ಶಿಯೋಮಿ ಮೊಬೈಲ್‌ನಲ್ಲಿ ಆಡ್ ಬ್ಲಾಕ್ ಮಾಡಿ..! ಹೇಗೆ..? ಸರಳ ಉಪಾಯ ಇಲ್ಲಿದೆ..!

ಶಿಯೋಮಿಯ ಕಸ್ಟಮ್ ಆಪರೇಟಿಂಗ್ ಸಿಸ್ಟಮ್ MIUI ಹಲವು ರೀತಿಯ ಕಸ್ಟಮೈಸ್ಡ್ ಆಗಿರುವ ಆಯ್ಕೆಗಳನ್ನು ಗ್ರಾಹಕರಿಗೆ ಒದಗಿಸುತ್ತದೆ. ಈ ಆಯ್ಕೆಗಳು ಆಂಡ್ರಾಯ್ಡ್ ಓಎಸ್ ನಲ್ಲಿ ಲಭ್ಯವಾಗುವುದಿಲ್ಲ.ಆದರೆ, MIUI ಎಲ್ಲರಿಗೂ ದಕ್ಕುವುದಿಲ್ಲವಲ್ಲ. ಅಷ್ಟೇ ಅಲ್ಲ ಹೆಚ್ಚಿನವರು ಇದನ್ನು ಇಷ್ಟಪಡಜೇ ಇರಲು ಕಾರಣ ಸ್ಟಾಕ್ ಆಡ್ ಗಳು ಇದರಲ್ಲಿ ಕಾಣಿಸುತ್ತಲೇ ಇರುತ್ತವೆ ಎಂಬುದಾಗಿದೆ ಮತ್ತು ಇವುಗಳನ್ನು ಅನ್ ಇನ್ಸ್ಟಾಲ್ ಮಾಡುವುದಕ್ಕೂ ಕೂಡ ಅವಕಾಶವಿರುವುದಿಲ್ಲ. ನೋಟಿಫಿಕೇಷನ್ ಶೇಡ್ ನಲ್ಲಿ ಮತ್ತು ಸ್ಮಾರ್ಟ್ ಫೋನ್ ನ ಇತರೆ ಭಾಗಗಳಲ್ಲಿ ಹಲವು ರೀತಿಯ ಜಾಹೀರಾತುಗಳು ಕಾಣಿಸುತ್ತಲೇ ಇರುತ್ತದೆ.

ಜಾಹೀರಾತುಗಳನ್ನು ಈ ಆಪ್ ಗಳು ತೋರಿಸುವುದನ್ನು ಹೇಗೆ ನಿಲ್ಲಿಸುವುದು?
• ಸಂಬಂಧಿತ ಆಪ್ ನ ಸೆಟ್ಟಿಂಗ್ಸ್ ಗೆ ತೆರಳಿ ಮತ್ತು receive recommendations ಆಯ್ಕೆಯನ್ನು ಆಫ್ ಮಾಡಿ.
• ಆದರೆ, ವಯಕ್ತಿಕವಾಗಿ ರೆಕಮಂಡೇಷನ್ ವೈಶಿಷ್ಟ್ಯತೆಗಳನ್ನು ಆಫ್ ಮಾಡಬೇಕಾಗುತ್ತದೆ. ಇದು ಸ್ವಲ್ಪ ಗೊಂದಲದಾಯಕವೂ ಹೌದು.
• ಇಲ್ಲಿ ಹೊಸದೊಂದು ಪ್ರೊಸೀಜರ್ ಇದೆ. ಅಲ್ಲಿ ಬಳಕೆದಾರರು ಸಿಸ್ಟಮ್ ವೈಡ್ ಆಪ್ ಗಳನ್ನು ಆಫ್ ಮಾಡಬಹುದು (ಶಿಯೋಮಿ ಆಪ್ ಗಳು) ಅದಕ್ಕೆ ಸರಳ ಟ್ರಿಕ್ ಬಳಕೆ ಮಾಡಬೇಕು.
• ಸೆಟ್ಟಿಂಗ್ಸ್ > ಎಡಿಷನಲ್ ಸೆಟ್ಟಿಂಗ್ಸ್ > ಅಥರೈಸೇಷನ್ ಮತ್ತು ರಿವೋಕೇಷನ್ >ಡಿಸೇಬಲ್ msa ನ್ನು ಆಫ್ ಮಾಡಿದರೆ ಶಿಯೋಮಿ ಸ್ಮಾರ್ಟ್ ಫೋನ್ ನ ಸಿಸ್ಟಮ್ ವೈಡ್ ಆಡ್ ಗಳನ್ನು ಆಫ್ ಮಾಡಬಹುದು.
• ನಾವು ಇದನ್ನು Poco F1 ನಲ್ಲಿ ಟೆಸ್ಟ್ ಮಾಡಿದ್ದೇವೆ ಮತ್ತು ಇದು ನಾವು ಎಣಿಸಿದಂತೆಯೇ ಕೆಲಸ ಮಾಡಿದೆ. ಎಲ್ಲಾ ಶಿಯೋಮಿ ಸ್ಮಾರ್ಟ್ ಫೋನ್ ಗಳಲ್ಲೂ ಕೂಡ ಇದು ಅಧ್ಬುತವಾಗಿ ಕೆಲಸ ಮಾಡುತ್ತದೆ. ಅದ್ರಲ್ಲೂ ನೂತನ ವರ್ಷನ್ MIUI 9 ಅಥವಾ MIUI 10 ನಲ್ಲಿ ಕೆಲಸ ಮಾಡುತ್ತದೆ.
• ಮತ್ತೊಂದು ಪ್ರಮುಖ ವಿಧಾನ ಶಿಯೋಮಿ ಜಾಹಿರಾತುಗಳಿಂದ ಮುಕ್ತಿ ಪಡೆಯುವುದಕ್ಕೆ ಇರುವುದು ಕಸ್ಟಮ್ ROMS ಗಳನ್ನು ಇನ್ಸ್ಟಾಲ್ ಮಾಡುವುದು.
• ನೀವು ನಿಮ್ಮ ಸ್ಮಾರ್ಟ್ ಫೋನ್ ಗಳನ್ನು ರೂಟ್ ಮಾಡಿದ್ದರೂ ಮತ್ತು ಇನ್ಸ್ಟಾಲ್ ಕಸ್ಟಮ್ ROMS ಮಾಡಿದ್ದರೂ ಕೂಡ ಪೋಕೋ ಎಫ್ 1 ಸೇರಿದಂತೆ ಎಲ್ಲಾ ಶಿಯೋಮಿ ಸ್ಮಾರ್ಟ್ ಫೋನ್ ಗಳಲ್ಲಿ ವಾರೆಂಟಿ ಅಧಿಕಗೊಳಿಸಲು ಸಾಧ್ಯವಿಲ್ಲ .

MIUI ನಲ್ಲಿ ಶಿಯೋಮಿ ಜಾಹಿರಾತುಗಳನ್ನು ಪ್ರಕಟಿಸುವುದು ಯಾಕೆ ?
ಶಿಯೋಮಿಯು ಕಡಿಮೆ ಲಾಭದ ಮಾರ್ಜಿನ್ ಇಟ್ಟುಕೊಂಡು ತನ್ನ ಫೋನ್ ಗಳನ್ನು ಮಾರಾಟ ಮಾಡುತ್ತದೆ. ಹಾಗಾಗಿ ಕಂಪೆನಿಯು ಲಾಭದಾಯಕ ಆದಾಯವನ್ನು ಗಳಿಸುವ ನಿಟ್ಟಿನಲ್ಲಿ ಕೆಲವು ಜಾಹಿರಾತುಗಳನ್ನು ತನ್ನ ಫೋನ್ ನಲ್ಲಿ ನೀಡುತ್ತದೆ.ಶಿಯೋಮಿಯು ಕೆಲವು ಸ್ಟಾಕ್ ಆಪ್ ಗಳಲ್ಲಿ ಉದಾಹರಣೆಗೆ ಬ್ರೌಸರ್, ಸೆಕ್ಯುರಿಟಿ ಮತ್ತು ಫೈಲ್ ಮ್ಯಾನೇಜರ್ ಗಳಲ್ಲಿ ಜಾಹೀರಾತುಗಳನ್ನು ಪ್ರಕಟಿಸುತ್ತದೆ. ಜಾಹಿರಾತುಗಳನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಗ್ರಾಹಕರಿಗೂ ಅವಕಾಶ ಕೊಟ್ಟಿದ್ದು ಇದು ಕಂಪೆನಿಯ ಒಂದು ಅಧ್ಬುತ ಹೆಜ್ಜೆ ಆಗಿದೆ.
ಫ್ಲ್ಯಾಗ್ ಶಿಪ್ ಫೋನ್ ಗಳಾದ ಶಿಯೋಮಿ ಎಂಐ 8 ಮತ್ತು ಶಿಯೋಮಿ ಎಂಐ ಮ್ಯಾಕ್ಸ್ ಗಳು ಕೂಡ ಜಾಹಿರಾತುಗಳೊಂದಿಗೆ ಬರುತ್ತದೆ.

ನಾವು ಕಳೆದ ಕೆಲವು ವರ್ಷಗಳಿಂದ MIUI ಯನ್ನು ಬಳಕೆ ಮಾಡುತ್ತಿದ್ದೇವೆ. (ರೆಡ್ಮಿ 2 ಪ್ರೈಮ್ ನಿಂದ ಹಿಡಿದು ಪೋಕೋ ಎಫ್1). ಶಿಯೋಮಿಯ MIUI ನ ಕಸ್ಟಮ್ ROM ನಿಂದ ಆಫರ್ ಮಾಡುವುದೇನೆಂದರೆ ಎಲ್ಲಾ ಸ್ಮಾರ್ಟ್ ಫೋನ್ ಗಳಲ್ಲೂ ಬಳಕೆದಾರರಿಗೆ ಸ್ಟೇಬಲ್ ಅನುಭವವನ್ನು ನೀಡುತ್ತದೆ. ಅದು ಎಂಟ್ರಿ ಲೆವೆಲ್ ಫೋನ್ ಆದ ರೆಡ್ಮಿ 6ಎ ಅಥವಾ ಹೈ ಎಂಡ್ ಫೋನ್ ಶಿಯೋಮಿ ಪೋಕೋ ಎಫ್1 ಗೂ ಅನ್ವಯಿಸುತ್ತದೆ.
ಹಾಗಾಗಿ, MIUI ಬಗ್ಗೆ ನೀವು ಏನು ಯೋಚಿಸುತ್ತೀರಿ? MIUI ನೊಂದಿಗಿರುವ ಶಿಯೋಮಿ ಸ್ಮಾರ್ಟ್ಫೋನ್ ಗಳನ್ನು ನೀವು ಹೊಂದಿದ್ದೀರಾ? ಇದರಲ್ಲಿ ನೀವು ಗಮನಿಸಬೇಕಾಗಿರುವ ಅಂಶವೇನೆಂದರೆ ಶಿಯೋಮಿ ಮಿ ಎ1 ಮತ್ತು ಶಿಯೋಮಿ ಎಂಐ ಎ2 MIUI ನೊಂದಿಗೆ ಬರುವುದಿಲ್ಲ ಎಂಬುದನ್ನು ಗಮನಿಸಬೇಕು. ಬದಲಾಗಿ,ಈ ಸ್ಮಾರ್ಟ್ ಫೋನ್ ಗಳು ಸ್ಟಾಕ್ ಆಂಡ್ರಾಯ್ಡ್ ಓಎಸ್ ನ್ನು ಆಫರ್ ಮಾಡುತ್ತದೆ. ಇದು MIUI ಗೆ ಹೋಲಿಸಿದರೆ ವೇಗವಾಗಿ ಆಂಡ್ರೋಯ್ಡ್ OS ನವೀಕರಣಗಳನ್ನು ಒದಗಿಸುತ್ತದೆ.


Click it and Unblock the Notifications








