Home
ಟೆಕ್ ನೌಕರಿ

ಸ್ಕ್ರೀನ್ ಆಫ್ ಇದ್ದಾಗ ಕೂಡ ಸ್ಮಾರ್ಟ್‌ಫೋನ್‌ನಲ್ಲಿ ಮ್ಯೂಸಿಕ್ ನಿಯಂತ್ರಿಸಬಹುದು..! ಹೇಗೆ ಗೊತ್ತಾ?!

By Gizbot Bureau

ಹಾಡುಗಳು ಅಂದ್ರೆ ಹಾಗೆ ಅಲ್ವಾ? ಕೆಲವು ಹಾಡುಗಳನ್ನು ಜೋರಾಗಿ ಕೇಳಬೇಕು ಅನ್ನಿಸುತ್ತೆ. ಕೆಲವು ಮನಸ್ಸಿಗೆ ಆಹ್ಲಾದ ನೀಡುವ ಸಂಗೀತವಾಗಿದ್ದು ಅದನ್ನು ನಿಧಾನವಾಗಿ ಇಟ್ಟುಕೊಂಡು ಆಲೈಸಿ ಅನುಭವಿಸಬೇಕು ಅನ್ನಿಸುತ್ತೆ. ಸಂಗೀತ ಪ್ರಿಯರ ಮನಸ್ಸು ಒಂದೊಂದು ಸಮಯಕ್ಕೆ ಒಂದೊಂದು ರೀತಿ ಇರುತ್ತೆ. ನಮ್ಮ ಕೈಯಲ್ಲಿರುವ ಮೊಬೈಲ್ ಅದಕ್ಕೆ ಸಹಕಾರ ಕೊಡಬೇಕು.

ಫಟಾಫಟ್ ಅಂತ ಹಾಡಿನ ವಾಲ್ಯೂಮ್ ಸಣ್ಣ ಮತ್ತು ದೊಡ್ಡ ಮಾಡಲು ಸಾಧ್ಯವಾಗಬೇಕು. ಆದರೆ ಸ್ಕ್ರೀನ್ ಲಾಕ್ ಆಗಿದೆ. ಪ್ರತಿ ಬಾರಿ ವಾಲ್ಯೂಮ್ ಕಂಟ್ರೋಲ್ ಮಾಡೋದಕ್ಕೂ ಸ್ಕ್ರೀನ್ ಲಾಗ್ ತೆಗೆದೇ ಮಾಡಬೇಕಾ? ಖಂಡಿತ ಇಲ್ಲ. ನಿಮ್ಮ ಆಂಡ್ರಾಯ್ಡ್ ಫೋನಿನ ಮ್ಯೂಸಿಕ್ ವಾಲ್ಯೂಮ್ ಕಂಟ್ರೋಲ್ ನ್ನು ಸ್ಕ್ರೀನ್ ಲಾಗ್ ಆಗಿದ್ದಾಗಲೂ ಕೂಡ ಮಾಡಬಹುದು. ಹೇಗೆ ಅಂತ ಕೇಳುತ್ತಿದ್ದೀರಾ?

ಸ್ಕ್ರೀನ್ ಆಫ್ ಇದ್ದಾಗ ಕೂಡ ಸ್ಮಾರ್ಟ್‌ಫೋನ್‌ನಲ್ಲಿ ಮ್ಯೂಸಿಕ್ ನಿಯಂತ್ರಿಸಬಹುದು..!

ಸಾಧ್ಯವಿದೆ, ನಿಮ್ಮ ಫೋನಿನ ಬದಿಯಲ್ಲಿರುವ ವಾಲ್ಯೂಮ್ ಕೀ ಗಳನ್ನು ಬಳಸಿ, ಸ್ಕ್ರೀನ್ ಲಾಕ್ ತೆಗೆಯದೆಯೂ ಕೂಡ ವಾಲ್ಯೂಮ್ ಕಂಟ್ರೋಲ್ ಮಾಡಲು ಸಾಧ್ಯವಾಗುತ್ತೆ. ಅದಕ್ಕಾಗಿ ಕೆಲವು ಸೆಟ್ಟಿಂಗ್ ಗಳನ್ನು ಮಾಡಬೇಕಾಗುತ್ತದೆ. ನಾವಿಲ್ಲಿ ಇದನ್ನು ಸಾಧಿಸಲು ಎರಡು ವಿಧಾನಗಳನ್ನು ಪಟ್ಟಿ ಮಾಡಿದ್ದೇವೆ. ಸಂಪೂರ್ಣ ಹಂತಗಳನ್ನೂ ಕೂಡ ನಿಮಗೆ ತಿಳಿಸಿದ್ದೇವೆ.

ಈಗಾಗಲೇ ನಮ್ಮ gizbot ನಿಂದ ನೀವು ಹಲವಾರು ಆಂಡ್ರಾಯ್ಡ್ ಟಿಪ್ಸ್ ಗಳನ್ನು ಪಡೆದಿದ್ದೀರಿ. ಈಗ ಮತ್ತೊಂದು ಸರಳ ವಿಧಾನವನ್ನು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಹೌದು, ನಿಮ್ಮ ಮೊಬೈಲ್ ಸ್ಕ್ರೀನ್ ಲಾಕ್ ಆಗಿದ್ದಾಗ ಕೂಡ ಆಂಡ್ರಾಯ್ಡ್ ಮ್ಯೂಸಿಕ್ ನ ಪ್ಲೇಬ್ಯಾಕ್ ವಾಲ್ಯೂಮ್ ಕಂಟ್ರೋಲ್ ಮಾಡಲು ಸಾಧ್ಯವಾಗುತ್ತದೆ. ಹೇಗೆ ಎಂಬುದನ್ನ ತಿಳಿಯಲು ಮುಂದೆ ಓದಿ..

ಸ್ಕ್ರೀನ್ ಆಫ್ ಇದ್ದಾಗ ವಾಲ್ಯೂಮ್ ಕೀ

ಈ ವಿಧಾನ ತುಂಬಾ ಸರಳ ಮತ್ತು ನಿಮಗೆ xposed ಇನ್ಸ್ಟಾಲರ್ ನ್ನು ಬೆಂಬಲಿಸುವಂತಹ ಒಂದು ಆಂಡ್ರಾಯ್ಡ್ ಡಿವೈಸ್ ನ ಅಗತ್ಯವಿದೆ ಮತ್ತು xposed ಇನ್ಸಾಟಲರ್ ನ್ನು ಪಡೆದ ನಂತರ, xposed ಮಾಡ್ಯೂಲ್ ಆಪ್ ನಿಂದ ನಿಮ್ಮ ಆಂಡ್ರಾಯ್ಡ್ ನ ಐಎಮ್ ಇಐ ನಂಬರ್ ನ್ನು ಬದಲಾಯಿಸಬೇಕು. ಇದನ್ನು ಸಾಧಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಸ್ಕ್ರೀನ್ ಆಫ್ ಇದ್ದಾಗ ಕೂಡ ಸ್ಮಾರ್ಟ್‌ಫೋನ್‌ನಲ್ಲಿ ಮ್ಯೂಸಿಕ್ ನಿಯಂತ್ರಿಸಬಹುದು..!

ವಾಲ್ಯೂಮ್ ಬಟನ್ ನ್ನು ಮ್ಯೂಸಿಕ್ ಕಂಟ್ರೋಲ್ ಗೆ ಬಳಸುವ ವಿಧಾನ:

ಹಂತ 1. ಬಹಳ ಮುಖ್ಯವಾಗಿ ರೂಟೆಡ್ ಆಂಡ್ರಾಂಯ್ಡ್ ನ ಅಗತ್ಯವಿದೆ. Xposed ಅನುಸ್ಥಾಪಕವನ್ನು ರೂಟೆಡ್ ಆಂಡ್ರಾಯ್ಡ್ ನಲ್ಲಿ ಮಾತ್ರ ಅಳವಡಿಸಬಹುದು..ಹಾಗಾಗಿ ನಿಮ್ಮ ಆಂಡ್ರಾಯ್ಡ್ ನ್ನು ರೂಟ್ ಮಾಡಿ.

ಹಂತ 2. ನಿಮ್ಮ ಆಂಡ್ರಾಯ್ಡ್ ಡಿವೈಸ್ ನ್ನು ರೂಟ್ ಮಾಡಿದ ನಂತರ ನೀವು Xposed ಇನ್ಸ್ಟಾಲರ್ ನ್ನು ನಿಮ್ಮ ಆಂಡ್ರಾಯ್ಡ್ ಗೆ ಇನ್ಸ್ಟಾಲ್ ಮಾಡಬೇಕು. ಅದು ಸ್ವಲ್ಪ ಉದ್ದನೆಯ ಪ್ರೊಸೆಸ್ ಆಗಿದೆ ಮತ್ತ ಅದಕ್ಕಾಗಿ ನೀವು ನಾವು ಹೇಳುವ ಹಂತಗಳನ್ನು ಅನುಸರಿಸಿ Xposed ಇನ್ಸ್ಟಾಲರ್ ನ್ನು ಆಂಡ್ರಾಯ್ಡ್ ನಲ್ಲಿ ಇನ್ಸ್ಟಾಲ್ ಮಾಡಬಹುದು.

ಹಂತ 3.ಈಗ ನಿಮಗೆ Xposed ಮಾಡ್ಯೂಲ್ ನ ಅಗತ್ಯವಿದೆ ಮತ್ತು ಅದು ನಿಮ್ಮ ವಾಲ್ಯೂಮ್ ಕಂಟ್ರೋಲ್ ಕೀಲಿಗಳನ್ನು ಮ್ಯೂಸಿಕ್ ಕೀಲಿಗಳಾಗಿ ನಿಮ್ಮ ಆಂಡ್ರಾಯ್ಡ್ ನಲ್ಲಿ XVolume SkipTrack ನಲ್ಲಿನ ಸಂಗೀತ ಆಲಿಸಲು ಅವಕಾಶ ನೀಡಬೇಕು,

ಹಂತ 4. ಈಗ ಆಪ್ ನ್ನು ನಿಮ್ಮ ಡಿವೈಸ್ ನಲ್ಲಿ ಲಾಂಚ್ ಮಾಡಿ ಮತ್ತು ನೀವು ಕೆಲವು ಆಯ್ಕೆಗಳನ್ನು ಕಾಣಲು ಸಾಧ್ಯ, ಉದಾಹರಣೆಗೆ “ Tick to enable mode”, ಸರಳವಾಗಿ ಅದನ್ನು ಟ್ಯಾಪ್ ಮಾಡಿ ನಿಮ್ಮ ಡಿವೈಸ್ ನಲ್ಲಿ ಅದನ್ನು ಆಕ್ಟಿವೇಟ್ ಮಾಡಿ.

ಹಂತ 5. ಈಗ ನೀವು ಕಂಟ್ರೋಲ್ಸ್ ಗಳನ್ನು ನಿಮ್ಮ ಡಿವೈಸ್ ನ ಬಟನ್ ಗಳಿಗೆ ಸೆಟ್ ಮಾಡಬೇಕು. ಅಂದರೆ ನೀವು ಆ ಬಟನ್ ಒತ್ತಿದಾಗ ಅದು ಯಾವ ಆಕ್ಷನ್ ಮಾಡಬೇಕು ಎಂಬುದನ್ನು ನೀವೇ ನಿರ್ಧರಿಸಬೇಕು.

ಹಂತ 6. ಮತ್ತೊಂದಕ್ಕೂ ನೀವು ಇದನ್ನೇ ಪುನರಾವರ್ತಿಸಿ ಮತ್ತು ನಂತರ ಡಿವೈಸ್ ನ ಮ್ಯೂಸಿಕ್ ಪ್ಲೇ ಬ್ಯಾಕ್ ಗೆ ಟೈಮ್ ಔಟ್ ನ್ನು ಸೆಟ್ ಮಾಡಿ.

ಹಂತ 7. ಇದಿಷ್ಟು ಮಾಡಿದರೆ ಆಯ್ತು ಮತ್ತು ನೀವು ಕೆಲಸ ಮುಗಿಸಿದಂತೆ. ಈಗ ನೀವು ನಿಮ್ಮ ಎಲ್ಲಾ ಮ್ಯೂಸಿಕ್ ಟ್ರ್ಯಾಕ್ ಗಳನ್ನು ಕೇಳುವಾಗ ನಿಮ್ಮ ಡಿವೈಸ್ ನ ಸ್ಕ್ರೀನ್ ಆಫ್ ಆಗಿ ಲಾಕ್ ಆಗಿದ್ದಾಗಲೂ ಕೂಡ ವಾಲ್ಯೂಮ್ ಬಟನ್ ಸಹಾಯದಿಂದ ವಾಲ್ಯೂಮ್ ಕಂಟ್ರೋಲ್ ಮಾಡಬಹುದು.

ಸ್ಕ್ರೀನ್ ಆಫ್ ಇದ್ದಾಗ ಕೂಡ ಸ್ಮಾರ್ಟ್‌ಫೋನ್‌ನಲ್ಲಿ ಮ್ಯೂಸಿಕ್ ನಿಯಂತ್ರಿಸಬಹುದು..!

ಗ್ರಾವಿಟಿ ಬಾಕ್ಸ್ ಬಳಸಿ

ಗ್ರಾವಿಟಿ ಬಾಕ್ಸ್ ಅನ್ನುವುದು ತುಂಬಾ ಪ್ರಸಿದ್ಧವಾದ ಮತ್ತು ಅತ್ಯುತ್ತಮವಾದ Xposed ಫ್ರೇಮ್ ವರ್ಕ್ ಮಾಡ್ಯೂಲ್ ಆಗಿದೆ ಮತ್ತು ಅದು ಇದು ಹಲವು ಟ್ವೀಕ್ಸ್ ಗಳ ಮನೆಯಾಗಿದೆ. ನೀವು ಗ್ರಾವಿಟಿ ಬಾಕ್ಸ್ ಮುಖಾಂತರ ಹೇಗೆ ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಕಂಟ್ರೋಲ್ ಮಾಡಬಹುದು. ಗ್ರಾವಿಟಿ ಬಾಕ್ಸ್ ಸಹಾಯದಿಂದ ವಾಲ್ಯೂಮ್ ಕೀ ಬಳಸಿ ಸ್ಕ್ರೀನ್ ಆಫ್ ಇದ್ದಾಗ ಹೇಗೆ ಆಂಡ್ರಾಯ್ಡ್ ಮ್ಯೂಸಿಕ್ ನ ಕಂಟ್ರೋಲ್ ಮಾಡಬಹುದು ಎಂಬುದನ್ನು ತಿಳಿದುಕೊಳ್ಳೋಣ.

ಹಂತ 1. ಮೊದಲಿಗೆ ನಿಮ್ಮ ಆಂಡ್ರಾಯ್ಡ್ ಡಿವೈಸ್ ನ್ನು ರೂಟ್ ಮಾಡಬೇಕು. ಒಂದು ವೇಳೆ ನಿಮ್ಮ ಬಳಿ ಈಗಾಗಲೇ ರೂಟ್ ಮಾಡಿದ ಡಿವೈಸ್ ಇದ್ದರೆ, ಆಗ ನೀವು Xposed ಫ್ರೇಮ್ ವರ್ಕ್ ನ್ನು ಇನ್ಸ್ಟಾಲ್ ಮಾಡಿ.

ಹಂತ 2. ಒಮ್ಮೆ ಇನ್ಸ್ಟಾಲ್ ಆದ ನಂತರ, ನೀವು ಡೌನ್ ಲೋಡ್ ನ್ನು ಬ್ರೌಸ್ ಮಾಡಬೇಕು ಮತ್ತು “ ಗ್ರಾವಿಟಿಬಾಕ್ಸ್ “ ನ್ನು ಸರ್ಚ್ ಮಾಡಬೇಕು. ನೀವು ಆ ಮಾಡ್ಯೂಲ್ ನ್ನು ಡೌನ್ ಲೋಡ್ ಮಾಡಬೇಕು.

ಹಂತ 3. Xposed ಫ್ರೇಮ ವರ್ಕ್ ನಿಂದ ಮಾಡ್ಯೂಲ್ ಅನ್ನು ಅನೇಬಲ್ ಮಾಡಿ ಮತ್ತು ನಂತರ “ಮೀಡಿಯಾ ಟ್ವೀಕ್ಸ್” ನ್ನು ಹುಡುಕಾಡಿ. ಅಲ್ಲಿ ನೀವು 'Volume Keys Skip Track’ಆಯ್ಕೆಯನ್ನು ಅನೇಬಲ್ ಮಾಡಿ.

ನಿಮ್ಮ ಡಿವೈಸ್ ನ್ನು ರಿಬೂಟ್ ಮಾಡಿ ಮತ್ತು ನಂತರ ಯಾವುದೇ ಮ್ಯೂಸಿಕ್ ನ್ನು ಪ್ಲೇ ಮಾಡಿ. ಈಗ ನೀವು ವಾಲ್ಯೂಮ್ ಡೌನ್ ಬಟನ್ ಸಹಾಯದಿಂದ ಒಂದು ಮ್ಯೂಸಿಕ್ ನಿಂದ ಇನ್ನೊಂದು ಮ್ಯೂಸಿಕ್ ಗೆ ಸ್ಕಿಪ್ ಮಾಡಬಹುದು. ಈ ವೈಶಿಷ್ಟ್ಯವು ನಿಮ್ಮ ಸ್ಕ್ರೀನ್ ಆಫ್ ಆಗಿದ್ದಾಗಲೂ ಕೂಡ ಕೆಲಸ ಮಾಡುತ್ತದೆ.

ಹೀಗೆ, ನಿಮ್ಮ ವಾಲ್ಯೂಮ್ ಬಟನ್ ನ್ನು ಸ್ಕ್ರೀನ್ ಆಫ್ ಆಗಿದ್ದಲೂ ಕೂಡ ಮ್ಯೂಸಿಕ್ ವಾಲ್ಯೂಮ್ ಕಂಟ್ರೋಲ್ ಮಾಡಲು ಬಳಕೆ ಮಾಡಬಹುದು. ಈ ವಿಧಾನದಿಂದ ನೀವು ನಿಮ್ ಇಷ್ಟದ ಮ್ಯೂಸಿಕ್ ನ್ನು ಮನಸಾರೆ ಎಂಜಾಯ್ ಮಾಡಬಹುದು. ಇದು ನೀವು ಮೊಬೈಲ್ ಸ್ಕ್ರೀನ್ ಅನ್ ಲಾಕ್ ಮಾಡಿ ನಂತರ ಟ್ರ್ಯಾಕ್ ಅನ್ನು ಬದಲಾಯಿಸುವುದಕ್ಕಿಂತ ಸುಲಭದ ವಿಧಾನವಾಗಿದೆ. ಇವತ್ತೇ ಟ್ರೈ ಮಾಡಿ ನೋಡಿ. ಖಂಡಿತವಾಗ್ಲೂ ಈ ಕೂಲ್ ಟ್ರಿಕ್ಸ್ ನಿಮಗೆ ಇಷ್ಟವಾಗುತ್ತದೆ.

Best Mobiles in India

English summary
How To Control Android Music with Volume Keys When Screen is Off. To know more this visit kannada.gizbot.vom
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+