ಎಚ್ಚರ! ಕ್ಯಾಮೆರಾದಲ್ಲಿ ಧೂಳು ಇದ್ದರೆ ನಿಮ್ಮ ಕ್ಯಾಮೆರಾಗೆ ಹಾನಿ ಖಂಡಿತ

ನಿಮ್ಮ ಕ್ಯಾಮೆರಾದ ಒಳಭಾಗವನ್ನು ಸಂರಕ್ಷಿಸುವುದು ತುಂಬಾ ಮುಖ್ಯವಾಗಿದ್ದು, ಸೆನ್ಸಾರ್ ಧೂಳು ನಿಮ್ಮ ಚಿತ್ರಗಳನ್ನು ಮಬ್ಬಾಗಿಸಬಹುದು.

By Shwetha Ps
|

ಕ್ಯಾಮೆರಾ ಸ್ವಚ್ಛಮಾಡುವುದು ಎಂದರೆ ಕೊಂಚ ಪ್ರಯಾಸದ ಕೆಲಸವೇ ಆಗಿದೆ. ಆದರೆ ನೀವು ನಿಮ್ಮ ಕ್ಯಾಮೆರಾವನ್ನು ಸ್ವಚ್ಛವಾಗಿರಿಸಿಕೊಂಡಿಲ್ಲ ಎಂದಾದಲ್ಲಿ ಫೋಟೋಗೆ ಹಾನಿಯುಂಟಾಗಬಹುದು ಮತ್ತು ಕ್ಯಾಮೆರಾ ಬೇಗನೇ ಹಾಳಾಗಬಹುದು. ನಿಮ್ಮ ಕ್ಯಾಮೆರಾದ ಒಳಭಾಗವನ್ನು ಸಂರಕ್ಷಿಸುವುದು ತುಂಬಾ ಮುಖ್ಯವಾಗಿದ್ದು, ಸೆನ್ಸಾರ್ ಧೂಳು ನಿಮ್ಮ ಚಿತ್ರಗಳನ್ನು ಮಬ್ಬಾಗಿಸಬಹುದು. ಹಾಗಿದ್ದರೆ ನಿಮ್ಮ ಡಿಜಿಟಲ್ ಕ್ಯಾಮೆರಾವನ್ನು ಸ್ವಚ್ಛಮಾಡುವುದು ಹೇಗೆ ಎಂಬುದನ್ನು ನಾವಿಲ್ಲಿ ತೋರಿಸಿಕೊಡುತ್ತಿದ್ದೇವೆ.

ಆಟೊ ಕ್ಲೀನ್ ಫಂಕ್ಶನ್ ಬಳಸಿ

ಆಟೊ ಕ್ಲೀನ್ ಫಂಕ್ಶನ್ ಬಳಸಿ

ಸ್ವಯಂಚಾಲಿತವಾಗಿ ಸ್ವಚ್ಛಮಾಡುವ ವೈಶಿಷ್ಟ್ಯ ಡಿಎಸ್‌ಎಲ್‌ಆರ್ ಕ್ಯಾಮೆರಾಗಳಲ್ಲಿ ಇರುತ್ತದೆ. ಇದು ಸೆನ್ಸಾರ್‌ಗೆ ವೈಬ್ರೇಶನ್ ಅನ್ನು ನೀಡಿ ಧೂಳು ಕೊಡವಲು ಸಹಾಯ ಮಾಡುತ್ತದೆ. ಈ ಫೀಚರ್ ಇಲ್ಲ ಎಂದಾದಲ್ಲಿ ನೀವೇ ಸ್ವಚ್ಛಮಾಡಲು ಹಲವಾರು ವಿಧಾನಗಳಿವೆ.

ಹಸ್ತಚಾಲಿತವಾಗಿ ಸ್ವಚ್ಛಮಾಡುವ ಮೊದಲು ಈ ಅಂಶಗಳ ಮೇಲೆ ಗಮನ ಹರಿಸಿ

ಹಸ್ತಚಾಲಿತವಾಗಿ ಸ್ವಚ್ಛಮಾಡುವ ಮೊದಲು ಈ ಅಂಶಗಳ ಮೇಲೆ ಗಮನ ಹರಿಸಿ

  • ಕ್ಲೀನಿಂಗ್ ಸ್ವಾಬ್ಸ್
  • ಕ್ಯಾಮೆರಾ ಸೆನ್ಸಾರ್ ಕ್ಲೀನಿಂಗ್ ಸಲ್ಯೂಶನ್
  • ಏರ್ ಬ್ಲೋವರ್
  • ಕೃತಕ ಬುದ್ದಿ ರೋಬಾಟ್ ಏನೆಲ್ಲಾ ಮಾಡಬಹುದು?..ಇದನ್ನು ಮಾಡಿದೆ!!ಕೃತಕ ಬುದ್ದಿ ರೋಬಾಟ್ ಏನೆಲ್ಲಾ ಮಾಡಬಹುದು?..ಇದನ್ನು ಮಾಡಿದೆ!!

    ಸೆನ್ಸಾರ್ ಸ್ವಚ್ಛಮಾಡುವುದು ಹೇಗೆ?

    ಸೆನ್ಸಾರ್ ಸ್ವಚ್ಛಮಾಡುವುದು ಹೇಗೆ?

    ಹಂತ 1: ನಿಮ್ಮ ಕ್ಯಾಮೆರಾವನ್ನು ಹಸ್ತಚಾಲಿತವಾಗಿ ಸ್ವಚ್ಛಮಾಡುವ ಕ್ರಮಗಳನ್ನು ಅನುಸರಿಸಿ

    ಹಂತ 2: ಈ ಮೋಡ್ ಅನ್ನು ಒಮ್ಮೆ ನೀವು ಆಯ್ಕೆಮಾಡಿಕೊಂಡ ನಂತರ, ಮಿರರ್ ಲಾಕ್ ಬ್ಯಾಕ್ ಶಬ್ಧ ಗೊತ್ತಾಗುತ್ತದೆ ಮತ್ತು ಸೆನ್ಸಾರ್ ಅರಿವಾಗುತ್ತದೆ.

    ಹಂತ 3: ತಲೆಕೆಳಗಾಗಿ ಕ್ಯಾಮೆರಾ ಹಿಡಿದುಕೊಳ್ಳಿ ಮತ್ತು ಗಾಳಿಯಾಡಿಸಲು ಏರ್ ಬ್ಲೋವರ್ ಬಳಸಿ. ಸೆನ್ಸಾರ್ ಮೇಲೆ ಗಮನವಿರಲಿ

    ಹಂತ 4: ಪೂರ್ತಿಯಾದ ನಂತರ ಕ್ಯಾಮೆರಾ ಆಫ್ ಮಾಡಿ ಮತ್ತು ಲೆನ್ಸ್ ರಿಪ್ಲೇಸ್ ಮಾಡಿ.

    ಒದ್ದೆ ಸೆನ್ಸಾರ್ ಸ್ವಚ್ಛಮಾಡುವುದು ಹೇಗೆ?

    ಒದ್ದೆ ಸೆನ್ಸಾರ್ ಸ್ವಚ್ಛಮಾಡುವುದು ಹೇಗೆ?

    ಹಂತ 1: ಹಸ್ತಚಾಲಿತ ಕ್ಲೀನಿಂಗ್ ಆಪ್ಶನ್ ಅನ್ನು ಆಯ್ಕೆಮಾಡಿ ಮತ್ತು ಮಿರರ್ ಲಾಕ್ ಮಾಡಿ.

    ಹಂತ 2: ಏರ್ ಬ್ಲೋವರ್‌ ಮೂಲಕ ಸ್ವಲ್ಪ ಸಮಯ ಗಾಳಿಯಾಡಿಸಿ ಮತ್ತು ಮೇಲಿನ ಧೂಳು ತೆಗೆಯಿರಿ.

    ಹಂತ 3: ಸ್ವಾಬ್ ಮೇಲೆ ದ್ರಾವಣದ ಎರಡು ಹನಿಗಳನ್ನು ಬಿಡಿ.

    ಹಂತ 4: ಸೆನ್ಸಾರ್ ಪಕ್ಕದಲ್ಲಿ ಜಾಗರೂಕತೆಯಿಂದ ಸ್ವಾಬ್ ಇರಿಸಿಕೊಳ್ಳಿ ಮತ್ತು ಸೆನ್ಸಾರ್‌ನಾದ್ಯಂತ ಸ್ವಾಬ್ ಅನ್ನು ಸರಿಸಿ ಇನ್ನೊಂದು ಭಾಗದಲ್ಲಿಯೂ ಹೀಗೆಯೇ ಮಾಡಿ

    ಹಂತ 5: ಈಗ ಲೆನ್ಸ್ ರಿಪ್ಲೇಸ್ ಮಾಡಿ ಮತ್ತು ಪರೀಕ್ಷಾ ಶಾಟ್‌ಗಳನ್ನು ತೆಗೆಯಿರಿ. ಇನ್ನೂ ಧೂಳು ಇದ್ದಲ್ಲಿ, ಹೊಸ ಸ್ವಾಬ್ ಬಳಸಿಕೊಂಡು ಈ ಕ್ರಿಯೆಯನ್ನು ಪುನರಾವರ್ತಿಸಿ.

    ಡಿಜಿಟಲ್ ಪಾಯಿಂಟ್ ಮತ್ತು ಶೂಟ್ ಕ್ಯಾಮೆರಾ ಆಗಿದ್ದಲ್ಲಿ ನೀವು ಪೇಪರ್ ಟವಲ್ ಇಲ್ಲವೇ ಮೃದು ಹತ್ತಿ ಬಟ್ಟೆಯನ್ನು ಬಳಸಿ.

Best Mobiles in India

Read more about:
English summary
Cleaning a camera can be more complicated and dreaded one for photographers. oday, we have compiled a list of on how to clean your digital camera easily.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X