ಆಪಲ್ ಮ್ಯಾಕ್‌ಬುಕ್‌ನಿಂದ ಆಪ್‌ಗಳನ್ನು ಡಿಲೀಟ್ ಮಾಡುವುದು ಹೇಗೆ..?
ಈ ಗೆಜೆಟ್ ದುನಿಯಾದಲ್ಲಿ ಕಲಿತಷ್ಟೂ ಇರುತ್ತದೆ, ತಿಳಿದುಕೊಂಡಷ್ಟೂ ವಿಚಾರಗಳಿರುತ್ತದೆ. ಮೇಲ್ನೋಟಕ್ಕೆ ಎಲ್ಲವೂ ಒಂದೇ ಅನ್ನಿಸಿದರೂ ಒಳಹೊಕ್ಕು ಗಮನಿಸಿದರೆ ಹಲವು ವ್ಯತ್ಯಾಸಗಳಿರುತ್ತದೆ. ಒಂದೇ ಕಂಪೆನಿಯ ವಸ್ತುಗಳೇ ಆಗಿದ್ದರೂ ಅವುಗಳನ್ನು ನಿಭಾಯಿಸುವ ಪರಿ ವಿಭಿನ್ನವಾಗಿರುತ್ತದೆ. ಅಂತಹದ್ದೇ ಒಂದು ವಿಚಾರವನ್ನು ನಾವಿಲ್ಲಿ ಪ್ರಸ್ತಾಪಿಸುತ್ತಿದ್ದೇವೆ.
ನೀವು ಐಫೋನ್, ಐಪ್ಯಾಡ್ ಮತ್ತು ಮ್ಯಾಕ್ ಬುಕ್ ಗಳನ್ನು ಬಳಸುತ್ತಿರುವವರಾದರೆ, ಆಪಲ್ ವಸ್ತುಗಳನ್ನು ಬಳಸುವುದರಲ್ಲಿ ಪಳಗಿದವರಾಗಿದ್ದರೆ, ಈ ಎಲ್ಲಾ ಡಿವೈಸ್ ಗಳು ಹೆಚ್ಚು ಕಡಿಮೆ ಒಂದೇ ರೀತಿಯ ಪ್ರಕ್ರಿಯೆಗಳನ್ನು ಒಳಗೊಂಡಿರುತ್ತದೆ ಎಂದು ನಿಮಗೆ ಅನ್ನಿಸುತ್ತಿರಬಹುದು. ಹೌದು, ಐಪ್ಯಾಡ್ ಮತ್ತು ಐಫೋನ್ ವಿಚಾರದಲ್ಲಿ ಇದು ಒಂದು ದೊಡ್ಡ ಹಂತದವರೆಗೆ ನಿಜವೇ ಆಗಿರುವ ವಿಷಯ.

ಆದರೆ ಮ್ಯಾಕ್ ಬುಕ್ ವಿಚಾರಕ್ಕೆ ಬಂದರೆ ಅಲ್ಲಿ ಬಹಳಷ್ಟು ವಿಭಿನ್ನತೆಗಳಿವೆ. ಐಫೋನ್ ಮತ್ತು ಐಪ್ಯಾಡ್ ಗಳನ್ನು ಅಪ್ಲಿಕೇಷನ್ ಗಳನ್ನು ತೆಗೆದುಹಾಕುವುದು ಅಥವಾ ಅಳಿಸುವುದು ಸುಲಭವಾಗಿರುತ್ತದೆ ಮತ್ತು ಸರಳವಾಗಿರುತ್ತದೆ. ಆದರೆ ಮ್ಯಾಕ್ ಬುಕ್ ನಲ್ಲಿ ಸ್ವಲ್ಪ ವಿಭಿನ್ನವಾಗಿರುತ್ತದೆ. ಅದು ಹೇಗೆ ಮತ್ತು ಮ್ಯಾಕ್ ಬುಕ್ ನಲ್ಲಿ ಅಪ್ಲಿಕೇಷನ್ ಗಳನ್ನು ರಿಮೂವ್ ಮಾಡಲು ಏನು ಮಾಡಬೇಕು ಎಂಬುದನ್ನು ನಾವಿಲ್ಲಿ ತಿಳಿಸುತ್ತೇವೆ.
ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸಿ.
ಹಂತ 1: ಫೈಂಡರ್ ನ್ನು ತೆರೆಯಿರಿ
ಹಂತ 2: ಎಡಭಾಗದಲ್ಲಿ ನೀವು ಅಪ್ಲಿಕೇಷನ್ ಟ್ಯಾಬ್ ನ್ನು ಗಮನಿಸುತ್ತೀರಿ, ಅದನ್ನು ಕ್ಲಿಕ್ಕಿಸಿ
ಹಂತ 3: ಯಾವೆಲ್ಲ ಆಪ್ ಗಳನ್ನು ಡಿಲೀಟ್ ಮಾಡಲು ಇಚ್ಚಿಸುತ್ತೀರಿ ಅದನ್ನು ಆಯ್ಕೆ ಮಾಡಿ
ಹಂತ 4: ಸರಳವಾಗಿ ಆಪ್ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು “ಮೂವ್ ಟು ತ್ರ್ಯಾಶ್” ನ್ನು ಆಯ್ಕೆ ಮಾಡಿ. ನೀವು ಆಪ್ ನ್ನು ಡ್ರ್ಯಾಗ್ ಮಾಡಿ ಕೂಡ ತ್ರ್ಯಾಶ್ ಗೆ ಹಾಕಬಹುದು ಅಥವಾ ಕೀ ಬೋರ್ಡ್ ನಲ್ಲಿ “ ಕಮಾಂಡ್ + ಡಿಲೀಟ್ “ ಆಯ್ಕೆಯನ್ನು ಕೂಡ ಒತ್ತಬಹುದು.

ಹಂತ 5:ತ್ರ್ಯಾಶ್ ಗೆ ತೆರಳಿ ಮತ್ತು ಅಲ್ಲಿ ಎಮ್ಟಿ ತ್ರ್ಯಾಶ್ ಆಯ್ಕೆಯನ್ನು ಒತ್ತಿದರೆ ತ್ರ್ಯಾಶ್ ನ್ನೂ ಕೂಡ ಖಾಲಿ ಮಾಡಬಹುದು. ಹೀಗೆ ಸಂಪೂರ್ಣವಾಗಿ ನಿಮ್ಮ ಮ್ಯಾಕ್ ಬುಕ್ ನಿಂದ ಯಾವುದೇ ಆಪ್ ನ್ನು ಡಿಲೀಟ್ ಮಾಡಬಹುದು.
ಎಸ್, ಈ ಸರಳವಾದ 5 ಹಂತಗಳನ್ನು ಅನುಸರಿಸಿ ಮ್ಯಾಕ್ ಬುಕ್ ನಿಂದ ನಿಮಗೆ ಅಗತ್ಯವಿಲ್ಲದ ಆಪ್ ನ್ನು ಡಿಲೀಟ್ ಮಾಡಿ ಬಿಡಬಹುದು. ಈಗಾಗಲೇ ನಾವು ತಿಳಿಸಿರುವಂತೆ ಈ ಪ್ರೊಸೆಸ್ ಐಪೋನ್ ಮತ್ತು ಐಪ್ಯಾಡ್ ಗಿಂತ ಸ್ವಲ್ಪ ಭಿನ್ನವಾಗಿರುತ್ತದೆ. ಆದರೆ ತುಂಬಾ ಸರಳವಾಗಿರುತ್ತದೆ. ನೀವೂ ಕೂಡ ಟ್ರೈ ಮಾಡಿ ನೋಡಬಹುದು.


Click it and Unblock the Notifications








