ಮೊಬೈಲ್ ಬಳಕೆ ನಿಯಂತ್ರಿಸಿಕೊಳ್ಳಬೇಕೆ?..ಹೀಗೆ ಮಾಡಿ ನೋಡಿ!!
ಕ್ಷಣ ಬಿಡುವು ಸಿಕ್ಕರೂ ಸಾಕು ಇಮೇಲ್, ವಾಟ್ಸಾಪ್, ಫೇಸ್‌ಬುಕ್‌ಗಳು ನಮ್ಮನ್ನು ಮೊಬೈಲ್ ಹಿಡಿಯುವಂತೆ ಪ್ರೇರೇಪಿಸುತ್ತವೆ. ಹಾಗಾಗಿ, ಮೊಬೈಲ್ ಬಳಕೆ ನಿಲ್ಲಿಸುವುದು ಸದ್ಯದ ಪರಿಸ್ಥಿತಿಯಲ್ಲಿ ಅಸಾಧ್ಯ.!!
ಮೊಬೈಲ್ ಎಸೆದುಬಿಡಬೇಕು ಎನ್ನುವಷ್ಟು ಕೋಪವಿದ್ದರೂ ಒಂದು ಕ್ಷಣ ಮೊಬೈಲ್ ಬಿಟ್ಟಿರಲಾರದ ಪರಿಸ್ಥಿತಿ ಎಲ್ಲರದ್ದು.!! ಕ್ಷಣ ಬಿಡುವು ಸಿಕ್ಕರೂ ಸಾಕು ಇಮೇಲ್, ವಾಟ್ಸಾಪ್, ಫೇಸ್‌ಬುಕ್‌ಗಳು ನಮ್ಮನ್ನು ಮೊಬೈಲ್ ಹಿಡಿಯುವಂತೆ ಪ್ರೇರೇಪಿಸುತ್ತವೆ. ಹಾಗಾಗಿ, ಮೊಬೈಲ್ ಬಳಕೆ ನಿಲ್ಲಿಸುವುದು ಸದ್ಯದ ಪರಿಸ್ಥಿತಿಯಲ್ಲಿ ಅಸಾಧ್ಯ.!!
ಆದರೆ, ನಮಗೆ ಬೇಕಾದಂತೆ ಮೊಬೈಲ್ ಬಳಕೆ ಮಾಡಿಕೊಳ್ಳಬಹುದಲ್ಲ? ಹೌದು, ಮೊಬೈಲ್ ಬಳಕೆ ನಿಲ್ಲಿಸಲು ಸಾಧ್ಯವೇ ಇಲ್ಲದಿರುವಾಗ ನಾವೇ ಕೆಲವು ಕಟ್ಟುಪಾಡುಗಳನ್ನು ಹಾಕಿಕೊಂಡು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿಕೊಳ್ಳಬೇಕಕು.!! ಹಾಗಾಗಿ, ಮೊಬೈಲ್ ಬಳಕೆ ನಿಯಂತ್ರಿಸುವ ಮನಸು ನಿಮಗಿದ್ದರೆ ಮುಂದೆ ನೀಡಿರುವ ಸಲಹೆಗಳನ್ನು ನೋಡಿ.!!

ನೋಟಿಫಿಕೇಷನ್ ಸೌಂಡ್ ಆಫ್ ಮಾಡಿ!!
ಪ್ರತಿಯೊಂದು ಮೆಸೇಜ್, ಮೇಲ್‌ಗಳಿಗೂ ನೋಟಿಫಿಕೇಷನ್ ಬರುವಂತಹ ಸೆಟ್ಟಿಂಗ್ಸ್ ಅನ್ನು ಚೇಂಜ್ ಮಾಡಿ. ಮೇಲ್, ವಾಟ್ಸಾಪ್, ಫೇಸ್‌ಬುಕ್ ನೋಟಿಫಿಕೇಷನ್‌ಗಳು ಬಂದ ತಕ್ಷಣ ಅವುಗಳನ್ನು ನೋಡದಿದ್ದರೆ ನಿಮಗೆ ಸಮಾಧಾನ ಆಗುವುದಿಲ್ಲ.!! ಹಾಗಾಗಿ, ನೋಟಿಫಿಕೇಷನ್ ಸೌಂಡ್ ಆಫ್ ಮಾಡಿ

ಹೋಂ ಸ್ಕ್ರೀನ್ ಸೆಟ್ಟಿಂಗ್ಸ್
ಹೋಂ ಸ್ಕ್ರೀನ್ ಮೇಲೆ ಸಿಕ್ಕಸಿಕ್ಕ ಆಪ್‌ಗಳು ಬೇಡ. ಕ್ಯಾಲೆಂಡರ್, ಗಡಿಯಾರದಂತಹ ಆಪ್‌ಗಳಿದ್ದರೆ ಮಾತ್ರ ಮೊಬೈಲ್ ಬಳಕೆಯ ಪ್ರೇರೇಪಣೆಯನ್ನು ತಪ್ಪಿಸುತ್ತದೆ. ಇಲ್ಲವಾದಲ್ಲಿ ಮೊಬೈಲ್ ಹಿಡಿದರೆ ಯಾವ ಆಪ್ ತೆರೆಯಲಿ ಎಂದು ಮನಸ್ಸು ಕೇಳಿಕೊಳ್ಳುತ್ತಿರುತ್ತದೆ.!!

ಎಲ್ಲದಕ್ಕೂ ಫೋನ್ ಬೇಕೆ?
ಬೆಳಿಗ್ಗೆ ನಮ್ಮನ್ನು ಎಬ್ಬಿಸಲು ಅಲಾರಾಂ ಬೇರೊಮದು ಅಲಾರಾಂ ಇಟ್ಟುಕೊಳ್ಳಿ, ಯಾವುದಾದರೂ ಮನೆಯ ವಿಳಾಸ ಹುಡುಕಲು ಬಾಯಿಮಾತು ಬಳಸಿ ಹೀಗೆ ಮಾಡುವುದರಿಂದ ಅಪರಿಚಿತರೊಡನೆ ಮಾತನಾಡುವ ಕಲೆ ರೂಢಿಯಾಗುತ್ತದೆ. ಮೊಬೈಲ್ ಮೇಲಿನ ಅವಲಂಬನೆಯೂ ಕೊಂಚ ತಪ್ಪುತ್ತದೆ.!!

ಮೊಬೈಲ್ ಸ್ವಿಚ್‌ಆಫ್ ಮಾಡಿ:
ಮೊಬೈಲ್ ನೋಟಿಫಿಕೇಷನ್‌ಗಳು ನಿದ್ದೆಗೆ ಭಂಗ ತರಬಹುದು ಎಂದು ಮೊದಲೇ ಹೇಳಿದ್ದೇ, ಹಾಗೆಯೇ, ನೀವು ಮಲಗುವ ಸ್ಥಳದಿಂದ ಮೊಬೈಲ್ ದೂರ ಇರಿಸಿ ಅಥವಾ ಸ್ವಿಚ್ ಆಫ್ ಮಾಡಿ. 30 ನಿಮಿಷ ನಿದ್ದೆ ಬರದಿದ್ದರೂ ಕೆಲವು ದಿನ ಮೊಬೈಲ್‌ನ ಅವೈಡ್ ಮಾಡಿನೋಡಿ.!!

ಮುಖ್ಯವಾಗಿ ನಿಶಿದ್ದ ಪ್ರದೇಶಗಳು!!
ಶೌಚಗೃಹಗಳಲ್ಲಿ, ಮೆನೆಯವರು ಜೊತೆಗೆ ಇರುವಾಗ, ಊಟ ಮಾಡುವಾಗ, ಯಾರ ಜೊತೆಗಾದರೂ ಮಾತನಾಡುವಾಗ, ಏನಾದರೂ ಓದುವಾಗ ಮೊಬೈಲ್ ಬಳಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿ. ಈ ಎಲ್ಲಾ ಸಮಯಗಳಲ್ಲಿ ನೀವು ಮೊಬೈಲ್ ಬಳಕೆ ನಿಯಂತ್ರಿಸಿಕೊಂಡೆ ಮೊಬೈಲ್ ಬಳಕೆ ಬಾಗಶಃ ಬಿಟ್ಟಂತರೆಯೇ ಸರಿ!!


Click it and Unblock the Notifications








