ಆಪಲ್ ಐಫೋನ್ ಅಸಲಿಯೋ, ನಕಲಿಯೋ ಎಂದು ಹೇಗೆ ಕಂಡುಹಿಡಿಯುವುದು?

ಮಾರುಕಟ್ಟೆಗೆ ನಕಲಿ ಐಫೋನ್‌ಗಳ ದೊಡ್ಡಜಾಲವೇ ಕಾಲಿಟ್ಟಿದೆ.!! ಹೌದು ಬೆಂಗಳೂರು ಸೇರಿ ದೇಶದ ದೊಡ್ಡ ದೊಡ್ಡ ಮಹಾನಗರಗಳಲ್ಲಿ ನಕಲಿ ಐಫೋನ್‌ಗಳ ಜಾಲವೇ ಬೀಡುಬಿಟ್ಟಿದೆ.!!

|

ಮಾರುಕಟ್ಟೆಗೆ ನಕಲಿ ಐಫೋನ್‌ಗಳ ದೊಡ್ಡಜಾಲವೇ ಕಾಲಿಟ್ಟಿದೆ.!! ಹೌದು ಬೆಂಗಳೂರು ಸೇರಿ ದೇಶದ ದೊಡ್ಡ ದೊಡ್ಡ ಮಹಾನಗರಗಳಲ್ಲಿ ನಕಲಿ ಐಫೋನ್‌ಗಳ ಜಾಲವೇ ಬೀಡುಬಿಟ್ಟಿದ್ದು, ಐಫೋನ್ ಪ್ರಿಯರು ಇದರಿಂದ ಮೋಸ ಹೋಗುತ್ತಿದ್ದಾರೆ.!!

ಚೀನಾದಲ್ಲಿ ತಯಾರಾಗುತ್ತಿರುವ ಐಫೋನ್ ರೀತಿಯಲ್ಲಿಯೇ ಇರುವ ಈ ಫೋನ್‌ಗಳು ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತಿವೆ. ಇನ್ನು ಕೆಲವರು ಗ್ರಾಹಕರನ್ನು ಮೋಸ ಮಾಡಿ ಹೆಚ್ಚು ಬೆಲೆಗೆ ನಕಲಿ ಐಫೋನ್‌ಗಳನ್ನು ಮಾರುತ್ತಿದ್ದಾರೆ.!!

ಹಾಗಾಗಿ, ಐಫೋನ್‌ಗಳಿಗೂ ಮತ್ತು ನಕಲಿ ಐಫೋನ್‌ಗಳಿಗೂ ಇರುವ ವ್ಯತ್ಯಾಸವೇನು? ನಿಜವಾದ ಐಫೋನ್ ಕಂಡುಹಿಡಿಯುವುದು ಹೇಗೆ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ

ಸೀರಿಯಲ್ ಸಂಖ್ಯೆ ಪರಿಶೀಲಿಸಿ

ಸೀರಿಯಲ್ ಸಂಖ್ಯೆ ಪರಿಶೀಲಿಸಿ

ಐಫೋನ್ ಪಡೆದುಕೊಂಡ ನಂತರ ಸೆಟ್ಟಿಂಗ್‌ಗೆ ತೆರಯಿರಿ, ಜನರಲ್‌ಗೆ ಹೋಗಿ ಮತ್ತು ಅಬೌಟ್ ಬಟನ್ ಸ್ಪರ್ಶಿಸಿ. ಇದೀಗ ನಿಮಗೆ ಸ್ಕ್ರಾಲ್ ಡೌನ್ ಮಾಡಬಹುದು ಇಲ್ಲಿ ಡಿವೈಸ್‌ನ 11 ಡಿಜಿಟ್ ಸೀರಿಯಲ್ ಸಂಖ್ಯೆ ನೋಡಬಹುದು. AABCCDDDEEF ಈ ಸ್ವರೂಪದಲ್ಲಿ ನಿಮಗೆ ದೊರೆಯುತ್ತದೆ.

ನಕಲಿ ಫೋನ್ ಮೆಮೊರಿ ಕಾರ್ಡ್

ನಕಲಿ ಫೋನ್ ಮೆಮೊರಿ ಕಾರ್ಡ್

ಮೆಮೊರಿ ಸಾಮರ್ಥ್ಯ ಮೂಲ ಐಫೋನ್ ಮೆಮೊರಿ ಸಾಮರ್ಥ್ಯ 16ಜಿಬಿ/32ಜಿಬಿ ಅಥವಾ 64ಜಿಬಿ ಇರುತ್ತದೆ. ಆದರೆ ನಕಲಿ ಫೋನ್ ಮೆಮೊರಿ ಕಾರ್ಡ್ ವಿಸ್ತರಿಸಲು ಎಸ್‌ಡಿ ಕಾರ್ಡ್ ಇರುತ್ತದೆ. ಇದರಿಂದ ನಿಮ್ಮ ಐಫೋನ್ ನಕಲಿ ಎಂಬುದು ಗೊತ್ತಾಗಿಬಿಡುತ್ತದೆ.

ಲೋಗೋವನ್ನು ಪರಿಶೀಲಿಸಿ!!

ಲೋಗೋವನ್ನು ಪರಿಶೀಲಿಸಿ!!

ನಿಮ್ಮ ಐಫೋನ್ ಅನ್ನು ನೀವು ಪವರ್ ಆನ್ ಮಾಡಿದಾಗ ಲೋಗೋ ಕಾಣದಿದ್ದರೆ ಅದು ನಕಲಿ ಐಫೋನ್ ಆಗಿರುತ್ತದೆ. ಜೊತೆಗೆ ನಕಲಿ ಐಫೋನ್ ಡಿಜಿಟಲ್ ದೃಢೀಕರಣ ಹೊಂದಿರುವುದಿಲ್ಲ ಸಿರಿ ಅಪ್ಲಿಕೇಶನ್ ಇನ್‌ಸ್ಟಾಲ್ ಮಾಡಿ ನಿಮ್ಮ ಐಫೋನ್‌ನಿಂದ ಸಿರಿ ಅಪ್ಲಿಕೇಶನ್ ಅನ್ನು ಪಡೆದುಕೊಳ್ಳಲು ಪ್ರಯತ್ನಿಸಿ. ನಿಮಗೆ ಇದು ಕಾಣದಿದ್ದಲ್ಲಿ ಅಥವಾ ಸಿರಿ ಅಪ್ಲಿಕೇಶನ್ ಪ್ರವೇಶಿಸಲು ಸಾಧ್ಯವಾಗದಿದ್ದಲ್ಲಿ ನೀವು ನಕಲಿ ಐಫೋನ್ ಬಳಸುತ್ತಿದ್ದೀರಿ ಎಂಬುದು ನಿಜ.

ಐಓಎಸ್ ಆಪರೇಟಿಂಗ್ ಸಿಸ್ಟಮ್

ಐಓಎಸ್ ಆಪರೇಟಿಂಗ್ ಸಿಸ್ಟಮ್

ನೈಜ ಐಫೋನ್ ಐಓಎಸ್ ಆಪರೇಟಿಂಗ್ ಸಿಸ್ಟಮ್ ಪರಿಶೀಲಿಸಿ. ನೈಜ ಐಫೋನ್ ಐಓಎಸ್ ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿರುತ್ತದೆ. ಐಓಎಸ್ ಅಲ್ಲದೆ ಬೇರೆ ಓಎಸ್ ನಿಮಗೆ ಕಂಡುಬಂದಲ್ಲಿ ನಿಮ್ಮ ಐಫೋನ್ ನಕಲಿ.

ಅಪ್ಲಿಕೇಶನ್ಸ್!!

ಅಪ್ಲಿಕೇಶನ್ಸ್!!

ಇನ್‌ಬಿಲ್ಟ್ ಅಪ್ಲಿಕೇಶನ್ಸ್ ಪರಿಶೀಲಿಸಿ ಕೆಲವೊಂದು ಸಾಮಾನ್ಯ ಅಪ್ಲಿಕೇಶನ್‌ಗಳಾದ ಕಾಂಪ್ಯಾಕ್ಟ್, ಕಂಪಾಸ್, ಸೆಟ್ಟಿಂಗ್ಸ್, ಕ್ಯಾಲ್ಕುಲೇಟರ್, ಮ್ಯೂಸಿಕ್ ಮತ್ತು ಫೋಟೋಗಳನ್ನು ನೈಜ ಐಫೋನ್ ಹೊಂದಿರುತ್ತದೆ. ಯಾವುದೇ ಅಪ್ಲಿಕೇಶನ್ ಮಿಸ್ ಆಗಿದ್ದಲ್ಲಿ ಇದು ನಕಲಿ ಎಂಬುದು ಖಾತ್ರಿಯಾಗುತ್ತದೆ.

ದೃಢೀಕೃತ ಟೂಲ್!!

ದೃಢೀಕೃತ ಟೂಲ್!!

ಐಫೋನ್ ಸ್ಟೋರ್ ನೀವು ಖರೀದಿಸಿರುವ ಐಫೋನ್ ಅಸಲಿಯೇ ನಕಲಿಯೇ ಎಂಬುದನ್ನು ಈ ಸ್ಟೋರ್‌ಗೆ ತೆಗೆದುಕೊಂಡು ಹೋಗಿ ಪರಿಶೀಲಿಸಿಕೊಳ್ಳಿ. ಐಫೋನ್ ಪರಿಣಿತರಲ್ಲಿ ನಿಮ್ಮ ಫೋನ್ ಅನ್ನು ನೀಡಿ ಅದನ್ನು ದೃಢೀಕೃತ ಟೂಲ್ ಬಳಸಿ ಪರಿಶೀಲಿಸಲು ತಿಳಿಸಿ.

Best Mobiles in India

English summary
There is one immediate way to know whether your iPhone is real or fake. Open Settings of youriPhone. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X