Home
ಟೆಕ್ ನೌಕರಿ

ಐಫೋನ್ ವಾರೆಂಟಿ, ರಿಪೇರಿ ಕವರೇಜ್ ಪರಿಶೀಲನೆ ಹೇಗೆ..?

By Gizbot Bureau

ಆಪಲ್ ಡಿವೈಸ್ ತೆಗೆದುಕೊಂಡು ಇನ್ನು ಕೆಲವೇ ತಿಂಗಳು ಕಳೆದಿದೆ. ವ್ಯಾರೆಂಟಿ ಮುಗಿದಿಲ್ಲ. ಆದರೆ ವ್ಯಾರೆಂಟಿ ಕಾರ್ಡ್ ಕಳೆದು ಹೋಗಿದೆ. ಏನು ಮಾಡೋದು, ಹೇಗೆ ಮತ್ತೆ ರಿಪೇರಿ ಮಾಡಿಸಿಕೊಳ್ಳೋದು ಎಂದು ಚಿಂತಿಸುತ್ತಿದ್ದೀರಾ? ಕಾರ್ಡ್ ಕಳೆದುಹೋಗಿದ್ದರೇನಂತೆ. ಆಪಲ್ ಸಂಸ್ಥೆ ಗ್ರಾಹಕರ ಸೇವೆಯಲ್ಲಿ ಎತ್ತಿದ ಕೈ, ಹೌದು. ನೀವು ನಿಮ್ಮ ಆಪಲ್ ಡಿವೈಸ್ ನ ವ್ಯಾರೆಂಟಿಯನ್ನು ಆನ್ ಲೈನ್ ನಲ್ಲೇ ತಿಳಿದುಕೊಳ್ಳಬಹುದು. ಹೇಗೆ ಅಂತಿರಾ ಈ ಸ್ಟೋರಿ ನೋಡಿ.

ಐಫೋನ್ ವಾರೆಂಟಿ, ರಿಪೇರಿ ಕವರೇಜ್ ಪರಿಶೀಲನೆ ಹೇಗೆ..?

ಆಪಲ್ ಸಂಸ್ಥೆ ತನ್ನ ವಸ್ತುವಿನ ಸೇವೆಯ ವಿಚಾರಕ್ಕೆ ಬಂದಾಗ ಹಲವು ರೀತಿಯಲ್ಲಿ ಗ್ರಾಹಕರ ಜೊತೆ ನೇರ ಸಂಪರ್ಕದಲ್ಲಿರಲು ಮತ್ತು ಅವರಿಗೆ ಅನೂಕರವಾಗಿರುವಂತೆ ನೋಡಿಕೊಳ್ಳುವುದಕ್ಕೆ ಪ್ರಯತ್ನಿಸುತ್ತದೆ. ಕೆಲವು ನಿಜಕ್ಕೂ ಗ್ರಾಹಕ ಸ್ನೇಹಿ ಆಗಿರುತ್ತದೆ ಆದರೆ ಕೆಲವು ಉತ್ಪ್ರೇಕ್ಷೆ ಎಂದೆನಿಸಲೂಬಹುದು. ಇತರೆ ಕಂಪೆನಿಗಳಿಗೆ ಹೋಲಿಸಿದರೆ ಆಪಲ್ ತನ್ನ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವಲ್ಲಿ ಕೆಲಸಗಳನ್ನು ಮಾಡುತ್ತದೆ. ಅದರಲ್ಲೂ ಪ್ರಮುಖವಾಗಿ ವ್ಯಾರೆಂಟಿ ವಿಚಾರಕ್ಕೆ ಬಂದರೆ ಆಪಲ್ ನ ಸೇವೆ ಬಹಳ ವಿಶೇಷವಾಗಿದೆ.

ವ್ಯಾರೆಂಟಿಯಲ್ಲಿ ಸ್ಕ್ರೀನ್ ಡ್ಯಾಮೇಜ್ ಮತ್ತು ವಾಟರ್ ಡ್ಯಾಮೇಜ್ ನ ಯಾವುದೇ ಪರಿಹಾರವಿರುವುದಿಲ್ಲ ಎಂಬುದು ನಿಮಗೆ ನೆನಪಿರಲಿ.ಆದರೆ ಇತರೆ ಡ್ಯಾಮೇಜ್ ಗಳನ್ನು ವ್ಯಾರಂಟಿ ಇದ್ದಲ್ಲಿ ಅದನ್ನು ಉಚಿತವಾಗಿ ಸರಿಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಒಂದು ವೇಳೆ ನಿಮ್ಮ ವ್ಯಾರೆಂಟಿ ಕಾರ್ಡ್ ಕಳೆದುಹೋಗಿದ್ದಲ್ಲಿ ಆಪಲ್ ಡಿವೈಸ್ ನ ವ್ಯಾರೆಂಟಿಯನ್ನು ಸುಲಭದಲ್ಲಿ ತಿಳಿದುಕೊಳ್ಳುವುದಕ್ಕೆ ಗ್ರಾಹಕರಿಗೆ ಅವಕಾಶವಿರುತ್ತದೆ.

ಆಪಲ್ ಪ್ರೊಡಕ್ಟ್ ಗಳಲ್ಲಿ ಹಾರ್ಡ್ ವೇರ್ ಫೈಲ್ ಆಗುವುದು ಸಾಮಾನ್ಯ ಸ್ಥಿತಿ ಅಲ್ಲದೇ ಇದ್ದರೂ ಕೂಡ ಇಲ್ಲಿ ವ್ಯಾರೆಂಟಿ ಚೆಕ್ ಮಾಡುವುದಕ್ಕೆ ಅವಕಾಶವಿರುತ್ತದೆ. ಆಪಲ್ ನ ಒಂದು ವಿಶೇಷತೆ ಏನೆಂದರೆ ನೀವು ಅದಕ್ಕಾಗಿ ಯಾರಿಗೂ ಕಾಲ್ ಮಾಡಬೇಕಾಗಿಲ್ಲ, ಅಥವಾ ಘಂಟೆಗಟ್ಟಲೆ ಕಾಯಬೇಕಿಲ್ಲ. ಬದಲಾಗಿ ಕ್ಷಣಾರ್ಧದಲ್ಲಿ ನಿಮ್ಮ ಡಿವೈಸ್ ನ ವ್ಯಾರೆಂಟಿಯನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಹಾಗಾದ್ರೆ ಆಪಲ್ ಡಿವೈಸ್ ನ ವ್ಯಾರೆಂಟಿಯನ್ನು ತಿಳಿದುಕೊಳ್ಳುವುದಕ್ಕೆ ಏನು ಮಾಡಬೇಕು ಎಂಬ ಹಂತಹಂತವಾದ ವಿವರಣೆ ಇಲ್ಲಿದೆ ನೋಡಿ.

ಹಂತ 1: ಕಂಪೆನಿ ವೆಬ್ ಸೈಟ್ ನಲ್ಲಿ ಆಪಲ್ ನ “ Check Coverage” ಪೇಜ್ ಗೆ ತೆರಳಿ.

ಐಫೋನ್ ವಾರೆಂಟಿ, ರಿಪೇರಿ ಕವರೇಜ್ ಪರಿಶೀಲನೆ ಹೇಗೆ..?

ಹಂತ 2: ಒಮ್ಮೆ ನೀವು ಈ ಪೇಜ್ ಗೆ ತೆರಳಿದ ನಂತರ ಡಿವೈಸ್ ಸೀರಿಯಲ್ ನಂಬರ್ ನ್ನು ಎಂಟರ್ ಮಾಡಬೇಕು.ಒಂದು ವೇಳೆ ನಿಮಗೆ ಸೀರಿಯಲ್ ನಂಬರ್ ಗೊತ್ತಿಲ್ಲದೇ ಇದ್ದಲ್ಲಿ, ಆಪಲ್ ನಿಮ್ಮ ಡಿವೈಸ್ ನಲ್ಲಿ ಹೇಗೆ ಸೀರಿಯಲ್ ನಂಬರ್ ಕಂಡುಹಿಡಿಯುವುದು ಎಂಬುದನ್ನು ತಿಳಿಸುತ್ತದೆ.

ಹಂತ 3: ಸೆಕ್ಯುರಿಟಿ ಅಥವಾ captcha ಕೋಡ್ ನ್ನು ಎಂಟರ್ ಮಾಡಿ.

ಹಂತ 4: ಕೋಡ್ ಮತ್ತು ಸೀರಿಯಲ್ ನಂಬರ್ ಎಂಟರ್ ಮಾಡಿದ ನಂತರ, ನೀವು ಆಪಲ್ ಹೇಳುವ ವ್ಯಾರೆಂಟಿ ಡಿಟೈಲ್ಸ್ ಪೇಜ್ ಗೆ ತೆರಳುತ್ತೀರಿ.

ಹಂತ 5: ಇಲ್ಲಿ ನೀವು ಮೂರು ವಿಚಾರಗಳನ್ನು ಗಮನಿಸಿತ್ತೀರಿ. a) ವ್ಯಾಲಿಟಿ ಖರೀದಿ ದಿನಾಂಕ, ಇದು ನಿಮಗೆ ದಾಖಲೆ ದಿನಾಂಕವನ್ನು ತಿಳಿಸುತ್ತದೆ. b) ಟೆಲಿಫೋನ್ ನ ಟೆಕ್ನಿಕಲ್ ಸಪೋರ್ಟ್: ಆಪಲ್ ಆಪಲ್ ಎಲ್ಲಾ ಗ್ರಾಹಕರಿಗೆ 90 ದಿನಗಳ ದೂರವಾಣಿ ಬೆಂಬಲವನ್ನು ನೀಡುತ್ತದೆ. 90 ದಿನಗಳ ಅವಧಿಯಲ್ಲಿ ನೀವು ಬರದಿದ್ದರೆ ಅದು "ಅವಧಿ ಮೀರಿದೆ" ಎಂದು ತಿಳಿಸುತ್ತದೆ. c) ರಿಪೇರಿ ಮತ್ತು ಸೇವಾ ವ್ಯಾಪ್ತಿ : ಒಂದು ವೇಳೆ ಆಪಲ್ ಡಿವೈಸ್ ನ ವ್ಯಾರೆಂಟಿ ಮುಗಿದಿದ್ದರೆ , ನೀವು “Expired” ಎಂಬುದನ್ನು ಗಮನಿಸಬಹುದು.

ಹೀಗೆ ಸರಳ ವಿಧಾನದಿಂದ, ಐಫೋನ್, ಐಪ್ಯಾಡ್ ಅಥವಾ ಆಪಲ್ ನ ಯಾವುದೇ ಡಿವೈಸ್ ನ ವ್ಯಾರೆಂಟಿಯನ್ನು ಪರೀಕ್ಷಿಸುವುದಕ್ಕೆ ಸಾಧ್ಯವಾಗುತ್ತದೆ.

Best Mobiles in India

English summary
How to check your iPhone warranty and repair coverage. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+