Home
ಟೆಕ್ ನೌಕರಿ

ಫೇಸ್‌ಬುಕ್‌ ಕದ್ದಿರುವ ನಿಮ್ಮ ಜಾತಕವನ್ನು ಡೌನ್‌ಲೋಡ್ ಮಾಡುವುದು ಹೇಗೆ..?

By Srinidhi

ಫೇಸ್‌ಬುಕ್ ತನ್ನ ಆಂಡ್ರಾಯ್ಡ್ ಬಳಕೆದಾರರ ಕಾಲ್ ಹಿಸ್ಟರಿ ಮತ್ತು SMS ಮಾಹಿತಿಗಳನ್ನು ಕದಿಯುತ್ತಿದ್ದ ಎನ್ನುವ ವಿಚಾರವೂ ಫೇಸ್‌ಬುಕ್‌ ಬಳಕೆದಾರರಿಗೆ ಅಭದ್ರತೆಯನ್ನು ಉಂಟು ಮಾಡಿದ್ದು, ಈ ಹಿನ್ನಲೆಯಲ್ಲಿ ನಿಮ್ಮ ಯಾವ ಮಾಹಿತಿಗಳು ಫೇಸ್‌ಬುಕ್‌ ಬಳಿ ಇದೆ ಎಂಬುದನ್ನು ನೀವೇ ಸ್ವತಃ ತಿಳಿಯಬಹುದಾಗಿದೆ. ಅದು ಹೇಗೆ.?

ಫೇಸ್‌ಬುಕ್‌ ಕದ್ದಿರುವ ನಿಮ್ಮ ಜಾತಕವನ್ನು ಡೌನ್‌ಲೋಡ್ ಮಾಡುವುದು ಹೇಗೆ..?

ಫೇಸ್‌ಬುಕ್ ತನ್ನ ಬಳಕೆದಾರರ ಕುರಿತು ಸಂಗ್ರಹಿಸಿರುವ ಪ್ರತಿ ಮಾಹಿತಿಯನ್ನು ಸ್ಟೋರ್ ಮಾಡಿಟ್ಟಕೊಂಡಿದ್ದು, ಈ ಹಿನ್ನಲೆಯಲ್ಲಿ ಬಳಕೆದಾರರು ಬಯಸಿದ ಸಂದರ್ಭದಲ್ಲಿ ಅದನ್ನು ನೀಡಲಿದೆ. ಇದಕ್ಕಾಗಿ ನೀವು ನಿಮ್ಮ ಫೇಸ್‌ಬುಕ್ ಆಕೌಂಟ್ .zip ಅನ್ನು ಡೌನ್‌ಲೋಡ್ ಮಾಡಬೇಕಾಗಿದೆ. ಈ ಹಿನ್ನಲೆಯಲ್ಲಿ ಅದನ್ನು ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡುವ ಪ್ರಯತ್ನವು ಇದಾಗಿದೆ.

ಡೆಸ್ಕ್‌ಟಾಪ್‌ನಲ್ಲಿ ಮಾತ್ರವೇ ಸಾಧ್ಯ:

ಡೆಸ್ಕ್‌ಟಾಪ್‌ನಲ್ಲಿ ಮಾತ್ರವೇ ಸಾಧ್ಯ:

ಡಿಸ್ಕ್‌ಟಾಪಿನಲ್ಲಿ ಮಾತ್ರವೇ ಫೇಸ್‌ಬುಕ್ ಮಾಹಿತಿಯನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ. ಇದಕ್ಕಾಗಿ ನಿಮ್ಮ ಮಾಹಿತಿಯನ್ನು ಫೇಸ್‌ಬುಕ್‌ನಿಂದ ಪಡೆಯುವ ಸಲುವಾಗಿ ನೀವು ಮೊದಲಿಗೆ ನಿಮ್ಮ ಕಂಪ್ಯೂಟರ್‌ನ ಬ್ರೌಸರ್‌ನಲ್ಲಿ https://register.facebook.com/download/ ಅನ್ನು ತೆರೆಯಿರಿ.

ಹಂತ 01:

ಹಂತ 01:

ಹೀಗೇ ತೆರೆದ ನಂತರ ಲಾಗ್ ಇನ್ ಆದ ಮೇಲೆ 'ಜನರಲ್ ಆಕೌಂಟ್ ಸೆಟ್ಟಿಂಗ್' ಕಾಣಿಸಿಕೊಳ್ಳಲಿದ್ದು, ಅದರ ಕೆಳಗೆ ಕಾಣಿಸುವ ಡೌನ್‌ಲೋಡ್ ಅ ಕಾಪಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿರಿ. ನಂತರದಲ್ಲಿ ಮತ್ತೊಂದು ಫೇಸ್‌ಬುಕ್‌ ಪೇಜ್ ತೆರೆದುಕೊಳ್ಳಲಿದೆ.

ಹಂತ 02:

ಹಂತ 02:

ನಂತರದಲ್ಲಿ 'ಡೌನ್‌ಲೋಡ್ ಯುವರ್ ಇನ್‌ಮೇಷನ್' ಎನ್ನುವ ಪೇಜ್ ಒಪನ್ ಆಗಲಿದ್ದು, ಅದರಲ್ಲಿ 'ಡೌನ್‌ಲೋಡ್ ಆರ್ಚೀವ್' ಆಯ್ಕೆಯ ಮೇಲೆ ಕ್ಲಿಕ್ ಮಾಡಿರಿ. ಇಲ್ಲಿ ಕ್ಲಿಕ್ ಮಾಡಿದ ನಂತರದಲ್ಲಿ ನಿಮ್ಮ ಪಾಸ್‌ವರ್ಡ್ ನಮೂದಿಸುವಂತೆ ಕೋರಲಾಗುತ್ತದೆ. ನಂತರ ಅಲ್ಲಿ ಪಾನ್‌ವರ್ಡ್‌ ಎಂಟ್ರಿ ಮಾಡಿ.

ಹಂತ 03:

ಹಂತ 03:

ಪಾಸ್‌ವರ್ಡ್‌ ಹಾಕಿದ ನಂತರದಲ್ಲಿ ನಿಮ್ಮ ಡೇಟಾ ಡೌನ್‌ಲೋಡಿಗೆ ರೆಡಿಯಾದ ನಂತರದಲ್ಲಿ ನಿಮಗೆ ನೋಷಿಕೇಷನ್ ನೀಡಲಾಗುವುದು ಎಂಬ ಮಾಹಿತಿಯೂ ಕಾಣಿಸಿಕೊಳ್ಳಲಿದೆ. ಇದಾದ ನಂತರದಲ್ಲಿ ಫೇಸ್‌ಬುಕ್ ನಿಮ್ಮ ಮೇಲ್‌ ಐಡಿಗೆ ಮಾಹಿತಿಯನ್ನು ನೀಡಲಿದ್ದು, ನಂತರ .zip ಫೈಲ್‌ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ.

How to view all photos, pages, comments and posts you liked on Facebook (KANNADA)
ಹಂತ 04:

ಹಂತ 04:

ಹೀಗೆ ಡೌನ್‌ಲೋಡ್ ಮಾಡಿದ ಮಾಹಿತಿಯೂ .zip ಫೈಲಿನಲ್ಲಿ ಇರಲಿದೆ. ಅದನ್ನು ಎಕ್ಟ್ರಾಕ್ ಮಾಡಿಕೊಂಡ ನಂತರದಲ್ಲಿ ಹಲವು HTML ಫೈಲ್‌ಗಳು ಕಾಣಿಸಿಕೊಳ್ಳಲಿದ್ದು, ಅಲ್ಲಿ ಒಂದೊಂದೇ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಅದು ಬ್ರೌಸರ್‌ನಲ್ಲಿ ಕಾಣಿಸಿಕೊಳ್ಳಲಿದೆ. ಹೀಗೆ ನಿಮ್ಮ ಯಾವ ಮಾಹಿತಿಗಳು ಫೇಸ್‌ಬುಕ್‌ನಲ್ಲಿ ಅಡಕವಾಗಿದೆ ಎಂಬುದನ್ನು ನೀವು ತಿಳಿಯಬಹುದಾಗಿದೆ. ಇಲ್ಲಿಯೇ ಕಾಲ್, SMS, ಪೋಟೋ. ವೀಡಿಯೊ ಸೇರಿದಂತೆ ಹಲವು ಆಯ್ಕೆಗಳು ಇರಲಿದೆ. ಅವುಗಳ ಮೇಲೆ ಕ್ಲಿಕ್ ಮಾಡಿದರೆ ಒಂದೊಂದೇ ಮಾಹಿತಿ ದೊರೆಯಲಿದೆ.

Best Mobiles in India

English summary
How to check what call, SMS data of yours has Facebook gathered. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+