Home
ಟೆಕ್ ನೌಕರಿ

ಏರ್‌ಟೆಲ್, ವೊಡಾಫೋನ್, ಐಡಿಯಾಗಳಲ್ಲಿ ಪೋಸ್ಟ್‌ಪೇಡ್ ಪ್ಲಾನ್ ಬದಲಿಸುವುದು ಹೇಗೆ!?

By Gizbot Bureau

ಅದ್ಯಾಕೋ ನೀವು ಬಳಸುತ್ತಿರುವ ಪೋಸ್ಟ್ ಪೇಡ್ ಪ್ಲಾನ್ ನಿಮಗೆ ದುಬಾರಿಯಾಗುತ್ತಿದೆ ಎಂದು ಅನ್ನಿಸುತ್ತಿದೆಯಾ? ಹಾಗಿದ್ದರೆ ನಿಮ್ಮ ಪೋಸ್ಟ್ ಪೇಡ್ ಪ್ಲಾನ್ ನ್ನು ಬದಲಿಸಬೇಕು ಅಂದುಕೊಂಡಿದ್ದೀರಾ? ಆದರೆ ಅದಕ್ಕಾಗಿ ಕಸ್ಟಮರ್ ಕೇರ್ ಗೆ ಕರೆ ಮಾಡಿ ಸಮಯ ವ್ಯರ್ಥ ಮಾಡಬೇಕಲ್ಲ ಎಂದು ಸುಮ್ಮನೆ ಕುಳಿತಿದ್ದೀರಾ?

ಏರ್‌ಟೆಲ್, ವೊಡಾಫೋನ್, ಐಡಿಯಾಗಳಲ್ಲಿ ಪೋಸ್ಟ್‌ಪೇಡ್ ಪ್ಲಾನ್ ಬದಲಿಸುವುದು ಹೇಗೆ!?

ಹೌದು ಕಸ್ಟಮರ್ ಕೇರ್ ಗೆ ಕರೆ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾದರೆ ಸಾಕಷ್ಟು ಸಮಯ ಬೇಕಾಗುತ್ತದೆ ಮತ್ತು ಹಲವರಿಗೆ ಇದು ಬಹಳ ಕಠಿಣ ಎಂದು ಕೂಡ ಅನ್ನಿಸಬಹುದು. ಆದರೆ ಇನ್ನು ಮುಂದೆ ಈ ವಿಚಾರಕ್ಕೆ ಚಿಂತೆ ಮಾಡಬೇಕಾಗಿಲ್ಲ. ಸುಲಭದಲ್ಲಿಯೇ ನಿಮ್ಮ ಪೋಸ್ಟ್ ಪೇಡ್ ಪ್ಲಾನ್ ನ್ನು ನಿಮ್ಮ ಸರ್ವೀಸ್ ಪ್ರೊವೈಡರ್ ಗಳ ಆಪ್ ಮೂಲಕೇ ಸ್ಮಾರ್ಟ್ ಫೋನ್ ನಲ್ಲಿಯೇ ಫಟಾಫಟ್ ಅಂತ ಬದಲಿಸಿಕೊಳ್ಳಬಹುದು.

ಅಧಿಕೃತ ಆಪ್ ಮೂಲಕ ಬದಲಾಯಿಸಿಕೊಳ್ಳಿ 

ಅಧಿಕೃತ ಆಪ್ ಮೂಲಕ ಬದಲಾಯಿಸಿಕೊಳ್ಳಿ 

ನಿಮ್ಮ ಸರ್ವೀಸ್ ಪ್ರೊವೈಡರ್ ಗಳ ಅಧಿಕೃತ ಆಪ್ ಗಳ ಮುಖಾಂತರ ಸುಲಭದಲ್ಲಿ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿಯೇ ಪೋಸ್ಟ್ ಪೇಡ್ ಪ್ಲಾನ್ ನ್ನು ಬದಲಿಸಿಕೊಳ್ಳಬಹುದು. ಅದಕ್ಕಾಗಿ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಈ ಅನುಸರಿಸಬೇಕಾಗಿರುವ ಹಂತಗಳ ವಿವರಗಳನ್ನು ಇಲ್ಲಿ ನೀಡಿದ್ದೇವೆ. ದಯವಿಟ್ಟು ಗಮನಿಸಿಕೊಳ್ಳಿ ಮತ್ತು ನಿಮ್ಮ ಪೋಸ್ಟ್ ಪೇಡ್ ಪ್ಲಾನ್ ನ್ನು ಬದಲಿಸಿಕೊಳ್ಳಿ.

ಏರ್ ಟೆಲ್ ಬಳಕೆದಾರರಿಗೆ:

ಏರ್ ಟೆಲ್ ಬಳಕೆದಾರರಿಗೆ:

• ‘My Airtel' ಆಪ್ ನ್ನು ಡೌನ್ ಲೋಡ್ ಮಾಡಿ ಮತ್ತು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಿ.

• ಫೋನ್ ನಂಬರ್ ಬಳಸಿ ಆಪ್ ನ್ನು ಕಾನ್ಫಿಗರ್ ಮಾಡಿಕೊಳ್ಳಿ.

• ಈಗ, ಮೇಲ್ಬಾಗದ ಬಲ ಬದಿಯಲ್ಲಿರುವ ಆಪ್ ನ ‘Me' ವಿಭಾಗದ 3 ಲಂಬವಾಗಿರುವ ಚುಕ್ಕಿಗಳನ್ನು ಟ್ಯಾಪ್ ಮಾಡಿ

• ‘Change Plan' ಆಯ್ಕೆ ಯನ್ನು ಪಾಪ್ ಅಪ್ ಮೆನುವಿನಿಂದ ತೆರೆಯಿರಿ .

• ಇದು ನಿಮ್ಮನ್ನು ಪ್ಲಾನ್ ಸಮ್ಮರಿ ಪೇಜ್ ಗೆ ಕರೆದುಕೊಂಡು ಹೋಗುತ್ತದೆ. ಅಲ್ಲಿ ‘Change Plan'ನ್ನು ಸೆಲೆಕ್ಟ್ ಮಾಡಿ ಮತ್ತು ಅದು ನಿಮ್ಮನ್ನು ಪ್ಲಾನ್ ಸೆಕ್ಷನ್ ಪೇಜ್ ಗೆ ಕೊಂಡೊಯ್ಯುತ್ತದೆ.

• ನಿಮಗೆ ಯಾವ ಪ್ಲಾನ್ ಸೂಕ್ತವೆನಿಸುತ್ತದೆಯೋ ಅದನ್ನು ‘OK' ಟ್ಯಾಪ್ ಮಾಡಿ ಆಯ್ಕೆ ಮಾಡಿ ಮತ್ತು ಪ್ಲಾನ್ ಚೇಂಜ್ ರಿಕ್ವೆಸ್ಟ್ ನ್ನು ಅಲ್ಲಿ ನೊಂದಾಯಿಸಿ.

• ಇದಕ್ಕೆ ಸಂಬಂಧಿಸಿದ ಒಂದು ಕಾನ್ಫಿಗರೇಷನ್ ಮೆಸೇಜ್ ಒಂದು ನಿಮಗೆ ತಲುಪುತ್ತದೆ.

ಐಡಿಯಾ ಬಳಕೆದಾರರು 

ಐಡಿಯಾ ಬಳಕೆದಾರರು 

• ಆಪ್ ನ್ನು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಡೌನ್ ಲೋಡ್ ಮಾಡಿ ಮತ್ತು ಇನ್ಸ್ಟಾಲ್ ಮಾಡಿ.

• ನಿಮ್ಮ ಮೊಬೈಲ್ ನಂಬರ್ ಬಳಸಿ ಲಾಗ್ ಆನ್ ಆಗಿ .

• ನಂತರ ಆಪ್ ನಲ್ಲಿರುವ ‘My Account' ವಿಭಾಗಕ್ಕೆ ತೆರಳಿ

• ಈಗ,ಆಪ್ ನ ಮೇಲ್ಬಾಗದ ಬಲ ಬದಿಯಲ್ಲಿರುವ ‘Billing Details' ನ್ನು ಟ್ಯಾಪ್ ಮಾಡಿ.

• ಬಿಲ್ ಪ್ಲಾನ್ ಆಯ್ಕೆಯ ಮುಂಭಾಗದಲ್ಲಿರುವ‘Change' ಆಯ್ಕೆಯನ್ನು ಟ್ಯಾಪ್ ಮಾಡಿ.

• ಯಾವ ಪ್ಲಾನ್ ಗೆ ಬದಲಾಗಬೇಕು ಅಂದುಕೊಂಡಿದ್ದೀರೋ ಅದನ್ನು ಆಯ್ಕೆ ಮಾಡಿ

ವೊಡಾಫೋನ್ ಬಳಕೆದಾರರು 

ವೊಡಾಫೋನ್ ಬಳಕೆದಾರರು 

• ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ‘My Vodafone' ಆಪ್ ನ್ನು ಡೌನ್ ಲೋಡ್ ಮಾಡಿ ಮತ್ತು ಇನ್ಸ್ಟಾಲ್ ಮಾಡಿ.

• ಮೊಬೈಲ್ ನಂಬರ್ ಬಳಸಿ ಲಾಗ್ ಇನ್ ಆಗಿ.

• ಈಗ ‘Continue to my Vodafone app' ನ್ನು ಟ್ಯಾಪ್ ಮಾಡಿ.

• ಆಪ್ ನ ಮೇಲ್ಬಾಗದ ಬಲ ಬದಿಯಲ್ಲಿರುವ ಮೂರು ಅಡ್ಡಲಾಗಿರುವ ಬಾರ್ ಲೈನ್ ಗಳನ್ನು ಟ್ಯಾಪ್ ಮಾಡಿ.

• ‘Active packs and plans' ವಿಭಾಗಕ್ಕೆ ತೆರಳಿ ಮತ್ತು ಪೇಜಿನ ಕೆಳಭಾಗದಲ್ಲಿರುವ‘Browse other plans' ನ್ನು ಟ್ಯಾಪ್ ಮಾಡಿ.

• ನೀವು ಬಳಸಬೇಕು ಎಂದುಕೊಳ್ಳುವ ಪ್ಲಾನ್ ನ್ನು ಆಯ್ಕೆ ಮಾಡಿ.

Best Mobiles in India

English summary
How to change your postpaid plan on Airtel, Vodafone and Idea. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+