ನಿಮ್ಮ ಫೋನಿನಿಂದಲೂ ಕ್ಯಾನ್ಸರ್ ಬರಲಿದೆ: ಇದನ್ನು ತಿಳಿಯುವುದು ಹೇಗೆ..?
ನಿಮ್ಮ ಫೋನಿನಲ್ಲಿ SAR ವ್ಯಾಲ್ಯೂವನ್ನು ನೀವೆ ತಿಳಿಯಬಹುದಾಗಿದೆ. ಇದರಿಂದಾಗಿ ನಿಮ್ಮ ಸ್ಮಾರ್ಟ್ ಫೋನ್ ಆರೋಗ್ಯದ ಮೇಲೆ ಎಂತಹ ಪರಿಣಾಮವನ್ನು ಬಿರಲಿದೆ ಎಂಬುದನ್ನು ಅರಿಯಬಹುದಾಗಿದೆ. ಅದು ಹೇಗೆ ಎಂದರೆ.
ಇಂದಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಬಳಕೆಯೂ ಹೆಚ್ಚಾಗಿದ್ದು, ಇದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದು ಹಲವು ಸಂಶೋಧನೆಗಳು ತಿಳಿಸಿವೆ. ಹಿನ್ನಲೆಯಲ್ಲಿ ಸ್ಮಾರ್ಟ್ ಫೋನ್ ಹೆಚ್ಚು ಬಳಕೆ ಮಾಡುವುದು ಉತ್ತಮವಲ್ಲ ಎನ್ನಲಾಗಿದೆ. ಸ್ಮಾರ್ಟ್ ಫೋನ್ ಗಳು ಹೊರಡಿಸುವ ರೆಡಿಯೇಷನ್ ನಿಂದ ಮಾತ್ರವೇ ಕ್ಯಾನ್ಸರ್ ಉಂಟಾಗಲಿದ್ದು, ಎಲ್ಲಾ ಸ್ಮಾರ್ಟ್ ಫೋನ್ ಗಳು ಹೆಚ್ಚು ರೆಡಿಯೇಷನ್ ಅನ್ನು ಹೊರ ಸುಸೂವುದಿಲ್ಲ.

ಮೊಬೈಲ್ ಗಳು ಹೊರ ಸೂಸುವ ರೆಡಿಯೇಷನ್ ನಿಂದ ನಮ್ಮ DNA ವ್ಯವಸ್ಥೆಯ ಮೇಲೆ ಭಾರೀ ಪರಿಣಾಮವೂ ಬಿರಲಿದ್ದು, ಈ ಹಿನ್ನಲೆಯಲ್ಲಿ ನಿಮ್ಮ ಸ್ಮಾರ್ಟ್ ಫೋನ್ ಎಷ್ಟು ಪ್ರಮಾಣದ ರೆಡಿಯೇಷನ್ ಅನ್ನು ಹೊರ ಸೂಸಿಸಲಿದೆ ಎನ್ನುವುದನ್ನು ತಿಳಿದುಕೊಳ್ಳುವುದು ಮುಖ್ಯ. ಈ ಹಿನ್ನಲೆಯಲ್ಲಿ ಇದನ್ನು ಹೇಗೆ ತಿಳಿದುಕೊಳ್ಳುವುದು ಎನ್ನುವುದನ್ನು ತಿಳಿಸುವ ಪ್ರಯತ್ನ ಇದಾಗಿದೆ.

SAR ರೆಡಿಯೇಷನ್:
ಮೊಬೈಲ್ ಗಳು ಹೊರಸೂಸುವ ರೆಡಿಯೇಷನ್ ಗಳನ್ನು SAR ರೆಡಿಯೇಷನ್ ಎಂದು ಕರೆಯಲಾಗುವುದು. ಅಲ್ಲದೇ ಇದು ರೇಡಿಯೇಷನ್ ಎಷ್ಟು ಪ್ರಮಾಣದಲ್ಲಿದೆ ಎಂಬುದನ್ನು ಅಳತೆ ಮಾಡಲು ಸಹ ಸಹಾಯ ಮಾಡಲಿದೆ. ಇದರಲ್ಲಿ 1.6W/Kg SAR ನಷ್ಟದರೆ ಅದು ಆರೋಗ್ಯಕ್ಕೆ ಉತ್ತಮವಾಗಿರಲಿದೆ. ಇದು ಹೆಚ್ಚಾದರೆ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬಿರಲಿದೆ.

ನಿಮ್ಮ ಫೋನಿನ SAR ವ್ಯಾಲ್ಯೂವನ್ನು ಚೆಕ್ ಮಾಡುವುದು ಹೇಗೆ?
ನಿಮ್ಮ ಫೋನಿನಲ್ಲಿ SAR ವ್ಯಾಲ್ಯೂವನ್ನು ನೀವೆ ತಿಳಿಯಬಹುದಾಗಿದೆ. ಇದರಿಂದಾಗಿ ನಿಮ್ಮ ಸ್ಮಾರ್ಟ್ ಫೋನ್ ಆರೋಗ್ಯದ ಮೇಲೆ ಎಂತಹ ಪರಿಣಾಮವನ್ನು ಬಿರಲಿದೆ ಎಂಬುದನ್ನು ಅರಿಯಬಹುದಾಗಿದೆ. ಅದು ಹೇಗೆ ಎಂದರೆ.

ನಿಮ್ಮ ಫೋನಿನಲ್ಲಿ ಡೈಲರ್ ಅನ್ನು ಓಪನ್ ಮಾಡಿಕೊಳ್ಳಿ
ನಂತರ *#07# ಡಯಲ್ ಮಾಡಿರಿ ಇದು ನಿಮ್ಮ ಫೋನಿನ SAR ವ್ಯಾಲ್ಯೂವನ್ನು ತಿಳಿಸಲಿದ್ದು, ನಿಮ್ಮ ಸ್ಮಾರ್ಟ್ಫೋನ್ ಕಂಪನಿಯೂ ಅದನ್ನು ತಿಳಿಸಲಿದೆ.


Click it and Unblock the Notifications








