ವಿಂಡೋಸ್‌ನಲ್ಲಿ ಯಾರಿಗೂ ಕಾಣದ ಫೋಲ್ಡರ್ ಸೃಷ್ಟಿಸಬಹುದು..! ಹೇಗೆ ಗೊತ್ತಾ..?
ಪ್ರತಿಯೊಬ್ಬರ ಸಿಸ್ಟಮ್ ನಲ್ಲೂ ತಮ್ಮನ್ನ ಹೊರತು ಪಡಿಸಿ ಇತರರು ನೋಡಬಾರದು ಎಂದುಕೊಳ್ಳುವ ಕೆಲವು ಪರ್ಸನಲ್ ಫೈಲ್ ಗಳಿರುತ್ತದೆ. ಆ ಫೈಲ್ ಗಳನ್ನು ಆದಷ್ಟು ಗುಪ್ತವಾಗಿ ಇಟ್ಟುಕೊಳ್ಳಬೇಕು ಎಂದು ಪ್ರಯತ್ನಿಸುತ್ತೇವೆ. ನಿಮ್ಮ ವಿಂಡೋಸ್ ಓಎಸ್ ಮೂಲಕ ಇದನ್ನು ಸಾಧಿಸಲು ಸಾಧ್ಯವಿದೆ.

ಹೌದು, ವಿಂಡೋಸ್ ನಲ್ಲಿ ನಿಮ್ಮ ಫೋಲ್ಡರ್ ಗಳನ್ನು ವಿಸಿಬಲ್ ಮತ್ತು ಇನ್ ವಿಸಿಬಲ್ ಮಾಡುವುದಕ್ಕೆ ಅವಕಾಶವಿರುತ್ತದೆ. ಆ ಮೂಲಕ ನಿಮ್ಮ ಪರ್ಸನಲ್ ದಾಖಲಾತಿಗಳನ್ನು ನಿಮಗೆ ಮಾತ್ರ ಕಾಣುವಂತೆ ಇಟ್ಟುಕೊಳ್ಳಲು ಸಹಾಯವಾಗುತ್ತದೆ. ಹಾಗಾದ್ರೆ ಅದನ್ನು ಸಾಧಿಸುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ವಿವರ.

ವಿಂಡೋಸ್ ನಲ್ಲಿ ಇನ್ ವಿಸಿಬಲ್ ಫೋಲ್ಡರ್ ಕ್ರಿಯೇಟ್ ಮಾಡುವುದು ಹೇಗೆ?
ಈ ವಿಧಾನಗಳಿಂದ ನೀವು ಫೋಲ್ಡರ್ ಗಳನ್ನು ಇನ್ ವಿಸಿಬಲ್ ಮಾಡಬಹುದು ಮತ್ತು ಅಗತ್ಯ ಬಿದ್ದಾಗ ವಿಸಿಬಲ್ ಮಾಡಿಕೊಳ್ಳಬಹುದು. ಇದು ನಿಮಗೆ ನಿಮ್ಮ ಪ್ರೈವೆಸಿಯನ್ನು ಹೆಚ್ಚಿಸುತ್ತದೆ ಮತ್ತು ಪರ್ಸನಲ್ ಫೋಲ್ಡರ್ ಗಳನ್ನು ಗುಪ್ತವಾಗಿ ಇಟ್ಟುಕೊಳ್ಳಲು ನೆರವು ನೀಡುತ್ತದೆ.

ವಿಧಾನ 1: ವಿಂಡೋಸ್ ನಲ್ಲಿ ಇನ್ ವಿಸಿಬಲ್ ಫೋಲ್ಡರ್ ಕ್ರಿಯೇಟ್ ಮಾಡುವುದು
ಹಂತ 1. ಮೊದಲನೆಯದಾಗಿ ,ನೀವು ಇನ್ ವಿಸಿಬಲ್ ಪೋಲ್ಡರ್ ಮಾಡಬೇಕು ಎಂದುಕೊಳ್ಳುವ ಯಾವುದೇ ಡ್ರೈವ್ ನಲ್ಲಿ ಒಂದು ಹೊಸ ಫೋಲ್ಡರ್ ನ್ನು ಕ್ರಿಯೇಟ್ ಮಾಡಿ.

ಹಂತ 2.
ನಂತರ ಫೋಲ್ಡರ್ ನ್ನು ರೈಟ್ ಕ್ಲಿಕ್ ಮಾಡಿ ಮತ್ತು ಪ್ರಾಪರ್ಟೀಸ್ ನ್ನು ಆಯ್ಕೆ ಮಾಡಿ ಮತ್ತು ಕಸ್ಟಮೈಸ್ ಟ್ಯಾಬ್ ನಲ್ಲಿ ಚೇಂಜ್ ಐಕಾನ್ ನ್ನು ಆಯ್ಕೆ ಮಾಡಿ ಬ್ಲಾಕ್ ಐಕಾನ್ ನ್ನು ನಿಮ್ಮ ಪೋಲ್ಡರ್ ಗೆ ಆಯ್ಕೆ ಮಾಡಿ.

ಹಂತ 3.
ಈಗ ಫೋಲ್ಡರ್ ನ್ನು ರಿನೇಮ್ ಮಾಡಿ. ಈಗಾಗಲೇ ಇರುವ ಎಲ್ಲಾ ಟೆಕ್ಸ್ಟ್ ಗಳನ್ನು ಕ್ಲಿಯರ್ ಮಾಡಿ ಮತ್ತು ಆಲ್ಟ್(ALT) ಬಟನ್ ನ್ನು ಪ್ರೆಸ್ ಮಾಡಿ 0160 ನಂಬರ್ ನ್ನು ಕೀಬೋರ್ಡ್ ನಲ್ಲಿ ಟೈಪ್ ಮಾಡಿ.

ಹಂತ 4.
ಈಗ ಫೋಲ್ಡರ್ ಇನ್ ವಿಸಿಬಲ್ ಆಗುತ್ತದೆ ಮತ್ತು ನಿಮಗೆ ಮಾತ್ರ ಆ ಪೋಲ್ಡರ್ ಬಗ್ಗೆ ತಿಳಿದಿರಲು ಸಾಧ್ಯ. ನಿಮ್ಮ ವಯಕ್ತಿಕ ಮಾಹಿತಿಗಳನ್ನೊಳಗೊಂಡ ಫೈಲ್ ಗಳನ್ನು ನೀವು ಮಾತ್ರ ಆಕ್ಸಿಸ್ ಮಾಡಲು ಸಾಧ್ಯವಾಗುತ್ತದೆ.

ವಿಧಾನ 2: ಫೋಲ್ಡರ್ ಕ್ರಿಯೇಟ್ ಮಾಡುವುದು ಮತ್ತು ಇಂಟರ್ನಲಿ ಹೈಡ್ ಮಾಡುವುದು
ಈ ವಿಧಾನದಲ್ಲಿ ನೀವು ಫೈಲ್ ಟೈಪ್ ನ್ನು ರಿನೇಮ್ ಮಾಡುವುದಾಗಲಿ ಅಥವಾ ಬದಲಾಯಿಸುವುದಾಗಲಿ ಮಾಡುವುದಿಲ್ಲ.ವಿಂಡೋಸ್ ಇನೀಷಿಯೇಟಿವ್ ನಲ್ಲೇ ಈ ವೈಶಿಷ್ಟ್ಯತೆಯನ್ನು ನೀಡಲಾಗಿದೆ. ಹೆಚ್ಚಿನವರಿಗೆ ತಿಳಿದಿರುವ ವಿಧಾನವೂ ಹೌದು. ಕಡಿಮೆ ಸಮಯದಲ್ಲಿ ನಿಮ್ಮ ಫೋಲ್ಡರ್ ನ್ನು ಹೈಡ್ ಮಾಡುವ ಮತ್ತೊಂದು ವಿಧಾನವನ್ನು ಇಲ್ಲಿ ತಿಳಿಯಿರಿ.

ಹಂತ 1.
ನೀವು ಹೈಡ್ ಮಾಡಲು ಇಚ್ಛಿಸುವ ಫೋಲ್ಡರ್ ನ್ನು ಆಯ್ಕೆ ಮಾಡಿ. ಅದರ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು ಪ್ರಾಪರ್ಟೀಸ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ. ಪಾಪ್ ಅಪ್ ನ ಕೊನೆಯಲ್ಲಿ ಈ ಆಯ್ಕೆ ಇರುತ್ತದೆ.

ಹಂತ 2.
ಪ್ರಾಪರ್ಟೀಸ್ ನ ಜನರಲ್ ಟ್ಯಾಬ್ ನಲ್ಲಿ "Attributes" ಅನ್ನೋ ಆಯ್ಕೆಯನ್ನು ನೀವು ಗಮನಿಸಬಹುದು. ಅಲ್ಲಿ "Read Only" ಯನ್ನು ಅನ್ ಸೆಲೆಕ್ಟ್ ಮಾಡಿ ಮತ್ತು "Hidden" ಆಯ್ಕೆಯನ್ನು ಸೆಲೆಕ್ಟ್ ಮಾಡಿ ಮತ್ತು ಅಪ್ಲೈ ಕ್ಲಿಕ್ಕಿಸಿ ಒಕೆ ಒತ್ತಿ.

ಹಂತ 3.
ಇಷ್ಟು ಮಾಡಿದರೆ ಫೋಲ್ಡರ್ ಹಿಡನ್ ಆಗುತ್ತದೆ.ಮತ್ತೆ ಪುನಃ ಫೋಲ್ಡರ್ ನ್ನು ನೀವು ವಾಪಾಸ್ ತರುವವರೆಗೆ ಈ ಫೋಲ್ಡರ್ ನಿಮಗೆ ಕಾಣಿಸುವುದಿಲ್ಲ. ಹಾಗಾದ್ರೆ ಇದನ್ನು ವಾಪಾಸ್ ತರುವುದು ಹೇಗೆ?

ಹಿಡನ್ ಫೋಲ್ಡರ್ ಗಳನ್ನು ಮತ್ತೆ ಪಡೆಯುವುದು ಹೇಗೆ?
ಹಂತ 1. ಆರ್ಗನೈಸ್ ಗೆ ತೆರಳಿ ಮತ್ತು "Folder And Search Option"ನ್ನು ಕ್ಲಿಕ್ಕಿಸಿ.

ಹಂತ 2.
ನೀವು ಅಲ್ಲಿ ಫೋಲ್ಡರ್ ಆಯ್ಕೆಯನ್ನು ಅಲ್ಲಿ ಗಮನಿಸಬಹುದು. ಅಲ್ಲಿ ನೀವು ಜನರಲ್ ಟ್ಯಾಬ್ ನ ಪಕ್ಕದಲ್ಲಿರುವ ವ್ಯೂ ಟ್ಯಾಬ್ ನ್ನು ಕ್ಲಿಕ್ಕಿಸಿ. ಅಲ್ಲಿ ನೀವು "Hidden Files and Folder" ಆಯ್ಕೆಯನ್ನು ಗಮನಿಸಬಹುದು. ಅಲ್ಲಿ ನೀವು ಈ ಆಯ್ಕೆಯನ್ನು " Show Hidden files and folders" ಎಂದು ಬದಲಾಯಿಸಿ ಮತ್ತು ಅಪ್ಲೈ ಮಾಡಲು ಓಕೆ ಕ್ಲಿಕ್ಕಿಸಿ.

ಹಂತ 3.
ಒಮ್ಮೆ ನೀವು ಈ ಅರೇಂಜ್ ಮೆಂಟ್ ನ್ನು ಸೇವ್ ಮಾಡಿದ ನಂತರ, ನೀವು ನಿಮ್ಮ ಹಿಡನ್ ಫೋಲ್ಡರ್ ಗಳನ್ನು ಕಾಣಲು ಸಾಧ್ಯವಾಗುತ್ತದೆ ಮತ್ತು ರೀಡ್ ಓನ್ಲಿಯಾಗಿ ಅಟ್ರಿಬ್ಯೂಟ್ಸ್ ಗಳನ್ನು ಬದಲಾಯಿಸಲು ಸಾಧ್ಯವಿದೆ.

ವಿಧಾನ 3: ಫ್ರೀ ಹೈಡ್ ಫೋಲ್ಡರ್ ಬಳಸಿ
ಹಂತ 1. ಫ್ರೀ ಹೈಡ್ ಫೋಲ್ಡರ್ ನ್ನು ನಿಮ್ಮ ಕಂಪ್ಯೂಟರ್ ನಲ್ಲಿ ಡೌನ್ ಲೋಡ್ ಮಾಡಿ ಮತ್ತು ಇನ್ಸ್ಟಾಲ್ ಮಾಡಿ.

ಹಂತ 2.
ಒಮ್ಮೆ ಇನ್ಸ್ಟಾಲ್ ಮಾಡಿದ ನಂತರ ಸಾಫ್ಟ್ ವೇರ್ ನ್ನು ತೆರೆಯಿರಿ ಮತ್ತು ಈ ಕೆಳಗೆ ಕಾಣಿಸಿರುವಂತೆ ಸ್ಕ್ರೀನ್ ನ್ನು ನೀವು ಗಮನಿಸಬಹುದು.

ಹಂತ 3.
ಇದೀಗ ನೀವು "Add" ನ್ನು ಕ್ಲಿಕ್ಕಿಸಬೇಕು. ಒಮ್ಮೆ ನೀವು "Add" ನ್ನು ಕ್ಲಿಕ್ಕಿಸಿದ ನಂತರ ನೀವು ಹೈಡ್ ಮಾಡಬೇಕು ಎಂದುಕೊಳ್ಳುವ ಫೋಲ್ಡರ್ ನ್ನು ಬ್ರೌಸ್ ಮಾಡಬೇಕು.

ಹಂತ 4.
ಈಗ ಓಕೆ ಕ್ಲಿಕ್ ಮಾಡಿ ಮತ್ತು ನೀವು ನಿಮ್ಮ ಫೋಲ್ಡರ್ ಹಿಡನ್ ಆಗಿರುವುದನ್ನು ಗಮನಿಸಬಹುದು .

ಹಂತ 5.
ಒಂದು ವೇಳೆ ನೀವು ಅದನ್ನು ಅನ್ ಹೈಡ್ ಮಾಡಬೇಕು ಎಂದು ಬಯಸಿದರೆ ಆಗ ಸಾಫ್ಟ್ ವೇರ್ ನ್ನು ತೆರೆಯಿರಿ ಮತ್ತು ಫೋಲ್ಡರ್ ನ್ನು ಸೆಲೆಕ್ಟ್ ಮಾಡಿ "Unhide" ಕ್ಲಿಕ್ಕಿಸಿ.

ನಿಮ್ಮ ಕಂಪ್ಯೂಟರ್ ನ ಯಾವುದೇ ಫೋಲ್ಡರ್ ನ್ನು ಹೈಡ್ ಮತ್ತು ಅನ್ ಹೈಡ್ ಮಾಡುವ ಸರಳ ವಿಧಾನ ಇದು.
ಇದು ಸರಳವಾಗಿ ನೀವು ನಿಮ್ಮ ವಿಂಡೋಸ್ ಕಂಪ್ಯೂಟರ್ ನಲ್ಲಿ ಇನ್ ವಿಸಿಬಲ್ ಫೋಲ್ಡರ್ ಗಳನ್ನು ಸೃಷ್ಟಿಸುವ ವಿಧಾನವಾಗಿದೆ. ಇದರಿಂದಾಗಿ ನೀವು ಯಾವುದೇ ಹೆಚ್ಚಿನ ಶ್ರಮವಿಲ್ಲದ ಸೆಲೆಕ್ಟ್ ಮಾಡಿರುವ ಡ್ರೈವ್ ನಲ್ಲಿ ಇನ್ ವಿಸಿಬಲ್ ಫೋಲ್ಡರ್ ಕ್ರಿಯೇಟ್ ಮಾಡಬಹುದು ಮತ್ತು ನಿಮ್ಮ ಪರ್ಸನಲ್ ಡಾಟಾವನ್ನು ಸುರಕ್ಷಿತವಾಗಿಡಬಹುದು.


Click it and Unblock the Notifications








