Home
ಟೆಕ್ ನೌಕರಿ

ಜಿಯೋಫೈ ನಲ್ಲಿ ವೈ-ಫೈ ಪಾಸ್ ವರ್ಡ್ ಬದಲಾಯಿಸುವುದು ಹೇಗೆ?

By Gizbot Bureau

ಈಗಿನ ಜಮಾನದಲ್ಲಿ ಪಾಸ್ ವರ್ಡ್ ಎಷ್ಟು ಸೆಕ್ಯೂರ್ ಆಗಿದ್ದರೂ ಸಾಕಾಗುವುದಿಲ್ಲ. ನಾವು ಚಾಪೆ ಕೆಳಗೆ ನುಸುಳಿದರೆ, ಕಳ್ಳರು ರಂಗೋಲಿ ಕೆಳಗೆ ನುಸುಳಲು ಆರಂಭಿಸಿದ್ದಾರೆ. ಆದರೆ ರಂಗೋಲಿ ಕೆಳಗೂ ತೆರಳಿ ಪೋಲೀಸರು ಅವರನ್ನು ಹಿಡಿಯುತ್ತಾರೆ ಅನ್ನೋದು ಮುಂದಿನ ಹಂತ. ಆದರೂ ನಾವು ನಮ್ಮ ಭದ್ರತೆಯನ್ನು ನೋಡಿಕೊಳ್ಳೋದು ಬಹಳ ಮುಖ್ಯ. ಹೀಗೆ ನಿಮ್ಮ ಜಿಯೋಫೈ ಯನ್ನು ರಕ್ಷಣೆ ಮಾಡಿಕೊಳ್ಳುವ ಒಂದು ಪ್ರಮುಖ ವಿಧಾನವೆಂದರೆ ಅದು ಡಿವೈಸ್ ನ ಪಾಸ್ ವರ್ಡ್ ಬದಲಾವಣೆ ಮಾಡುವುದು.

ಜಿಯೋಫೈ ನಲ್ಲಿ ವೈ-ಫೈ ಪಾಸ್ ವರ್ಡ್ ಬದಲಾಯಿಸುವುದು ಹೇಗೆ?

ಜಿಯೋಫೈ ಹಾಟ್ ಸ್ಪಾಟ್ ಡಿವೈಸ್ ನ್ನು ರಿಲಯನ್ಸ್ ಜಿಯೋ ಸಂಸ್ಥೆ ಹೈ ಸ್ಪೀಡ್ ವಯರ್ ಲೆಸ್ ಅಂತರ್ಜಾಲ ಸೇವೆಗಾಗಿ ತಯಾರಿಸುವ ಡಿವೈಸ್ ಆಗಿದೆ.ಬಳಕೆದಾರರು ಇದರ ಮೂಲಕ ಹಲವು ಲ್ಯಾಪ್ ಟಾಪ್, ಸ್ಮಾರ್ಟ್ ಫೋನ್, ಟಿವಿ ಮತ್ತು ಇತ್ಯಾದಿಗಳನ್ನು ಅಂತರ್ಜಾಲಕ್ಕೆ ಸಂಪರ್ಕಿಸಿಕೊಳ್ಳಬಹುದು. ಅಷ್ಟೇ ಯಾಕೆ, ಹಲವಾರು ಬಳಕೆದಾರರು ಒಂದೇ ವೈ-ಫೈ ಕನೆಕ್ಷನ್ ನ್ನು ಬಳಕೆ ಮಾಡಲು ಕೂಡ ಇದು ಅವಕಾಶ ಕಲ್ಪಿಸಿಕೊಡುತ್ತದೆ.

ಆದರೆ, ಹೀಗೆ ಹಲವು ಮಂದಿಯೊಂದಿಗೆ ಅಂತರ್ಜಾಲವನ್ನು ಹಂಚಿಕೊಳ್ಳುವುದರಿಂದಾಗಿ ಅಂತರ್ಜಾಲ ಸೇವೆಯ ವೇಗ ಅಲ್ಪ ಮಟ್ಟಿಗೆ ಕಡಿಮೆಯಾಗುವುದನ್ನು ಗಮನಿಸಬಹುದು. ಅದು ಕೇವಲ ಜಿಯೋದಲ್ಲಿ ಮಾತ್ರವಲ್ಲ, ಎಲ್ಲಾ ವೈ-ಫೈ ಸೇವೆಗಳಲ್ಲೂ ಸರ್ವೇ ಸಾಮಾನ್ಯವಾದ ಸಮಸ್ಯೆ.

ಆದರೆ, ನಿಮಗೆ ತಿಳಿದವರು, ಕುಟುಂಬದವರು ಬಳಕೆ ಮಾಡಿದರೆ ಓಕೆ. ಒಂದು ವೇಳೆ ಅನಧಿಕೃತವಾಗಿರುವ ವ್ಯಕ್ತಿಗಳು,ಅಪರಿಚಿತರು ನಿಮ್ಮ ವೈ-ಫೈ ಬಳಕೆ ಮಾಡಿದರೆ ಏನು ಮಾಡುವುದು? ಹಾಗಾಗಿ ಭದ್ರತಾ ದೃಷ್ಟಿಯಿಂದ ಯಾವಾಗಲೂ ನಿಮ್ಮ ಜಿಯೋಫೈಗೆ ಪಾಸ್ ವರ್ಡ್ ಬಳಕೆ ಮಾಡಲಾಗುತ್ತದೆ. ಇದು ನಿಮ್ಮ ಜಿಯೋಫೈ ಡಿವೈಸ್ ನ್ನು ಹ್ಯಾಕರ್ಸ್ ಮತ್ತು ಸೈಬರ್ ಕ್ರಿಮಿಕಲ್ ಗಳಿಂದಲೂ ರಕ್ಷಣೆ ಮಾಡುತ್ತದೆ. ಪಾಸ್ ವರ್ಡ್ ತಿಳಿದವರು ಮಾತ್ರ ನಿಮ್ಮ ಡಿವೈಸ್ ಮೂಲಕ ಅಂತರ್ಜಾಲ ಸೇವೆಯನ್ನು ಪಡೆದುಕೊಳ್ಳಲಿದ್ದಾರೆ.

ಪಾಸ್ ವರ್ಡ್ ಬದಲಿಸುತ್ತಾ ಇರಬೇಕು

ಪಾಸ್ ವರ್ಡ್ ಬದಲಿಸುತ್ತಾ ಇರಬೇಕು

ಕೇವಲ ಪಾಸ್ ವರ್ಡ್ ಹಾಕಿದರೆ ಸಾಲದು, ಆಗಾಗ ಪಾಸ್ ವರ್ಡ್ ಬದಲಿಸುತ್ತಲೂ ಇರಬೇಕು. ಆಗ ಮಾತ್ರ ಹೆಚ್ಚು ಸೆಕ್ಯುರಿಟಿ ಸಿಗಲು ಸಾಧ್ಯವಾಗುತ್ತೆ. ಕೇವಲ ಜಿಯೋಫೈ ಗೆ ಮಾತ್ರವಲ್ಲ, ಪಾಸ್ ವರ್ಡ್ ಅಂದರೆ ಅದನ್ನು ಆಗಾಗ ಬದಲಿಸುವುದು ಅಂತರ್ಜಾಲದ ಎಲ್ಲಾ ಕಡೆಗೂ ಅನ್ವಯಿಸುತ್ತದೆ. ಈಗ ನೀವು ಜಿಯೋಫೈ ನಲ್ಲಿ ಹೇಗೆ ಪಾಸ್ ವರ್ಡ್ ಅಪ್ ಡೇಟ್ ಮಾಡುವುದು ಅಥವಾ ಬದಲಿಸುವುದು ಎಂದು ಯೋಚಿಸುತ್ತಿರಬಹುದು. ಸರಳವಾದ ಹಂತಗಳನ್ನು ನಾವಿಲ್ಲಿ ವಿವರಿಸುತ್ತಿದ್ದೇವೆ. ಗಮನಿಸಿ.

ಅಗತ್ಯತೆಗಳು

ಅಗತ್ಯತೆಗಳು

• ಜಿಯೋಫೈ ಡಿವೈಸ್ ನಿಂದ ವಯರ್ ಲೆಸ್ ಆಗಿ ಅಥವಾ ಕೇಬಲ್ ಮೂಲಕ ಕನೆಕ್ಟ್ ಆಗಿರುವ ಡಿವೈಸ್

• ಕಾನ್ಫಿಗರೇಷನ್ ಪೋರ್ಟಲ್ ನ ಲಾಗಿನ್ ಐಡಿ ಮತ್ತು ಪಾಸ್ ವರ್ಡ್ ( ಡಿಫಾಲ್ಟ್ ಯೂಸರ್ ನೇಮ್ ಮತ್ತು ಪಾಸ್ ವರ್ಡ್ ‘administrator' ಆಗಿರುತ್ತದೆ).

ಅನುಸರಿಸಬೇಕಾದ ಹಂತಗಳು

ಅನುಸರಿಸಬೇಕಾದ ಹಂತಗಳು

1. ಜಿಯೋಫೈ ಗೆ ನಿಮ್ಮ ಲ್ಯಾಪ್ ಟಾಪ್ ಅಥವಾ ಸ್ಮಾರ್ಟ್ ಫೋನ್ ನ್ನು ಕನೆಕ್ಟ್ ಮಾಡಿ

2. ಗೂಗಲ್ ಕ್ರೋಮ್ ನ್ನು ತೆರೆಯಿರಿ ಅಥವಾ ಯಾವುದೇ ಇತರೆ ಬ್ರೌಸರ್ ನ್ನು ತೆರೆಯಿರಿ ಈ URL: http://jiofi.local.html ನ್ನು ಟೈಪ್ ಮಾಡಿ ಎಂಟರ್ ಹೊಡೆಯಿರಿ.

3.ಪೋರ್ಟಲ್ ಪೇಜ್ ನ ಮೇಲ್ಬಾಗದ ಬಲ ಬದಿಯಲ್ಲಿರುವ ಲಾಗಿನ್ ಬಟನ್ ನ್ನು ಕ್ಲಿಕ್ಕಿಸಿ.

4. ಯೂಸರ್ ಐಡಿ ಮತ್ತು ಪಾಸ್ ವರ್ಡ್ ನ್ನು ಎಂಟರ್ ಮಾಡಿ ಮತ್ತು ಲಾಗಿನ್ ಬಟನ್ ನ್ನು ಕ್ಲಿಕ್ಕಿಸಿ.

5. ಸೆಟ್ಟಿಂಗ್ಸ್ ಟ್ಯಾಬ್ ಗೆ ತೆರಳಿ ಮತ್ತು ವೈ-ಫೈ ಸೆಟ್ಟಿಂಗ್ಸ್ ನ್ನು ಆಯ್ಕೆ ಮಾಡಿ.

6.ಇಲ್ಲಿ ನೀವು "ಚೇಂಜ್ ದಿ ವೈ-ಫೈ ಪಾಸ್ ವರ್ಡ್ ಎಂಡ್ ಜಿಯೋಫೈ ನೇಮ್ " ಅನ್ನೋ ಆಯ್ಕೆಯನ್ನು ಗಮನಿಸುತ್ತೀರಿ. ಅಲ್ಲಿ ನಿಮ್ಮ ಪಾಸ್ ವರ್ಡ್ ಮತ್ತು SSID ಯನ್ನು ಟೈಪ್ ಮಾಡಿ.

7. ಬದಲಾವಣೆಯನ್ನು ಅಪ್ಲೈ ಮಾಡಲು ಸೇವ್ ಬಟನ್ ನ್ನು ಕ್ಲಿಕ್ಕಿಸಿ.

ಅಟೋಮ್ಯಾಟಿಕಲಿ ಡಿಸ್ ಕನೆಕ್ಟ್

ಅಟೋಮ್ಯಾಟಿಕಲಿ ಡಿಸ್ ಕನೆಕ್ಟ್

ಹೊಸ ಪಾಸ್ ವರ್ಡ್ ಮತ್ತು ಎಸ್ಎಸ್ಐಡಿಯನ್ನು ಯಶಸ್ವಿಯಾಗಿ ಸೇವ್ ಮಾಡಿದ ನಂತರ, ಕನೆಕ್ಟ್ ಮಾಡಲಾಗಿದ್ದ ಎಲ್ಲಾ ಡಿವೈಸ್ ಗಳಲ್ಲೂ ಇಂಟರ್ ನೆಟ್ ಕನೆಕ್ಷನ್ ಅಟೋಮ್ಯಾಟಿಕಲಿ ಡಿಸ್ ಕನೆಕ್ಟ್ ಆಗುತ್ತದೆ. ಮತ್ತೆ ಕನೆಕ್ಟ್ ಮಾಡಿಕೊಳ್ಳಲು ಹೊಸ ಕ್ರಿಡೆನ್ಶಿಯಲ್ಸ್ ಗಳನ್ನು ಬಳಕೆ ಮಾಡಬೇಕಾಗುತ್ತದೆ.

ಪಾಸ್ ವರ್ಡ್ ಆಯ್ಕೆಯಲ್ಲಿರಲಿ ಜಾಣ್ಮೆ

ಪಾಸ್ ವರ್ಡ್ ಆಯ್ಕೆಯಲ್ಲಿರಲಿ ಜಾಣ್ಮೆ

ಆದರೆ ಹೀಗೆ ಪಾಸ್ ವರ್ಡ್ ಬದಲಾವಣೆ ಮಾಡುವ ಕೆಲವು ಪ್ರಮುಖ ಅಂಶಗಳನ್ನು ಪ್ರತಿಯೊಬ್ಬರೂ ಗಮನದಲ್ಲಿ ಇಟ್ಟುಕೊಳ್ಳಬೇಕು. ಅದೇನು ಎಂದು ಕೇಳುತ್ತಿದ್ದೀರಾ, ಇಲ್ಲಿದೆ ನೋಡಿ ಮಾಹಿತಿ:

1. ಪಾಸ್ ವರ್ಡ್ ನಲ್ಲಿ ಸಂಖ್ಯೆ ಮತ್ತು ಅಕ್ಷರಗಳು ಎರಡೂ ಇದ್ದರೆ ಇತರರಿಗೆ ಊಹಿಸಲು ಕಠಿಣವಾಗುತ್ತದೆ ಮತ್ತು ಕಾಂಪ್ಲೆಕ್ಸ್ ಆಗಿರುತ್ತದೆ.

2. ಸುಲಭದಲ್ಲಿ ಊಹಿಸಬಹುದಾದ ಪಾಸ್ ವರ್ಡ್ ಗಳನ್ನು ಇಟ್ಟುಕೊಳ್ಳಬೇಡಿ. ಉದಾಹರಣಗೆ ಹುಟ್ಟಿದ ದಿನಾಂಕ, ಸಾಕು ಪ್ರಾಣಿಯ ಹೆಸರು, ಮನೆ ನಂಬರ್, ಬೈಕ್ ನಂಬರ್, ಕಾರ್ ನಂಬರ್, ನಿಮ್ಮ ಫೋನ್ ನಂಬರ್ ಇತ್ಯಾದಿ.

3. ಸ್ಪೆಷಲ್ ಕ್ಯಾರೆಕ್ಟರ್ ಗಳನ್ನ ಪಾಸ್ ವರ್ಡ್ ನಲ್ಲಿ ಬಳಕೆ ಮಾಡುವುದರಿಂದಾಗಿ ಪಾಸ್ ವರ್ಡ್ ಸಾಕಷ್ಟು ಭದ್ರವಾಗಿರಲು ಸಾಧ್ಯವಾಗುತ್ತದೆ.

Best Mobiles in India

English summary
How to change Wi-Fi password for JioFi device. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+