Subscribe to Gizbot

ಚಾರ್ಜಿಂಗ್ ಸಮಯದಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ಬಿಸಿಯಾಗುತ್ತಿದ್ಯಾ..!?

Written By:

ಇಂದಿನ ದಿನದಲ್ಲಿ ಸ್ಮಾರ್ಟ್‌ಫೋನ್‌ಅನ್ನು ಎಲ್ಲರ ಕೈನಲ್ಲಿಯೂ ನೋಡಬಹುದಾಗಿದೆ. ಆದರೆ ಇದೇ ಸ್ಮಾರ್ಟ್‌ಫೋನ್‌ ಬಳಕೆದಾರರ ಪ್ರಮುಖ ಸಮಸ್ಯೆ ಎಂದರೆ ಒಂದು ಚಾರ್ಜ್ ನಿಲ್ಲುವುದಿಲ್ಲ ಮತ್ತು ಸರಿಯಾಗಿ ಚಾರ್ಜ್ ಆಗುವುದಿಲ್ಲ ಎನ್ನುವುದು. ಹೀಗಾಗಿ ನಿಮ್ಮ ಚಾರ್ಜಿಂಗ್ ಸಮಸ್ಯೆಗೆ ಯಾವ ರೀತಿಯಲ್ಲಿ ಪರಿಹಾರ ಎಂಬುದು ಇಲ್ಲಿದೆ.

ಚಾರ್ಜಿಂಗ್ ಸಮಯದಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ಬಿಸಿಯಾಗುತ್ತಿದ್ಯಾ..!?

ಓದಿರಿ: ಹಳೇಯ ಆಂಡ್ರಾಯ್ಡ್ ಫೋನನ್ನು ಮನೆಯಲ್ಲೇ ಫ್ಲಾಷ್ ಮಾಡುವುದು ಹೇಗೆ..?

ಈ ಹಿಂದೆ ಮೊಬೈಲ್ ಫೋನ್‌ಗಳನ್ನು ಮಾತನಾಡಲು ಮತ್ತು ಸಂದೇಶ ರವಾನಿಸಲು ಮಾತ್ರ ಬಳಸಲಾಗುತ್ತಿತ್ತು. ಆದರೆ, ಇಂದು ಗೇಮ್ ಆಡಲು, ವಿಡಿಯೋ ನೋಡಲು, ಫೊಟೋ ತೆಗೆಯಲು ಬಳಸುತ್ತಿರುವುದರಿಂದ ಬ್ಯಾಟರಿ ಚಾರ್ಜಿಂಗ್ ಸಮಸ್ಯೆ ಎದುರಾಗುತ್ತಿದೆ. ಇದಕ್ಕಾಗಿ ಕೆಲವು ಅಭ್ಯಾಸಗಳನ್ನು ರೂಡಿಸಿಕೊಂಡರೆ ಮಾತ್ರ ಈ ಸಮಸ್ಯೆ ಬಗೆಹರಿಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೊಬೈಲ್ ಹೇಗೆ ಚಾರ್ಜ್ ಮಾಡಬೇಕು:

ಮೊಬೈಲ್ ಹೇಗೆ ಚಾರ್ಜ್ ಮಾಡಬೇಕು:

ನಿಮ್ಮ ಮೊಬೈಲ್ ನೊಂದಿಗೆ ನೀಡಿರುವ ಚಾರ್ಜರ್ ನಿಂದಲೇ ಫೋನ್ ಅನ್ನು ಚಾರ್ಜ್ ಮಾಡಿರಿ. ಸದ್ಯ ಎಲ್ಲಾ ಮೊಬೈಲ್ ಗಳು ಯುಎಸ್‌ಬಿ ಕೇಬಲ್ ನಿಂದಲೇ ಚಾರ್ಜ್ ಆಗಲಿದೆ. ಹಾಗೆಂದು ಅದನ್ನು ಕಂಪ್ಯೂಟರ್ ಗೆ ಹಾಕಿ ಇಲ್ಲವೇ ಬೇರೆ ಕಂಪನಿಗಳ ಚಾರ್ಜರ್ ಬಳಸಿ ಚಾರ್ಜ್ ಮಾಡಿದರೆ ಸಮಸ್ಯೆ ಎದುರಾಗುತ್ತದೆ. ಹಾಗಾಗಿ ಕಂಪನಿ ನೀಡಿರುವ ಚಾರ್ಜರ್ ನಿಂದಲೇ ಚಾರ್ಜ್ ಮಾಡಿ.

ಚಾರ್ಜ್ ಮಾಡುವಾಗ ಫ್ಲಿಪ್ ಕವರ್ ತೆಗೆಯಿರಿ:

ಚಾರ್ಜ್ ಮಾಡುವಾಗ ಫ್ಲಿಪ್ ಕವರ್ ತೆಗೆಯಿರಿ:

ಇಂದಿನ ದಿನದಲ್ಲಿ ಬಳಕೆದಾರರು ಮೊಬೈಲ್‌ಗಳು ಹಾಳಾಗದಿರಲಿ ಎಂದು ಫ್ಲಿಪ್ ಕವರ್ ಅನ್ನು ಅಳವಡಿಸಿಕೊಂಡಿರುತ್ತಾರೆ. ಕೆಲವೊಮ್ಮೆ ಇದು ಫ್ಯಾಷನ್ ಗಾಗಿಯೂ ಬಳಸುವವರ ಸಂಖ್ಯೆಯೂ ಹೆಚ್ಚಾಗಿದೆ. ಹಾಗಾಗಿ ನಿಮ್ಮ ಮೊಬೈಲ್ ಚಾರ್ಜ್ ಮಾಡುವಾಗ ರಕ್ಷಣಾ ಕವಚಗಳನ್ನು ತೆಗೆಯುವುದು ಉತ್ತಮ. ಇದರಿಂದ ಬ್ಯಾಟರಿ ಬಾಳಿಕೆ ಮತ್ತು ವೇಗವಾಗಿ ಚಾರ್ಜ್ ಆಗಲಿದೆ. ಚಾರ್ಜಿಂಗ್ ಸಮಯದಲ್ಲಿ ಮೊಬೈಲ್ ಬಿಸಿಯಾಗುವುದು ತಪ್ಪಲಿದೆ.

ವೇಗದ ಚಾರ್ಜರ್ ಬಳಸಬೇಡಿ:

ವೇಗದ ಚಾರ್ಜರ್ ಬಳಸಬೇಡಿ:

ವೇಗವಾಗಿ ಮೊಬೈಲ್ ಚಾರ್ಜ್ ಆಗಬೇಕು ಎನ್ನುವ ಕಾರಣಕ್ಕೆ ಮಾರುಕಟ್ಟೆಯಲ್ಲಿ ದೊರೆಯಲಿರುವ ವೇಗ ಚಾರ್ಜರ್‌ಗಳನ್ನು ಬಳಸಿ ಮೊಬೈಲ್ ಚಾರ್ಜ್ ಮಾಡಿಕೊಳ್ಳಬೇಡಿ. ಇದರಿಂದ ಬ್ಯಾಟರಿ ಬೇಗ ಬಿಸಿಯಾಗಲಿದ್ದು, ತಣ್ಣಗಾಗುವುದಿಲ್ಲ ಇದರಿಂದ ಬ್ಯಾಟರಿ ಕ್ಷಮತೆ ಕಡಿಮೆಯಾಗಲಿದೆ.

ರಾತ್ರಿ ಪೂರ್ತಿ ಚಾರ್ಜ್ ಮಾಡಬೇಡಿ:

ರಾತ್ರಿ ಪೂರ್ತಿ ಚಾರ್ಜ್ ಮಾಡಬೇಡಿ:

ಕೆಲವರು ಮೊಬೈಲ್ ಅನ್ನು ರಾತ್ರಿ ಇಡೀ ಚಾರ್ಜ್‌ಗೆ ಹಾಕಿ ಬಿಟ್ಟಿರುತ್ತಾರೆ. ಈ ರೀತಿ ಮಾಡುವುದು ಅಪಾಯಕಾರಿ. ಇದರಿಂದ ಬ್ಯಾಟರಿಯು ದೀರ್ಘಕಾಲ ಬಾಳಿಕೆ ಬರುವುದಿಲ್ಲ. ಅತಿಯಾಗಿ ಚಾರ್ಜ್ ಮಾಡುವುದೂ ಬೇಡ. ಶೇ 90ರಷ್ಟು ಚಾರ್ಜ್ ಆದ ಕೂಡಲೇ ಚಾರ್ಜರ್ ಆಫ್ ಮಾಡಿ. ಈ ಅಭ್ಯಾಸ ರೂಡಿಸಿಕೊಳ್ಳಿ.

ವೈರ್ ಲೈಸ್ ಚಾರ್ಜರ್ ಬಳಕೆ ಮಾಡಬೇಡಿ:

ವೈರ್ ಲೈಸ್ ಚಾರ್ಜರ್ ಬಳಕೆ ಮಾಡಬೇಡಿ:

ಮಾರುಕಟ್ಟೆಯಲ್ಲಿ ವೈಫೈ, ಬ್ಲ್ಯೂಟೂತ್ ಮೂಲಕ ಚಾರ್ಜ್ ಮಾಡಿಕೊಳ್ಳುವ ವೈರ್ ಲೈಸ್ ಚಾರ್ಜರ್ ಲಭ್ಯವಿದ್ದು, ಸಾಧ್ಯವಾದಷ್ಟು ಮಟ್ಟಿಗೆ ಇವುಗಳಿಂದ ದೂರವಿದ್ದರೆ ಮೊಬೈಲ್‌ ಬ್ಯಾಟರಿ ಆರೋಗ್ಯ ಚೆನ್ನಾಗಿರುತ್ತದೆ. ಈ ನಿಯಮಗಳನ್ನು ಪಾಲಿಸಿದರೆ ನಿಮ್ಮ ಸ್ಮಾರ್ಟ್‌ಫೋನ್ ಉತ್ತಮ ಬಾಳಿಕೆ ಬರಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Most modern smartphones are clever enough to stop charging when full, so there isn't a great risk in leaving your phone charging overnight. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot