ವಿಂಡೋಸ್ 10 ಅನ್ನು ನಿಮ್ಮ ಇಷ್ಟದಂತೆ ಬದಲಾಯಿಸಿಕೊಳ್ಳುವುದು ಹೇಗೆ..?
How To
lekhaka-Lekhaka
Written By: Lekhaka
ವಿಂಡೋಸ್ 10 ಅನ್ನು ನಿಮ್ಮ ಇಷ್ಟದಂತೆ ಬದಲಾಯಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದ್ದು, ಅದನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವುದು ಹೇಗೆ ಎಂಬುದನ್ನು ನಿಮಗೆ ತಿಳಿಸಿಕೊಡುವ ಪ್ರಯತ್ನ ಇದಾಗಿದೆ.
ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ನಲ್ಲಿ ಲಾಕ್ ಸ್ಕ್ರಿನ್, ಬ್ಯಾಕ್ ಗ್ರೌಂಡ್, ವಾಲ್ ಪೇಪರ್ ಸೇರಿದಂತೆ ಹಲವಾರು ವಿಷಯಗಳನ್ನು ನಿಮ್ಮ ಇಷ್ಟದಂತೆ ಮಾಡಿಕೊಳ್ಳಬಹುದು. ಇದಕ್ಕಾಗಿ ನೀವು ಈ ಕೆಳಗಿನ ಆಯ್ಕೆಗಳನ್ನು ಒಮ್ಮೆ ನೋಡಿ.
ಹಂತ 1: ಸ್ಟಾಟ್ ಮೆನು ಮೇಲೆ ಕ್ಲಿಕ್ ಮಾಡಿ ಸೆಟ್ಟಿಂಗ್ಸ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಿ.
ಹಂತ 2: ಅದರಲ್ಲಿ ಪರ್ಸನಲೈಜೆಷನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ 3: ನಂತರ ಥೀಮ್ ಮೇಲೆ ಕ್ಲಿಕ್ ಮಾಡಿ, ಅದರಲ್ಲಿ ಥೀಮ್ಸ್ ಸೆಟಿಂಗ್ ಓಪನ್ ಮಾಡಿ
ಹಂತ 4: ನಂತರ ಅಲ್ಲಿರುವ ಥೀಮ್ಸ್ ಗಳನ್ನು ಸೆಲೆಕ್ಟ್ ಮಾಡಿಕೊಂಡು ಆನಂದಿಸಿ.
ಅಲ್ಲಿ ನೀಡಿರುವ ಥೀಮ್ ಗಳು ನಿಮಗೆ ಇಷ್ಟವಾಗದೆ ಇದಲ್ಲಿ ವಿಂಡೋಸ್ ಸ್ಟೋರಿನಲ್ಲಿ ಇನ್ನು ಅನೇಕ ಥೀಮ್ ಗಳು ಲಭ್ಯವಿದ್ದು, ನೀವು ಅವುಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.
ಹಂತ 1: ಸ್ಟಾರ್ಟ್ ಮೆನು> ಸೆಟಿಂಗ್ಸ್> ಪರ್ಸನಲೈಜೆಷನ್> ಕ್ಲಿಕ್ ಥೀಮ್ಸ್
ಹಂತ 2: ಅಲ್ಲಿ ಗೇಟ್ ಮೊರ್ ಥೀಮ್ಸ್ ಇನ್ ಸ್ಟೋರ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಂತರದಲ್ಲಿ ಅಲ್ಲಿರುವ ನೂತನ ಥೀಮ್ಸ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಿ.
ಹಂತ 3: ಅಲ್ಲಿ ಸ್ಕ್ರಾಲ್ ಡೌನ್ ಮಾಡುವ ಮೂಲಕ ಹೆಚ್ಚೀನ ಥೀಮ್ ಗಳನ್ನು ಹುಡುಕಿಕೊಳ್ಳಿ.
ಹಂತ 4: ಡೌನ್ ಲೋಡ್ ಮಾಡಿದ ನಂತರ ಲಾಂಚ್ ಆಯ್ಕೆಯನ್ನು ಕ್ಲಿಕ್ ಮಾಡಿರಿ.