಖಾತೆಗೆ ಹೊಸ ಹೆಸರು ಸಿಗಬೇಕು ಎಂದರೆ ನೀವು ಹೊಸದಾಗಿ ನಿಮ್ಮ ಸ್ನ್ಯಾಪ್ ಚಾಟ್ ಖಾತೆ ತೆರೆಯಲು ಮಾಡಿದ ಎಲ್ಲಾ ಕೆಲಸವನ್ನು ಪುನರಾವರ್ತಿಸಬೇಕು.

ಆದರೆ ನೀವು ನಿಮ್ಮ ಹಳೆಯ ಖಾತೆಯನ್ನು ಡಿಲೀಟ್ ಮಾಡುವ ಅಗತ್ಯವಿಲ್ಲ. ನೀವು ಒಂದು ವೇಳೆ ಡಿಲೀಟ್ ಮಾಡಿದರೆ ನಿಮ್ಮ ಹಳೆಯ ಎಲ್ಲಾ ದಾಖಲೆಗಳು ಶಾಶ್ವತವಾಗಿ ಡಿಲೀಟ್ ಆಗುತ್ತದೆ. ಆದರೆ ಹೊಸ ಅಕೌಂಟನ್ನು ಸೃಷ್ಟಿಸಿ ಅದನ್ನು ನಿಮ್ಮ ಫಾಲೋವರ್ಸ್ ಗೆ ತಿಳಿಸಬಹುದು ಮತ್ತು ಹೊಸ ಖಾತೆಯಲ್ಲಿ ಅವರನ್ನು ಸೇರಿಸಿಕೊಳ್ಳಬಹುದು. ಹಾಗಾದರೆ ಇದನ್ನು ಮಾಡುವುದು ಹೇಗೆ ಎಂಬ ಸರಳ ವಿಧಾನಗಳು ಇಲ್ಲಿದೆ ನೋಡಿ.
1. ಆಂಡ್ರಾಯ್ಡ್ ಅಥಾ ಐಫೋನ್ ನಲ್ಲಿ ಸ್ನ್ಯಾಪ್ ಚಾಟ್ ನ್ನು ಡೌನ್ ಲೋಡ್ ಮಾಡಿ.
2. ನೀಲಿ ವರ್ಣದ ಸೈನ್ ಅಪ್ ಬಟನ್ ನ್ನು ಕ್ಲಿಕ್ಕಿಸಿ
3. ನಿಮ್ಮ ವಯಕ್ತಿಕ ಮಾಹಿತಿಗಳನ್ನು ಭರ್ತಿ ಮಾಡಿ ಮತ್ತು ಸೈನ್ ಅಪ್ ಮಾಡಿ,ಒಪ್ಪಿಕೊಳ್ಳಿ
4. ಹೊಸ ಸ್ನ್ಯಾಪ್ ಚಾಟ್ ಯೂಸರ್ ನೇಮ್ ನೀಡಿ
5. ಪರದೆಯ ಮೇಲೆ ಬರುವ ಎಲ್ಲಾ ಹಂತಗಳನ್ನು ಅನುಸರಿಸುತ್ತಾಗಿ ಸಾಗಿ ನಿಮ್ಮ ಅಕೌಂಟನ್ನು ಸೆಟ್ ಮಾಡಿ.
ಎಸ್, ಈಗ ನಿಮ್ಮ ಬಳಿ ಹೊಸ ಯ್ಯೂಸರ್ ನೇಮ್ ಇದೆ. ಇದು ತುಂಬಾ ಸರಳ ವಿಧಾನ. ಆದರೆ ಹೀಗೆ ಮಾಡುವುದರಿಂದಾಗಿ ನಿಮ್ಮ ಹಳೆ ಅಕೌಂಟಿನ ಕಥೆ ಏನು? ಹಾಗಾಗಿ ನಮ್ಮ ಸಲಹೆ ಏನೆಂದರೆ ಸುಮ್ಮನೆ ಹೊಸ ಖಾತೆ ತೆರೆಯುವ ಅಗತ್ಯವಿಲ್ಲ. ಕೇವಲ ಯ್ಯೂಸರ್ ನೇಮ್ ಸರಿ ಇಲ್ಲವೆಂದು ಇನ್ನೊಂದು, ಮತ್ತೊಂದು ಖಾತೆ ತೆರೆಯುವುದರಲ್ಲಿ ಅರ್ಥವಿಲ್ಲ. ಇರುವ ಖಾತೆಯಲ್ಲೇ ಮುಂದುವರಿಯುವುದು ಅತ್ಯುತ್ತಮ ವಿಧಾನ.
ಖಾತೆಯ ಹೆಸರು ಬದಲಾಯಿಸಬೇಕು ಎಂಬ ಆಲೋಚನೆಯನ್ನೇ ಬಿಟ್ಟು ಬಿಡುವುದು ಸೂಕ್ತ ಎಂಬುದು ನಮ್ಮ ಸಲಹೆ. ಹೀಗೆ ಮಾಡುತ್ತಲೇ ಸಾಗುವುದರಿಂದಾಗಿ ಸ್ನ್ಯಾಪ್ ಚಾಟ್ ಗಳ ಅಕೌಂಟ್ ಗಳ ಸಂಖ್ಯೆ ಅಧಿಕವಾಗುತ್ತದೆಯೇ ಹೊರತು ಅದರಿಂದ ಯಾವುದೇ ಪ್ರಯೋಜನಗಳಿಲ್ಲ.


Click it and Unblock the Notifications








