ವಾಟ್ಸ್‌ಆಪ್‌ನಲ್ಲಿ ರೈಲ್ವೇ PNR ಸ್ಟೇಟಸ್‌ ನೋಡಬಹುದು..! ಹೇಗೆ..?

By GizBot Bureau
|
How to check train status using WhatsApp

ಇದುವರೆಗೂ ರೈಲ್ವೇ ಟಿಕೆಟ್ ಬುಕ್ ಮಾಡಿದ ನಂತರ 10 ಡಿಜಿಟ್ ಇರುವ ಪಿಎನ್ಆರ್ ಅಥವಾ ಲೈಟ್ ಟ್ರೈನ್ ಸ್ಟೇಟಸ್ ನ್ನು ಪರೀಕ್ಷಿಸುವುದು ಬಹಳ ಕಷ್ಟದ ಕೆಲಸವಾಗಿತ್ತು. ಇದುವರೆಗೂ ಪ್ರಯಾಣಿಕರು ತಮ್ಮ ಪಿಎನ್ಆರ್ ಸ್ಟೇಟಸ್ ತಿಳಿದುಕೊಳ್ಳಲು ರೈಲ್ವೇ ರಿಸರ್ವೇಷನ್ ವಿಚಾರಣೆಯ ಸಂಖ್ಯೆ 139 ಕ್ಕೆ ಕರೆ ಮಾಡಬೇಕಿತ್ತು ಇಲ್ಲವೇ ICRTC's ನ ವೆಬ್ ಸೈಟ್ ಗೆ ತೆರಳಿ ಅಪ್ ಡೇಟ್ ನೋಡಬೇಕಿತ್ತು. ಇದೆರಡೂ ಕೂಡ ಪ್ರಯಾಣಿಕರಿಗೆ ಅಷ್ಟು ಸುಲಭದಲ್ಲಿ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ.

ವಾಟ್ಸ್‌ಆಪ್‌ನಲ್ಲಿ ರೈಲ್ವೇ PNR ಸ್ಟೇಟಸ್‌ ನೋಡಬಹುದು..! ಹೇಗೆ..?


ಹಾಗಾಗಿ ಗ್ರಾಹಕರ ಈ ಸೇವೆಯನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೇ ಇಲಾಖೆಯು ಇತ್ತೀಚೆಗೆ ಮೇಕ್ ಮೈ ಟ್ರೀಪ್ ಟ್ರಾವೆಲ್ ವೆಬ್ ಸೈಟ್ ಜೊತೆ ಕೈಜೋಡಿಸಿತು. ಈ ಟೈ ಅಪ್ ಮುಖಾಂತರ ಪಿಎನ್ಆರ್ ಸ್ಟೇಟಸ್, ಲೈವ್ ಟ್ರೈನ್ ಸ್ಟೇಟಸ್ ಮತ್ತು ಇತರೆ ಹಲವು ರೈಲ್ವೇ ಸಂಬಂಧಿ ವಿಚಾರಣೆಯನ್ನು ಮೊಬೈಲ್ ಮೂಲಕವೇ ಸಾಧಿಸಿಕೊಳ್ಳಲು ನೆರವಾಗುತ್ತದೆ. ಹಾಗಾದ್ರೆ ಇದು ಹೇಗೆ ಕೆಲಸ ಮಾಡುತ್ತದೆ ಎಂಬ ವಿವರಣೆ ಈ ಕೆಳಗೆ ಇದೆ ತಿಳಿದುಕೊಳ್ಳಿ.

ಪ್ರಮುಖ ಅಗತ್ಯತೆಗಳು:

ಪ್ರಮುಖ ಅಗತ್ಯತೆಗಳು:

1. ನೀವು ನೂತನ ವರ್ಷನ್ ನ ವಾಟ್ಸ್ ಆಪ್ ನ್ನು ಬಳಸುತ್ತಿರಬೇಕು.

2.ಅಂತರ್ಜಾಲ ಸಂಪರ್ಕ ಸೇವೆಯಲ್ಲಿರಬೇಕು.

3.ನಿಮ್ಮ ಟ್ರೈನ್ ನಂಬರ್ ಮತ್ತು ಪಿಎನ್ಆರ್ ನಂಬರ್ ನ್ನು ಕೈಯಲ್ಲಿ ಹಿಡಿದುಕೊಂಡಿರಿ.

ಅನುಸರಿಸಬೇಕಾಗಿರುವ ಹಂತಗಳು :

ಅನುಸರಿಸಬೇಕಾಗಿರುವ ಹಂತಗಳು :

1. ‘Dialer' ಆಪ್ ನ್ನು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ತೆರೆಯಿರಿ.

2. ಈ ನಂಬರ್ ನ್ನು ಟೈಪ್ ಮಾಡಿ‘7349389104'. (ಇದು ಮೇಕ್ ಮೈ ಟ್ರಿಪ್ ನ ವಾಟ್ಸ್ ಆಪ್ ಅಧಿಕೃತ ವಾಟ್ಸ್ ಆಪ್). ನಿಮ್ಮ ಕಾಂಟ್ಯಾಕ್ಟ್ ಗೆ ಇದನ್ನು ಸೇರಿಸಿ.

3.ನಂಬರ್ ಸೇವ್ ಮಾಡಿಕೊಂಡ ನಂತರ, ನಿಮ್ಮ ಫೋನಿನಲ್ಲಿ ವಾಟ್ಸ್ ಆಪ್ ನ್ನು ತೆರೆಯಿರಿ ಮತ್ತು ಕಾಂಟ್ಯಾಕ್ಟ್ ಲಿಸ್ಟ್ ನ್ನು ರಿಫ್ರೆಶ್ ಮಾಡಿ.

4. ಕಾಂಟ್ಯಾಕ್ಟ್ ನ್ನು ಸರ್ಚ್ ಮಾಡಿ ಮತ್ತು ಅದನ್ನು ಟ್ಯಾಪ್ ಮಾಡಿ ಚಾಟ್ ವಿಂಡೋವನ್ನು ತೆರೆಯಿರಿ.

5. ಲೈವ್ ಟ್ರೈನ್ ಸ್ಟೋಟಸ್ ನ್ನು ಚೆಕ್ ಮಾಡಲು ನಿಮ್ಮ ಟ್ರೈನ್ ನಂಬರ್ ನ್ನು ಸೆಂಡ್ ಮಾಡಿ ಮತ್ತು ಪಿಎಆರ್ ಸ್ಟೇಟಸ್ ನ್ನು ಚೆಕ್ ಮಾಡಲು ಪಿಎನ್ಆರ್ ನಂಬರ್ ನ್ನು ಸೆಂಡ್ ಮಾಡಿ.

6.ಇದಾದ ನಂತರ, ಮೇಕ್ ಮೈ ಟ್ರಿಪ್ ನಿಮಗೆ ರಿಯಲ್ ಟೈಮ್ ಟ್ರೈನ್ ಅಥವಾ ನಿಮ್ಮ ಪಿಎನ್ಆರ್ ನಂಬರಿನ ಬುಕ್ಕಿಂಗ್ ಸ್ಟೇಟಸ್ ನ್ನು ಕಳುಹಿಸುತ್ತದೆ.

ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್ ನ್ನು ರಿಫ್ರೆಶ್ ಮಾಡಿ: 

ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್ ನ್ನು ರಿಫ್ರೆಶ್ ಮಾಡಿ: 

1. ವಾಟ್ಸ್ ಆಪ್ ನ್ನು ತೆರೆಯಿರಿ ಮತ್ತು ಸ್ಕ್ರೀನಿನ ಕೆಳಭಾಗದ ಬಲ ಕಾರ್ನರ್ ನಲ್ಲಿರುವ "ನ್ಯೂ ಮೆಸೇಜ್ " ಐಕಾನ್ ಐಕಾನ್ ನ್ನು ಟ್ಯಾಪ್ ಮಾಡಿ.

2.ಈಗ,ಮೂರು ಲಂಬವಾಗಿರುವ ಚುಕ್ಕಿಗಳನ್ನು ಟ್ಯಾಪ್ ಮಾಡಿ ಮತ್ತು ರಿಫ್ರೆಶ್ ನ್ನು ಕ್ಲಿಕ್ಕಿಸಿ.

ನೀವು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕಾಗಿರುವ ಸಂಗತಿಗಳು :

ನೀವು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕಾಗಿರುವ ಸಂಗತಿಗಳು :

1. ಮೇಕ್ ಮೈ ಟ್ರೀಪ್ ವಾಟ್ಸ್ ಆಪ್ ನಲ್ಲಿ ನೀವು ಕಳಿಸಿದ ಮೆಸೇಜಿಗೆ ನಿಮಗೆ ನೀಲಿ ಟಿಕ್ ಮಾರ್ಕ್ ಬರುವ ವರೆಗೆ ನಿಮಗೆ ಪ್ರತ್ಯುತ್ತರವನ್ನು ಕಳುಹಿಸುವುದಿಲ್ಲ.

2. ಸರ್ವರ್ ಲೋಡ್ ಅಥವಾ ಎಷ್ಟು ವಿಚಾರಣೆಗಳು ಬಾಕಿ ಇದೆ ಎಂಬುದರ ಆಧಾರದ ಮೇಲೆ ರೆಸ್ಪಾನ್ಸ್ ಟೈಮ್ ಕೂಡ ಭಿನ್ನವಾಗಿರುತ್ತದೆ.

Best Mobiles in India

English summary
How to check PNR status using WhatsApp. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X