Home
ಟೆಕ್ ನೌಕರಿ

ಗೂಗಲ್ ಪ್ಲಸ್ ಅಕೌಂಟ್‌ ಡಿಲೀಟ್ ಮಾಡುವುದು ಹೇಗೆ ಗೊತ್ತಾ.?

ಸುಮಾರು 5,00,000 ಸಾಮಾಜಿಕ ಜಾಲತಾಣ ಗೂಗಲ್ ಪ್ಲಸ್ ಬಳಕೆದಾರರ ಅಕೌಂಟ್ ಗಳು ಭದ್ರತಾ ವೈಫಲ್ಯ ಎದುರಿಸಿರುವ ಬಗ್ಗೆ ಗೂಗಲ್ ಸಂಸ್ಥೆ ತಿಳಿಸಿದೆ. ಆದರೆ ಯಾವುದೇ ಥರ್ಡ್ ಪಾರ್ಟಿ ಕಂಪೆನಿಗಳು ಇದನ್ನು ಆಕ್ಸಿಸ್ ಮಾಡಿ ಕೆಟ್ಟ ಚಟುವಟಿಕೆಗಾಗಿ ಬಳಸಿಕೊಂಡಿಲ್ಲ ಎಂಬುದನ್ನು ಕೂಡ ಕಂಪೆನಿ ತಿಳಿಸಿದೆ. ಕಳೆದ ಮಾರ್ಚ್ ನಲ್ಲೇ ಈ ವಿಚಾರ ಗೂಗಲ್ ಪ್ಲಸ್ ಗೆ ತಿಳಿದುಬಂದರೂ ಕೂಡ ಈ ಸೆಕ್ಯುರಿಟಿ ವೈಫಲ್ಯದ ಬಗ್ಗೆ ಎಲ್ಲೂ ತಿಳಿಸಿರಲಿಲ್ಲ.

ಇದಕ್ಕೆ ಪ್ರತ್ಯುತ್ತರವಾಗಿ, ಸರ್ಚ್ ಇಂಜಿನ್ ದೈತ್ಯ ಇದೀಗ ಈ ಗೂಗಲ್ ಪ್ಲಸ್ ಸೋಷಿಯಲ್ ಮೀಡಿಯಾ ಸರ್ವೀಸ್ ನ್ನು ಶಟ್ ಡೌನ್ ಮಾಡಲು ನಿರ್ಧರಿಸಿದ್ದು ಆ ಬಗ್ಗೆ ಪ್ರಕಟಣೆ ಕೂಡ ನೀಡಿದೆ. ಆದರೆ ಇದು ಈ ಕೂಡಲೇ ನಡೆಯುವುದಿಲ್ಲ. ಆದರೆ ಒಂದು ವೇಳೆ ನೀವು ನಿಮ್ಮ ವಯಕ್ತಿಕ ಡಾಟಾಗಳ ಬಗ್ಗೆ ಚಿಂತಿತರಾಗಿದ್ದಲ್ಲಿ ಮತ್ತು ಶಾಶ್ವತವಾಗಿ ಗೂಗಲ್+ ಅಕೌಂಟ್ ನ್ನು ಡಿಲೀಟ್ ಮಾಡಬೇಕು ಎಂದು ಬಯಸಿದ್ದೇ ಆದಲ್ಲಿ ನಾವು ತಿಳಿಸುವ ಹಂತಹಂತವಾದ ಮಾಹಿತಿಯನ್ನು ಅನುಸರಿಸಬಹುದು.

ಗೂಗಲ್ ಪ್ಲಸ್ ಅಕೌಂಟ್‌ ಡಿಲೀಟ್ ಮಾಡುವುದು ಹೇಗೆ ಗೊತ್ತಾ.?

ಈ ಪ್ರೊಸೆಸ್ ನ್ನು ಆರಂಭಿಸುವ ಮುನ್ನ, ಮೊದಲಿಗೆ ನಿಮ್ಮ ಗೂಗಲ್+ ಅಕೌಂಟ್ ಇದಿಯಾ ಅಥವಾ ಇಲ್ಲವಾ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ.ಅದನ್ನು ಸಾಧಿಸಲು ಜಿಮೇಲ್ ನ್ನು ತೆರೆಯಿರಿ ಮತ್ತು ಮೇಲ್ಬಾಗದ ಬಲಗಡೆ ಇರುವ ನಿಮ್ಮ ಪ್ರೊಫೈಲ್ ಪಿಕ್ಚರ್ ಮೇಲೆ ಕ್ಲಿಕ್ಕಿಸಿ. ಒಂದು ವೇಳೆ ನಿಮ್ಮ ಜಿಮೇಲ್ ಅಕೌಂಟ್ ಗೂಗಲ್+ ಅಕೌಂಟಿಗೆ ಲಿಂಕ್ ಆಗಿದ್ದಲ್ಲಿ, ಅದು ಗೂಗಲ್+ ಪ್ರೊಫೈಲ್ ಎಂದು ತೋರಿಸುತ್ತದೆ.

ಅನುಸರಿಸಬೇಕಾಗಿರುವ ಹಂತಗಳು :

1. ಜಿಮೇಲ್ ನ್ನು ತೆರೆಯಿರಿ ಮತ್ತು ನಿಮ್ಮ ಕ್ರಿಡೆನ್ಶಿಯಲ್ಸ್ ಬಳಸಿ ಲಾಗಿನ್ ಆಗಿ.

2. ಸ್ಕ್ರೀನಿನ ಮೇಲ್ಬಾಗದ ಬಲ ತುದಿಯಲ್ಲಿರುವ ನಿಮ್ಮ ಪ್ರೊಫೈಲ್ ಪಿಕ್ಚರ್ ನ್ನು ಕ್ಲಿಕ್ಕಿಸಿ.

3. ಇದು ನಿಮ್ಮನ್ನ ಗೂಗಲ್+ ಪ್ರೊಫೈಲ್ ಪೇಜಿಗೆ ರೀಡೈರೆಕ್ಟ್ ಮಾಡುತ್ತದೆ.

4. ಈಗ, ಎಡ ಕಾಲಂನಲ್ಲಿರುವ ಸೆಟ್ಟಿಂಗ್ಸ್ ಆಯ್ಕೆಯನ್ನು ಕ್ಲಿಕ್ಕಿಸಿ.

5. ಸ್ಕ್ರೋಲ್ ಡೌನ್ ಮಾಡಿ ಮತ್ತು ಅಕೌಂಟ್ಸ್ ಸೆಕ್ಷನ್ ನ ಅಡಿಯಲ್ಲಿರುವ “ಡಿಲೀಟ್ ಯುವರ್ ಗೂಗಲ್+ ಪ್ರೊಫೈಲ್” ನ್ನು ಗಮನಿಸಿ.

6. ಅಕೌಂಟನ್ನು ವೆರಿಫೈ ಮಾಡಲು ಪಾಸ್ ವರ್ಡ್ ನ್ನು ಎಂಟರ್ ಮಾಡಿ.

7. ಮುಂದಿನ ಪೇಜ್ ನಲ್ಲಿ, ಸ್ಕ್ರೋಲ್ ಮಾಡಿ ಆಯ್ಕೆಗಳನ್ನು ಸೆಲೆಕ್ಟ್ ಮಾಡಿ.

a. 'Also unfollow me from anyone I am following in other Google products’ ಅಂದರೆ ಇತರೆ ಗೂಗಲ್ ಪ್ರೊಡಕ್ಟ್ ಗಳಲ್ಲಿ ನನ್ನನ್ನ ಫಾಲೋ ಮಾಡುತ್ತಿರುವವರನ್ನು ಈ ಮೂಲಕ ಅನ್ ಫಾಲೋ ಮಾಡಲು ಅನುಮತಿ.

b. 'Required: Yes, I understand that deleting the Google+ profile for (ನಿಮ್ಮ ಹೆಸರು) ([email protected]) can't be undone ಅಂದರೆ ಅಗತ್ಯವಾಗಿದೆ: ಹೌದು, ನಿಮ್ಮ ಹೆಸರು, ನಿಮ್ಮ ಇಮೇಲ್ ವಿಳಾಸದ ಗೂಗಲ್+ ಪ್ರೊಫೈಲ್ ನ್ನು ಡಿಲೀಟ್ ಮಾಡಲು ಅನುಮತಿಸುತ್ತೇನೆ.

c. ಇಲ್ಲಿ ನಾನು ಡಿಲೀಟ್ ಮಾಡುವ ಡಾಟಾಗಳು ರೀಸ್ಟೋರ್ ಮಾಡಲು ಅಸಾಧ್ಯವಾಗುತ್ತದೆ ಎಂಬುದನ್ನು ನಾನು ಅರಿತಿರುತ್ತೇನೆ. ಈ ವಿಚಾರಗಳಿಗೆ ನೀವು ಖಾತ್ರಿಯನ್ನು ಚೆಕ್ ಬಾಕ್ಸ್ ನಲ್ಲಿ ಚೆಕ್ ಮಾರ್ಕ್ ಮಾಡುವ ಮೂಲಕ ಅಂತಿಮಗೊಳಿಸಬೇಕು.

8. ಇದೀಗ ನೀವು ಡಿಲೀಟ್ ಬಟನ್ ನ್ನು ಕ್ಲಿಕ್ಕಿಸಿ.

9. ಅಂತಿಮವಾಗಿ, ಖಾತ್ರಿಯ ಬಗೆಗಿನ ಸ್ಕ್ರೀನ್ ನ್ನು ಮತ್ತು ಸರ್ವೇಯನ್ನು ಗಮನಿಸುತ್ತೀರಿ. ಇದನ್ನು ನೀವು ಇಗ್ನೋರ್ ಮಾಡಲು ಅವಕಾಶವಿರುತ್ತದೆ.

Best Mobiles in India

English summary
How to delete your Google Plus account. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+