ಆಂಡ್ರಾಯ್ಡ್, ವಿಂಡೊಸ್, ಐಫೋನ್‌ನಲ್ಲಿ ಆಪ್‌ಗಳನ್ನು ಡಿಲೀಟ್ ಮಾಡುವುದು ಹೇಗೆ..?
ನೀವು ಯಾವುದೇ ಪ್ಲಾಟ್ ಫಾರ್ಮ್ ನಲ್ಲಿ ಇದ್ದರೂ ಒಂದು ಸಮಯದಲ್ಲಿ ನೀವು ಆಪ್ಸ್ ಅಳಿಸುವಿರಿ. ಕೆಲವೊಮ್ಮೆ ಆಪ್ಸ್ ಗಳು ಮಷಿನ್ ಅನ್ನು ಚೆಲ್ಲಾಪಿಲ್ಲಿ ಮಾಡಿ ಅಳಿಸಲೇ ಬೇಕಾಗುವ ಸಂದರ್ಭ ಬರುತ್ತದೆ. ಇದು ಸುಲಭದ ಪ್ರಕ್ರಿಯೆ ಆದರೆ ಹೊಸಬರಿಗೆ ಕಷ್ಟ ಎನಿಸಬಹುದು. ನೀವು ಹೊಸ ಡಿವೈಜ್ ಕೊಂಡಾಗ ಎಲ್ಲಿಯೂ ಯಾವ ಪ್ಲಾಟ್‍ಫಾರ್ಮಿ ನಲ್ಲೂ ಸ್ಪóಷ್ಟವಾಗಿ ಆಪ್ ಹೇಗೆ ಅಳಿಸಬೇಕೆಂದು ತಿಳಿಸುವುದಿಲ್ಲ. ಅದಕ್ಕಾಗಿ ಇಂತಹ ಲೇಖನಗಳನ್ನು ಬರೆಯಬೇಕಾಗುತ್ತದೆ. ನೀವು ಐಫೋನ್, ಆಂಡ್ರೊಯಿಡ್, ವಿಂಡೊಸ್ ಅಥವಾ ಮ್ಯಾಕ್ ನಲ್ಲಿ ಆಪ್ಸ್ ಅಳಿಸಲು ತೊಂದರೆ ಅನುಭವಿಸುತ್ತಿದ್ದರೆ ಈ ಕೆಳಗಿನಂತೆ ಮಾಡಿ ನಿಮ್ಮ ಕೆಲಸ ಆಗುವುದು.

ಆಂಡ್ರಾಯ್ಡ್‌ನಲ್ಲಿ ಆಪ್ಸ್ ಡಿಲೀಟ್ ಮಾಡುವುದು ಹೇಗೆ..?
1. ಗೂಗಲ್ ಪ್ಲೇ ತೆರೆಯಿರಿ
2. ಮೇಲೆ ಎಡ ಮೂಲೆಯಲ್ಲಿರುವ ಹ್ಯಾಮ್ ಬರ್ಗರ್ ಮೆನು ಐಕಾನ್ ಒತ್ತಿ. ಮೈ ಆಪ್ಸ್ ಆಂಡ್ ಗೇಮ್ಸ್ ಗೆ ಹೋಗಿ.
3. ಇನ್ಸ್ ಟಾಲ್ಡ್ ಎನ್ನುವ ಹೆಸರಿನ ಟ್ಯಾಬ್ ಗೆ ಹೋಗಿ.
4. ಇಲ್ಲಿ ನಿಮ್ಮ ಡಿವೈಜ್ ನಲ್ಲಿ ಇನ್ಸ್ಟಾಲ್ ಆಗಿರುವ ಎಲ್ಲಾ ಆಪ್ ಗಳ ಪಟ್ಟಿ ಕಾಣಬಹುದು. ಯಾವ ಆಪ್ ಅನ್ ಇನ್ಸ್ಟಾಲ್ ಮಾಡಬೇಕೊ ಆ ಹೆಸರಿನ ಮೇಲೆ ಒತ್ತಿ.
5. ಬರುವ ಪರದೆಯ ಮೇಲೆ ಅನ್ ಇನ್ಸ್ಟಾಲ್ ಒತ್ತಿ.
ನಿಮಗೆ ಯಾವ ಆಪ್ ಅನ್ ಇನ್ಸ್ಟಾಲ್ ಮಾಡಬೇಕು ಅಂತ ಗೊತ್ತಿದ್ದರೆ , ನೀವು ಹೀಗೆ ಮಾಡಬಹುದು:
1. ಗೂಗಲ್ ಪ್ಲೇ ತೆರೆಯಿರಿ
2. ಮೇಲೆ ಸರ್ಚ್ ಬಾರ್ ನಲ್ಲಿ ಫೋನಿನಲ್ಲಿ ಇನ್ಸ್ಟಾಲ್ ಆಗಿರುವ ಯಾವುದೇ ಆಪ್ ಹುಡುಕಿ.
3. ಬಂದ ಫಲಿತಾಂಶದ ಪಟ್ಟಿಯಲ್ಲಿ ಆಪ್ ಅನ್ನು ಆಯ್ಕೆ ಮಾಡಿ.
4. ಗೂಗಲ್ ಪ್ಲೇ ನಲ್ಲಿ ಅನ್ ಇನ್ಸ್ಟಾಲ್ ಒತ್ತಿ.
ನೀವು ಆಂಡ್ರೊಯಿಡ್ ನಲ್ಲಿ ಈ ಕೆಳಗಿನಂತೆ ಮಾಡಿ ಅನ್ ಇನ್ಸ್ಟಾಲ್ ಮಾಡಬಹುದು :
1. ಆಪ್ ಡ್ರಾವರ್ ತೆರೆಯಿರಿ
2. ನೀವು ಅಳಿಸ ಬೇಕೆಂದಿರುವ ಆಪ್ ಅನ್ನು ಒತ್ತಿ ಹಿಡಿದು ಮೇಲೆ ಪರದೆ ಮೇಲೆ ಕಾಣುವ ಅನ್ ಇನ್ಸ್ಟಾಲ್ ತನಕ ಒಯ್ಯಿರಿ.
3. ಅದರ ಬದಲಿಗೆ ನೀವು ಸೆಟ್ಟಿಂಗ್ಸ್ > ಆಪ್ಸ್ ಗೆ ಹೋಗಿ
4. ಅಳಿಸ ಬೇಕೆಂದಿರುವ ಆಪ್ ಆಯ್ಕೆ ಮಾಡಿ , ಅನ್ ಇನ್ಸ್ಟಾಲ್ ಒತ್ತಿ
ಇದು ಆಂಡ್ರಾಯ್ಡ್ ಫೋನಿನಿಂದ ಆಪ್ ಅನ್ನು ಅಳಿಸುತ್ತದೆ. ನೆನಪಿಡಿ ಈ ಹೆಜ್ಜೆ ಗಳಲ್ಲಿ ಸ್ವಲ್ಪ ವ್ಯತ್ಯಾಸ ಕಾಣಬಹುದು ಒಂದು ವೇಳೆ ನಿಮ್ಮ ಫೋನಿನಲ್ಲಿ ಸ್ಟೊಕ್ ಆಂಡ್ರಾಯ್ಡ್ ಇಲ್ಲದಿದ್ದಲ್ಲಿ.

ವಿಂಡೋಸ್ ನಲ್ಲಿ ಆಪ್ಸ್ ಅಳಿಸುವುದು ಹೇಗೆ ?
ವಿಂಡೋಸ್ 10 ಕಂಪ್ಯೂಟರ್‌ನಲ್ಲಿ ಆಪ್ಸ್ ಹೇಗೆ ಅಳಿಸುವುದೆಂದು ನೋಡಿ
1. ಕಂಟ್ರೊಲ್ ಪ್ಯಾನಲ್ ತೆರೆಯಿರಿ. ಇದನ್ನು ನೀವು ಸ್ಟಾರ್ಟ್ ಮೆನು ವಿಗೆ ಹೋಗಿ ಮಾಡಬಹುದು ಅಥವಾ ಸ್ಟಾರ್ಟ್ ಬಟನ್ ನ ಬಲಗಡೆ ಇರುವ ಸರ್ಚ್ ಬಾರ್ ನಿಂದ ಕೂಡ ಹೋಗಬಹುದು. ಅದಕ್ಕಾಗಿ ಕಂಟ್ರೊಲ್ ಪ್ಯಾನಲ್ ಎಂದು ಸರ್ಚ್ ಮಾಡಿ ಎಂಟರ್ ಒತ್ತಿ.
2. ಈಗ ಪ್ರೊಗ್ರಾಮ್ಸ್ ಆಂಡ್ ಫೀಚರ್ಸ್ ಗೆ ಹೋಗಿ.
3. ಅಳಿಸಬೇಕೆಂದಿರುವ ಪ್ರೊಗ್ರಾಮ್ ಅನ್ನು ಆಯ್ಕೆ ಮಾಡಿ.
4. ಅನ್ ಇನ್ಸ್ಟಾಲ್ ಕ್ಲಿಕ್ ಮಾಡಿ. ಆಪ್ ಅಳಿಸಲು ಪರದೆ ಮೇಲೆ ತಿಳಿಸಿದಂತೆ ಮಾಡುತ್ತಾ ಹೋಗಿ.
ಹಳೆಯ ವಿಂಡೋಸ್ ವರ್ಷನ್ ನಲ್ಲಿ ಕೂಡ ಹೀಗೆಯೆ ಮಾಡುವುದು.

ಐಫೋನ್, ಐಪ್ಯಾಡ್ ಅಥವಾ ಐಪೊಡ್ ಟಚ್ ನಿಂದ ಆಪ್ಸ್ ಅಳಿಸುವುದು ಹೇಗೆ ?
ಐಒಎಸ್ ನಲ್ಲಿ ಆಪ್ಸ್ ಅನ್ನು ಅಳಿಸುವುದು ಬಹು ಸುಲಭ. ಅದಕ್ಕಾಗಿ ಹೀಗೆ ಮಾಡಿ
1. ನಿಮ್ಮ ಹೋಮ್ ಸ್ಕ್ರೀನ್ ನಲ್ಲಿ ಯಾವುದಾದರೂ ಆಪ್ ಐಕಾನ್ ಒತ್ತಿ ಹಿಡಿಯಿರಿ ನಡಗುವ ತನಕ. ನಿಮ್ಮ ಪರದೆಯ ಮೇಲಿನ ಎಲ್ಲಾ ಆಪ್ಸ್ ಗಳು ಅಳ್ಳಾಡಲು ಆರಂಭಿಸುತ್ತವೆ ಮತ್ತು ಐಕಾನ್ ಗಳ ಮೇಲೆ ಎಡ ಭಾಗದಲ್ಲಿ ಘಿ ಚಿಹ್ನೆ ಕಾಣಬಹುದು.
2. ಬೇಡದ ಆಪ್ ಮೇಲೆ ಘಿ ಒತ್ತಿ.
3. ಈಗ ಕೆಂಪು ಬಣ್ಣದ ಡೆಲಿಟ್ ಬಟನ್ ಒತ್ತಿ. ಇದು ಐಫೋನ್ ನಿಂದ ಆಪ್ ಅಳಿಸುತ್ತದೆ.
ಮತ್ತೊಂದು ಜಾಗದಲ್ಲಿ ನೀವು ಇನ್ಸ್ಟಾಲ್ ಆಪ್ಸ್ ಗಳ ಪಟ್ಟಿ ಕಾಣಬಹುದು. ಅಲ್ಲಿಂದ ಕೂಡ ಬೇಕಾದದ್ದನ್ನು ಅಳಿಸಬಹುದು.
ಸೆಟ್ಟಿಂಗ್ಸ್ > ಜನರಲ್ > ಐಫೋನ್ ಸ್ಟೋರೆಜ್ ಗೆ ಹೋಗಿ. ಕೆಳಗೆ ಬನ್ನಿ ನಿಮ್ಮ ಫೋನಿನಲ್ಲಿ ಇನ್ಸ್ಟಾಲ್ ಆಗಿರುವ ಆಪ್ಸ್ ಗಳ ಪಟ್ಟಿ ದೊರೆಯುತ್ತದೆ. ಹೆಚ್ಚಿನ ಸ್ಥಳ ಪಡೆದ ಆಪ್ ಗಳು ಮೊದಲು ಕಾಣುತ್ತವೆ.
1. ಅನ್ ಇನ್ಸ್ಟಾಲ್ ಮಾಡಬೇಕೆಂದಿರುವ ಆಪ್ ಹೆಸರಿನ ಮೇಲೆ ಒತ್ತಿ.
2. ಮುಂದಿನ ಪರದೆಯಲ್ಲಿ ಕಾಣುವ ಡೆಲಿಟ್ ಆಪ್ ಅನ್ನು ಒತ್ತಿ ಮತ್ತು ಪುನಹ ಡೆಲಿಟ್ ಆಪ್ ಅನ್ನು ಅಳಿಸುವುದನ್ನು ಧೃಢಿಕರಿಸಲು ಮತ್ತೊಮ್ಮೆ ಒತ್ತಿ.
ಐಒಎಸ್ 11 ರಲ್ಲಿ, ನೀವು ಸ್ವಯಂ ಚಾಲಿತವಾಗಿ ನೀವು ಉಪಯೋಗಿಸದ ಆಪ್ ಗಳನ್ನು ಅಳಿಸುವಂತೆ ಮಾಡಬಹುದು. ಇದು ಆಪ್ ನ ಡಾಟಾ ಅಳಿಸುವುದಿಲ್ಲ ಆದರೆ ಡಿವೈಜ್ ನಲ್ಲಿ ಬಹಳಷ್ಟು ಸ್ಥಳಾವಕಾಶ ಮಾಡಿಕೊಡುತ್ತದೆ.
ಸೆಟ್ಟಿಂಗ್ಸ್ > ಜನರಲ್ > ಐಫೋನ್ ಸ್ಟೋರೆಜ್ ಗೆ ಹೋಗಿ ಮತ್ತು ಆಫ್ ಲೋಡ್ ಅನ್ ಯುಸ್ಡ್ ಆಪ್ಸ್ ಮುಂದಿರುವ ಎನೆಬಲ್ ಅನ್ನು ಒತ್ತಿರಿ. ಇದು ನೀವು ಉಪಯೋಗಿಸದ ಆಪ್ಸ್ ಗಳನ್ನು ತಾನಾಗಿ ಆಫ್ ಲೋಡ್ ಮಾಡುತ್ತದೆ.
ನೀವು ಆಪ್ ಅನ್ನು ಪ್ರತ್ಯೇಕವಾಗಿ ಕೂಡ ಆಫ್ ಲೋಡ್ ಮಾಡಬಹುದು:
ಸೆಟ್ಟಿಂಗ್ಸ್ > ಜನರಲ್ > ಐಫೋನ್ ಸೆಟ್ಟಿಂಗ್ಸ್ ಗೆ ಹೋಗಿ. ಕೆಳಗೆ ಬನ್ನಿ ಮತ್ತು ನಿಮಗೆ ನಿಮ್ಮ ಫೋನಿನಲ್ಲಿ ಇನ್ಸ್ಟಾಲ್ ಆಗಿರುವ ಆಪ್ ಗಳ ಪಟ್ಟಿ ಕಾಣುವುದು. ಎಲ್ಲಕ್ಕಿಂತ ಹೆಚ್ಚು ಸ್ಥಳ ಪಡೆದ ಆಪ್ ಮೊದಲು ಕಾಣುತ್ತದೆ.
1. ಆಫ್ ಲೋಡ್ ಮಾಡಬೇಕೆಂದಿರುವ ಆಪ್ ನ ಹೆಸರಿನ ಮೇಲೆ ಒತ್ತಿರಿ.
2. ಮುಂದಿನ ಪರದೆ ಮೇಲೆ ಆಫ್‍ಲೋಡ್ ಆಪ್ ಮೇಲೆ ಒತ್ತಿರಿ ಮತ್ತು ಪುನಹ ಆಫ್‍ಲೋಡ್ ಆಪ್ ಮೇಲೆ ಮತ್ತೊಮ್ಮೆ ಧೃಢಿಕರಿಸಲು ಒತ್ತಿ ಮತ್ತು ಆಪ್ ಅಳಿಸಿ.

ಮ್ಯಾಕ್ ಒಎಸ್ ನಲ್ಲಿರುವ ಆಪ್ಸ್ ಗಳನ್ನು ಅಳಿಸುವುದು ಹೇಗೆ ?
ಮ್ಯಾಕ್ ನಲ್ಲಿ ಆಪ್ಸ್ ಅಳಿಸುವುದು ತುಂಬಾ ಸುಲಭ, ಅದಕ್ಕಾಗಿ ಈ ಕೆಳಗಿನಂತೆ ಮಾಡಿ
1. ಫೈಂಡರ್ ತೆರೆಯಿರಿ ಮತ್ತು ಅಪ್ಲಿಕೇಷನ್ಸ್ ಗೆ ಹೋಗಿ.
2. ನಿಮಗೆ ಯಾವ ಆಪ್ ಅಳಿಸಬೇಕೆಂದು ಇದೆಯೊ ಅದನ್ನು ಟ್ರ್ಯಾಷ್ ಗೆ ಎಳೆದು ತನ್ನಿ. ಇಲ್ಲವೇ ಆಪ್ ಮೇಲೆ ರೈಟ್ ಕ್ಲಿಕ್ (ಕಂಟ್ರೊಲ್ + ಕ್ಲಿಕ್) ಮಾಡಿ ಮತ್ತು ಮೂವ್ ಟು ಟ್ರ್ಯಾಷ್ ಆಯ್ಕೆಯನ್ನು ಒತ್ತಿರಿ. ಕೊನೆಯಲ್ಲಿ ಮ್ಯಾಕ್ ಒಎಸ್ ನಿಂದ ಕೂಡ ಆಪ್ ಅಳಿಸಬಹುದು ಫೈಂಡರ್ ನಲ್ಲಿ ಆಪ್ ಅನ್ನು ಆಯ್ಕೆ ಮಾಡಿ ಮತ್ತು ಒಂದೇ ಬಾರಿಗೆ ಕಮಾಂಡ್ + ಡೆಲಿಟ್ ಕೀ ಅನ್ನು ಒತ್ತಿರಿ.
3. ಕೆಲ ಆಪ್ ಗಳು ಮುಂದುವರೆಯಲು ನಿಮಗೆ ಅಡ್ಮಿನಿಸ್ಟ್ರೇಟರ್ ಪಾಸ್ವರ್ಡ್ ಕೇಳಬಹುದು.


Click it and Unblock the Notifications








